ಕೃಷಿ ಉಳಿಯದಿದ್ದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಉಳಿಯುವುದಿಲ್ಲ; ಇಸ್ರೇಲ್‌ ಮಾದರಿ ಜಪ ಮಾಡಿದರೆ ಸಾಲದು, ಸಾಧಿಸಿ ತೋರಿಸಲು ದಾರಿಗಳಿವೆ..

ಕೃಷಿ ಉಳಿದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಉಳಿಯುತ್ತವೆ. ಜಗತ್ತಿನ ಯಾವ ದೇಶಗಳಿಗೂ ತೆಗೆದು ಹೋಗದಂತೆ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದ ಈ ಜಿಲ್ಲೆಗಳ ಕೃಷಿ ಇಂದು ವಿನಾಶದತ್ತ ಸಾಗುತ್ತಿದೆ. ಒಂದೆಡೆ ಜಲಮೂಲಗಳ ನಾಶ, ಮತ್ತೊಂದೆಡೆ ಪ್ರಾಕೃತಿಕ ಸಂಪತ್ತಿನ ಲೂಟಿಯಿಂದ ಬೆಂಗಳೂರಿಗೆ ಅನತಿ ದೂರದಲ್ಲಿಯೇ ಮರುಭೂಮಿ ಸೃಷ್ಟಿಯಾಗುತ್ತಿದೆಯಾ ಎಂಬ ಭೀತಿ ಇದೆ. ಹಿರಿಯ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ಕೋಲಾರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (27/28 ಜನವರಿ, 2021) ಮಂಡಿಸಿದ ವಿಚಾರಗಳು ಎಲ್ಲರ ಕಣ್ತೆರೆಸುವಂತಿವೆ.