ಎರಡನೇ ಅಲೆಯನ್ನು ಯಾವುದೇ ಕಾರಣಕ್ಕೂ ಉಪೇಕ್ಷೆ ಮಾಡಬಾರದು. ಅದು ಸುನಾಮಿಯಂತೆ ಎದ್ದಿದೆ. ಮೊದಲ ಅಲೆ ಮಂದಗತಿಯಲ್ಲಿತ್ತು. ಆದರೆ, ಎರಡನೇ ಅಲೆ ರಭಸವಾಗಿದೆ.
ನವದೆಹಲಿ/ಬೆಂಗಳೂರು: ಕೋವಿಡ್ 2ನೇ ಅಲೆಯಿಂದ ಇಡೀ ದೇಶವೇ ತಲ್ಲಣಗೊಂಡಿದೆ. ದಿನೇದಿನೆ ಸೋಕಿತರು ಹೆಚ್ಚುತ್ತಿದ್ದು, ಸಾವುಗಳೂ ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯ ಮಂಡಳಿ (IMA) ಪ್ರಧಾನ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಲಹೆ ಮಾಡಿದೆ.
ಎರಡನೇ ಅಲೆಯನ್ನು ಯಾವುದೇ ಕಾರಣಕ್ಕೂ ಉಪೇಕ್ಷೆ ಮಾಡಬಾರದು. ಅದು ಸುನಾಮಿಯಂತೆ ಎದ್ದಿದೆ. ಮೊದಲ ಅಲೆ ಮಂದಗತಿಯಲ್ಲಿತ್ತು. ಆದರೆ, ಎರಡನೇ ಅಲೆ ರಭಸವಾಗಿದೆ. ಹೀಗಾಗಿ ದೇಶದಲ್ಲಿ ದಿನಕ್ಕೆ ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದೆ. ಅಮೆರಿಕವನ್ನೂ ಹಿಂದಿಕ್ಕುವ ರೀತಿಯಲ್ಲಿ ಭಾರತದಲ್ಲಿ ಕೊರೋನಾ ವಿಜೃಂಭಿಸುತ್ತಿದೆ ಎಂದು ಐಎಂಎ ಆತಂಕ ವ್ಯಕ್ತಪಡಿಸಿದೆ.
ಹೀಗಾಗಿ ಕೂಡಲೇ ಸಾಧ್ಯವಿರುವ ಎಲ್ಲ ಕಠಿಣ ಕ್ರಮಗಳನ್ನು ಮುಲಾಜಿಲ್ಲದೆ ಕೈಗೊಳ್ಳಬೇಕು ಎಂದು ಐಎಂಎ ಒತ್ತಾಯ ಮಾಡಿದೆ. 18 ವರ್ಷಕ್ಕೆ ಮೇಲ್ಪಟ್ಟವರಿಗೆಲ್ಲ ವ್ಯಾಕ್ಷಿನ್ ನೀಡುವುದು, ಅಗತ್ಯವಲ್ಲದ ಎಲ್ಲ ವಲಯಗಳನ್ನು ಕೆಲ ಕಾಲ ಬಂದ್ ಮಾಡುವುದು, ೪೫ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗುತ್ತಿದ್ದರೂ ದೇಶದಲ್ಲಿ ಕೋವಿಡ್ ಸಾವುಗಳು ಆತಂಕಕಾರಿಯಾಗಿ ಹೆಚ್ಚಾಗುತ್ತಿವೆ ಎಂದು ಐಎಂಎ ಪತ್ರದಲ್ಲಿ ಹೇಳಿದೆ.
ಪತ್ರದಲ್ಲಿ IMA ನೀಡಿರುವ ಸಲಹೆಗಳು
- 18 ವರ್ಷಕ್ಕೂ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್ ನೀಡಬೇಕು.
- ಸಿನಿಮಾ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ, ರಾಜಕೀಯ ಸಮಾವೇಶ ಇತ್ಯಾದಿ ಅತ್ಯಗತ್ಯವಲ್ಲದ ಕ್ಷೇತ್ರಗಳಲ್ಲಿ ಅಗತ್ಯ ಇರುವ ಅವಧಿಯ ತನಕ ಲಾಕ್ಡೌನ್ ಮಾಡುವುದು ಒಳ್ಳೆಯದು.
- ಲಸಿಕೆ ಅಭಿಯಾನವನ್ನು ವೇಗಗೊಳಿಸಬೇಕು. ಈ ಡ್ರೈವ್‌ನಲ್ಲಿ ಖಾಸಗಿ ಆಸ್ಪತ್ರೆಗಳನ್ನು ಹೆಚ್ಚು ಹೆಚ್ಚಾಗಿ ಬಳಸಿಸಕೊಳ್ಳಬೇಕು.
- ಕ್ಷಿಪ್ರಗತಿಯಲ್ಲಿ ಲಸಿಕೆ ಹಾಕುವ ಹಾಗೂ ಕೋವಿಡ್ ಪರಿಕ್ಷೆಗಳನ್ನು ಪರಿಕ್ಷಣೆ ಮಾಡಲು ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ವಿವಿಧ ಮಟ್ಟದಲ್ಲಿ, ಮುಖ್ಯವಾಗಿ ಪ್ರತಿ ಜಿಲ್ಲಾ ಮಟ್ಟದಲ್ಲೂ ಲಸಿಕೆ ಕಾರ್ಯಪಡೆಗಳನ್ನು ರರಚಿಸಬೇಕು.
- ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಿಗೆ ಬರುವ ಹಾಗೂ ಪಡಿತರ ಇತ್ಯಾದಿ ಸರಕಾರಿ ಸೌಲಭ್ಯ ಪಡೆಯಲು ಬರುವ ವ್ಯಕ್ತಿ ಬಳಿ ಕಡ್ಡಾಯವಾಗಿ ಲಸಿಕೆ ಪಡೆದ ಪ್ರಮಾಣ ಪತ್ರ ಇರಬೇಕು.
ಇಷ್ಟೇ ಅಲ್ಲದೆ ಇನ್ನೂ ಹಲವಾರು ಸಲಹೆಗಳನ್ನು ಐಎಂಎ ಪ್ರಧಾನಿವರಿಗೆ ಮಾಡಿದೆ. ಸದ್ಯಕ್ಕೆ ಪರಿಸ್ಥಿತಿ ಕೈಮೀರುತ್ತಿರುವ ಕಾರಣಕ್ಕೆ ಈ ಸಲಹೆಗಳನ್ನು ಪ್ರಧಾನಿ ಕೂಡ ಗಂಭೀರವಾಗಿ ಪರಿಗಣಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
- ಈ ಸುದ್ದಿಯನ್ನು ಓದಲು ಕೆಳಗಿ ಲಿಂಕ್ ಕ್ಲಿಕ್ ಮಾಡಿ..