ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಮೋರ್ಚಾಗಳಿಗೆ ನೇಮಕಾತಿಗಳನ್ನು ಮಾಡಲಾಗುತ್ತಿದ್ದು, ಜಿಲ್ಲಾ ಯುವ ಮೊರ್ಚಾ ಉಪಾಧ್ಯಕ್ಷರುಗಳಾಗಿ ಚಿಕ್ಕಬಳ್ಳಾಪುರದಿಂದ ಮಂಚನಬಲೆಯ ಡಾ.ಎಂ.ವಿ.ಸದಾಶಿವ ಹಾಗೂ ಶಿಡ್ಲಘಟ್ಟದಿಂದ ನರ್ಮದಾ ಶಿವಕುಮಾರ್ ನೇಮಕವಾಗಿದ್ದಾರೆ,
ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎ.ಸಿ.ಅಭಿಷೇಕ್ ಈ ನೇಮಕ ಮಾಡಿದ್ದು, ಯುವ ಜನರ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಇವರಿಬ್ಬರ ನೇಮಕ ನೆರವಾಗಲಿದೆ. ಮುಖ್ಯವಾಗಿ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.