• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಪೀಠಕ್ಕಾಗಿ ದೊಡ್ಡವರ ಮಹಾಯುದ್ಧ; ಉಪ ಸಭಾಪತಿಯನ್ನೇ ಹೊತ್ತೊಯ್ದ ಕಾಂಗ್ರೆಸ್‌, ಸಭಾಪತಿ ಬರುವ ಬಾಗಿಲನ್ನೇ ಬಂದ್‌ ಮಾಡಿದ ಬಿಜೆಪಿ, ಆಡಳಿತ ಪಕ್ಷದ ಪರ ವಾಲಿದ ಜೆಡಿಎಸ್

cknewsnow desk by cknewsnow desk
December 15, 2020
in STATE
Reading Time: 1 min read
0
ಪೀಠಕ್ಕಾಗಿ ದೊಡ್ಡವರ ಮಹಾಯುದ್ಧ; ಉಪ ಸಭಾಪತಿಯನ್ನೇ ಹೊತ್ತೊಯ್ದ ಕಾಂಗ್ರೆಸ್‌, ಸಭಾಪತಿ ಬರುವ ಬಾಗಿಲನ್ನೇ ಬಂದ್‌ ಮಾಡಿದ ಬಿಜೆಪಿ, ಆಡಳಿತ ಪಕ್ಷದ ಪರ ವಾಲಿದ ಜೆಡಿಎಸ್
912
VIEWS
FacebookTwitterWhatsuplinkedinEmail

Lead photo: BNMK photographs

ಬೆಂಗಳೂರು: ಹತ್ತು ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ಸದಸ್ಯರು ಅಂಗಿ ಹರಿದುಕೊಂಡು ಮೇಜು ಹತ್ತಿಕೂಗಾಡಿದ್ದ ಘಟನೆ ಇನ್ನು ರಾಜ್ಯದ ಜನಮಾನಸದಿಂದ ಮಾಸಿಲ್ಲ. ಆದರೆ, ಅದೇ ರೀತಿ ಸಂಸದೀಯ ವ್ಯವಸ್ಥೆಯನ್ನೇ ಅಲುಗಾಡಿಸುವಂತಹ ಮತ್ತೊಂದು ಕಹಿ ಘಟನೆಗೆ ನೂರಹತ್ತು ವರ್ಷಗಳ ಇತಿಹಾಸವಿರುವ ವಿಧಾನಪರಿಷತ್‌ ಮಂಗಳವಾರ ಸಾಕ್ಷಿಯಾಯಿತು.

ಅಕ್ಷರಶಃ ರಣಾಂಗಣವಾದ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ಯುದ್ಧ, ನೂಕಾಟ-ತಳ್ಳಾಟ, ಕೈಕೈ ಮಿಲಾಯಿಸಿಕೊಳ್ಳುವುದು ನಡೆಯಿತು. ಹಿರಿಯರ ಮನೆಯಲ್ಲಿ ಮನೆಯಲ್ಲಿ ನಡೆದ ಈ ಗಲಾಟೆಯನ್ನು ಕಂಡ ರಾಜ್ಯ ಜನತೆ ಬೆಚ್ಚಿಬಿದ್ದರು.

.@RahulGandhi party members,have no constitutional values?? SHAME!

Dy Chairperson of the Karnataka Legislative council was forcibly removed from his chair by @INCKarnataka MLCs.

Congress MLC kicking the door of Vidhana Parishath.(4th Pic)#CongressAgainstDemocracy@BJP4India pic.twitter.com/Y9P02DHP9G

— Karthik Krishna 🇮🇳 (Modi Ka Parivar) (@RKKarthikBJP) December 15, 2020

courtesy: @karthikrishaBJP

ಗದ್ದಲ ಶುರುವಾಗಿದ್ದು ಹೇಗೆ?

ಬೆಳಗ್ಗೆ ೧೧.೧೦ಕ್ಕೆಲ್ಲ ಕಲಾಪ ಆರಂಭವಾಗುತ್ತಿದ್ದಂತೆಯೇ ಗದ್ದಲ ಶುರುವಾಯಿತು. ಆಗ ಸಭಾಪತಿ ಸ್ಥಾನದಲ್ಲಿ ಉಪ ಸಭಾಪತಿಯೂ ಆಗಿರುವ ಜೆಡಿಎಸ್‌ನ ಧರ್ಮೇಗೌಡರು ಕೂತಿದ್ದರು. ಆ ದೃಶ್ಯವನ್ನು ಕಂಡ ಕೂಡಲೇ ಸಿಟ್ಟಾದ ಕಾಂಗ್ರೆಸ್‌ ಸದಸ್ಯರು, ಸಭಾಪತಿ ಪೀಠದತ್ತ ನುಗ್ಗಿಬಂದರಲ್ಲದೆ, ಧರ್ಮೇಗೌಡರನ್ನು ಎಬ್ಬಸಿ ಎಳೆಯೊಯ್ದರು. ಇದನ್ನು ಕಂಡ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಕೂಡ ಆಕ್ರೋಶಗೊಂಡರು. ಈ ಸಂದರ್ಭದಲ್ಲಿ ತೀವ್ರ ನೂಕಾಟ, ತಳ್ಳಾಟ ನಡೆಯಿತು. ಕೊನೆಗೆ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಧರ್ಮೇಗೌಡರನ್ನು ಸಭಾಪತಿ ಪೀಠದತ್ತ ಕರೆಕೊಂಡು ಬರುವಷ್ಟರಲ್ಲಿ ಪೀಠದ ಮೇಲೆ ಕಾಂಗ್ರೆಸ್ಸಿನ ಸದಸ್ಯರೊಬ್ಬರು ಕೂತಿದ್ದರು. ಅವರ ಸುತ್ತ ಕಾಂಗ್ರೆಸ್‌ ಸದಸ್ಯರು ಕೋಟೆಯಂತೆ ನಿಂತಿದ್ದರು. ಇದರಿಂದ ಬಿಜೆಪಿ ಸದಸ್ಯರು ಮತ್ತಷ್ಟು ಕೆರಳಿದರು.

ಗಲಾಟೆಯ ನಡುವೆಯೇ ಕಲಾಪ ಮುಂದಕ್ಕೆ

ಇದೇ ವೇಳೆ ಗಲಾಟೆ ಇನ್ನೂ ತಾರಕ್ಕೇರಿತಲ್ಲದೆ, ಯಾರು ಏನು ಹೇಳುತ್ತಿದ್ದಾರೆಂಬುದು ಸ್ಪಷ್ಟವಾಗಿ ಕೇಳಿಸದಾಯಿತು. ಆಗಲೂ ಬಿಜೆಪಿ-ಜೆಡಿಎಸ್‌ ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಬಗ್ಗೆ ಚರ್ಚೆಯಾಗಬೇಕು ಎಂದು ಕೂಗಿದರು. ಸದನದಲ್ಲಿ ಫುಲ್‌ ಕೋರಂ ಇತ್ತು. ಮಾರ್ಷಲ್‌ಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದರು. ಇದೇ ವೇಳೆ, ಸಭಾಪತಿ ಪೀಠಕ್ಕೆ ಬಂದ ಪ್ರತಾಪ್‌ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ದಿಷಾವಧಿಗೆ ಮುಂದೂಡಿಬಿಟ್ಟರು.

ಬೆಲ್‌ ಆಗುವ ಮುನ್ನವೇ ಕೂತಿದ್ದ ಧರ್ಮೇಗೌಡರು

ಸಾಮಾನ್ಯವಾಗಿ ಕಲಾಪ ಪ್ರಾರಂಭಿಸಲು ಬೆಲ್ ಮಾಡಲಾಗುತ್ತದೆ. ಆ ಬೆಲ್‌ ಸದ್ದು ನಿಂತರ ಮಾರ್ಷಲ್‌ಗಳು ʼಬಂದು ಮಾನ್ಯ ಸಭಾಪತಿಗಳು..ʼ ಎಂದು ಹೇಳಿದ ಮೇಲೆ ಸಭಾಪತಿಗಳು ಬಂದು ಆಸೀನರಾಗುವುದು ರೂಢಿ. ಆದರೆ, ಬೆಲ್‌ ಆಗುವುದಕ್ಕೆ ಮೊದಲೇ ಧರ್ಮೇಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಲಾಯಿತು. ಕಲಾಪ ಆರಂಭವಾಗುವ ಸಮಯದಲ್ಲಿ ಪಾಲಿಸಿರಲಿಲ್ಲ. ಕಲಾಪ ಆರಂಭವಾಗುವುದಕ್ಕೆ ಮೊದಲೇ ಧರ್ಮೇಗೌಡರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿ ಕಲಾಪವನ್ನು ಆರಂಭಿಸುವ ಪ್ರಯತ್ನ ನಡೆಸಲಾಯಿತು. ತನ್ಮೂಲಕ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಪೀಠದತ್ತ ಬರದಂತೆ ತಡೆಯುವುದು ಆಡಳಿತಾರೂಢ ಬಿಜೆಪಿ ಉದ್ದೇಶವಾಗಿತ್ತು. ನಿಜಕ್ಕೆ ಕಾಂಗ್ರೆಸ್‌ ಸದಸ್ಯರು ಸಿಟ್ಟಿಗೇಳಲು ಇದೇ ಕಾರಣವಾಯಿತು.

ಇಂಥ ಪ್ರಸಂಗ ಎದುರಾಗುತ್ತದೆ ಎಂದು ಊಹಿಸದ ಕಾಂಗ್ರೆಸ್‌ ಸದಸ್ಯರು, ಈ ಅನಿರೀಕ್ಷಿತ ನಡೆಯಿಂದ ಅವಾಕ್ಕಾದರು. ಕೂಡಲೇ ಮುಖ್ಯ ಸಚೇತಕ ನಾರಾಯಸ್ವಾಮಿ, ಸದಸ್ಯ ಹರಿಪ್ರಸಾದ್ ಸಭಾಪತಿ ಪೀಠದತ್ತ ನುಗ್ಗಿಬಂದರು. ಪ್ರತಿಪಕ್ಷ ಸದಸ್ಯರು ಪೀಠದ ಮೇಲೆ ಹತ್ತಿಯೇ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಕೂಡ ಪ್ರತಿಪಕ್ಷದ ವಿರುದ್ಧ ಧಿಕ್ಕಾರ ಕೂಗಿದರು. ಈ ನಡುವೆ ಪೀಠದಿಂದ ಎದ್ದುಬರುವಂತೆ ಧರ್ಮೇಗೌಡರನ್ನು ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು. ಅದಕ್ಕೆ ಧರ್ಮೇಗೌಡರು ಒಪ್ಪಲಿಲ್ಲ. ಆಗ ಕೆಲವರು ಉಪ ಸಭಾಪತಿಗಳನ್ನು ಕೆಳಗೆಳೆದರು. ಅವರನ್ನು ಸದನದಿಂದ ಹೊರಕ್ಕೆ ಹೊತ್ತೊಯ್ಯಲಾಯಿತು. ಈ ಸಂದರ್ಭದಲ್ಲಿ ಕೆಲ ಸದಸ್ಯರು ಧರ್ಮೇಗೌಡರ ರಕ್ಷಣೆಗೆ ಧಾವಿಸಿದರು.

ಬಾಗಿಲು ಮುಚ್ಚಿದ ಬಿಜೆಪಿ ಸದಸ್ಯರು

ಇನ್ನೊಂದೆಡೆ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಸದನದೊಳಕ್ಕೆ ಪ್ರವೇಶ ಮಾಡದಂತೆ ತಡೆಯುವ ಪ್ರಯತ್ನವನ್ನೂ ಬಿಜೆಪಿ ಮಾಡಿತು. ಅದಕ್ಕಾಗಿ ಆ ಪಕ್ಷದ ಸದಸ್ಯರು ಬಾಗಿಲು ಮುಚ್ಚಿ ಬಾಗಿಲು ಬಳಿಯೇ ಕಾವಲು ಕೂತರು. ಇದರಿಂದ ಗಲಾಟೆ ಮತ್ತಷ್ಟು ಹೆಚ್ಚಾಯಿತಲ್ಲದೆ, ಕಾಂಗ್ರೆಸ್‌ ಸದಸ್ಯರಾದ ಹರಿಪ್ರಸಾದ್‌ ಮತ್ತು ನಜೀರ್‌ ಅಹಮದ್‌ ಅವರು ಬಾಗಿಲನ್ನು ಒದ್ದರಲ್ಲದೆ, ಬಾಗಿಲು ತಳ್ಳಲು ಯತ್ನಿಸಿದರು. ಇದರಿಂದಾಗಿ ಸಭಾಪತಿ ಸ್ವಲ್ಪಹೊತ್ತು ಸದನದ ಒಳಕ್ಕೆ ಬರಲು ಸಾಧ್ಯವಾಗಲಿಲ್ಲ.

#WATCH Karnataka: Congress MLCs in Karnataka Assembly forcefully remove the chairman of the legislative council pic.twitter.com/XiefiNOgmq

— ANI (@ANI) December 15, 2020

ಕೊನೆಗೆ, ಮಾರ್ಷಲ್‌ಗಳು ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನು ಸದನಕ್ಕೆ ಕರೆಕೊಂಡು ಬಂದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಅಂತಿಮವಾಗಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷಾವಧಿಗೆ ಮುಂದೂಡಿದರು.‌ ಅಲ್ಲಿಗೆ ಸದನದಲ್ಲಿ ನಡೆದಿದ್ದ ಗಲಾಟೆ ತಣ್ಣಗಾಗಿ, ಸದನದ ಹೊರಗೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಯಿತು.

Love #animal@PMOIndia@PMOIndia@JPNadda@JoshiPralhad@blsanthosh

Its this picture is not connected to todays fights in
#KarnatakaLegislativeCouncil #KarnatakaAssembly pic.twitter.com/Z61BEBVGEV

— Twist rather tweet (@muralimbhat) December 15, 2020
  • ನಟ್ಟಿಗರೊಬ್ಬರು ಮಾಡಿರುವ ವಿಡಂಬತಾತ್ಮಕ ಟ್ವೀಟ್‌ / courtesy: @twitter

Tags: bjpDharmegowdakarnatakakarnataka legislative council
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಕಸದಿಂದ ರಸ ತೆಗೆಯುವುದು ಎಂದರೆ ಇದೇ!  ₹ 1.10 ಲಕ್ಷ ಕೋಟಿ ಮೌಲ್ಯದ ಉದ್ದಿಮೆ ಆಗಲಿದೆ ತ್ಯಾಜ್ಯ ನಿರ್ವಹಣೆ; ಹೊಸ ತಲೆಮಾರಿನ ಉದ್ಯೋಗ ಸೃಷ್ಟಿಗೆ ನಾಂದಿ

ಕಸದಿಂದ ರಸ ತೆಗೆಯುವುದು ಎಂದರೆ ಇದೇ! ₹ 1.10 ಲಕ್ಷ ಕೋಟಿ ಮೌಲ್ಯದ ಉದ್ದಿಮೆ ಆಗಲಿದೆ ತ್ಯಾಜ್ಯ ನಿರ್ವಹಣೆ; ಹೊಸ ತಲೆಮಾರಿನ ಉದ್ಯೋಗ ಸೃಷ್ಟಿಗೆ ನಾಂದಿ

Leave a Reply Cancel reply

Your email address will not be published. Required fields are marked *

Recommended

ಚಿಕ್ಕಬಳ್ಳಾಪುರಕ್ಕೆ ಚೀಯರ್ಸ್ ;‌ ಡಾ.ಸುಧಾಕರ್ʼಗೆ ವೈದ್ಯಶಿಕ್ಷಣ ಜತೆಗೆ ಆರೋಗ್ಯ ಖಾತೆ

ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಜನಕ್ಕೆ ಕೊರೊನಾ ಲಸಿಕೆ; 2ನೇ ಹಂತದಲ್ಲಿ ಎರಡು ಕೋಟಿ ಜನರಿಗೆ ವ್ಯಾಕ್ಸಿನೇಶನ್‌ ಎಂದ ಸಚಿವ ಡಾ.ಕೆ.ಸುಧಾಕರ್

5 years ago
ಜನರಿಗೆ ಉತ್ತಮ ಚಿಕಿತ್ಸೆ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಸೇವೆ; ಘಟಿಕೋತ್ಸವದಲ್ಲಿ ಓದು ಮುಗಿಸಿದ ಹೊಸ ವೈದ್ಯರಿಗೆ ಕ್ಲಾಸ್‌ ಕೊಟ್ಟ ಡಾಕ್ಟರ್‌ ಸುಧಾಕರ್

ಜನರಿಗೆ ಉತ್ತಮ ಚಿಕಿತ್ಸೆ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಸೇವೆ; ಘಟಿಕೋತ್ಸವದಲ್ಲಿ ಓದು ಮುಗಿಸಿದ ಹೊಸ ವೈದ್ಯರಿಗೆ ಕ್ಲಾಸ್‌ ಕೊಟ್ಟ ಡಾಕ್ಟರ್‌ ಸುಧಾಕರ್

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ