ಚಿನ್ನದ ನಾಡಿಗೆ ಆಪಲ್‌ ಗರಿ; ಜಿಲ್ಲೆಯಲ್ಲಿ ಐಫೋನ್‌ ಹವಾ! ಯುವಜನರಿಗೆ ಸ್ಟೀವ್‌ ಜಾಬ್ಸ್‌ ಕನವರಿಕೆ!!

ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಕೋಲಾರ ಜಿಲ್ಲೆ ಈಗ ರಾಜ್ಯ ಮಾತ್ರವಷ್ಟೇ ಅಲ್ಲ, ಇಡೀ ದೇಶದಲ್ಲೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ನಿತ್ಯಬರಪೀಡಿತವಾದ ಈ ಜಿಲ್ಲೆ ಇದೀಗ ಜಾಗತಿಕ ಮಾಧ್ಯಮಗಳಲ್ಲೂ ಮಿಂಚುತ್ತಿದೆ. ಹಾಗೆ ನೋಡಿದರೆ ಇದು ಬಯಲು ಸೀಮೆಯ ಭರ್ಜರಿ ಶೈನಿಂಗ್‌.