• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home POLITICS

ತಮಿಳುನಾಡು ಗೆಲ್ಲಲು ಬಿಜೆಪಿ ಗೇಮ್‌ಪ್ಲ್ಯಾನ್;‌ ವೇಲ್‌ ಹಿಡಿದ ಸೈಲಂಟ್‌ ಟ್ರಬಲ್‌ಶೂಟರ್

P K Channakrishna by P K Channakrishna
November 22, 2020
in POLITICS, STATE
Reading Time: 1 min read
0
ತಮಿಳುನಾಡು ಗೆಲ್ಲಲು ಬಿಜೆಪಿ ಗೇಮ್‌ಪ್ಲ್ಯಾನ್;‌ ವೇಲ್‌ ಹಿಡಿದ ಸೈಲಂಟ್‌ ಟ್ರಬಲ್‌ಶೂಟರ್
911
VIEWS
FacebookTwitterWhatsuplinkedinEmail
ಮೇಲಿನ ಚಿತ್ರದಲ್ಲಿ; ಎಲ್.ಮುರುಗನ್‌, ಡಾ.ಸಿ.ಎನ್.ಅಶ್ವತ್ಥನಾರಾಯಣ, ಅಣ್ಣಾಮಲೈ.

photo: Dr. Ashwathnarayan C. N.@drashwathcn

ಕೊಯಮತ್ತೂರು: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಭರ್ಜರಿ ತಾಲೀಮು ಆರಂಭಿಸಿದೆ. ಪರಿಯಾರ್‌ ಐಡಿಯಾಲಜಿ ಮೇಲೆ ರಾಜಕೀಯ ಮಾಡುತ್ತಿರುವ ಡಿಎಂಕೆ‌, ಎಐಎಡಿಎಂಕೆ ಪಕ್ಷಗಳನ್ನು ಸರಿಗಟ್ಟಲು ಕಮಲ ಪಾಳಯ ತನ್ನ ಮೂಲ ಅಜೆಂಡಾ ಹಿಂದುತ್ವವನ್ನೇ ನೇರವಾಗಿ ಪ್ಲೇ ಮಾಡುತ್ತಿದೆ.

ಈ ನಿಟ್ಟಿನಲ್ಲಿ ತಮಿಳುನಾಡು ಬಿಜೆಪಿ ಘಟಕ ಕೈಗೊಂಡಿರುವ ʼವೆಟ್ರಿವೇಲ್‌ʼ ಯಾತ್ರೆ ಇದೀಗ ಮಧ್ಯಂತರ ಹಂತಕ್ಕೆ ಬಂದಿದ್ದು, ಕ್ಲೈಮ್ಯಾಕ್ಸ್‌ ಹೊತ್ತಿಗೆ ದ್ರಾವಿಡ ರಾಜ್ಯದಲ್ಲಿ ಹಿಂದುತ್ವವೆಂಬ ವಾಹಕದ ಮೇಲೆ ತನ್ನ ಪರ ಅಲೆ ಎಬ್ಬಿಸಲು ಬಿಜೆಪಿ ಪ್ಲ್ಯಾನ್‌ ಮಾಡಿಕೊಂಡಿದೆ. ಈ ಯೋಜನೆಯನ್ನು ಕಾರ್ಯಗತ ಮಾಡಲು ರಾಜ್ಯ ಬಿಜೆಪಿ ಅಧ್ಯಕ್ಷ ಎಲ್.ಮುರುಗನ್‌ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರನ್ನು ಮುಂದಕ್ಕೆ ಬಿಟ್ಟಿರುವ ವರಿಷ್ಠರು, ತಮ್ಮ ಕರಾರುವಕ್ಕಾದ ಸ್ಕೆಚ್ಚಿನೊಂದಿಗೆ ಕರ್ನಾಟಕದ ಇನ್ನಿಬ್ಬರನ್ನು, ಅವರಿಬ್ಬರ ಜತೆ ಮುಂದೆ ಬಿಟ್ಟಿದ್ದಾರೆ.

ಈಗಾಗಲೇ ತಮಿಳುನಾಡಿನಲ್ಲಿ ಪಕ್ಷದ ಪರ ಸಣ್ಣ ಅಲೆಯನ್ನು ಎಬ್ಬಿಸಿರುವ ಎಲ್.ಮುರುಗನ್‌ ಜತೆ, ಅಣ್ಣಾಮಲೈ ಮತ್ತು ನೈನಾರ್‌ ನರೇಂದ್ರನ್‌ ಅವರನ್ನು ಜೋಡಿಸಲಾಗಿದೆ. ಮೊದಲೇ ಹೇಳಿದಂತೆ ಅಣ್ಣಾಮಲೈ ಅವರು ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ. ಇನ್ನು ನರೇಂದ್ರನ್‌ ಸಿಕ್ಕಾಪಟ್ಟೆ ವಿವಾದಿತ ವ್ಯಕ್ತಿ ಹಾಗೂ ತಿರುನಲ್ವೇಲಿಯ ಮಾಜಿ ಶಾಸಕ ಕೂಡ. ಒಂದು ಫೈರ್‌ಬ್ರ್ಯಾಂಡ್‌ ನಾಯಕ.

ಇತ್ತೀಚೆಗೆ ಬಿಜೆಪಿ ಸೇರಿದ ನಟಿ ಖುಷ್ಬೂ ಈ ನಾಲ್ವರಿಗೆ ಸಾಥ್‌ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರ ಕಾರು ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಅವರು ಈ ಯಾತ್ರೆಯಿಂದ ದೂರ ಉಳಿದಿದ್ದಾರೆ. ಇನ್ನು, ರಾಜ್ಯ ಬಿಜೆಪಿ ಉಸ್ತುವಾರಿ ಆಗಿರುವ ಕರ್ನಾಟಕದ ಸಿ.ಟಿ.ರವಿ, ದ್ರಾವಿಡ ಪಾಲಿಟಿಕ್ಸ್‌ಗೆ ಹೇಗಾದರೂ ಮಾಡಿ ಚೆಕ್‌ಮೇಟ್‌ ಇಡಲು ಓಡಾಡುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಪಾಲಿನ ʼಸೈಲಂಟ್‌ ಟ್ರಬಲ್‌ಶೂಟರ್‌ʼ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ಯಾತ್ರೆಯಲ್ಲಿ ಭಾನುವಾರ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿದ್ದು, ಕೊಯಮತ್ತೂರಿನಲ್ಲಿ ಭಾನುವಾರ ನಡೆದ ಇದೇ ಯಾತ್ರೆಯಲ್ಲಿ ಅವರು ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಆಗಿದ್ದರು.

ಮತ್ತೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರವೇ ಚೆನ್ನೈಗೆ ಬಂದಿದ್ದರು. ಬಿಜೆಪಿಗೆ ಬೇಕಿಲ್ಲದಿದ್ದರೂ ಎಐಎಡಿಎಂಕೆ ನಾಯಕರು ಮೈತ್ರಿಗಾಗಿ ಶಾಗೆ ದುಂಬಾಲು ಬಿದ್ದಿದ್ದಾರೆ. ವಿಚಿತ್ರವೆಂದರೆ, ಕೋವಿಡ್‌ ನೆಪವೊಡ್ಡಿ ವೆಟ್ರಿವೇಲ್‌ ಯಾತ್ರೆಯಲ್ಲಿ ಪಾಲ್ಗೊಂಡಿರುವ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರನ್ನು ಪಳನಿಸ್ವಾಮಿ ಸರಕಾರ ಬಂಧಿಸುತ್ತಿದೆ!

ಶನಿವಾರ ಚೆನ್ನೈನಲ್ಲಿ ಅಮಿತ್‌ ಶಾ ಜತೆ ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಮೈತ್ರಿ ಮಾತುಕತೆ ನಡೆಸುತ್ತಿದ್ದರೆ, ಕೊಯಮತ್ತೂರು ಆಸುಪಾಸಿನಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದರು!

In Coimbatore to take part in the significant 'Vel Yatra' here organised by @BJP4TamilNadu

Thank @BJP4Tamilnadu President Shri @Murugan_TNBJP, Vice-president Shri @annamalai_k, 'Vel Yatra' in-charge Shri Narendra for their gracious welcome. pic.twitter.com/4e76zKjUjP

— Dr. C.N. Ashwath Narayan (ಮೋದಿ ಅವರ ಪರಿವಾರ) (@drashwathcn) November 22, 2020
ಡಿಎಂಎ ವಿರುದ್ಧ ಡಿಸಿಎಂ ಗುಡುಗು

ಅಭಿವೃದ್ಧಿಯಲ್ಲಿ ಉನ್ನತ ಸ್ಥಾನದಲ್ಲಿ ಇರಬೇಕಾಗಿದ್ದ ತಮಿಳುನಾಡು ರಾಜ್ಯವು ಭ್ರಷ್ಟ ರಾಜಕೀಯ ಕೂಟಗಳು ಹಾಗೂ ಕೌಟುಂಬಿಕ ಸ್ವಾರ್ಥ ರಾಜಕಾರಣದ ಬಲೆಯಲ್ಲಿ ಸಿಕ್ಕಿ ನರಳುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ದೂರಿದರು.

ಕೊಯಮತ್ತೂರಿನಲ್ಲಿ ಭಾನುವಾರ ರಾಜ್ಯ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ʼವೆಟ್ರಿವೇಲ್ʼ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ಬಹಳ ಮಹತ್ವದ ಸ್ಥಾನವಿದೆ. ಇತರೆ ರಾಜ್ಯಗಳೆಲ್ಲ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಪ್ರಗತಿಯತ್ತ ಸಾಗುತ್ತಿದ್ದರೆ, ಈ ರಾಜ್ಯ ಮಾತ್ರ ರಾಜಕೀಯ ದಿಕ್ಕುದೆಸೆ ಇಲ್ಲದೆ, ಹಿಮ್ಮುಖವಾಗಿ ಚಲಿಸುತ್ತಿದೆ ಎಂದರು.

ಕೆಲವರು ನಮ್ಮ ದೈವ ಮುರುಗನ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ನಿಜಕ್ಕೂ ಖಂಡನೀಯ. ನಮ್ಮ ದೇವರು, ಸಂಸ್ಕೃತಿ, ಧರ್ಮದ ಬಗ್ಗೆ ಯಾರೇ ಆಗಲಿ ಅವಹೇಳನಕಾರಿಯಾಗಿ ಮಾತನಾಡಿದರೆ ಸಹಿಸುವ ಪ್ರಶ್ನೆ ಇಲ್ಲ. ಅಂಥವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಡಿಸಿಎಂ ಗುಡುಗಿದರು.

ತಮಿಳುನಾಡಿನಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ. ಈಗಲ್ಲದಿದ್ದರೆ ಇನ್ನೆಂದಿಗೂ ಅಲ್ಲ. ಮುಂದಿನ ಚುನಾವಣೆಯಲ್ಲಿ ಭ್ರಷ್ಟ ರಾಜಕೀಯ ಕೂಟಗಳಿಗೆ, ಕುಟುಂಬಗಳ ಆಧಾರಿತ ಸ್ವಾರ್ಥ ರಾಜಕಾರಣಕ್ಕೆ ಮಣೆ ಹಾಕಬಾರದು. ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಅಂತ ಬಂದರೆ ಬಜೆಪಿಗಿಂತ ಅತ್ಯುತ್ತಮ ಆಯ್ಕೆ ಇನ್ನೊಂದಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಈ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ಕೊಯಮತ್ತೂರು ನಗರಕ್ಕೆ 15 ಕಿ.ಮೀ. ದೂರದಲ್ಲಿ ಇರುವ ಮರುದಾಮಲೈನಲ್ಲಿರುವ ಮುರುಗರ ದೇವಸ್ಥಾನಕ್ಕೆ ಭೇಟಿ ‌ನೀಡಿ ದೇವರ ದರ್ಶನ ಪಡೆದರು ಉಪ ಮುಖ್ಯಮಂತ್ರಿ. ಇವತ್ತಿನ ಯಾತ್ರೆ ತಿರುತ್ತಣಿಯಿಂದ ತಿರುಚ್ಚೆಂದೂರ್ ದೇವಸ್ಥಾನದವರೆಗೆ ಸಾಗಿದೆ. ಈ ಯಾತ್ರೆಯಲ್ಲಿ ಕೊಂಚ ದೂರ ಡಿಸಿಎಂ ಸಾಗಿ ಶುಭಹಾರೈಸಿದರು. ಸಿ.ಟಿ.ರವಿ ಅವರು ಈ ಯಾತ್ರೆಯ ಭಾಗವಾಗಿಯೇ ಇದ್ದು, ಅವರು ಇನ್ನೂ ಕೆಲ ದಿನ ಅಲ್ಲೇ ಉಳಿಯುವ ಸಾಧ್ಯತೆ ಇದೆ.

ಏನಿದು ಯಾತ್ರೆ?

Thank you Tamil Nadu!

Some more pictures from Chennai. pic.twitter.com/FaUNxAQft5

— Amit Shah (Modi Ka Parivar) (@AmitShah) November 21, 2020

ಡಿಎಂಕೆ ನಾಯಕರೊಬ್ಬರು ತಮಿಳುನಾಡಿನ ಆರಾಧ್ಯ ದೈವ ಮುರುಗರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಪಕ್ಷ ಈ ಹೇಳಿಕೆಯನ್ನು ಡಿಎಂಕೆಯ ಉನ್ನತ ನಾಯಕರು ಖಂಡಿಸಲೂ ಇಲ್ಲ. ಈ ಅಪಚಾರವನ್ನು ಖಂಡಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಮುರುಗನ್‌ ಅವರು ರಾಜ್ಯದಲ್ಲಿರುವ ಆರು ಮುರುಗರ ಕ್ಷೇತ್ರಗಳ ಯಾತ್ರೆ ಕೈಗೊಂಡಿದ್ದಾರೆ. ಮುರುಗರ ಆಯುಧವಾದ ವೇಲ್‌ (ದಂಡ)ವನ್ನು ಕೈಯ್ಯಲ್ಲಿಡಿದು ಅವರು ಯಾತ್ರೆ ಕೈಗೊಂಡಿದ್ದು, ಅದು ಡಿಸೆಂಬರ್‌ 5ರಂದು ಕೊನೆಗೊಳ್ಳಲಿದೆ.

ಅಂದಹಾಗೆ, ಯಾತ್ರೆಯ ನೇತೃತ್ವ ವಹಿಸಿರುವ ಮುರುಗನ್‌ ದೀಕ್ಷೆಯಂತೆ ಸ್ವೀಕರಿಸಿ ಈ ಯಾತ್ರೆ ಕೈಗೊಂಡಿದ್ದಾರೆ. ಕೇಸರಿ ಅಂಗಿ, ಕೇಸರಿ ಅಂಗಿಯನ್ನು ತೊಟ್ಟು ಚಪ್ಪಲಿ ತೊಡದೇ ಬರಿಗಾಲಿನಲ್ಲಿಯೇ ಅವರು ನಡೆಯುತ್ತಿದ್ದಾರೆ. ಕೈಯ್ಯಲ್ಲಿ ವೇಲ್‌ (ದಂಡ) ಅನ್ನು ಹಿಡಿದು ಸಾಗಿಬರುತ್ತಿರುವ ಅವರಿಗೆ ಎಲ್ಲಡೆ ಭರ್ಜರಿ ಸ್ವಾಗತ ಸಿಗುತ್ತಿದೆ.

Tags: bjpTamil NaduVel Yatra
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಕರ್ನಾಟಕದೊಳಗೆ ಆಂಧ್ರ ರಾಜಕೀಯ; ಚಕ್ರ ತಿರುಗಿಸುತ್ತಿದೆ ತೆಲುಗು ವೋಟ್‌ ಬ್ಯಾಂಕ್‌ !

ಈ ವರ್ಷ ಶಾಲೆ-ಕಾಲೇಜು ತೆರೆಯಲ್ಲ; ಡಿಸೆಂಬರ್‌ ನಂತರ ನೋಡೋಣ ಎಂದ ಸಿಎಂ

Leave a Reply Cancel reply

Your email address will not be published. Required fields are marked *

Recommended

ಪುಣೆಯಂತೆಯೇ ಬೆಳಗಾವಿ ಶೈಕ್ಷಣಿಕ ನಗರ

ಪುಣೆಯಂತೆಯೇ ಬೆಳಗಾವಿ ಶೈಕ್ಷಣಿಕ ನಗರ

4 years ago
ಭಾರತದ ಮೊದಲ ನದಿಯೊಳಗಿನ ಮೆಟ್ರೋ!

ಭಾರತದ ಮೊದಲ ನದಿಯೊಳಗಿನ ಮೆಟ್ರೋ!

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ