• About
  • Advertise
  • Careers
  • Contact
Monday, June 15, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಮನುಷ್ಯನಲ್ಲಿನ ಟೊಳ್ಳನ್ನುಅಳಿಸಿ ಅಧ್ಯಾತ್ಮದ ಮತ್ತು ದೈವತ್ವದ ಸೆಲೆ ಮೂಡಿಸುವುದೇ ಸತ್ಸಂಗ: ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ

P K Channakrishna by P K Channakrishna
December 12, 2020
in CHIKKABALLAPUR, STATE
Reading Time: 2 mins read
0
ಮನುಷ್ಯನಲ್ಲಿನ ಟೊಳ್ಳನ್ನುಅಳಿಸಿ ಅಧ್ಯಾತ್ಮದ ಮತ್ತು ದೈವತ್ವದ ಸೆಲೆ ಮೂಡಿಸುವುದೇ ಸತ್ಸಂಗ: ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ
946
VIEWS
FacebookTwitterWhatsuplinkedinEmail

ಚಿಕ್ಕಬಳ್ಳಾಪುರದಲ್ಲಿ ಶ್ರೀಗಳ ನೇತೃತ್ವದಲ್ಲಿ ಸತ್ಸಂಗ ಮತ್ತು ಸದ್ವಿಚಾರಗಳ ಶ್ರಾವಣ

ಚಿಕ್ಕಬಳ್ಳಾಪುರ: ಎಲ್ಲರೂ ಜಗತ್ತಿನ ಹಿಂದೆಬಿದ್ದು ಓಡುತ್ತಿದ್ದೇವೆ. ಆದರೆ, ಒಳಗಡೆ ಟೊಳ್ಳಾಗುತ್ತಿದ್ದೇವೆ. ಸತ್ಸಂಗಗಳು ಮನುಷ್ಯನಲ್ಲಿನ ಇಂಥ ಟೊಳ್ಳನ್ನು ನಿವಾರಿಸಿ ಅಲ್ಲಿ ಅಧ್ಯಾತ್ಮದ, ದೈವತ್ವ ಸೆಲೆ ನೆಲೆಗೊಳ್ಳುವಂತೆ ಮಾಡುತ್ತದೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ನುಡಿದರು.

ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ನಡೆದ ಸತ್ಸಂಗ-ಸದ್ವಿಚಾರಗಳ ಶ್ರಾವಣ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳೂ; ಅಪ್ರಯತ್ನಪೂರ್ವಕವಾಗಿಯೇ ಅಜ್ಞಾನದ ಅಬ್ಬರ ಇದ್ದೇ ಇರುತ್ತದೆ. ಜತೆಗೆ, ನಾನು ಏನೂಂತ ತಿಳಿಯದೇ ಹೋದರೆ ಬದುಕು ಅಪೂರ್ಣವಾಗುತ್ತದೆ. ಹಾಗೆ ಆಗಬಾರದು. ಸದಾ ಸತ್ಸಂಗಗಳ ಮೂಲಕ ಸದ್ವಿಚಾರಗಳನ್ನು ಅರಿತು ಉತ್ತಮ ದಾರಿಯಲ್ಲಿ ಸಾಗಬೇಕು. ಇಲ್ಲದವರಿಗೆ ಕೊಂಚ ಕೊಡಬೇಕು. ಸ್ವಾರ್ಥವನ್ನು ಬಿಡಬೇಕು. ಸಮಾಜಕ್ಕಾಗಿ ಒಳ್ಳೆಯದನ್ನು ಮಾಡುವ ಮಾರ್ಗದಲ್ಲಿ ನಡೆಯಬೇಕು ಎಂದು ಉಪದೇಶಿಸಿದರು.

ಸ್ವಾಮೀಜಿ ಅವರು ಸತ್ಸಂಗದಲ್ಲಿ ನುಡಿದ ನುಡಿಮುತ್ತುಗಳು ಹೀಗಿವೆ;

  • ಚಿಕ್ಕಬಳ್ಳಾಪುರಕ್ಕೆ ಬಂದರೆ ಧ್ಯಾನಸ್ಥಿತಿಗೆ ಬಹುಬೇಗ ಹೋಗಬಹುದು ಎಂದು ನಮ್ಮ ಪೂಜ್ಯ ಗುರುಗಳಾದ ಶ್ರೀ ಬಾಲಗಂಗಾಧರ ಮಹಾಸ್ವಾಮೀಜಿ ಅವರು ಹೇಳುತ್ತಿದ್ದರು. ಇಲ್ಲಿನ ವಾತಾವರಣದಲ್ಲಿ, ಸುತ್ತಮುತ್ತಲಿನ ಎಲ್ಲ ಜಾಗಳಲ್ಲೂ ಅಧ್ಯಾತ್ಮದ ತರಂಗಗಳು ಪಸರಿಸಿರುತ್ತವೆ. ಪಂಚಗಿರಿಗಳ ಪುಣ್ಯಭೂಮಿಯಾದ ಈ ನೆಲದಲ್ಲಿ ಅನೇಕ ಪೂಜ್ಯರು ಸಂಚರಿಸಿದ್ದಾರೆ. ಋಷಿ ಮುನಿಗಳು ತಪಸ್ಸು ಮಾಡಿ ಸಿದ್ದಿಯನ್ನು ಸಾಧಿಸಿದ್ದಾರೆ. ಇಂಥಹ ನೆಲದಲ್ಲಿ ನಾವುಗಳು ಎಂಟು ವರ್ಷ ಇದ್ದೆವು. ಈಗಲೂ ಇದ್ದೇವೆ.
  • ಒಂದು ದೊಡ್ಡ ಅಯಸ್ಕಾಂತದ‌ ಮುಂದೆ ಒಂದು ಕಬ್ಬಿಣದ ತುಂಡು ಇದ್ದರೆ, ಅದು ಅನಾಯಾಸವಾಗಿ ಮ್ಯಾಗ್ನೆಟ್‌ಗೆ ಆಕರ್ಷಿತವಾಗುತ್ತದೆ. ಒಂದು ವೇಳೆ ಆ ಕಬ್ಬಿಣದ ತುಂಡನ್ನು ಚಲಿಸದಂತೆ ಕಟ್ಟಿಹಾಕಿದರೆ? ಅದು ಆಕರ್ಷಿತವಾದರೂ ಅಯಸ್ಕಾಂತದ ಬಳಿ ಹೋಗಲು ಸಾಧ್ಯವಿಲ್ಲ. ಆದರೂ ಅದರ ಸುತ್ತ ಅಯಸ್ಕಾಂತೀಯ ಅಲೆಗಳು ಇದ್ದೇ ಇರುತ್ತವೆ. ಹಾಗೆಯೇ ನಮ್ಮ ಗುರುಗಳಿಗೆ ಗೋಚರವಾಗುತ್ತಿದ್ದ ನೇರ ಧ್ಯಾನಸ್ಥ ಸ್ಥಿತಿ ನಮಗೇಕೆ ಆಗುತ್ತಿಲ್ಲ? ಈ ನೆಲದಲ್ಲಿ ಈ ಹಿಂದೆ ಆಗಿಹೋದ ಅನೇಕ ಮಹಾಪುರುಷರು ಸೃಷ್ಟಿಸಿ ಹೋಗಿದ್ದ ಅಧ್ಯಾತ್ಮದ ಅಲೆಗಳ ಅನುಭವ ನಮಗೇಕೆ ಆಗುತ್ತಿಲ್ಲ? ನಮ್ಮ ಸುತ್ತ ಇರುವ ದೈವತ್ವದ ಅಲೆಯ ಅನುಭವ ನಮಗೇಕೆ ಆಗುತ್ತಿಲ್ಲ? ಏಕೆಂದರೆ, ನಮ್ಮ ಮನಸ್ಸಿನ ಮೇಲೆ ಅಥವಾ ನಮ್ಮ ಅಂತರಂಗದ ಮೇಲೆ ಅಜ್ಞಾನವೆಂಬ ಕತ್ತಲು ಕವಿದಿದೆ. ಹೀಗಾಗಿ, ಅಧ್ಯಾತ್ಮದ, ದೈವತ್ವದ ಅನುಭವವನ್ನು ಪುನರುಜ್ಜೀನವಗೊಳಿಸುವುದೇ ಈ ಸತ್ಸಂಗದ ಉದ್ದೇಶ. ನಂದಿ ಬೆಟ್ಟದಿಂದ ಪೂರ್ವಕ್ಕೆ ಹೋಗುತ್ತಿದ್ದಂತೆ ಈ ಅಧ್ಯಾತ್ಮದ ಅಯಸ್ಕಾಂತೀಯ ಅಲೆಯ ಪ್ರಭಾವ ಕಡಿಮೆಯಾಗುತ್ತಿದೆ.
  • ನಮ್ಮಲ್ಲಿರುವ ಶಕ್ತಿ ಮತ್ತು ಆತ್ಮ ಬೇರೆ ಬೇರೆಯಲ್ಲ. ವಿಜ್ಞಾನದಲ್ಲಿ ಶಕ್ತಿ ಎಂದು ಕರೆದರೆ, ಅಧ್ಯಾತ್ಮದಲ್ಲಿ ಆತ್ಮ ಎನ್ನಲಾಗುತ್ತದೆ. ಆದರೆ ಇವೆರಡರ ಭಾವಾರ್ಥ ಒಂದೇ. ಏಕೆಂದರೆ; ಶಕ್ತಿ-ಅಧ್ಯಾತ್ಮವನ್ನು ನಾಶ ಮಾಡಲು ಆಗುವುದಿಲ್ಲ. ಹಾಗೆಯೇ ಅದನ್ನು ಸೃಷ್ಟಿ ಮಾಡುವುದು ಸಾಧ್ಯವೇ ಇಲ್ಲ. ಅದು ಹಾಗೆಯೇ ಇರುತ್ತದೆ. ಆದರೆ, ಕಾಲಕಾಲಕ್ಕೆ ರೂಪಾಂತರವಾಗುತ್ತಾ ಇರುತ್ತದೆ. ಅಂದರೆ; ನಮ್ಮ ಹುಟ್ಟಿಗೂ ಮುನ್ನ ಕಾಣದ ಒಂದು ರೂಪವಿದೆ, ಅದೇ ರೀತಿ ನಮ್ಮ ಸಾವಿನ ನಂತರವೂ ಅದಕ್ಕೊಂದು ರೂಪವಿರುತ್ತದೆ. ಹಾಗಿದ್ದರೂ ಒಂದು ಅಂಶ ಹಾಗೆಯೇ ಇರುತ್ತದೆ, ಅದನ್ನೇ ಶಕ್ತಿ ಅಥವಾ ಆತ್ಮ ಎಂದು ಕರೆಯುತ್ತೇವೆ. ನಮಗೆ ಕಾಣುವ ಬೆಳಕಿನ ನಡುವೆ ನಮ್ಮನ್ನು ಸದಾಚಾರಗಳತ್ತ ಮುನ್ನಡೆಸುವ ಸದ್ವಿಚಾರಗಳನ್ನು ಅರಿತು ನಮ್ಮೊಳಗೆ ಆ ಬೆಳಕನ್ನು ಸಾಧಿಸಿಕೊಳ್ಳುವ ಮೂಲಕ ಎಲ್ಲರೂ ಸನ್ಮಾರ್ಗದತ್ತ ನಡೆಯಬೇಕು. ನಾವು ಯಾರು? ಏತಕ್ಕಾಗಿ ಬಂದಿದ್ದೇವೆ? ಎಂಬುದನ್ನು ಅರಿತುಕೊಳ್ಳಬೇಕು. ಅಂತಹ ಜಿಜ್ಞಾಸೆಗಳಿಗೆ ಸತ್ಸಂಗದಲ್ಲಿ ಉತ್ತರ ದೊರಕುತ್ತದೆ.
  • ಅಗಾಧ ಜೀವಕೋಶಗಳಿಂದ ತುಂಬಿಹೋಗಿರುವ ನಮ್ಮ ದೇಹವು ದಿನದಿನವೂ ಬದಲಾಗುತ್ತ, ರೂಪಾಂತರವಾಗುತ್ತಾ ಹೋಗುತ್ತದೆ. ಒಂದು ಜೀವಕೋಶದ ಅವಧಿ ನೂರಇಪ್ಪತ್ತು ದಿನ ಅಂತ ಹೇಳಲಾಗುತ್ತದೆ. ಹಾಗೆಯೇ ಮಿದುಳಿನಲ್ಲಿರುವ ನ್ಯೂರಾನ್‌ಗಳು ಒಮ್ಮೆ ಹುಟ್ಟಿ ಸತ್ತರೆ ಮತ್ತೆ ಬರುವುದಿಲ್ಲ. ಈ ದೇಹದಲ್ಲಿರುವ ಪ್ರತಿ ಜೀವಕೋಶಗಳು ಪ್ರತಿಕ್ಷಣವೂ ಸಾಯುತ್ತಿವೆ ಎಂದಾದರೆ, ದೇಹಕ್ಕೆ ಸಂಬಂಧಿಸಿದ ಸಾವು ಪ್ರತಿಕ್ಷಣದಲ್ಲೂ ಆಗುತ್ತಿದೆ ಎಂಬುದನ್ನು ನಾವೆಲ್ಲರೂ ಗ್ರಹಿಸಬೇಕು. ಇಂಥ ದೇಹವನ್ನು ಸ್ಥೂಲದೇಹ ಎಂದು ಕರೆಯಲಾಗುತ್ತದೆ. ಇನ್ನು; ನಮ್ಮೊಳಗಡೆ ಇನ್ನೊಂದು ದೇಹವಿದೆ. ಅದರ ಹೆಸರು ಸೂಕ್ಷ್ಮದೇಹ. ಅದನ್ನು ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇತ್ಯಾದಿಯಾಗಿ ಕರೆಯಬಹುದು. ಒಟ್ಟಾರೆಯಾಗಿ ಇದು ಅಂತಃಕರಣವನ್ನು ಒಳಗೊಂಡಿರುತ್ತದೆ. ಇದೆಲ್ಲಕ್ಕೂ ಕಾರಣೀಭೂತವಾದ ಇನ್ನೊಂದು ಕಾರಣ ದೇಹವಿದೆ. ಅದರ ಬಗ್ಗೆಯೂ ನಮಗೆ ಅರಿವು ಬೇಕು.
  • ವಿಜ್ಞಾನ ಪ್ರವೇಶ ಮುಗಿದ ನಂತರದಲ್ಲಿ, ಆ ವಿಜ್ಞಾನದ ಪ್ರವೇಶ ಆಗದೇ ಇರುವ ಜಾಗವೇ ಅದ್ಯಾತ್ಮಿಕ ಜಗತ್ತು. ಇಲ್ಲಿ ಪಡೆದುಕೊಳ್ಳುವುದಕ್ಕೆ ಬರುವುದಕ್ಕಿಂತ ಕಳೆದುಕೊಳ್ಳುವುದಕ್ಕೇ ಬರಬೇಕು. ಅಂದರೆ; ನಮ್ಮಲ್ಲಿ ಅನಗತ್ಯವಾಗಿ ತುಂಬಿಕೊಂಡಿರುವಂಥದ್ದನ್ನು ಇಲ್ಲಿ ಕಳೆದುಕೊಳ್ಳುವಂತಾಗಬೇಕು. ಅದೇ ಸತ್ಸಂಗ. ಹೀಗಾಗಿ ಸತ್ಸಂಗದಲ್ಲಿ ಮನರಂಜನೀಯ ಅಂಶಗಳು ಇರುವುದಿಲ್ಲ. ಅದೇನಿದ್ದರೂ ನನ್ನನ್ನು ನಾನು ತಿಳಿದುಕೊಳ್ಳುವ ಪ್ರಕ್ರಿಯೆ. ನಮ್ಮಲ್ಲಿ ಅನಗತ್ಯವಾಗಿ, ಬೇಕಿಲ್ಲದೆ ತುಂಬಿಹೋಗಿರುವಂಥದ್ದನ್ನೆಲ್ಲ ಖಾಲಿ ಮಾಡಿಕೊಳ್ಳುವ ಪ್ರಕ್ರಿಯೆಯೂ ಹೌದು.

ಸತ್ಸಂಗದಲ್ಲಿ ಶ್ರೀಗಳ ಮತ್ತಷ್ಟು ನುಡಿಮುತ್ತುಗಳನ್ನು ಕೇಳಲು ಹಾಗೂ ಇಡೀ ಸತ್ಸಂಗದ ಸವಿ ಅನುಭವಿಸಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..

https://www.facebook.com/Cknewsnow

ಸತ್ಸಂಗದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಅವರು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌, ಮಾಜಿ ಶಾಸಕ ಬಿ.ಎನ್.ಬಚ್ಚೇಗೌಡ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ಕೃಷ್ಣ ಮುಂತಾದವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಚಿವರು ನಿರ್ಮಲಾನಂದನಾಥ ಶ್ರೀಗಳಿಗೆ ಪಾದಪೂಜೆ ನೆರೆವೇರಿಸಿದರು. ಸತ್ಸಂಗದ ವೇಳೆ ಶ್ರೀಗಳ ನೇತೃತ್ವದಲ್ಲಿ ಲಿಲಿತ ಸಹಸ್ರನಾಮ ಪಾರಾಯಣ, ಭಜನೆ ನಡೆಯಿತು. ತಾಲ್ಲೂಕಿನ ಸಾವಿರಾರು ಭಕ್ತರು, ಹಿತೈಷಿಗಳು ಭಾಗಿಯಾಗಿ ಶ್ರೀಗಳ ಅನುಗ್ರಹಕ್ಕೆ ಪಾತ್ರರಾದರು.

Tags: adichunchanagiri muttchikkaballapurNirmalananda Swamijisatsang
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಇರವು ಸಂಪತ್ತಲ್ಲ, ಇರವಿನ ಅರಿವೇ ಸಂಪತ್ತು ಎಂಬ ಸತ್ಯದ ಅರಿವು ಬಿಟ್ಟು ಹೋದರು ಮಹಾನ್‌ ಚಿಂತಕ ಡಾ.ಡಾ. ಬನ್ನಂಜೆ ಗೋವಿಂದಾಚಾರ್ಯರು

ಇರವು ಸಂಪತ್ತಲ್ಲ, ಇರವಿನ ಅರಿವೇ ಸಂಪತ್ತು ಎಂಬ ಸತ್ಯದ ಅರಿವು ಬಿಟ್ಟು ಹೋದರು ಮಹಾನ್‌ ಚಿಂತಕ ಡಾ.ಡಾ. ಬನ್ನಂಜೆ ಗೋವಿಂದಾಚಾರ್ಯರು

Leave a Reply Cancel reply

Your email address will not be published. Required fields are marked *

Recommended

ತವರು ಜಿಲ್ಲೆ ಉಸ್ತುವಾರಿ ‌ಆಪರೇಷನ್: ಸಚಿವ ಡಾ.ಕೆ.ಸುಧಾಕರ್‌ ಕೈತಪ್ಪುತ್ತಾ ಚಿಕ್ಕಬಳ್ಳಾಪುರ ಜಿಲ್ಲಾ ಹೊಣೆಗಾರಿಕೆ

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆಗೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

4 years ago
ಚಿಕ್ಕಬಳ್ಳಾಪುರ, ಕೋಲಾರವನ್ನು ಭೂ ರಣಹದ್ದುಗಳಿಗಿಟ್ಟ ಬಿಜೆಪಿಯಿಂದ ಈಗ ಗ್ರಾಮ ಸ್ವರಾಜ್ಯದ ಭಜನೆ!

ಗ್ರೇಟರ್‌ ಹೈದರಾಬಾದ್ ಚುನಾವಣೆಯಲ್ಲಿ‌ ಐವತ್ತರ ಹತ್ತಿರಕ್ಕೆ ಬಂದು ನಿಂತ ಬಿಜೆಪಿಗೆ ಇದು ಜಸ್ಟ್‌ ಬಿಗಿನಿಂಗ್‌ ಮಾತ್ರವೇ!

6 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ