• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಪದ್ಮಭೂಷಣ ಎಚ್‌ಎನ್‌ ಸ್ಮಾರಕ ಉದ್ಯಾನವನವೂ ಸೇರಿ ಬಾಗೇಪಲ್ಲಿ ಪಟ್ಟಣದ ನಾಲ್ಕೂ ಪಾರ್ಕ್‌ಗಳಿಗೆ ಕಾಯಕಲ್ಪ; ವಿರೂಪವಾಗಿರುವ ಪುತ್ಥಳಿಯೂ ಬದಲು

cknewsnow desk by cknewsnow desk
May 6, 2021
in CHIKKABALLAPUR, EDITORS'S PICKS, NEWS & VIEWS
Reading Time: 2 mins read
0
ಪದ್ಮಭೂಷಣ ಎಚ್‌ಎನ್‌ ಸ್ಮಾರಕ ಉದ್ಯಾನವನವೂ ಸೇರಿ ಬಾಗೇಪಲ್ಲಿ ಪಟ್ಟಣದ ನಾಲ್ಕೂ  ಪಾರ್ಕ್‌ಗಳಿಗೆ ಕಾಯಕಲ್ಪ; ವಿರೂಪವಾಗಿರುವ ಪುತ್ಥಳಿಯೂ ಬದಲು
945
VIEWS
FacebookTwitterWhatsuplinkedinEmail

Special Story

ತಾಲೂಕು ಆಡಳಿತದ ದಿವ್ಯ ನಿರ್ಲಕ್ಷ್ಯದಿಂದ ಪಾಳುಬಿದ್ದಿದ್ದ ಬಾಗೇಪಲ್ಲಿ ಪಟ್ಟಣ ಎಚ್‌ಎಎನ್‌ ಉದ್ಯಾನವನವನ್ನು ಪುನಾ ಅಭಿವೃದ್ಧಿಪಡಿಸಲು ಕೊನೆಗೂ ಪುರಸಭೆ ಮುಂದಾಗಿದೆ. ಹಾಗಾದರೆ, ಈ ಪಾರ್ಕ್‌ ಕಾಯಕಲ್ಪಕ್ಕೆ ಪುರಸಭೆಯ ಮಾಸ್ಟರ್‌ ಪ್ಲ್ಯಾನ್‌ ಏನು?

P K CHANNAKRISHNA I D G PAVAN KALYAN

ಬಾಗೇಪಲ್ಲಿ: ಪಾಳುಬಿದ್ದಿರುವ ಶಿಕ್ಷಣ ತಜ್ಞ, ಪದ್ಮಭೂಷಣ ಎಚ್‌ಎನ್‌ ಉದ್ಯಾನವನವೂ ಸೇರಿದಂತೆ ಪಟ್ಟಣದಲ್ಲಿರುವ ನಾಲ್ಕೂ ಉದ್ಯಾನವನಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಪುರಸಭೆ ಮುಂದಾಗಿದೆ.

ಈಗಾಗಲೇ ಉದ್ಯಾನವನಗಳ ಸಮಗ್ರ ಯೋಜನೆ ರೂಪಿಸಲಾಗಿದ್ದು, ಅದಕ್ಕೆ ಮಂಜೂರಾತಿಯೂ ದೊರೆತಿದೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಉದ್ಯಾನವನಗಳಿಗೆ ಕಾಯಕಲ್ಪ ನೀಡಲಾಗುತ್ತಿದ್ದು, ಎಚ್‌ಎನ್‌ ಉದ್ಯಾನವನವೂ ಹೊಸರೂಪ ಪಡೆದುಕೊಳ್ಳಲಿದೆ. ಈ ಉದ್ಯಾನದಲ್ಲಿ ವಿರೂಪಗೊಂಡಿರುವ ಎಚ್‌ಎನ್‌ ಪುತ್ಥಳಿಯನ್ನು ಬದಲಿಸಿ ಹೊಸ ಪುತ್ಥಳಿಯನ್ನು ಇಡಲಾಗುತ್ತಿದೆ.

ಈ ಬಗ್ಗೆ ಸಿಕೆನ್ಯೂಸ್‌ ನೌ ಜತೆ ಮಾತನಾಡಿದ ಬಾಗೇಪಲ್ಲಿ ಪುರಸಭೆಯ ಮುಖ್ಯ ಆಡಳಿತಾಧಿಕಾರಿ ಪಂಕಜಾ ರೆಡ್ಡಿ ಅವರು ಹೇಳಿದ್ದಿಷ್ಟು;

“ಡಿಎಂಎಫ್‌ಡಿ ಯೋಜನೆ ಅಡಿಯಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ನಾಲ್ಕೂ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಲ್ಲಿ ಎಚ್‌ಎನ್‌ ಪಾರ್ಕ್‌ ಕೂಡ ಸೇರಿದೆ. 26 ಲಕ್ಷ ರೂ.ಗಳ ಟೆಂಡರ್‌ ಅಂತಿಮವಾಗಿದ್ದು, ಇನ್ನೇನು ಕಾರ್ಯಾದೇಶ ಕೊಡುವುದೊಂದೇ ಬಾಕಿ ಇದೆ. ಕಾರ್ಯಾದೇಶ ಪಡೆಯುವ ಮುನ್ನ ಗುತ್ತಿಗೆದಾರರು ಕೆಲ ಪ್ರಕ್ರಿಯೆಗಳನ್ನು ಪೂರೈಸಬೇಕಿದ್ದು, ಅವು ಮುಗಿದ ನಂತರ ಹಣ ಬಿಡುಗಡೆ ಮಾಡಲಾಗುವುದು. ಎಲ್ಲ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿ ಬಹುಶಃ ಲಾಕ್‌ಡೌನ್‌ ಮುಗಿದ ನಂತರ ಆರಂಭವಾಗಬಹುದು”

ಸಂಪೂರ್ಣ ಕಾಯಕಲ್ಪ

“ಮುಂದೆ ದಿನಗಳಲ್ಲಿ ಎಚ್‌ಎನ್‌ ಉದ್ಯಾನವನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಮುಳ್ಳಿನ ಗಿಡಗಂಟೆಗಳನ್ನು ತೆರವು ಮಾಡಿ, ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇನ್ನಷ್ಟು ಉತ್ತಮ ಗಿಡಗಳನ್ನು ನೆಡುವುದರ ಜತೆಗೆ, ಈಗಾಗಲೇ ಇರುವ ವಾಕಿಂಗ್‌ ಟ್ರ್ಯಾಕ್‌, ಕಾಂಪೌಂಡ್‌ ವಾಲ್‌ ಇತ್ಯಾದಿಗಳಿಗೆ ಹಾನಿಯಾಗಿದ್ದರೆ ಸರಿಪಡಿಸಲಾಗುವುದು. ವಿರೂಪವಾಗಿರುವ ಎಚ್‌ಎನ್‌ ಪ್ರತಿಮೆಯನ್ನು ತೆರವು ಮಾಡಿ ಹೊಸ ಪ್ರತಿಮೆಯನ್ನು ಇಡಲಾಗುವುದು. ಆ ಪ್ರತಿಮೆ ಸಿಮೆಂಟಿನದ್ದಾಗಿರಬೇಕೆ ಅಥವಾ ಶಿಲೆಯಲ್ಲಿ ಮಾಡಿದ್ದಾಗಿರಬೇಕೆ ಎಂಬುದನ್ನು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.”

“ಉದ್ಯಾನವನದ ಸುತ್ತಲೂ ಪರಿಸರ ಸ್ವಚ್ಛವಾಗಿರುವಂತೆ ಕ್ರಮ ವಹಿಸಲಾಗುತ್ತಿದೆ. ಯಾರೂ ಕೂಡ ಪಾರ್ಕಿನ ಸುತ್ತಮುತ್ತ ಕಸ ಹಾಕದಂತೆ ಬಿಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆ ಪ್ರದೇಶದ ಕಸವನ್ನೆಲ್ಲ ಜನರು ತಂದು ಒಂದೆಡೆ ಸುರಿಯುತ್ತಿದ್ದರು. ಅದನ್ನು ಈಗ ತಡೆಯಲಾಗಿದೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ಈ ಪರಿಸರ ಪ್ರದೇಶವನ್ನು ಅಭಿವೃದ್ಧಿಪಡಿಸುವುದಕ್ಕೆ ಪುರಸಭೆ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾವನೆ ಇಡಲಾಗುವುದು. ಎಚ್‌ಎನ್‌ ಪಾರ್ಕ್‌ ಮಾತ್ರವಲ್ಲದೆ ಅದರ ಸುತ್ತಮುತ್ತಲ ಪ್ರದೇಶವು ಸ್ವಚ್ಛವಾಗಿರುವಂತೆ ಕ್ರಮ ವಹಿಸಲಾಗುವುದು.”

“ಬೆಳಗ್ಗೆ & ಸಂಜೆ ಹೊತ್ತು ಜನ ವಾಕಿಂಗ್‌ ಮಾಡಲು, ಮಕ್ಕಳು ಆಟವಾಡಲು, ವಿದ್ಯಾರ್ಥಿಗಳು ಕೂತು ಓದಿಕೊಳ್ಳಲು ಇಡೀ ಪಾರ್ಕ್‌ನ್ನು ಸಜ್ಜುಗೊಳಿಸಲಾಗುವುದು. ವರ್ಷದ ಹಿಂದೆಯೇ ಈ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳು ಪೂರ್ಣವಾಗಬೇಕಿತ್ತು. ಕೋವಿಡ್‌ ಕಾರಣ ತಡವಾಗಿದೆ.”

ಈಗ ಹೇಗಿದೆ ಉದ್ಯಾನವನ?

ಪದ್ಮಭೂಷಣ ಡಾ.ಎಚ್‌.ಎಚ್.‌ನರಸಿಂಹಯ್ಯ ಅವರ ಸ್ಮರಣಾರ್ಥ ನಿರ್ಮಿಸಿದ್ದ ಉದ್ಯಾನವು ಪೂರ್ಣವಾಗಿ ಪಾಳು ಬಿದ್ದಿದೆ. ಪಟ್ಟಣದ 20ನೇ ವಾರ್ಡಿನಲ್ಲಿರುವ ಸ್ಮಾರಕ ಉದ್ಯಾನವನವು ಈಗ ಅಕ್ಷರಶಃ ಅದ್ವಾನಗಳ ಆಗರವಾಗಿದೆ.

ಉದ್ಯಾನವನದ ತುಂಬಾ ಮುಳ್ಳಿನ ಗಿಡಗಂಟೆಗಳು ಬೆಳೆದಿವೆ. ರಾಶಿ ರಾಶಿ ಕಸಕಡ್ಡಿ ಬಿದ್ದಿದೆ. ನೆಡಲಾಗಿರುವ ಗಿಡಗಳು ನೀರಿಲ್ಲದೆ ಒಣಗಿ ಹೋಗಿವೆ. ಸಂಜೆಯಾದರೆ ಇದು ಪುಂಡ ಪೋಕರಿಗಳ, ಕುಡುಕರ ಅಡ್ಡೆಯಂತಾಗಿ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿಬಿಟ್ಟಿದೆ.

2017ರಲ್ಲಿ ಪುರಸಭೆ ವತಿಯಿಂದ ಡಾ.ಎಚ್ಎನ್ ಉದ್ಯಾನವನ ನಿರ್ಮಿಸಲಾಗಿತ್ತು. ಪಟ್ಟಣದ ಮುಖ್ಯರಸ್ತೆಯಿಂದ ಗಂಗಮ್ಮನ ಗುಡಿ ರಸ್ತೆ ಮೂಲಕ ದರ್ಗಾ ವೃತ್ತ ಮೂಲಕ ಆಂಧ್ರ ಪ್ರದೇಶದ ಕೊಡಿಕೊಂಡಕ್ಕೆ ಹೋಗುವ ರಸ್ತೆಯಲ್ಲಿ 70 ಗುಂಟೆ ಸರಕಾರಿ ಭೂಮಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿತ್ತು.

ಉದ್ಯಾನವನಕ್ಕೆ ಸುತ್ತಲೂ ಕಾಂಪೌಂಡ್‌ ಕೂಡ ಇದೆ. ಕೂರಲು ಆಸನಗಳನ್ನು ಹಾಕಲಾಗಿದೆ. ವಾಕಿಂಗ್‌ ಟ್ರ್ಯಾಕ್‌ ಇದೆ. ಅರಣ್ಯ ಇಲಾಖೆಯವರು ಗಿಡ ನೆಟ್ಟಿದ್ದಾರೆ. ಕೊಳವೆ ಬಾವಿಯನ್ನೂ ಕೊರೆಸಲಾಗಿದ್ದು, ನೀರಿನ ಸಂಗ್ರಹಗಾರವೂ ಇದೆ. ಇದಾವುದರ ನಿರ್ವಹಣೆಯೂ ಇಲ್ಲದೆ ಉದ್ಯಾನವನ ಪಾಳು ಬಿದ್ದಿದೆ. ಅಲ್ಲದೆ, ಮಳೆ ನೀರು ಇಂಗುವ ವ್ಯವಸ್ಥೆಯನ್ನೂ ಮಾಡಿಲ್ಲ.

ಎಚ್‌ಎನ್‌ ಪುತ್ಥಳಿ ವಿರೂಪ

ಉದ್ಯಾನವನದ ಹೃದಯ ಭಾಗದಲ್ಲಿರುವ ಎಚ್‌ಎನ್‌ ಅವರ ಎದೆಮಟ್ಟದ ಪುತ್ಥಳಿಯನ್ನು ಸ್ಥಾಪನೆ ಮಾಡಲಾಗಿದೆ. ಯಾರೋ ಕಿಡಿಗೇಡಿಗಳು ಈ ಪುತ್ಥಳಿಯನ್ನು ಕೂಡ ವಿರೂಪಗೊಳಿಸಿದ್ದಾರೆ. ಅದರ ಜತೆಗೆ ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆನೆದ ಕಾರಣಕ್ಕೆ ಆ ಪುತ್ಥಳಿಯೂ ಬಿರುಕುಬಿಟ್ಟು ಶಿಥಿಲವಾಗುತ್ತಿದೆ. ಈಗಲೂ ಮೇಲ್ಛಾವಣಿ ಇಲ್ಲದೆ ಎಚ್‌ಎನ್‌ ವಿಗ್ರಹ ಬಿರುಬಿಸಿಲಿನಲ್ಲಿ ಒಣಗುತ್ತಿದೆ. ಉದ್ಯಾನವನಕ್ಕೆ ಸೂಕ್ತ ಭದ್ರತೆ ಹಾಗೂ ನಿರ್ವಹಣೆ ಇಲ್ಲದ ಕಾರಣಕ್ಕೆ ಆ ಪುತ್ಥಳಿಯ ಸುತ್ತಲೂ ಸೇದಿ ಬಿಸಾಡಿದ ಬೀಡಿ-ಸಿಗರೇಟ್‌ ತುಂಡುಗಳು, ಮದ್ಯದ ಬಾಟಲಿಗಳು ಬಿದ್ದಿವೆ. ಕೊನೆಪಕ್ಷ ಪುತ್ಥಳಿ ಮುಂದೆ ಒಂದು ನಾಮಫಲಕವನ್ನೂ ಹಾಕಿಲ್ಲ.

ನ್ಯಾಷನಲ್‌ ಕಾಲೇಜ್‌ ಪ್ರಿನ್ಸಿಪಾಲರು ಏನಂತಾರೆ?

“ಎಚ್‌ಎನ್‌ ಉದ್ಯಾನವನ ಪಾಳು ಬಿದ್ದಿರುವ ಸುದ್ದಿ ಕೇಳಿ ಬೇಸರವಾಯಿತು. ಅದಕ್ಕಾಗಿ ಶನಿವಾರ & ಭಾನುವಾರ ಎರಡು ದಿನ ನಾನು ಆ ಪಾರ್ಕ್‌ಗೆ ಭೇಟಿ ನೀಡಿದ್ದೆ. ಎಲ್ಲವೂ ಅವ್ಯವಸ್ಥೆ, ಪಾಳುಬಿದ್ದಿದೆ. ಎಚ್ಎನ್‌ ಪುತ್ಥಳಿ ಸುತ್ತಲೇ ಬಿಯರ್‌ ಬಾಟಲಿಗಳು, ಸಿಗರೇಟ್‌ ತುಂಡುಗಳು ಬಿದ್ದಿದ್ದನ್ನು ಕಂಡೆ. ಬಹಳ ಬೇಸರವಾಯಿತು. ಈ ಹಿಂದೆಯೇ ಪುರಸಭೆ ಮುಖ್ಯ ಅಧಿಕಾರಿಪಂಕಜಾ ರೆಡ್ಡಿ ಅವರ ಜತೆ ಮಾತನಾಡಿದ್ದೆ. ಕೋವಿಡ್‌ ಕಾರಣದಿಂದ ಉದ್ಯಾನವನ ಅಭಿವೃದ್ಧಿ ವಿಳಂಬವಾಗಿರಬಹುದು” ಎನ್ನುತ್ತಾರೆ ನ್ಯಾಷನಲ್‌ ಪದವಿ ಕಾಲೇಜ್‌ ಪ್ರಾಂಶುಪಾಲ ಡಾ.ರಾಮಯ್ಯ.

ಕಾಲೇಜು ಪುನಾರಂಭ ಆದ ಮೇಲೆ ನಮ್ಮ ಕಾಲೇಜ್‌ನ ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳನ್ನು ವಾರಕ್ಕೊಮ್ಮೆಯಾದರೂ ಕರೆದುಕೊಂಡು ಹೋಗಿ ಎಚ್‌ಎನ್‌ ಉದ್ಯಾನವನದಲ್ಲಿ ಶ್ರಮದಾನ ಮಾಡಿಸಲಾಗುವುದು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಒಪ್ಪಿಗೆ ಪಡೆಯುತ್ತೇನೆ ಎಂದು ಅವರು ಸಿಕೆನ್ಯೂಸ್‌ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.

Tags: chikkaballapuradr hn memorial park bagepalliDr.H.Narasimhaiahnational collage
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಬಾಗೇಪಲ್ಲಿ ಬಳಿ ಕೃಷಿ ಹೊಂಡದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿಗಳಿಬ್ಬರ ದುರ್ಮರಣ

ಬಾಗೇಪಲ್ಲಿ ಬಳಿ ಕೃಷಿ ಹೊಂಡದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿಗಳಿಬ್ಬರ ದುರ್ಮರಣ

Leave a Reply Cancel reply

Your email address will not be published. Required fields are marked *

Recommended

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಒತ್ತಾಯ

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಒತ್ತಾಯ

4 years ago
ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ 7 ದಶಕದ ಆಡಳಿತದಿಂದ  ಭ್ರಮನಿರಸನಗೊಂಡ ಕೇರಳದಲ್ಲಿ ಬಿಜೆಪಿಯತ್ತ ಒಲವು; ದೇವರ ನಾಡಿನಲ್ಲಿ ಬದಲಾವಣೆಯ ಗಾಳಿ ಎಂದ ಡಿಸಿಎಂ

ಕೋವಿಡ್‌ 2ನೇ ಅಲೆ: ವಿದ್ಯಾರ್ಥಿಗಳೇ ಗಮನಿಸಿ, ಪದವಿ ಆಫ್‌ಲೈನ್‌ ತರಗತಿಗಳು ನಿಲ್ಲುವುದಿಲ್ಲ, ಪರೀಕ್ಷೆಗಳ ನಿಗದಿತ ವೇಳಾಪಟ್ಟಿಯಲ್ಲಿ ಯಾವ ಬದಲಾವಣೆ ಇಲ್ಲಎಂದು ಘೋಷಿಸಿದ ಡಿಸಿಎಂ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ