ತಣ್ಣಗೆ ಮೈಕೊರೆಯುತ್ತಿದ್ದ ಕಾರ್ಗತ್ತಲ ಕಣಿವೆಗಳಲ್ಲಿ ನೆತ್ತರ ಹೊಳೆ ಹರಿಯುವ ಮುನ್ನ …

ಹೇಗಾದರೂ ಸರಿ ನಾಗಾಗಳ ಹೆಡೆಮುರಿ ಕಟ್ಟಲು ಹೊಂಚು ಹಾಕಿದ್ದ ಆಂಗ್ಲರಿಗೆ ಆ ದಿನ ಬಂದೇಬಿಟ್ಟಿತು. ಅಂದುಕೊಂಡಿದ್ದನ್ನು ಮಾಡಲೇಬೇಕು, ಈ ಸಲ ಗುರಿ ತಪ್ಪಲೇಬಾರದು ಎನ್ನುವುದು ಜಾನ್ಸ್ಟೋನ್ ನಿರ್ಧಾರವಾಗಿತ್ತು. ಅದಕ್ಕಾಗಿ ಅವರು ಮಾಡಿದ ಐಡಿಯಾಗಳು, ತೆಗೆದ ಜೀವಗಳು ಲೆಕ್ಕಕ್ಕಿಲ್ಲ. ಇಡೀ ವಿಶ್ವವನ್ನೇ ನಡುಗಿಸಿದ್ದ ಬ್ರಿಟಿಷರಿಗೆ ಈಶಾನ್ಯ ಬೆಟ್ಟಗಳಲ್ಲಿ ಮುಖವುಳಿಸಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಜಾನ್ಸ್ಟೋನ್ ಬರೆದ ಯುದ್ಧಚಿತ್ರಗಳನ್ನು ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಕನ್ನಡಕ್ಕೆ ತಂದಿದ್ದಾರೆ.