by Ra Na Gopala Reddy Bagepalli
ಬಾಗೇಪಲ್ಲಿ: ತಾಲೂಕು ಬಿಜೆಪಿ ಮುಖಂಡ ಆರ್.ವೆಂಕಟೇಶ್ ಅವರನ್ನು ತಾಲೂಕು ಕೆಡಿಪಿ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.
ಈ ಬಗ್ಗೆ ರಾಜ್ಯಪಾಲರ ಆದೇಶಾನುಸಾರ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ
ಅಧೀನ ಕಾರ್ಯದರ್ಶಿ ಸಿ.ಮಾಲತಿ ಅವರು ಆದೇಶ ಹೊರಡಿಸಿದ್ದಾರೆ.
ತಮ್ಮ ನೇಮಕದ ಬಗ್ಗೆ ಮಾತನಾಡಿದ ಆರ್.ವೆಂಕಟೇಶ್, ನಾಮನಿರ್ದೇಶನಕ್ಕೆ ಕಾರಣಿಭೂತರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್, ಸಂಸದ ಬಿ.ಎನ್.ಬಚ್ಚೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ತಾಲೂಕು ಮಂಡಲಾಧ್ಯಕ್ಷ ಪ್ರತಾಪ್ ಅವರಿಗೆ
ಧನ್ಯವಾದ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಐವರು ಕೆಡಿಪಿ ಸದಸ್ಯರು ಸುದ್ದಿಗಾರರೊಂದಿಗೆ ಮಾತನಾಡಿ, ಬಾಗೇಪಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ತಮ್ಮನ್ನು ಆಯ್ಕೆ ಮಾಡಲಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ, ರಸ್ತೆ, ದೀಪದ ವ್ಯವಸ್ಥೆ ಇತ್ಯಾದಿಗಳ ಕಡೆಗೆ ಗಮನ ನೀಡಿ ಅಬಿವೃದ್ಧಿಗೆ ಶ್ರಮಿಸುತ್ತೇವೆ. ಕೆಡಿಪಿ ಸಭೆಗಳಲ್ಲಿ ಉತ್ತಮ ಸಲಹೆ ಸೂಚನೆಗಳನ್ನು ನೀಡಿ ಈ ಭಾಗದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸೇವೆ ಮಾಡುತ್ತೇವೆ ಎಂದು ಹೇಳಿದರು.
ಆರ್.ವೆಂಕಟೇಶ್ ಜತೆಗೆ, ಡಿ.ಎ.ಸತೀಶ ಕುಮಾರ್, ಪ್ರಭಾಕರ ರೆಡ್ಡಿ, ಎಸ್.ವಿ.ಮಂಜುನಾಥ್, ಕೆ.ಆರ್.ಪ್ರಭಾವತಿ ಕೂಡ ನಾಮ ನಿರ್ದೇಶನ ಮಾಡಲಾಗಿದೆ.