• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS CRIME

ರೇಪ್ ಮಾಡಿದವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲ

cknewsnow desk by cknewsnow desk
August 28, 2021
in CRIME, EDITORS'S PICKS, NATION, STATE
Reading Time: 2 mins read
0
ರೇಪ್ ಮಾಡಿದವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲ

ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌

1k
VIEWS
FacebookTwitterWhatsuplinkedinEmail

ಒಟ್ಟು ಆರು ರೇಪಿಸ್ಟುಗಳು, ಒಬ್ಬ ಬಾಲಾಪರಾಧಿ ಸೆರೆ, ಇನ್ನೊಬ್ಬ ಪರಾರಿ

ತಮಿಳುನಾಡಿನ ತಿರುಪೂರ್‌ʼನಲ್ಲಿ ಸಿಕ್ಕಿಬಿದ್ದ ಪಾತಕಿಗಳು: ದುಷ್ಕೃತ್ಯ ನಡೆದ 85 ಗಂಟೆಗಳಲ್ಲಿ ಬಲೆಗೆ

ಮೈಸೂರು: ಇಡೀ ರಾಜ್ಯವನ್ನು ದಿಗ್ಭ್ರಮೆಗೊಳಿಸಿದ್ದ ಗ್ಯಾಂಗ್‌ ರೇಪ್‌ ಪ್ರಕರಣವನ್ನು 85 ಗಂಟೆಗಳಲ್ಲಿ ಬೇಧಿಸಿರುವ ಪೊಲೀಸರು, ಐವರು ಪಾತಕಿಗಳನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಇವರು ತಮಿಳುನಾಡು ರಾಜ್ಯದ ತಿರುಪೂರ್‌ (ತಿರುಪೂರ್‌ ಮೈಸೂರಿಗೆ 185 ಕಿ.ಮೀ. ದೂರದಲ್ಲಿದೆ.) ನಿವಾಸಿಗಳು, ಅವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲ!!

ಬಂಧಿತ ಐವರು ಆರೋಪಿಗಳಲ್ಲಿ ಒಬ್ಬ ಬಾಲ ಆರೋಪಿ ಆಗಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ಒಟ್ಟು 6 ಆರೋಪಿಗಳು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಮೈಸರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಪಾತಕಿಗಳು ಡ್ರೈವಿಂಗ್‌, ಬಡಿಗೆ, ಪೇಂಟಿಂಗ್‌ ಕೆಲಸ ಮಾಡಿಕೊಂಡಿದ್ದರು. ಇವರಲ್ಲಿ ಒಬ್ಬ 7ನೇ ತರಗತಿ, ಇನ್ನೊಬ್ಬ 8ನೇ ತರಗತಿ ಹಾಗೂ ಓದಿಯೇ ಇಲ್ಲ. ಇವರಲ್ಲಿ ಒಬ್ಬನಿಗೆ 17 ವರ್ಷ ವಯಸ್ಸಿದ್ದು, ಅವನನ್ನು ಬಾಲಾಪರಾಧಿ ಎಂದು ಗುರುತಿಸಲಾಗಿದೆ. ಆದರೆ, ನಿರ್ಭಯಾ ಪ್ರಕರಣದ ನಂತರ ಕಾನೂನು ಬದಲಾಗಿದ್ದು, ಈ ಬಾಲಾಪರಾಧಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಈವರೆಗೆ ದುಷ್ಕೃತ್ಯಕ್ಕೆ ಗುರಿಯಾದ ಸಂತ್ರಸ್ಥೆ ಪೊಲೀಸರಿಗೆ ಒಂದೇ ಒಂದು ಶಬ್ದ ಮಾಹಿತಿಯನ್ನಾಗಲಿ ಅಥವಾ ಹೇಳಿಕೆಯನ್ನಾಗಲಿ ನೀಡಿಲ್ಲ. ಆಕೆ ಸ್ನೇಹಿತ ನಮಗೆ ಸ್ವಲ್ಪ ಮಾಹಿತಿ ಕೊಟ್ಟಿದ್ದು ಬಿಟ್ಟರೆ, ಮೈಸೂರು ಮತ್ತು ದಕ್ಷಿಣ ವಲಯದ ಪೊಲೀಸರು ಏಳು ತಂಡಗಳು ಕಾರ್ಯಾಚರಣೆ ನಡೆಸಿ ತೀವ್ರ ಶೋಧ ನಡೆಸಿದ್ದವು ಎಂದು ಅವರು ಮಾಹಿತಿ ನೀಡಿದರು.

ಲಭ್ಯವಾದ ಆಧಾರಗಳು, ಟೆಕ್ನಿಕಲ್‌ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ನಮ್ಮ ತಂಡಗಳು ಹಗಲಿರಳು ಕೆಲಸ ಮಾಡಿದ್ದರು. ಅಂತಿಮವಾಗಿ ಐವರು ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನೊಬ್ಬನನ್ನು ಶೀಘ್ರವೇ ಬಂಧಿಸುತ್ತೇವೆ. ಇವರು ತಿರುಪೂರ್‌ನಿಂದ ಮೈಸೂರಿನ ಎಪಿಎಂಇಸಿ ಮಾರುಕಟ್ಟೆಗೆ ತರಕಾರಿ ಇತ್ಯಾದಿ ಕೃಷಿ ಉತ್ಪನ್ನಗಳ ಸಾಗಣೆ ವಾಹನಗಳಲಿ ಬಂದು ಹೋಗುತ್ತಿದ್ದರು. ಕೂಲಿ ಕೆಲಸ ಮಾಡಿ ವಾಪಸ್‌ ಹೋಗುವಾಗ ನಿರ್ಜನ ಪ್ರದೇಶಗಳಲ್ಲಿ ಮದ್ಯ ಸೇವಿಸಿ ಹೋಗುತ್ತಿದ್ದರು. ಹೀಗೆ ಹೋಗುವಾಗ ಇಂಥ ದುಷ್ಕೃತ್ಯ ಎಸಗಿದ್ದರು ಎಂದು ಪ್ರವೀಣ್‌ ಸೂದ್‌ ಅವರು ಹೇಳಿದರು.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲ

ಕೆಲ ಸುದ್ದಿ ವಾಹಿನಿಗಳು ಅತ್ಯಾಚಾರ ಎಸಗಿದ ಆರೋಪಿಗಳು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಸೆಮಿಸ್ಟರ್‌ ಪರೀಕ್ಷೆ ಬರೆಯಲು ಮೈಸೂರಿಗೆ  ಬಂದಿದ್ದಾಗ ಅವರು ಈ ಕೃತ್ಯ ಎಸಗಿದ್ದರು. ಇದಾದ ಬಳಿಕ ಪರೀಕ್ಷೆ ಬರೆಯದೇ ಎಸ್ಕೇಪ್‌ ಆಗಿದ್ದರು. ಇವರನ್ನು ಪೊಲೀಸರು ಬೆನ್ನಟ್ಟಿ ಹಿಡಿದ್ದಾರೆಂದು ವಾಹಿನಿಗಳಲ್ಲಿ ವರದಿಯಾಗುತ್ತಿತ್ತು. ಅದನ್ನು ನೋಡಿ ನಮಗೂ ಬಹಳ ಅಚ್ಚರಿಯಾಗಿತ್ತು. ಆದರೆ, ನಾವು ನಮ್ಮದೇ ಮೂಲಗಳೊಂದಿಗೆ ಹಾಗೂ ವೈಜ್ಞಾನಿಕವಾಗಿ ತನಿಖೆ ನಡೆಸಿದ್ದೆವು. ರೇಪ್‌ ಮಾಡಿದವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲ ಎಂದು ಪ್ರವೀಣ್‌ ಸೂದ್‌ ಅವರು ಹೇಳಿದರು.

ಆಮೇಲೆ, ಸಂತ್ರಸ್ಥೆಯ ಗೆಳೆಯನಿಂದ 3 ಲಕ್ಷಕ್ಕೆ ಡಿಮಾಂಡ್‌ ಮಾಡಿದ್ದರು. ಆದರೆ, ಆತನಿಗೆ ಹಣ ನೀಡಿರಲಿಲ್ಲ. ಬಂಧಿತರಲ್ಲಿ ಕೆಲಸವರಿಗೆ ಕ್ರಿಮಿನಲ್‌ ಹಿನ್ನೆಲೆ ಇದೆ ಎನ್ನುವ ಅನುಮಾನ ನಮಗಿದೆ. ತಮಿಳುನಾಡಿನಲ್ಲಿ ಅವರು ಕೆಲ ಅಪರಾಧಗಳನ್ನು ಮಾಡಿರುವ ಮಾಹಿತಿ ಇದೆ. ಸದ್ಯಕ್ಕೆ ಪ್ರಾಥಮಿಕ ವಿಚಾರಣೆಯಷ್ಟೇ ನಡೆದಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮರಳಿ ನಮ್ಮ ವಶಕ್ಕೆ ಪಡೆಯುತ್ತೇವೆ. ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯ ತೀವ್ರಗತಿಯಲ್ಲಿ ಕೆಲಸ ಮಾಡುತ್ತಿದೆ. ಆದಷ್ಟು ಬೇಗ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುತ್ತೇವೆ. ಆದಷ್ಟು ಬೇಗ ವಿಚಾರಣೆ ಮುಗಿದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಅವರು ವಿವರಿಸಿದರು.

ಐದು ಲಕ್ಷ ರೂ. ಬಹುಮಾನ

ಆರೋಪಿಗಳನ್ನು ಎಡೆಬಿಡದೆ ಹುಡುಕಿ ಬಂಧಿಸಿದ ಪೊಲೀಸ್‌ ಸಿಬ್ಬಂದಿಗೆ ಇದೇ ವೇಳೆ ಐದು ಲಕ್ಷ ರೂ. ಬಹುಮಾನವನ್ನು ಪೊಲೀಸ್‌ ಮಹಾ ನಿರ್ದೇಶಕರು ಘೋಷಣೆ ಮಾಡಿದರು. ನಮ್ಮ ತಂಡಗಳ ಪೊಲೀಸರು ಹಗಲಿರಳು ಕೆಲಸ ಮಾಡಿದ್ದಾರೆ. ಒತ್ತಡ ಹೆಚ್ಚಿದ್ದ ಕಾರಣಕ್ಕೆ ಅವಿಶ್ರಾಂತವಾಗಿ ಶೋಧ ನಡೆಸಿದ್ದಾರೆಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಲಯದ ಎಡಿಜಿಪಿ ಪ್ರತಾಪ್‌ ರೆಡ್ಡಿ, ಮೈಸೂರು ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಚೇತನ್‌ ಮುಂತಾದ ಅಧಿಕಾರಿಗಳು ಇದ್ದರು.

ಬೆಳಗಿನಜಾವ ಬಲೆಗೆ ಬಿದ್ದರು

ಶನಿವಾರ ಬೆಳಗಿನಜಾವ ಐದು ಗಂಟೆ ಸುಮಾರಿಗೆ ಐವರನ್ನೂ ಬಲೆಗೆ ಕೆಡವಿಕೊಂಡಿರುವ ಪೊಲೀಸರು, ಅವರನ್ನು ಮೈಸೂರಿಗೆ ಕರೆತಂದಿದ್ದಾರೆ.

ಕೆಲ ಮಹತ್ವದ ಆಧಾರಗಳನ್ನು ಇಟ್ಟುಕೊಂಡು ತನಿಖೆಯ ಜಾಡು ಹಿಡಿದಿದ್ದ ಪೊಲೀಸರು, ಏಳೂ ತಂಡಗಳಾಗಿ ಬೇರ್ಪಟ್ಟು ತೀವ್ರ ತನಿಖೆ ನಡೆಸಿದ್ದರು. ಸಾಕ್ಷ್ಯಗಳನ್ನು ಕಲೆ ಹಾಕಲು ಭಾರೀ ಸವಾಲು ಎದುರಿಸಿದ್ದ ಪೊಲೀಸರು, ತಮ್ಮ ಬಳಿ ಇರುವ ಎಲ್ಲ ಪುರಾವೆಗಳನ್ನು ಇಟ್ಟುಕೊಂಡು ಶೋಧ ನಡೆಸಿದ್ದರು.

ಇನ್ನು; ಸತತವಾಗಿ ಮೂರು ದಿನ ಸಂತ್ರಸ್ತ ಯುವತಿ ಹಾಗೂ ಯುವಕನನ್ನು ಫಾಲೋ ಮಾಡಿದ್ದ ಕಿರಾತಕರು, ನಾಲ್ಕನೇ ದಿನ ಈ ದುಷ್ಕತ್ಯ ಎಸಗಿದ್ದರು ಎನ್ನಲಾಗಿದೆ.

ಸಂತ್ರಸ್ಥೆಯ ಗೆಳೆಯ ನೀಡಿದ ಮಾಹಿತಿ, ಕೃತ್ಯ ನಡೆದ ಸ್ಥಳದಲ್ಲಿ ಲಭ್ಯವಾದ ಕೆಲ ಸಾಕ್ಷ್ಯಗಳು, ತಾಂತ್ರಿಕ ಆಧಾರಗಳನ್ನು ಕಲೆಹಾಕಿ ಆಳವಾಗಿ ತನಿಖೆಗಿಳಿದ ಪೊಲೀಸರನ್ನು ತಿರುಫೂರ್‌ʼಗೆ ಕರೆದುಕೊಂಡು ಹೋಗಿದ್ದು, ಇಡೀ ಪ್ರಕರಣಕ್ಕೆ ಮಹತ್ವದ ಲೀಡ್‌ ಸಿಕ್ಕಿದೆ. ಮೊಬೈಲ್‌ ಲೊಕೇಷನ್‌ ವಿವರ ಪೊಲೀಸರಿಗೆ ನೆರವಾಗಿದೆ. ಮೊಬೈಲ್‌ ಟವರ್​​ ಲೊಕೇಶನ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಕೂಲಿ ಕಾರ್ಮಿಕರು ಎಂದು ಕೆಲ ಮೂಲಗಳು ತಿಳಿಸಿದ್ದರೆ, ಅವರು ಗೂಡ್ಸ್‌ ಗಾಡಿಯಲ್ಲಿ ಮೈಸೂರಿನ ಮಂಡಿಗಳಿಗೆ ಬಾಳೆಕಾಯಿ, ತರಕಾರಿಯನ್ನು ತಂದು ಹಾಕಿ ವಾಪಸ್‌ ಹೋಗುತ್ತಿದ್ದರು.

85 ಗಂಟೆಗಳ ನಂತರ

ಅಗಸ್ಟ್‌ 24ರ ಸಂಜೆ ಸುಮಾರು 7ರಿಂದ 7-30ರ ಸುಮಾರಿನ ನಸುಗತ್ತಲೆಯಲ್ಲಿ ಹೀನ ಕೃತ್ಯ ಎಸಗಿದ್ದ ದುರುಳರು, ವಾಯು ವಿಹಾರಕ್ಕೆ ತೆರಳಿದ್ದ ಯುವಕ-ಯುವತಿಯ ಮೇಲೆ ದಾಳಿ ಮಾಡಿದರಲ್ಲದೆ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಘಟನೆ ನಡೆಯುವುದಕ್ಕೆ ಮೊದಲು ನಿರಂತರವಾಗಿ ಮೂರು ದಿನ ಯುವಕ-ಯುವತಿ ಅದೇ ಸ್ಥಳಕ್ಕೆ ವಿಹಾರಕ್ಕೆ ಬರುತ್ತಿದ್ದನ್ನು ಕಂಡಿದ್ದ ಇವರು, ನಾಲ್ಕನೇ ನೀಚಕೃತ್ಯ ಎಸಗಿದ್ದಾರೆ. ಕೃತ್ಯ ಎಸಗುವುದಕ್ಕೆ ಮುನ್ನ ಮದ್ಯ ಸೇವನೆಯನ್ನೂ ಮಾಡಿದ್ದರು.

ಈ ಘಟನೆಯಿಂದ ಮೈಸೂರು ನಗರ ಮಾತ್ರಲ್ಲದೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಆರೋಪಿಗಳನ್ನು ಬಂಧಿಸಲು ಭಾರೀ ಒತ್ತಡ ಎದುರಾಗಿತ್ತು ಮಾತ್ರವಲ್ಲದೆ, ನಿನ್ನೆ ಇಡೀ ದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮೈಸೂರಿನಲ್ಲೇ ಇದ್ದು, ಸರಣಿ ಸಭೆಗಳನ್ನು ನಡೆಸಿದ್ದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರೇ ನೇರವಾಗಿ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದರು.

ಇನ್ನೂ ಹೇಳಿಕೆ ನೀಡದ ಸಂತ್ರಸ್ಥೆ

ಅತ್ಯಾಚಾರಕ್ಕೀಡಾದ ಯುವತಿ ಇನ್ನೂ ಪೊಲೀಸರಿಗೆ ಹೇಳಿಕೆ ನೀಡಿಲ್ಲ. ಆಕೆ ಮತ್ತು ಆಕೆಯ ಪೋಷಕರು ತೀವ್ರ ಶಾಕ್‌ಗೆ ಗುರಿಯಾಗಿದ್ದಾರೆಂದು ಗೊತ್ತಾಗಿದೆ. ಯುವತಿ ತಮ್ಮ ಪೋಷಕರೊಂದಿಗೆ ಚಿಕಿತ್ಸೆ ನಂತರ ನೆರೆ ರಾಜ್ಯದ ತಮ್ಮ ಊರಿಗೆ ತೆರಳಿದ್ದಾರೆಂದು ಗೊತ್ತಾಗಿದ್ದು, ಆಕೆ ಹೇಳಿಕೆ ದಾಖಲು ಮಾಡಿಕೊಳ್ಳುವುದು ಪೊಲೀಸರ ಪಾಲಿಗೆ ಸವಾಲು ಎನ್ನಲಾಗಿದೆ.

ಸಂತ್ರಸ್ಥೆ ಮುಂಬಯಿಗೆ ತೆರಳಿದ್ದಾರೆ ಎನ್ನಲಾಗಿದ್ದು, ಮಾನಸಿಕ ಶಾಕ್‌ಗೆ ಗುರಿಯಾಗಿರುವ ಮಗಳಿಂದ ತಡವಾಗಿ ಹೇಳಿಕೆ ಕೊಡಿಸುವುದಾಗಿ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

Tags: crimeengineering studentsgangrape casehome minister araga jnanendrakarnatakaKarnataka policemysorepraveen sood pressmeetrapists arrest
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ

ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ

Leave a Reply Cancel reply

Your email address will not be published. Required fields are marked *

Recommended

ಬೀದರ್‌ನ ಬ್ರಿಮ್ಸ್ ಅವ್ಯವಸ್ಥೆ ಕಂಡು ಗಾಬರಿಯಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್!!, ಹೆಜ್ಜೆ ಹೆಜ್ಜೆಗೂ ಅವ್ಯವಸ್ಥೆ ಕಂಡು ವೈದ್ಯರ ಮೇಲೆ ಕೆಂಡಾಮಂಡಲ

ಕೋವಿಡ್‌ ಪರಿಹಾರಕ್ಕೆ ರಾಜಕಾರಣದ ಗ್ರಹಣ

4 years ago
ನೀಲಂ ಸಂಜೀವ ರೆಡ್ಡಿ ಅವರನ್ನು ಸೋಲಿಸಿ ವಿ.ವಿ.ಗಿರಿ ಅವರನ್ನು ಗೆಲ್ಲಿಸಿದ ಆತ್ಮಸಾಕ್ಷಿ ಮತ

ಜನರ ತೆರಿಗೆ ದುಡ್ಡಿನಲ್ಲಿ ಬೆಳಗಾವಿಯಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ

1 year ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ