ಬಾಗೇಪಲ್ಲಿ: ತಾಲೂಕಿನಾದ್ಯಂತ ಮಹಾಮಾರಿ ಕೋರೋನಾ ಸೋಂಕಿನ ವಿರುದ್ದ ರಾತ್ರಿ ಹಗಲೆನ್ನದೆ ಹೋರಾಟ ನಡೆಸುತ್ತಿರುವ ಗೃಹರಕ್ಷಕ ದಳ ಸಿಬ್ಬಂದಿಗೆ ಉದ್ಯಮಿ ವೆಂಕಟರಾಮರೆಡ್ಡಿ ದಿನಸಿ ಕಿಟ್ ಅನ್ನು ವಿತರಣೆ ಮಾಡಿದರು.
ಪಟ್ಟಣದ ಸುಮಾರು 60 ಸಿಬ್ಬಂದಿಗೆ ಡಿವೈಎಸ್ಪಿ. ರವಿಶಂಕರ್ ಅವರಿಂದ ಕಿಟ್ ಕೊಡಿಸಲಾಯಿತು.
ಈ ಸಂದರ್ಭದಲ್ಲಿ ವೆಂಕಟರಾಮರೆಡ್ಡಿ ಮಾತನಾಡಿ, ಕೊರೊನಾ ರೋಗದಿಂದ ದೇಶವೇ ತಲ್ಲಣಗೊಂಡಿದೆ. ಇದರ ವಿರುದ್ದ ಹಲವಾರು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೋರಾಟ ನಡೆಸುತ್ತಿದ್ದಾರೆ. ಅದರಲ್ಲಿ ಗೃಹರಕ್ಷಕ ದಳದ ಸೇವೆ ಅನನ್ಯವಾದದ್ದು, ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಅನೇಕಗೆ ಸೋಂಕು ತಗಲಿದರೂ ಎದೆಗುಂದದೆ ತಮ್ಮ ಕೆಲಸ ಮುಂದುವರಸಿದ್ದಾರೆ. ಅದರಲ್ಲೂ ಮಹಿಳಾ ಸಿಬ್ಬಂದಿ ಧೈರ್ಯದಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ಜಿ.ಪಿ.ರಾಜು, ಆರಕ್ಷಕ ಉಪ ನಿರೀಕ್ಷಕ ಗೋಪಾಲ ರೆಡ್ಡಿ ಹಾಗೂ ಬಾಗೇಪಲ್ಲಿ ಪಟ್ಟಣದ ಪೋಲಿಸ್ ಸಿಬ್ಬಂದಿ ಹಾಜರಿದ್ದರು.