ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿಯನ್ನು ರೂಪಿಸಿದೆ. ಕರ್ನಾಟಕ ರಾಜ್ಯ ಆ ನೀತಿಯನ್ನು ತಾನೇ ಮೊದಲು ಜಾರಿಗೆ ತರಲು ಹೊರಟಿದೆ. ಇತರೆ ರಾಜ್ಯಗಳೂ ಅದೇ ದಿಕ್ಕಿನಲ್ಲಿ ನಾ ಮುಂದು, ತಾ ಮುಂದು ಎಂದು ರೇಸಿಗೆ ಬಿದ್ದಿವೆ. ಆದರೆ, 50 ವರ್ಷಗಳ ಹಿಂದೆಯೇ ಭಾರತೀಯ ಶಿಕ್ಷಣ ಪದ್ಧತಿಯ ಬಗ್ಗೆ ಪ್ರಖರವಾಗಿ ಮಾತನಾಡಿದ್ದ ಓಶೋ, ಯಾರಿಗೂ ಹೊಳೆಯದ ಶಿಕ್ಷಣದ ಹೊಸ ಹಾದಿಯತ್ತ ಬೆಳಕು ಚೆಲ್ಲಿದ್ದರು. ತಮ್ಮ ಉಪನ್ಯಾಸ ಮಾಲಿಕೆಯಲ್ಲಿ ‘ಶಿಕ್ಷಣ, ಶಿಕ್ಷಕ’ ಹೇಗಿರಬೇಕು? ನಿಜಾರ್ಥದಲ್ಲಿ ‘ಕ್ರಾಂತಿ’ ಎಂದರೆ ಏನು? ಅದು ಹೇಗಾಗುತ್ತದೆ ಎಂದು ಅವರು ಹೇಳಿದ್ದರು. ಅವರ ಪ್ರತಿಮಾತು ಸಾರ್ವಕಾಲಿಕ ಮತ್ತು ಸತ್ಯ. ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಮಾತುಗಳನ್ನು ಮತ್ತೊಮ್ಮೆ ಕೇಳುವುದು ಅತ್ಯಂತ ಜರೂರು.