• About
  • Advertise
  • Careers
  • Contact
Thursday, October 29, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಪಕ್ಕಾ ಟೀಂ, ಸೂಪರ್ ಪ್ಲಾನ್; ಸಿಇಟಿ ಪರೀಕ್ಷೆ ಸಕ್ಸಸ್

cknewsnow desk by cknewsnow desk
July 30, 2020
in COVID-19, NEWS IN USE
Reading Time: 1 min read
0
ಪಕ್ಕಾ ಟೀಂ, ಸೂಪರ್ ಪ್ಲಾನ್; ಸಿಇಟಿ ಪರೀಕ್ಷೆ ಸಕ್ಸಸ್

ಜಿಕೆವಿಕೆ ಕೋವಿಡ್ ಕೇರ್ ಪರೀಕ್ಷಾ ಕೇಂದ್ರದಲ್ಲಿ ಪಿಪಿಇ ಕಿಟ್ ಧರಿಸಿ ಎಂಟ್ರಿ ಕೊಟ್ಟ ಡಿಸಿಎಂ.

917
VIEWS
FacebookTwitterWhatsuplinkedinEmail

ಧೈರ್ಯವಾಗಿ ಪರೀಕ್ಷೆ ಬರೆದ ಕೋವಿಡ್-19 ಪಾಸಿಟೀವ್ ವಿದ್ಯಾರ್ಥಿಗಳು; ಕೇರ್ ಸೆಂಟರಿನೊಳಕ್ಕೆ ಪಿಪಿಇ ಕಿಟ್ ಧರಿಸಿ ಎಂಟ್ರಿ ಕೊಟ್ಟ ಡಿಸಿಎಂ


ಬೆಂಗಳೂರು: ಕೋವಿಡ್-19 ಸವಾಲಿನ ನಡುವೆಯೂ ಮೊದಲ ದಿನದ ಸಿಇಟಿ ಪರೀಕ್ಷೆಯನ್ನು ರಾಜ್ಯ ಸರಕಾರ ಯಶಸ್ವಿಯಾಗಿ ನಡೆಸಿದೆ. ಒಂದೆಡೆ ಹೈಕೋರ್ಟ್ ಕಣ್ಗಾವಲು, ಮತ್ತೊಂದೆಡೆ ಕೋವಿಡ್.. ಮೊದಲ ದಿನದ ಸವಾಲನ್ನು ಸರಕಾರ ಗೆದ್ದಿದೆ. ವಿದ್ಯಾರ್ಥಿಗಳ ಇಚ್ಛಾಶಕ್ತಿಯೂ ಜಯಿಸಿದೆ.

ಕೊರೋನಾ ಪಾಸಿಟೀವ್ ಬಂದಿದ್ದ ವಿದ್ಯಾರ್ಥಿಗಳು ಕೂಡ ತಮಗೆ ನಿಗದಿ ಮಾಡಲಾಗಿದ್ದ ಪ್ರತ್ಯೇಕ ಜಾಗಗಳಲ್ಲಿಯೇ ನಿರಾತಂಕವಾಗಿ ಪರೀಕ್ಷೆ ಬರೆದರು. ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆ ಸಂಪನ್ನವಾಗಿದೆ. ಸರಕಾರವೂ ನೆಮ್ಮದಿಯ ನಿಟ್ಟುಸಿರು ಬಿಟ್ಟು ಶುಕ್ರವಾರದ ಸವಾಲಿಗೆ ಸಜ್ಜಾಗಿದೆ.

BNMK Photograps

ಭರ್ಜರಿ ಹಾಜರಿ:

ಮೊದಲ ದಿನ ಗುರುವಾರ ಬೆಳಗ್ಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ ಗಣಿತ ಪರೀಕ್ಷೆ ಇತ್ತು. ಜೀವಶಾಸ್ತ್ರಕ್ಕೆ 1,94,419 ವಿದ್ಯಾರ್ಥಿಗಳು ನೋಂದಾಯಿತರಾಗಿ 1,47,491 ಜನ ಹಾಜರಾಗಿದ್ದರು. ಒಟ್ಟು ಹಾಜರಾತಿ ಶೇ.75.89ರಷ್ಟಿತ್ತು. ಕಳೆದ ವರ್ಷ ಇದೇ ವಿಷಯದಲ್ಲಿ 1,48,022 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇನ್ನು ಗಣಿತಕ್ಕೆ ಬಂದರೆ, 1,94,419 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ, 1,73,408 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಶೇ.89.22ರಷ್ಟು ಹಾಜರಾತಿ ಇದೆ. ಕಳೆದ ವರ್ಷ ಗಣಿತವನ್ನು1,84,022 ಮಂದಿ ಬರೆದಿದ್ದರು. ಇನ್ನು, ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಬಂದಿರಲಿಲ್ಲ, ಈ ವರ್ಷ ಬಂದಿದ್ದು ಅರ್ಹರಷ್ಟೇ ಪರೀಕ್ಷೆ ಬರೆದಿದ್ದಾರೆ. ಹೀಗಾಗಿ ಹಾಜರಿಯಲ್ಲಿ ವ್ಯತ್ಯಯ ಇದೆ ಎಂದು ಡಿಸಿಎಂ ಮಾಹಿತಿ ಕೊಟ್ಟಿದ್ದಾರೆ.

ಸಿಇಟಿ ಪರೀಕ್ಷೆ ಸಕ್ಸಸ್ ಹಿಂದೆ ಡಿಸಿಎಂ ಅವರ ಪರಿಶ್ರಮ ಸಾಕಷ್ಟಿತ್ತು. ಕಳೆದ ಒಂದು ತಿಂಗಳಿನಿಂದ ಅವರು ಕೋವಿಡ್ ಬೆಂಗಳೂರು ಉಸ್ತುವಾರಿ ನಡುವೆಯೂ ಸಿಇಟಿ ಸಿದ್ಧತೆಗೆ ಹೆಚ್ಚು ಕಷ್ಟಪಟ್ಟಿದ್ದರು. ಹೀಗಾಗಿ, ಗುರುವಾರ ಸಂಜೆ ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಅವರು ಅವರು ಹೈ ಜೋಶ್’ನಲ್ಲಿದ್ದರು. ಬಲವಾದ ಇಚ್ಛಾಶಕ್ತಿ ಮತ್ತು ಉತ್ತಮ ತಂಡವಿದ್ದರೆ ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬುದನ್ನು ಸಿಇಟಿ ಪ್ರರೀಕ್ಷೆ ಸಾಬೀತುಪಡಿಸಿದೆ ಎಂದು ಅವರು ಹೇಳಿದರು.

ಮೊತ್ತ ಮೊದಲಿಗೆ ಎಲ್ಲ ಸವಾಲುಗಳ ನಡುವೆಯೂ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿ ಗಳಿಗೂ ಹಾಗೂ ಒಂದು ಸಮಷ್ಠಿ ತಂಡವಾಗಿ ಕೆಲಸ ಮಾಡಿ ಸೈ ಎನಿಸಿಕೊಂಡ ಆರೋಗ್ಯ, ಉನ್ನತ ಶಿಕ್ಷಣ, ಸಾರಿಗೆ, ಬಿಬಿಎಂಪಿ, ಎಲ್ಲ ಜಿಲ್ಲಾಡಳಿತಗಳು ಹಾಗೂ ಪ್ರತ್ಯಕ್ಷ- ಪರೋಕ್ಷವಾಗಿ ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆ ಎಂದು ಇಡೀ ಯಶಸ್ಸಿನ ಹಿರಿಮೆಯನ್ನು ತಮ್ಮ ಇಡೀ ತಂಡಕ್ಕೆ ನೀಡಿದರು.

ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು:

ರಾಜ್ಯದಲ್ಲಿ ಒಟ್ಟು 60 ಮಂದಿ ಕೋವಿಡ್ ಪಾಸಿಟೀವ್ ಬಂದಿದ್ದ ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದರು. ಈ ಪೈಕಿ ಗಣಿತದಲ್ಲಿ 57, ಜೀವಶಾಸ್ತ್ರದಲ್ಲಿ 49 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಿದ್ದರು. ಇವರದು ಪೂರ್ಣ ಹಾಜರಾತಿ ಎಂದೇ ಹೇಳಬಹುದು. ಇನ್ನು ಬೆಂಗಳೂರಿನಲ್ಲಿ ಎರಡು ಕೇಂದ್ರಗಳಲ್ಲಿ ಪಾಸಿಟೀವ್ ವಿದ್ಯಾರ್ಥಿಗಳಿಗೆ ಸ್ಥಳ ನಿಗದಿ ಮಾಡಲಾಗಿತ್ತು. ಕೋವಿಡ್ ಆರೈಕೆ ಕೇಂದ್ರಗಳಿರುವ ಜ್ಞಾನಭಾರತಿ ಪರೀಕ್ಷಾ ಕೇಂದ್ರದಲ್ಲಿ 6 ಹಾಗೂ ಜಿಕೆವಿಕೆ ಕೇಂದ್ರದಲ್ಲಿ 4 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನಾನೂ ಸಹ ಜಿಕೆವಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಇದೇ ಮೊದಲ ಬಾರಿಗೆ ಕೋವಿಡ್ ಆರೈಕೆ ಕೇಂದ್ರದೊಳಕ್ಕೆ ಹೋಗಿದ್ದೆ. ಆ ವಿದ್ಯಾರ್ಥಿಗಳು ಅತ್ಯಂತ ಧೈರ್ಯವಾಗಿ ಪರೀಕ್ಷೆ ಬರೆದಿದ್ದನ್ನು ಕಣ್ಣಾರೆ ಕಂಡೆ. ಅಲ್ಲಿನ ಹಿರಿಯ ವೈದ್ಯರೇ ಪರೀಕ್ಷೆಯ ಮೇಲ್ವಿಚಾರಕರಾಗಿದ್ದರು. ಆ ನಾಲ್ವರು ವಿದ್ಯಾರ್ಥಿಗಳಿಗಾಗಿ ಹತ್ತಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪಾಸಿಟೀವ್ ಅಭ್ಯರ್ಥಿಗಳಗೆ ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಎಸ್’ಪಿಒ ಪ್ರಕಾರವೇ ಕಂಟೈನ್ಮೆಂಟ್ ಝೋನ್’ನಿಂದ ಹೊರಬಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲೂ ಒಂದು ಸಣ್ಣ ಲೋಪವೂ ಇಲ್ಲದೆ ಮೊದಲ ದಿನದ ಪರೀಕ್ಷೆ ಮುಕ್ತಾಯವಾಗಿದೆ ಎಂದು ಡಿಸಿಎಂ ಹೇಳಿದರು.

ರಾಮನಗರ, ಚಿಕ್ಕೋಡಿ, ವಿಜಯಪುರ, ದಾವಣಗೆರೆ, ಗದಗ, ಹಾವೇರಿ, ಕೋಲಾರ, ಉತ್ತರ ಕನ್ನಡ, ತುಮಕೂರು, ಕೊಡಗು ಹೊರತುಪಡಿಸಿ ಉಳಿದ 22 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದ ಅವರು, ಇನ್ನು 10-15 ದಿನಗಳಲ್ಲಿ ಫಲಿತಾಂಶ ಹೊರಬರಲಿದೆ. ಈ ವರ್ಷ ಕೌನ್ಸೆಲಿಂಗ್ ಸೇರಿ ಎಲ್ಲವೂ ಆನ್’ಲೈನ್’ನಲ್ಲಿಯೇ ನಡೆಯಲಿದೆ. ವಿದ್ಯಾರ್ಥಿಗಳು ನೇರವಾಗಿ ಕಾಲೇಜಿಗೇ ಹೋಗಿ ಪ್ರವೇಶ ಪಡೆಯಬಹುದು ಎಂದು ಅವರು ತಿಳಿಸಿದರು.

ಜಿಕೆವಿಕೆ ಕೇಂದ್ರದಲ್ಲಿ ಡಿಸಿಎಂ:

ಜಿಕೆವಿಕೆ ಕ್ಯಾಂಪಸ್’‌ನಲ್ಲಿರುವ ರೈತ ತರಬೇತಿ ಸಂಸ್ಥೆ ಮತ್ತು ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್’ನಲ್ಲಿನ ಸಿಇಟಿ ಕೇಂದ್ರಕ್ಕೆ ಗುರುವಾರ ಮಧ್ಯಾಹ್ನ ಡಾ. ಸಿ.ಎನ್. ಅಶ್ವತ್ಥನಾರಾಯಣ ಭೇಟಿ ನೀಡಿ, ಅಲ್ಲಿ ಪರೀಕ್ಷೆಗೆ ಹಾಜರಾಗಿದ್ದ ನಾಲ್ವರು ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದರು. ಸ್ವತಃ ಅವರೂ ಪಿಪಿಇ ಕಿಟ್ ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಹೋದರಲ್ಲದೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು ಹಾಗೂ ಖುಷಿಯಾಗಿ ಪರೀಕ್ಷೆ ಎದುರಿಸುವಂತೆ ಹೇಳಿದರು. ಜತೆಗೆ, ಅವರಿಗೆ ಒದಗಿಸಲಾಗಿರುವ ಸೌಲಭ್ಯಗಳನ್ನು ನೇರವಾಗಿ ಪರಿಶೀಲಿಸಿದರು. ಕೋವಿಡ್ ಸೋಂಕಿನ ನಡುವೆಯೂ ಉತ್ಸಾಹದಿಂದ ಸಿಇಟಿ ಪರೀಕ್ಷೆಗೆ ಹಾಜರಾಗಿರುವ ಆ ವಿದ್ಯಾರ್ಥಿಗಳನ್ನು ಡಿಸಿಎಂ ಅಭಿನಂದಿಸಿದರು. “ನಿಮ್ಮ ಶ್ರದ್ಧೆ, ನಿಮ್ಮ ಕಮಿಟ್’ಮೆಂಟ್ ಬಗ್ಗೆ ತುಂಬಾ ಮೆಚ್ಚುಗೆ ಇದೆ. ಮುಂದಿನ ವಿಷಯಗಳನ್ನು ಉತ್ತಮವಾಗಿ ಎದುರಿಸಿ. ನಿಮಗೆಲ್ಲ ಒಳ್ಳೆಯದೇ ಆಗುತ್ತದೆ” ಎಂದು ಡಿಸಿಎಂ ಶುಭ ಹಾರೈಸಿದರು.

ವೈದ್ಯರೇ ಮೇಲ್ವಿಚಾರಕರು:

ಈ ಪರೀಕ್ಷಾ ಕೇಂದ್ರದಲ್ಲಿ ವೈದ್ಯರೇ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದು ಬಹಳ ವಿಶೇಷ. ವೈದ್ಯರ ಜತೆಗೆ ಒಬ್ಬ ನರ್ಸ್ ಕೂಡ ಇದ್ದರಲ್ಲದೆ, ನಾಲ್ವರಷ್ಟೇ ಬರೆದ ಈ ಪರೀಕ್ಷಾ ಕೇಂದ್ರದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರು ಮತ್ತು ನರ್ಸ್’ ಮತ್ತಿತರೆ ಎಲ್ಲ ಸಿಬ್ಬಂದಿಗೂ ಕೃತಜ್ಞತೆ ಸಲ್ಲಿಸಿದ ಡಿಸಿಎಂ, ಅವರ ಜತೆಯೂ ಮಾತುಕತೆ ನಡೆಸಿದರು. “ಯಾವಾಗಲೂ ವೈದ್ಯ ವೃತ್ತಿಯಲ್ಲೇ ಸಂತೋಷ ಕಾಣುತ್ತಿದ್ದ ನಮಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆ ಮಾಡಿದ್ದೂ ಖುಷಿ ತಂದಿದೆ. ಕೋವಿಡ್-19 ದಂತಹ ಸಂಕಷ್ಟ ಸಮಯದಲ್ಲಿ ಈ ಕೆಲಸವನ್ನು ಮಾಡಲೇಬೇಕಾಯಿತು. ಇದೊಂದು ರೀತಿಯ ಹೊಸ ಅನುಭವ” ಎಂದು ಆ ವೈದ್ಯರು ಹೇಳಿದರು.

Tags: -cet-karnatakacetcovid-19 karnatakacovid-19-care-karnataka
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

by cknewsnow desk
October 16, 2026
0

ಕರುಣೆಪೂರಿತ ಸಮಾಜದ ಪುನರುಜ್ಜೀವನಕ್ಕೆ ಶ್ರೀಶ್ರೀ ಮಧುಸೂಧನ ಸಾಯಿ ಅವರ ನೇತೃತ್ವ ಬೇಕೆಂದ ಕೇಂದ್ರ ಸಚಿವರು

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

HDK #preesmeet #Live

by cknewsnow desk
October 15, 2026
0

ಮುಖ್ಯಮಂತ್ರಿ ಡಿಕೆಶಿ ಮತ್ತು ಸ್ಟಿಂಗ್ ಪಿನ್ ಸಂಬಂಧದ ಬಗ್ಗೆ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ ಕೇಂದ್ರ ಸಚಿವರು

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

by cknewsnow desk
October 13, 2026
0

ಬೆಂಗಳೂರು ಜೆ.ಪಿ. ಭವನದಿಂದ ನೇರ ಪ್ರಸಾರ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಮಾರ್ಚ್‌ 1ರಿಂದ ದ್ವಿತೀಯ ಪಿಯು, 20ರಿಂದ sslc ಪರೀಕ್ಷೆ

by cknewsnow desk
December 3, 2024
0

ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ

ಪೋಡಿ ತ್ವರಿತ ಇತ್ಯರ್ಥಕ್ಕೆ 1,786 ಹುದ್ದೆ ಭರ್ತಿ

ಪೋಡಿ ತ್ವರಿತ ಇತ್ಯರ್ಥಕ್ಕೆ 1,786 ಹುದ್ದೆ ಭರ್ತಿ

by cknewsnow desk
August 12, 2024
0

1,000 ಗ್ರಾಮ ಲೆಕ್ಕಿಗರು, 750 ಸರ್ವೇಯರ‍್ಸ್, 36 ಎಡಿಎಲ್‌ಆರ್‌ಗಳ ನೇಮಕ

kptclನಲ್ಲಿ 902 ಹುದ್ದೆಗೆ ನೇಮಕ

kptclನಲ್ಲಿ 902 ಹುದ್ದೆಗೆ ನೇಮಕ

by cknewsnow desk
May 24, 2024
0

ನೇಮಕಾತಿ ಆದೇಶ ನೀಡಿದ ಸರಕಾರ

Next Post
ಕೋವಿಡ್ ಇದ್ದರೂ ತಪ್ಪದೇ ಮನೆಗೆ ಬಾರಮ್ಮ ವರ ಮಹಾಲಕ್ಷ್ಮೀ

ಕೋವಿಡ್ ಇದ್ದರೂ ತಪ್ಪದೇ ಮನೆಗೆ ಬಾರಮ್ಮ ವರ ಮಹಾಲಕ್ಷ್ಮೀ

Leave a Reply Cancel reply

Your email address will not be published. Required fields are marked *

Recommended

ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ 7 ದಶಕದ ಆಡಳಿತದಿಂದ  ಭ್ರಮನಿರಸನಗೊಂಡ ಕೇರಳದಲ್ಲಿ ಬಿಜೆಪಿಯತ್ತ ಒಲವು; ದೇವರ ನಾಡಿನಲ್ಲಿ ಬದಲಾವಣೆಯ ಗಾಳಿ ಎಂದ ಡಿಸಿಎಂ

1912 ಹೆಲ್ಪ್‌ಲೈನ್‌ ಸರಿಯಾಗಲು ಉನ್ನತ ಅಧಿಕಾರಿಗಳಿಗೆ 2 ದಿನ ಡೆಡ್ಲೈನ್‌ ಕೊಟ್ಟ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ

5 years ago
ಮಿಸ್ಟರ್ ಡಿ.ಕೆ.ಶಿವಕುಮಾರ್.. ನಿಮ್ಮ ಕೆಟ್ಟ ರಾಜಕೀಯ ಆಟ ನನ್ನ ಬಳಿ ನಡೆಯಲ್ಲ

ವೋಟಿಗಾಗಿ ಓಲೈಕೆ ಮಾಡಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

3 years ago

Popular News

  • #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    0 shares
    Share 0 Tweet 0
  • ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

    0 shares
    Share 0 Tweet 0
  • ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

    0 shares
    Share 0 Tweet 0
  • ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

    0 shares
    Share 0 Tweet 0
  • 10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

October 28, 2026
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

October 25, 2026
ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

October 25, 2026
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

October 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ