ಶ್ರೀ ಕೇಶವಾನಂದರು ಸಂವಿಧಾನವನ್ನೇ ಗೆಲ್ಲುವಂತೆ ಮಾಡಿದ ಭಾರತಮಾತೆಯ ಅಮೃತ ಪುತ್ರರು
ಅಂದುಕೊಂಡಿದ್ದನ್ನು ಮಾಡಿ ಸದ್ದಿಲ್ಲದೆ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದವರು ಕೇಶವಾನಂದ ಭಾರತಿ ಶ್ರೀಗಳು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂವಿಧಾನದ ಆಶಯಗಳು, ನಾಗರೀಕರ ಹಕ್ಕುಗಳನ್ನು ಎತ್ತಿಹಿಡಿಯಲು ನಡೆದ ಪ್ರಯತ್ನದಲ್ಲಿ ಅವರು ಮುಂಚೂಣಿಯಲ್ಲಿ ನಿಂತವರು. ಧರ್ಮಸೇವೆಯ ಜತೆಜತೆಯಲ್ಲೇ ಅವರು ನಡೆಸಿದ ಹೋರಾಟ ಅನೇಕ ಬದಲಾವಣೆಗಳಿಗೆ ಕಾರಣವಾಯಿತು ಮತ್ತೂ ಅನೇಕ ಐತಿಹಾಸಿಕ ಹೆಗ್ಗುರುತುಗಳಿಗೆ ಸಾಕ್ಷಿಯಾಯಿತು. ಸರ್ವಾಧಿಕಾರಿ ಆಡಳಿತದ ಮನಃಸ್ಥಿತಿಯ ನೆರಳಿನಲ್ಲೇ ಬೆಳಕು ಮೂಡಿಸಿದ ಯತಿಶ್ರೇಷ್ಠರು ಆ ಹೆಜ್ಜೆಗುರುತುಗಳನ್ನೆಲ್ಲ ನಮಗೇ ಬಿಟ್ಟು ನಿರ್ಗಮಿಸಿದ್ದಾರೆ.
Copy and paste this URL into your WordPress site to embed
Copy and paste this code into your site to embed