ಉಳುವವನಿಂದ ಉಳ್ಳವನಿಗೆ ಭೂಮಿ! ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಲ್ಲಿ ಏನಿದೆ ಸ್ವಾಮಿ?

ಬೆಂಗಳೂರು: ಕೋವಿಡ್-19ರ ಸಮರ ಕಾಲದಲ್ಲಿಯೂ ಸರಕಾರ ’ಅತ್ಯಗತ್ಯ’ವೆಂದು ಭಾವಿಸಿ ಜಾರಿಗೆ ತರುತ್ತಿರುವ 1974ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಬಗ್ಗೆ ಮೂರು ಮತ್ತೂ ಹೆಚ್ಚಿನ ದಿಕ್ಕುಗಳಿಂದ ಕೇಳಿಬರುತ್ತಿರುವ ಮಾತುಗಳಿವು. ಈಗ ಕಾಯ್ದೆ ತಿದ್ದುಪಡಿಗೆ ತಂದಿರುವ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಲ್ಲ ಎಂದು ಸರಕಾರ ಹೇಳುತ್ತಿದ್ದರೆ, ಹಿಂಪಡೆಯಲೇಕೇಕು ಎಂದು ಪ್ರತಿಪಕ್ಷ ಒತ್ತಾಯಿಸುತ್ತಿದೆ. ಹಗ್ಗಜಗ್ಗಾಟ ಜೋರಾಗಿದೆ