• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ರೆಬೆಲ್‌ಸ್ಟಾರ್ ಅಂಬಿ ಎಂದರೆ ಆನಂದ, ಅಂಬಿ ಎಂದರೆ ಆಶ್ಚರ್ಯ, ಅಂಬಿ ಎಂದರೆ ಸಂಭ್ರಮ; ಕನ್ನಡಕ್ಕೆ ಅಂಬಿ ಒಬ್ಬರೇ ಒಬ್ಬರು! ಅಂದು, ಇಂದು, ಮುಂದೆಂದೂ..

P K Channakrishna by P K Channakrishna
May 29, 2021
in CKPLUS, ET CINEMA, STATE
Reading Time: 1 min read
0
ರೆಬೆಲ್‌ಸ್ಟಾರ್ ಅಂಬಿ ಎಂದರೆ ಆನಂದ, ಅಂಬಿ ಎಂದರೆ ಆಶ್ಚರ್ಯ, ಅಂಬಿ ಎಂದರೆ ಸಂಭ್ರಮ; ಕನ್ನಡಕ್ಕೆ ಅಂಬಿ ಒಬ್ಬರೇ ಒಬ್ಬರು! ಅಂದು, ಇಂದು, ಮುಂದೆಂದೂ..
936
VIEWS
FacebookTwitterWhatsuplinkedinEmail

Lead photo: Raj Rajagopal

ಕಟ್ಟಡ ಕಟ್ಟುತ್ತಿದ್ದವರ ಜತೆ ತಾವು ಬಿಸಿಲಿಗೆ ಒಡ್ಡಿಕೊಳ್ಳುತ್ತಿದ್ದ ಅಂಬಿ, “ಹೇ, ಬಿಸ್ಲು ಜೋರಾಯ್ತದೆ. ಊಟ ಮಾಡ್ಕಲ್ರಲಾ. ಎಲ್ರಿಗೂ ಊಟ ತರಿಸಿ ಕೊಡ್ಲಾ” ಎಂದು ಸಂಘದ ಮ್ಯಾನೇಜರ್‌ಗೆ ತಾಕೀತು ಮಾಡುತ್ತಿದ್ದರು. ಅಲ್ಲಿದ್ದವರೆಲ್ಲರಿಗೂ ಅದೆಂಥದ್ದೋ ಧನ್ಯತೆ. ಕೆಲಸದ ಮೇಲೆ ನಿಷ್ಠೆ, ಅಂಬಿ ಮೇಲೆ ಪ್ರೀತಿ ಅಲ್ಲಿ ಕಾಣುತ್ತಿದ್ದ ದೃಶ್ಯ. ಅಂದಹಾಗೆ, ಇವತ್ತು ನಮ್ಮ ಅಂಬಿ ಅವರ ಹುಟ್ಟಿದ ಹಬ್ಬ.

  • ಅಂಬಿ ಅವರೊಂದಿಗೆ ನಾನು. (ಪಿ.ಕೆ.ಚನ್ನಕೃಷ್ಣ)

ರೆಬೆಲ್‌ಸ್ಟಾರ್ ಅಂಬರೀಷ್.
ಈ ಹೆಸರಿನಲ್ಲೇ ಅದೆಷ್ಟು ಆಪ್ಯಾಯತೆ, ಅಭಿಮಾನ, ಕರುಣೆ, ಮಾನವೀಯತೆ, ಪ್ರೀತಿ ಇತ್ತಲ್ಲ. ಮತ್ತೆ ಮತ್ತೆ ನೆನಪಾಗುವ, ಕಾಡುವ, ಹೃದಯದಲ್ಲಿ ಕಾಪಿಟ್ಟುಕೊಳ್ಳೇಬೇಕಾದ ಸ್ಮೃತಿಗಳವು. ನನ್ನ ಪಾಲಿಗೆ ಅವೆಲ್ಲವೂ ಅಜರಾಮರ. ಕಾಯಕ್ಕೆ ಅಳಿವಿದೆ, ಕಾಯಕಕ್ಕಲ್ಲ. ಅಂಬಿ ಎಂಬ ಪ್ರೀತಿ ಗೌರಿಶಂಕರದಂತೆ ವಿರಾಜಮಾನವಾಗಿ ನಿಂತಿದೆ.

ಇವತ್ತು ಅಂಬಿಯವರ ಜನ್ಮದಿನ. ಅವರಿದ್ದಿದ್ದರೆ 6೯ ವರ್ಷದ ಸಂಭ್ರಮವಿರುತ್ತಿತ್ತು. ಕೋವಿಡ್ ನಡುವೆಯೂ ಅವರ ಮೇಲಿನ ಅಭಿಮಾನ ಪ್ರವಾಹದಂತೆ ಹರಿಯುತ್ತಿತ್ತು. ಅದಕ್ಕೆ ಆಕಾಶವೇ ಎಲ್ಲೆ. ಅಂಬಿ ಯಾವತ್ತೂ ನಮ್ಮಲ್ಲೇ.

ಚಾಮರಾಜಪೇಟೆ ಪಂಪ ಮಹಾಕವಿ ರಸ್ತೆಯಲ್ಲಿ ಬೃಹದಾಕಾರವಾಗಿ ತಲೆ ಎತ್ತಿರುವ ಕರ್ನಾಟಕ ಕಲಾವಿದರ ಸಂಘವು ಅಂಬಿಯವರ ಶ್ರಮದ ಫಲ. ವರನಟ ಡಾ.ರಾಜಕುಮಾರ್ ಅವರ ಕನಸನ್ನು ಅದೆಷ್ಟೋ ಅಡ್ಡಿ-ಆತಂಕಗಳ ನಡುವೆ ನನಸು ಮಾಡಿ ತಮ್ಮನ್ನು ಸಲುಹಿದ ಚಿತ್ರರಂಗ, ಕನ್ನಡಿಗರಿಗಾಗಿ ಬಿಟ್ಟುಹೋಗಿದ್ದಾರೆ ಅಂಬಿ. ಆ ಜಾಗವನ್ನು ಕಲಾವಿದರಿಗೇ ಉಳಿಸಿ, ಧಕ್ಕಿಸಿಕೊಳ್ಳಲು ಅವರು ನಡೆಸಿದ ಹೋರಾಟ ಎಲ್ಲರಿಗೂ ಗೊತ್ತಿರುವ ಸಂಗತಿ. ಜಾಗ ಉಳಿದ ಮೇಲೆ ಕಟ್ಟಡ ನಿರ್ಮಿಸಲು ಅವರೆಷ್ಟೋ ಶ್ರಮಿಸಿದರಲ್ಲದೆ, ಅದೇ ಚಾಮರಾಜಪೇಟೆಯ ಕೆಸಿಸಿಎಫ್ ಕಾಂಪೊಂಡಿನ ಮುಂದಿನ ರಸ್ತೆಯಲ್ಲಿ ಕುರ್ಚಿ ಹಾಕಿಕೊಂಡು ಕೂರುತ್ತಿದ್ದ ಅಂಬಿಯವರ ಆ ದೃಶ್ಯಗಳು ನನ್ನಲ್ಲಿ ಅಚ್ಚ ಹಸಿರು. ಕನ್ನಡ ಚಿತ್ರರಂಗದ ಹಿರಿಯ ಸ್ಟಾರ್, ಅಭಿಮಾನಿಗಳ ಆರಾಧ್ಯದೈವ ಹೀಗೆ ಕಟ್ಟಡದ ಮೇಸ್ತ್ರಿಯಂತೆ ರಸ್ತೆಯ ನಡುವಿನಲ್ಲಿ ಬಿಸಿಲಿಗೆ ಮೈಯೊಡ್ಡಿ ನಿಂತು ಕೆಲಸ ಮಾಡಿಸುತ್ತಿದ್ದ ಪರಿ ನಿಜಕ್ಕೂ ವಿರಳಾತಿ ವಿರಳ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಇದೇ ಹೈ ಜೋಶ್ ಮತ್ತೂ ಅಂಬಿ ನಮ್ಮ ಜತೆಯಲ್ಲಿದ್ದಾರೆಂಬ ಹೆಮ್ಮೆ.‌

ಕಟ್ಟಡ ಕಟ್ಟುತ್ತಿದ್ದವರ ಜತೆ ತಾವು ಬಿಸಿಲಿಗೆ ಒಡ್ಡಿಕೊಳ್ಳುತ್ತಿದ್ದ ಅಂಬಿ, “ಹೇ, ಬಿಸ್ಲು ಜೋರಾಯ್ತದೆ. ಊಟ ಮಾಡ್ಕಲ್ರಲಾ. ಎಲ್ರಿಗೂ ಊಟ ತರಿಸಿ ಕೊಡ್ಲಾ” ಎಂದು ಸಂಘದ ಮ್ಯಾನೇಜರ್‌ಗೆ ತಾಕೀತು ಮಾಡುತ್ತಿದ್ದರು. ಅಲ್ಲಿದ್ದವರೆಲ್ಲರಿಗೂ ಅದೆಂಥದ್ದೋ ಧನ್ಯತೆ. ಕೆಲಸಬ ಮೇಲೆ ನಿಷ್ಠೆ, ಅಂಬಿ ಮೇಲೆ ಪ್ರೀತಿ.

ಈ ನೆಪದಲ್ಲಿಯೇ ಅಂಬಿಯವರನ್ನು ಬಹು ಹತ್ತಿರದಿಂದ ಕಾಣುವ, ಪದೇಪದೆ ಮಾತಾಡಿಸುವ ಸೌಭಾಗ್ಯ ನನ್ನದಾಗಿತ್ತು. ಕಚೇರಿ ಸಮಯದಲ್ಲಿ ಮಟಮಟ ಮಧ್ಯಾಹ್ನದ ಹೊತ್ತಿನಲ್ಲೂ ಅವರು ಎದುರಾಗುತ್ತಿದ್ದರು. ʼಸರ್, ಸ್ವಲ್ಪ ನೆರಳಿಗಾದರೂ ಹೋಗಿʼ ಅಂತ ನಾನಾಗಲಿ ಅಥವಾ ನನ್ನ ಹಿರಿಯರಾದ ಶ್ರೀವತ್ಸ ಅವರಾಗಲಿ ಹೇಳಿದರೆ, ʼರೀ.. ನನಗೇನ್ರಿ ಬಿಸಿಲು. ಏನ್ ನಾವೆಲ್ಲ ಎಸಿಯಲ್ಲಾ ಹುಟ್ಟಿದ್ದಿವಾ? ಬಿಡ್ರಿʼ ಎನ್ನುತ್ತಿದ್ದರು. ನಾವು ಅಲ್ಲಿಗೆ ಬಿಡದೇ, ʼಬನ್ನಿ ಸರ್, ಊಟ ಮಾಡೋಣʼ ಎಂದರೆ ಅದಕ್ಕೊಂದು ಅವರದ್ದೇ ಸ್ಟೈಲಿನ ಗಟ್ಟಿಯಾದ ಸ್ಮೈಲ್ ಕೊಟ್ಟು, “ಏನ್‌ ಬಿರಿಯಾನಿ ಸಿಗ್ತದಾ?” ಎಂದು ದೇಶಾವರಿ ನಗೆ ಬೀರುತ್ತಿದ್ದರು. ಸದಾ ಅವರ ಪಕ್ಕದಲ್ಲೇ ಇರುತ್ತಿದ್ದ ದೊಡ್ಡಣ್ಣನವರಂತೂ, “ಇದಪ್ಪ ವರಸೆ, ಅವರನ್ನು ಮಾತ್ರ ಊಟಕ್ಕೆ ಕರೀತೀರಿ. ನನ್ನ ಕರೆಯಲ್ವ” ಎಂದು ನಮ್ಮ ಕಾಲೆಳೆಯುತ್ತಿದ್ದರು.

ಆವತ್ತು 2018 ಜುಲೈ 2. ಸಂಜೆ 5.45ರಿಂದ 6 ಗಂಟೆ ಸಮಯ. ಕಾರ್ಯಕ್ರಮವೊಂದಕ್ಕಾಗಿ ನಮಗೆ ಕಲಾವಿದರ ಸಂಘದ ಕಟ್ಟಡ ಬೇಕಿತ್ತು. ಅಂಬಿ ಕಲಾವಿದರ ಸಂಘದಲ್ಲಿದ್ದಾರೆಂದು ಗೊತ್ತಾಯಿತು. ನಾನು, ಹರೀಶ್ ಮನವಿ ಹೊತ್ತು ಅವರಲ್ಲಿಗೆ ಬಂದಾಗ ಆ ದೈತ್ಯ ಕಟ್ಟಡದ ಮುಂಭಾಗದ ಪೋರ್ಟಿಕೋದಲ್ಲಿ ಕುರ್ಚಿ ಮೇಲೆ ವಿರಾಜಮಾನರಾಗಿದ್ದರು ರೆಬೆಲ್‌ಸ್ಟಾರ್.

ಅವರನ್ನು ಭೇಟಿ ಮಾಡಿದ್ದು ಆವತ್ತೇ ಕೊನೆ. ನಮ್ಮಿಬ್ಬರ ಜತೆಗೆ ಆಮೇಲೆ ಶಿವಮೊಗ್ಗ ಪದ್ಮ ಕೂಡ ಸೇರಿಕೊಂಡರು. ಬಹುಹೊತ್ತು ನಮ್ಮ ಜತೆ ಮಾತಾಡಿದರು. ಮಾಧ್ಯಮಗಳ ಬಗ್ಗೆ ಮಾತಾಡಿದರು. ಪುತ್ರನ ಸಿನಿಮಾದ ಬಗ್ಗೆ ಹೇಳಿದರು. ʼಅಂಬಿ ನಿಂಗೆ ವಯಸ್ಸಾಯ್ತೋʼ ಸಿನಿಮಾದ ಬಗ್ಗೆಯೂ ಜೋಶ್ ಆಗಿ ಮಾತನಾಡಿದರು. ಚಿತ್ರರಂಗದ ಸ್ಥಿತಿಗತಿ, ಕಲಾವಿದರ ಸಂಘವನ್ನು ಕಟ್ಟಿದ ಸಾಹಸಗಾಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಇನ್ನೇನು ಮಾತೆಲ್ಲ ಮುಗಿದು ಅವರು ಹೊರಡುವ ಹೊತ್ತಿನಲ್ಲಿ, “ಆಯ್ತು, ಕಾರ್ಯಕ್ರಮ ಮಾಡ್ಕಳಿ. ಆದರೆ ಬಿಲ್ಡಿಂಗ್ನ ನೀಟಾಗಿ ಇಟ್ಕೋಬೇಕು” ಎಂದ್ಹೇಳಿ ನಮಗೆಲ್ಲ ಶೇಕ್ ಹ್ಯಾಂಡ್ ಕೊಟ್ಟು ಕಾರ್ ಹತ್ತಿದರು.

ನಮ್ಮ ಪಾಲಿಗೆ ಅದೇ ಕೊನೆ ಶೇಕ್ ಹ್ಯಾಂಡ್. ಮತ್ತೆ ಆ ಕಟ್ಟಡದ ಆಸುಪಾಸಿನಲ್ಲಿ ಅಂಬಿ ಎಂಬ ಆ ಮಹಾಕಾಯ ಕಾಣಲೇ ಇಲ್ಲ.

ಅಂಬಿ ಎಂದರೆ ಆನಂದ, ಅಂಬಿ ಎಂದರೆ ಆಶ್ಚರ್ಯ, ಅಂಬಿ ಎಂದರೆ ಸಂಭ್ರಮ. ಹೀಗಾಗಿ ಆ ಸಂಭ್ರಮ ನಿರಂತರ. ನನ್ನ ಮಟ್ಟಿಗೆ ಹೇಳುವುದಾದರೆ, ಕನ್ನಡ ಚಿತ್ರರಂಗಕ್ಕೆ ಅಂಬಿ ಒಬ್ಬರೇ ಒಬರು. ಅಂದು, ಇಂದು, ಮುಂದೆಂದೂ..

ಅಂಬಿ ಅವರ ನೆನಪುಗಳು ಅಳಿಯಲು ಸಾಧ್ಯವಿಲ್ಲ.

Tags: ambarishAmbarish birth anniversarykannadakannada cinemakarnatakarebel starsandalwood
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಮುಂದಿನ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಗುಟ್ಟುಬಿಟ್ಟುಕೊಟ್ಟ ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ

ಮಹಾಮಾರಿಗೆ ಬಲಿಯಾದ ಕೋವಿಡ್‌ ವಾರಿಯರ್ಸ್‌ಗೆ ಕೂಡಲೇ ಪರಿಹಾರ ಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದ ಸಿದ್ದರಾಮಯ್ಯ

Leave a Reply Cancel reply

Your email address will not be published. Required fields are marked *

Recommended

ಕೋಲಾರಕ್ಕೆ ಖರ್ಗೆ ಕೈ ಅಭ್ಯರ್ಥಿ! ಮೊಯ್ಲಿಗೆ ಚಿಕ್ಕಬಳ್ಳಾಪುರ ಟಿಕೆಟ್ ಅನುಮಾನ

ಕೋಲಾರಕ್ಕೆ ಖರ್ಗೆ ಕೈ ಅಭ್ಯರ್ಥಿ! ಮೊಯ್ಲಿಗೆ ಚಿಕ್ಕಬಳ್ಳಾಪುರ ಟಿಕೆಟ್ ಅನುಮಾನ

3 years ago
ನಮ್ಮ ದೇಶದಲ್ಲೇ ತಯಾರಾದ ಕೊರೊನಾ ಲಸಿಕೆ ಕುರಿತು ಅಗೌರವ ಬೇಡ; ಭಾರತ್ ಬಯೋಟೆಕ್ ನಂಬಿಕೆಗೆ ಅರ್ಹವಾದ ಕಂಪನಿ ಎಂದ ಡಾ.ಕೆ.ಸುಧಾಕರ್

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೋವಿಡ್ ಲಸಿಕೆ;‌ ರಾಜ್ಯದಲ್ಲಿ ಲಸಿಕೆಗೆ ಕೊರತೆ ಆಗುವುದಿಲ್ಲ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ