ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ; ಹೃದಯವನ್ನೇ ಕೊರಳಾಗಿಸಿಕೊಂಡು ಹಾಡಿದ ಗಂಧರ್ವ

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ..
ಪಂಡಿತಾರಾಧ್ಯುಲ ಅಂದರೆ ಪಂಡಿತರಿಂದಲೇ ಪೂಜಿಸಲ್ಪಡುವವರು ಎಂದರ್ಥ. ಇದು ಸತ್ಯ. ಶಾಸ್ತ್ರೀಯ ಸಂಗೀತದ ಓನಾಮಗಳನ್ನು ತಿಳಿಯದೇ, ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಸಾಕ್ಷಾತ್ ಪಂಡಿತರಿಂದಲೇ ಪೂಜಿಸಲ್ಪಟ್ಟವರು, ಗೌರವಿಸಲ್ಪಟ್ಟವರು ಬಾಲು. ಅವರನ್ನು ನಾವು ಮರೆಯುವುದು ಇರಲಿ, ಇನ್ನು ನೂರಾರು ವರ್ಷಗಳಾದರೂ ಅವರು ಹಾಡಿಟ್ಟುಹೋದ ಹಾಡುಗಳು ನಮಗೆ ಅವರನ್ನು ಮರೆಯಲು ಬಿಡುವುದೇ ಇಲ್ಲ..