ನವದೆಹಲಿ: ಇನ್ನು ಸ್ವಲ್ಪ ಹೊತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಆಗುತ್ತಿದ್ದು, ಹ್ನನೆರಡು ಸಚಿವರ ರಾಜೀನಾಮೆ ಪಡೆಯಲಾಗಿದೆ. ಇವರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರೂ ಸೇರಿದ್ದಾರೆ. ಇವರೆಲ್ಲರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕಾರ ಮಾಡಿದ್ದಾರೆ.
ಸಂಪುಟದಿಂದ ಹೊರಬಂದವರ ಪಟ್ಟಿ ಹೀಗಿದೆ:
1.ಡಿ.ವಿ. ಸದಾನಂದ ಗೌಡ
2.ಥಾವರಚಂದ್ ಗೆಹಲೋತ್ (ಇವರು ಕರ್ನಾಟಕ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.)
3.ರವಿಶಂಕರ್ ಪ್ರಸಾದ್
4.ರಮೇಶ್ ಪೋಖ್ರಿಯಾಲ್ ನಿಶಾಂಕ್
5.ಹರ್ಷವರ್ಧನ್
6.ಪ್ರಕಾಶ್ ಜಾಬ್ದೇಕರ್
7.ಸಂತೋಷ್ ಕುಮಾರ್ ಗಂಗ್ವಾರ್
8.ಬಾಬುಲ್ ಸುಪ್ರಿಯೋ
9.ಧೋತ್ರೇ ಸಂಜಯ್ ಶ್ಯಾಂರಾವ್
10.ರತನ್‌ಲಾಲ್ ಕಠಾರಿಯಾ
11.ಪ್ರತಾಪ್‌ಚಂದ್ರ ಸಾರಂಗಿ
12.ಸುಶ್ರೀ ದೇವಶ್ರೀ ಚೌಧರಿ
ಸದಾನಂದ ಗೌಡರ ರಾಜೀನಾಮೆಯಿಂದ ಕೊಂಚ ತಳಮಳ ಉಂಟಾಗಿದ್ದರೂ, ಅದು ನಿರೀಕ್ಷಿತವೇ ಆಗಿತ್ತು. ಆದರೆ, ಹಿರಿಯ ಸಚಿವರಾಗಿದ್ದ ರವಿಶಂಕರ್ ಪ್ರಸಾದ್, ಪ್ರಕಾಶ್ ಜಾಬ್ದೇಕರ್ ರಾಜೀನಾಮೆ ಅಚ್ಚರಿ ತಂದಿದೆ. ಅಲ್ಲದೆ, ಪ್ರತಾಪ್‌ಚಂದ್ರ ಸಾರಂಗಿ ರಾಜೀನಾಮೆ ಪಡೆದ ಬಗ್ಗೆ ಒಡಿಶಾದಲ್ಲಿ ಅತೃಪ್ತಿ ಉಂಟಾಗಿದೆ.


















