ಪಟ್ಟಣದ ಜನರು ಮಾಸ್ಕ್ ಧರಿಸುವುದು, ಕನಿಷ್ಠ ಅಂತರ ಕಾಪಾಡುವುದು, ಸ್ಯಾನಿಟೈಜರ್ ಬಳಸುವುದನ್ನು ಮರೆತುಬಿಟ್ಟಿದ್ದರು. ಭಾನುವಾರ ಪೋಲಿಸ್ ಅಧಿಕಾರಿಗಳು ಏಕಾಏಕಿ ರಸ್ತೆ ಇಳಿದಿರುವುದನ್ನು ಕಂಡು ಜನರು ಕಕ್ಕಾಬಿಕ್ಕಿಯಾದರು.
ಬಾಗೇಪಲ್ಲಿ: ಪಟ್ಟಣದಲ್ಲಿ ಕೋವಿಡ್-19 ಎರಡನೇ ಅಲೆ ವ್ಯಾಪಕವಾಗುತ್ತಿರುವುದನ್ನು ಗಮನಿಸಿ ಭಾನುವಾರದಂದು ಪೊಲೀಸ್ ಇಲಾಖೆ ರಸ್ತೆಗಳಿಗೆ ಇಳಿದು ಸೋಂಕು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿತು. ಜತೆಗೆ ಮಾಸ್ಕ್ ಧರಿಸದವರಿಗೆ ಕನಿಷ್ಠ 100 ರೂ. ದಂಡ ವಿಧಿಸಿದರು.
ಪಟ್ಟಣದ ಜನರು ಮಾಸ್ಕ್ ಧರಿಸುವುದು, ಕನಿಷ್ಠ ಅಂತರ ಕಾಪಾಡುವುದು, ಸ್ಯಾನಿಟೈಜರ್ ಬಳಸುವುದನ್ನು ಮರೆತುಬಿಟ್ಟಿದ್ದರು. ಭಾನುವಾರ ಪೋಲಿಸ್ ಅಧಿಕಾರಿಗಳು ಏಕಾಏಕಿ ರಸ್ತೆ ಇಳಿದಿರುವುದನ್ನು ಕಂಡು ಜನರು ಕಕ್ಕಾಬಿಕ್ಕಿಯಾದರು ಹಾಗೂ ಆಶ್ಚರ್ಯ ವ್ಯಕ್ತಪಡಿಸಿದರು.
ಒಂದು ವರ್ಷದಿಂದ ಕೊರೊನ ಸೋಂಕಿನಿಂದ ಸಾಕಷ್ಟು ತೊಂದರೆ ಅನುಭವಿಸಲಾಗಿದೆ. ಒಂದು ಕಡೆ ಮುಕ್ತರಾಗುತ್ತಿದ್ದೇವೆ ಎಂಬ ಹಂತಕ್ಕೆ ಬರುತ್ತಿದ್ದಂತೆ ಮತ್ತೆ ಹರಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಸೋಂಕು ಆವರಿಸಿಕೊಂಡ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ತಡೆಯುವುದು ಉತ್ತಮ. ಎಲ್ಲ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಹಕಾರ ನೀಡಬೇಕು’ ಪೋಲಿಸರು ಮನವಿ ಮಾಡಿದ್ದಾರೆ.