ಎರಡು ದಶಕ ಗ್ರಾಮಗಳಲ್ಲಿ ಪಾಠ ಮಾಡಿದ ಹಳ್ಳಿಮೇಷ್ಟ್ರು
by Ra Na Gopala Reddy Bagepalli
ಬಾಗೇಪಲ್ಲಿ: ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಮೆಹಬೂಬ್ ಸಾಬಿ ಅವರು 2021-22ನೇ ಸಾಲಿನ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ʼಉತ್ತಮ ಶಿಕ್ಷಕ ಪ್ರಶಸ್ತಿʼಗೆ ಪಾತ್ರರಾಗಿದ್ದು, ಅವರು ಜಿಲ್ಲಾ ಕೇಂದ್ರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಮೂಲತಃ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದವರಾದ ಇವರು ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕನಾಗಿ ಸುಮಾರು 30 ವರ್ಷ ಕಾಲ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ.
ನಿಷ್ಠೆ, ಪ್ರಾಮಾಣಿಕತೆ ಜತೆಗೆ ಜನರ ಸಹಕಾರ ಪಡೆದು ಕರ್ತವ್ಯ ನಿರ್ವಹಿಸಿದರೆ ಸರ್ಕಾರಿ ಶಾಲೆಗಳನ್ನು ಸುಧಾರಣೆ ಮಾಡಲು ಸಾಧ್ಯ ಎಂಬುದನ್ನು ತೊರಿಸಿ ಕೊಟ್ಟ ಅವರು. ಸದ್ಯಕ್ಕೆ ಬಾಗೇಪಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮೆಹಬೂಬ್ ಸಾಬಿ ಅವರು, “ನನಗೆ ದೊರೆತ ಜಿಲ್ಲಾ ಉತ್ತಮ ಉತ್ತಮ ಶಿಕ್ಷಕ ಪ್ರಶಸ್ತಿಯು ಬಾಗೇಪಲ್ಲಿ ತಾಲೂಕಿಗೆ ದೊರೆತ ಪ್ರಶಸ್ತಿಯಾಗಿದೆ. ಇದು ಇಲ್ಲಿ ನಾನು ಕೇವಲ ನಿಮಿತ್ತ ಮಾತ್ರ. ತಾಲೂಕಿನ ಎಲ್ಲಾ ಗುರು-ಹಿರಿಯರ ಹಾಗೂ ಸ್ನೇಹಿತರ ಹಾರೈಕೆಯ ಪ್ರತಿಫಲವೇ ನನ್ನನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂದು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಮೆಹಬೂಬ್ ಸಾಬಿ ಅವರನ್ನು ಬಾಗೇಪಲ್ಲಿ ಬಿಇಓ ಸಿದ್ದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣ, ಬಾಗೇಪಲ್ಲಿ ತಾಲೂಕು ಬಿ.ಆರ್.ಸಿ.ಸಿ.ಆರ್.ಸಿ ಹಾಗೂ ಸರ್ಕಾರಿ ಬಾಲಕರ ಪ್ರೌಢಶಾಲೆಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
Comments 1