ಸಾವಿಗೆ ಧಾವಂತ ಹೆಚ್ಚಾಗಿದೆ, ಅಂಗಡಿ ಎಂಬ ಹಸನ್ಮುಖಿಯೂ ಅಗಲಿದ್ದಾರೆ…

ನಿಜ. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಗಟ್ಟಿ ತಳಪಾಯವಿದೆ. ಅದಕ್ಕೆ ಅನೇಕರು ಕಾರಣ, ಸುರೇಶ್‌ ಅಂಗಡಿಯೂ ಸೇರಿ. ಒಂದು ಕಾಲದಲ್ಲಿ ಕಾಂಗ್ರೆಸ್‌ ಮತ್ತು ಜನತಾದಳದ ಅಬೇಧ್ಯ ಕೋಟೆಯಾಗಿದ್ದ ಗಡಿ ಜಿಲ್ಲೆಯಲ್ಲಿ ಇತ್ತ ಸಾಹುಕಾರ ಮನೆತನದ ಆಕ್ರಮಣಕಾರಿ ಪಾಲಿಟಿಕ್ಸ್‌, ಸಕ್ಕರೆ ಕಾರ್ಖಾನೆಗಳ ಮಾಲೀಕರ ಒಳಪ್ರಭಾವ, ಸಹಕಾರಿಗಳ ಅಸಹಕಾರ, ಇದರ ಜತೆಗೆ ಮರಾಠಿಗಳ ಕಿರಿಕಿರಿ ರಾಜಕೀಯದ ನಡುವೆ ಅಂಗಡಿ ನಾಲ್ಕು ಅವಧಿಗೆ ಲೋಕಸಭೆಗೆ ಗೆದ್ದುಹೋಗಿದ್ದರು. ಅವರ ಪಕ್ಷ ಗೆದ್ದು ಬೀಗಿತು ಎನ್ನುವುದಕ್ಕಿಂತ ಅಂಗಡಿ ಸಂಸ್ಕಾರಕ್ಕೇ ಗೆಲುವಾಗಿತ್ತು ಎನ್ನುವುದೇ ಸರಿ.