ಇತಿಹಾಸಕ್ಕೆ ಮರೆವಿನ ರೋಗ; ಬ್ರಹ್ಮಪುತ್ರನ ಒಡಲಿನ ಈಶಾನ್ಯದ ಕಣಿವೆಗಳ ಯುದ್ಧ ಕಥನಗಳು ಕಣ್ಣಿಗೆ ರಾಚಿದರೂ.. ನೋಡಲಿಲ್ಲ !! ಈಗಾದರೂ ಕಾಣುತ್ತವಾ?

ಇತಿಹಾಸ ಎಂಬುದು ಇತಿಹಾಸವೇ. ಅದನ್ನು ಅಳಿಸಲು ಸಾಧ್ಯವೇ ಇಲ್ಲ. ನಮ್ಮ ದೇಶವೇನು? ಜಗತ್ತಿನ ಉದ್ದಗಲಕ್ಕೂ ಇದೇ ಇತಿಹಾಸವನ್ನೇ ಇಟ್ಟುಕೊಂಡು ತಲೆತಲೆಮಾರುಗಳ ಕಾಲ ವಾದವಿವಾದ ನಡೆಯುತ್ತಿದೆ, ಕಚ್ಚಾಟವಾಗುತ್ತಿದೆ, ನೆತ್ತರೂ ಹರಿಯುತ್ತಿದೆ. ಅದು ಭಾರತದಲ್ಲಿ, ಕರ್ನಾಟಕದಲ್ಲಿಯೂ ಆಗಿದೆ. ಐತಿಹಾಸಿಕ ಅನ್ಯಾಯಕ್ಕೊಳಗಾದ ಈಶಾನ್ಯ ಭಾರತದ ಮಹಾ ಸಮರವೊಂದು ಆ ಬ್ರಹ್ಮಪುತ್ರನ ಒಡಲಲ್ಲಿ ಹುದುಗಿ ಹೋಗಿದೆ. ಅದನ್ನು ಜಗತ್ತಿಗೆ ಮೊದಲು ತೋರಿಸಿದ್ದವರು ಬ್ರಿಟಿಷ್ ಸೇನಾಧಿಕಾರಿ ಮೇಜರ್ ಜನರಲ್ ಸರ್ ಜೇಮ್ಸ್ ಜಾನ್ಸ್ಟೋನ್. ಈ ಬರಹವನ್ನು ಕನ್ನಡಿಗರಿಗಾಗಿ ಅನುವಾದಿಸಿದ್ದಾರೆ ಹಿರಿಯ ಭೂ ವಿಜ್ಞಾನಿ ಡಾ. ಎಂ.ವೆಂಕಟಸ್ವಾಮಿ.