• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NEWS IN USE

ಸಿಇಟಿ ಫಲಿತಾಂಶ 2021: ಇತಿಹಾಸ ಸೃಷ್ಟಿಸಿದ ಮೈಸೂರು ವಿದ್ಯಾರ್ಥಿ

cknewsnow desk by cknewsnow desk
September 21, 2021
in NEWS IN USE, STATE
Reading Time: 2 mins read
0
ಸಿಇಟಿ ಫಲಿತಾಂಶ 2021: ಇತಿಹಾಸ ಸೃಷ್ಟಿಸಿದ ಮೈಸೂರು ವಿದ್ಯಾರ್ಥಿ

ಮೈಸೂರಿನ ಪ್ರಮಥಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಎಚ್ ಕೆ ಮೇಘನ್.

1000
VIEWS
FacebookTwitterWhatsuplinkedinEmail

ಎಲ್ಲ ವಿಭಾಗಗಳಲ್ಲೂ ಮೈಸೂರಿನ ಮೇಘನ್ ಪ್ರಥಮ: ಫಲಿತಾಂಶ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

  • ಗಣಿತಕ್ಕೆ 3, ಭೌತವಿಜ್ಞಾನಕ್ಕೆ 3 ಕೃಪಾಂಕ
  • 30ರಿಂದ ಆಫ್ ಲೈನ್ ನಲ್ಲಿ ದಾಖಲೆ ಪರಿಶೀಲನೆ
  • ದಾಖಲೆ ಪರಿಶೀಲನೆಗೆ ಜಿಲ್ಲಾ ಕೇಂದ್ರದಲ್ಲಿ ಸೌಲಭ್ಯ ಕೇಂದ್ರ

ಬೆಂಗಳೂರು: ಪರೀಕ್ಷೆ ನಡೆದ ಕೇವಲ ಇಪ್ಪತ್ತೇ ದಿನದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆ (CET)ಯ ಫಲಿತಾಂಶ ಇಂದು ಪ್ರಕಟವಾಗಿದೆ. ಮೈಸೂರಿನ ಪ್ರಮಥಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಎಚ್ ಕೆ ಮೇಘನ್ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಮೊದಲ ರಾಂಕ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ.

ಎಂಜಿನಿಯರಿಂಗ್, ಪಶುವೈದ್ಯ, ಬಿಎಸ್ಸಿ (ಕೃಷಿ), ಬಿ-ಫಾರ್ಮಾ, ಡಿ-ಪಾರ್ಮಾ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸುಗಳ ಪ್ರವೇಶಕ್ಕಾಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೋಮವಾರ ಪ್ರಕಟಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಸಿಇಟಿ ಫಲಿತಾಂಶದ ಮಾಹಿತಿ ನೀಡಿದ ಸಚಿವರು; ಅಗಸ್ಟ್ 28-29 & 30ರಂದು ರಾಜ್ಯದ 530 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 1,93,447 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 95,462 ವಿದ್ಯಾರ್ಥಿಗಳು ಹಾಗೂ 97,985 ವಿದ್ಯಾರ್ಥಿನಿಯರಿದ್ದಾರೆ ಎಂದರು.

ಎಲ್ಲ ವಿಭಾಗದಲ್ಲಿಯೂ ಮೈಸೂರು ವಿದ್ಯಾರ್ಥಿ ಮೇಘನ್‌ ಎಚ್.ಕೆ. ಮೊದಲ ರಾಂಕ್‌ ಪಡೆದಿದ್ದು, ಈ ರೀತಿ ಒಬ್ಬನೇ ವಿದ್ಯಾರ್ಥಿ ಎಲ್ಲ ಬ್ರಾಂಚ್‌ʼಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೊಸ ದಾಖಲೆಯಾಗಿದೆ. ಈ ಕಾರಣಕ್ಕಾಗಿ ಮೇಘನ್‌ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಸಚಿವರು ಇದೇ ವೇಳೆ ಹೇಳಿದರು.

ವಿಭಾಗವಾರು ಅರ್ಹತೆ ಪಡೆದವರು

ಎಂಜಿನಿಯರಿಂಗ್ ವಿಭಾಗದಲ್ಲಿ 1,83,231, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸು ವಿಭಾಗದಲ್ಲಿ 1,55,910, ಪಶುವೈದ್ಯಕೀಯ (ವೆಟರ್ನರಿ) ವಿಭಾಗದಲ್ಲಿ 1,52,518, ಇನ್ನು ಬಿ-ಫಾರ್ಮಾ ಕೋರ್ಸಿನಲ್ಲಿ 1,86,638 ಹಾಗೂ ಡಿ-ಪಾರ್ಮಾ ಕೋರ್ಸುಗಳಲ್ಲಿ 1,86,638 ಅಭ್ಯರ್ಥಿಗಳು ರಾಂಕ್ ಪಡೆದು ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

31,460 ಅಭ್ಯರ್ಥಿಗಳು ಪಿಸಿಎಂ, 3,836 ಅಭ್ಯರ್ಥಿಗಳು ಪಿಸಿಬಿಯಲ್ಲಿ ಹಾಗೂ 1,58,151 ಅಭ್ಯರ್ಥಿಗಳು ಪಿಸಿಎಂ-ಪಿಸಿಬಿಯಲ್ಲಿ ಪರೀಕ್ಷೆ ಬರೆದಿದ್ದಾರೆಂದು ಸಚಿವರು ತಿಳಿಸಿದರು.

55ಕ್ಕೂ ಹೆಚ್ಚು ಅಂಕ ಗಳಿಸಿದವರು

ಭೌತಶಾಸ್ತ್ರ ವಿಷಯದಲ್ಲಿ ಯಾವ ಅಭ್ಯರ್ಥಿಯೂ 55ಕ್ಕೂ ಹೆಚ್ಚಿನ ಅಂಕ ಪಡೆದಿಲ್ಲ. ಆದರೆ ರಸಾಯನಶಾಸ್ತ್ರದಲ್ಲಿ 3, ಗಣಿತದಲ್ಲಿ 6 ಹಾಗೂ ಜೀವಿಶಾಸ್ತ್ರ ವಿಷಯದಲ್ಲಿ 50 ವಿದ್ಯಾರ್ಥಿಗಳು 60 ಅಂಕ ಗಳಿಸಿದ್ದಾರೆಂದು ಸಚಿವರು ಮಾಹಿತಿ ನೀಡಿದರು.

ಅಭ್ಯರ್ಥಿಗಳಿಗೆ ಸೌಲಭ್ಯ ಕೇಂದ್ರ

ಮೂಲ ದಾಖಲಾತಿಗಳ ಪರಿಶೀಲನೆಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ʼಸೌಲಭ್ಯ ಕೇಂದ್ರʼಗಳನ್ನು ತೆರೆಯಲಾಗುವುದು ಎಂದ ಸಚಿವರು, ಇದೇ ಸೆಪ್ಟೆಂಬರ್ 30ರಿಂದ ದಾಖಲಾತಿ ಪರಿಶೀಲನೆ ಆರಂಭಿಸಲಾಗುವುದು. ಅಭ್ಯರ್ಥಿಗಳು ಹತ್ತಿರದ ಸೌಲಭ್ಯ ಕೇಂದ್ರಗಳಿಗೆ ಪರಿಶೀಲನೆಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಅಗತ್ಯವಿರುವ ಎಲ್ಲ ಮೂಲ ದಾಖಲಾತಿಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಪ್ರಾಧಿಕಾರದ ವೆಬ್ʼಸೈಟಿನಲ್ಲಿ ಮೂಲ ದಾಖಲಾತಿಗಳ ವಿವರ ನೀಡಲಾಗಿದೆ. ಈ ಸೌಲಭ್ಯ ಕೇಂದ್ರಗಳಲ್ಲಿ Online Verification Software ಮೂಲಕ ದಾಖಲಾತಿಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ರಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಇ-ಮೇಲ್ [email protected] ಮೂಲಕ ಅಥವಾ ಖುದ್ದಾಗಿ ಸಲ್ಲಿಸಿ ತಮ್ಮ ರಾಂಕ್ʼಗಳನ್ನು ಪಡೆಯಬಹುದು. ರಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆಯ ನಂತರ ಅರ್ಹತೆಯನ್ನು ಪರಿಗಣಿಸಲಾಗುವುದು.

UGNEET-2021ರ ಫಲಿತಾಂಶ ಬಂದ ನಂತರ UGNEET-2021 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತು ಭಾರತೀಯ ವೈದ್ಯ ಪದ್ಧತಿ ಹಾಗು ಹೋಮಿಯೋಪತಿ ಕೋರ್ಸುಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು ಹಾಗೆಯೇ NATA-2021 ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ರಾಂಕ್ʼನ್ನು ನಂತರ ಪ್ರಕಟಿಸಲಾಗುವುದು.

ಯಾವುದಾದರೂ ಅರ್ಹ ಅಭ್ಯರ್ಥಿಗೆ ರಾಂಕ್ ನೀಡದೇ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ತನ್ನ ಎರಡನೇ ವರ್ಷದ ಪಿಯುಸಿ ಫೋಟೋ ಪ್ರತಿಯನ್ನು ಪ್ರಾಧಿಕಾರದ ಇ-ಮೇಲ್ ವಿಳಾಸಕ್ಕೆ ಕಳುಹಿಸಿ ರಾಂಕ್ ಪಡೆಯಬಹುದು ಎಂದು ಸಚಿವರು ವಿವರಿಸಿದರು.

#KCET2021 ಫಲಿತಾಂಶವನ್ನು ಪ್ರಕಟಿಸಲಾಗಿದ್ದು, https://t.co/G8w1zzjmyw ವೆಬ್ ಸೈಟ್ ನಲ್ಲಿ ತಿಳಿಯಬಹುದಾಗಿದೆ.

ಅರ್ಹತೆ ಪಡೆದ ಅಭ್ಯರ್ಥಿಗಳು –

ಇಂಜಿನಿಯರಿಂಗ್- 183231
ಕೃಷಿ- 152518
ಪಶು ಸಂಗೋಪನೆ- 155760
ಯೋಗ ಮತ್ತು ನ್ಯಾಚುರೋಪತಿ- 155910
ಫಾರ್ಮ – 186638@CMofKarnataka @BJP4Karnataka pic.twitter.com/6ZIfkYzstc

— Dr. C.N. Ashwath Narayan (ಮೋದಿ ಅವರ ಪರಿವಾರ) (@drashwathcn) September 20, 2021

ರಾಂಕ್ ವಿಜೇತ ವಿದ್ಯಾರ್ಥಿಗಳು

ಎಂಜಿನೀಯರಿಂಗ್

  • 1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
  • 2.ಪ್ರೇಮಂಕೂರ್ ಚಕ್ರಬರ್ತಿ: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ, ಬೆಂಗಳೂರು
  • 3.ಬಿಎಸ್ ಅನಿರುದ್ಧ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
  • 4.ನಿರಂಜನ್ ರೆಡ್ಡಿ ಬಿಎಸ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ವೀರಣ್ಣಪಾಳ್ಯ, ಬೆಂಗಳೂರು
  • 5.ಆದಿತ್ಯ ಸಿಆರ್: ನಾರಾಯಣ ಇ-ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ, ಬೆಂಗಳೂರು
  • 6.ಕಾರ್ತೀಕ್ ಅಗರವಾಲ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರ, ಬೆಂಗಳೂರು
  • 7.ವೀರೇಶ್ ಬಿ.ಪಾಟೀಲ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
  • 8.ಅಂಕಿತಾ ಹರ್ಷಾ ಮೂರ್ತಿ: ದಿ ಬ್ರಿಗೇಡ್ ಸ್ಕೂಲ್, ಜೆಪಿ ನಗರ, ಬೆಂಗಳೂರು
  • 9.ಆದಿತ್ಯ ಪ್ರಭಾಷ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು
  • 10.ವೀನೀತ್ ಭಟ್: ಈಕ್ಯಾ ಸ್ಕೂಲ್, ಐಟಿಪಿಎಲ್, ಬೆಂಗಳೂರು

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ

  • 1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
  • 2.ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು
  • 3.ರೀಥಮ್ ಬಿ.: ಎಕ್ಸ್‌,ಪರ್ಟ್ ಪಿಯು ಕಾಲೇಜು, ಮಂಗಳೂರು
  • 5.ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್.ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ
  • 6.ಹಯವದನ ಸುಬ್ರಹ್ಮಣ್ಯ: ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ
  • 7.ನಂದನಾ ಎನ್. ಹೆಗಡೆ: ಬೇಸ್ ಪಿಯು ಕಾಲೇಜು, ಬೆಂಗಳೂರು
  • 8.ಸಾತ್ವಿಕ್ ಜಿ.ಭಟ್: ಎಕ್ಸ್ʼಲೆಂಟ್ ವಿಜ್ಞಾನ-ವಾಣಿಜ್ಯ ಕಾಲೇಜು, ಮೂಡಬಿದರೆ
  • 9.ನಿಶಾತ್ ಫಾತಿಮಾ: ಶಾಹಿನ್ ಇಂಡಿಯಾ ಪಿಯು ಕಾಲೇಜು, ಬೀದರ್
  • 10.ಜಿ.ಶ್ರೀಸಂಜಿತ್: ವೇದಾಂತ ಕಾಲೇಜು, ಶಾರದಾ ನಗರ, ಬೆಂಗಳೂರು

ಬಿಎಸ್ಸಿ ಅಗ್ರಿ

  • 1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
  • 2.ರೀಥಮ್ ಬಿ.: ಎಕ್ಸ್‌ʼಪರ್ಟ್‌ ಪಿಯು ಕಾಲೇಜು, ಮಂಗಳೂರು
  • 3.ಆದಿತ್ಯ ಪ್ರಭಾಷ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು
  • 4.ತೇಜಸ್: ಎಕ್ಸ್ʼಪರ್ಟ್ ಪಿಯು ಕಾಲೇಜು, ಮಂಗಳೂರು
  • 5.ಸುಜನನ್ ಆರ್ ಶೆಟ್ಟಿ: ಆಳ್ವಾಸ್ ಪಿಯು ಕಾಲೇಜ್, ವಿದ್ಯಾಗಿರಿ, ಮೂಡಬಿದಿರೆ
  • 6.ಅನಿರುದ್ಧ ರಾವ್: ಶ್ರೀ ಕುಮರನ್ ಚಿಲ್ಡ್ರನ್ಸ್ ಹೋಂ, ಉತ್ತರಹಳ್ಳಿ, ಬೆಂಗಳೂರು
  • 7.ಸಂಜನಾ ಕಾಮತ್ ಪಂಚಮಾಲ್: ಎಕ್ಸ್‌ʼಪರ್ಟ್ ಪಿಯು ಕಾಲೇಜು, ಮಂಗಳೂರು
  • 8.ವೀರೇಶ್ ಬಿ ಪಾಟೀಲ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
  • 9.ಪೂರ್ವಿ ಎಚ್.ಸಿ.: ರಾಯಲ್ ಕಾನ್ಕಾರ್ಡ್ ಇಂಟರ್ʼನ್ಯಾಷನಲ್ ಸ್ಕೂಲ್, ಕಲ್ಯಾಣನಗರ, ಬೆಂಗಳೂರು
  • 10.ಕೆ.ವಿ.ಪ್ರಣವ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಜೆಪಿ ನಗರ, ಬೆಂಗಳೂರು

ಪಶುವೈದ್ಯ (ವೆಟರ್ನರಿ)

  • 1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
  • 2.ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು
  • 3.ರೀಥಮ್ ಬಿ.: ಎಕ್ಸ್ಪರ್ಟ್ ಪಿಯು ಕಾಲೇಜು, ಮಂಗಳೂರು
  • 5.ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್.ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ
  • 6.ಹಯವದನ ಸುಬ್ರಹ್ಮಣ್ಯ: ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ
  • 7.ಸಾತ್ವಿಕ್ ಜಿ.ಭಟ್: ಎಕ್ಸ್ʼಲೆಂಟ್ ವಿಜ್ಞಾನ-ವಾಣಿಜ್ಯ ಕಾಲೇಜು, ಮೂಡಬಿದರೆ
  • 8.ನಂದನಾ ಎನ್.ಹೆಗಡೆ: ಬೇಸ್ ಪಿಯು ಕಾಲೇಜು
  • 9.ನಿಶಾತ್ ಫಾತಿಮಾ: ಶಾಹಿನ್ ಇಂಡಿಯಾ ಪಿಯು ಕಾಲೇಜು, ಬೀದರ್
  • 10.ಜಿ.ಶ್ರೀಸಂಜಿತ್: ವೇದಾಂತ ಕಾಲೇಜು, ಶಾರದಾ ನಗರ, ಬೆಂಗಳೂರು

ಬಿ ಫಾರ್ಮಾ ಮತ್ತು ಡಿ ಫಾರ್ಮಾ

1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
2.ಪ್ರೇಮಂಕೂರ್ ಚಕ್ರಬರ್ತಿ: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ, ಬೆಂಗಳೂರು
3.ಬಿ.ಎಸ್.ಅನಿರುದ್ಧ್: ಆಕ್ಸಿಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
4.ನಿರಂಜನ ರೆಡ್ಡಿ ಬಿ.ಎಸ್.: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ವಿರಣ್ಣಪಾಳ್ಯ, ಬೆಂಗಳೂರು
5.ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು
6.ಆದಿತ್ಯ ಸಿ.ಆರ್.: ನಾರಾಯಣ ಇ-ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ, ಬೆಂಗಳೂರು
7.ಕಾರ್ತೀಕ್ ಅಗರವಾಲ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು
8.ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್ ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ
9.ರೀಥಮ್ ಬಿ.: ಎಕ್ಸ್ʼಪರ್ಟ್ ಪಿಯು ಕಾಲೇಜು, ಮಂಗಳೂರು

ಆನ್ಲೈನ್ನಲ್ಲಿ ಫಲಿತಾಂಶ ಲಭ್ಯ

ಫಲಿತಾಂಶವು ಈಗ http://kea.kar.nic.in ಮತ್ತು http://karresults.nic.in ವೆಬ್‌ʼಗಳಲ್ಲಿ  ಲಭ್ಯವಿದ್ದು, ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

6 ಅಂಕ ಕೃಪಾಂಕ

ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರಕ್ಕೆ ತಲಾ 3 ಅಂಕಗಳನ್ನು ಕೃಪಾಂಕವನ್ನಾಗಿ ನೀಡಲಾಗಿದೆ. ಒಟ್ಟು 6 ಅಂಕಗಳು ಅಭ್ಯರ್ಥಿಗಳಿಗೆ ಸಿಕ್ಕಿವೆ.  ಇದೇ ವೇಳೆ, ಅಂಕಪಟ್ಟಿ ಕೊಡದೇ ಇರುವ 6,000 ಅಭ್ಯರ್ಥಿಗಳು ಸೇರಿ ಒಟ್ಟು 7,000 ವಿದ್ಯಾರ್ಥಿಗಳಿಗೆ ರಾಂಕ್‌ ತಡೆ ಹಿಡಿಯಲಾಗಿದೆ ಎಂದು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಕ್ಯಾಪ್ಟನ್ ಅಭಿಮನ್ಯು ಗಜಪಡೆಗೆ ಭಾರ ಹೊರಿಸಿ ತಾಲೀಮು

ಕ್ಯಾಪ್ಟನ್ ಅಭಿಮನ್ಯು ಗಜಪಡೆಗೆ ಭಾರ ಹೊರಿಸಿ ತಾಲೀಮು

Leave a Reply Cancel reply

Your email address will not be published. Required fields are marked *

Recommended

ಅನ್‌ಲಾಕ್‌ ಆದ ಮೇಲೆ ಹೆಚ್ಚುತ್ತಿದೆ ಅಪರಾಧ: ಗೃಹ ಸಚಿವ ಬೊಮ್ಮಾಯಿ

ಇಂದು ಸಂಪುಟ ಸಾಕಾರ; 2.15ಕ್ಕೆ ಪ್ರಮಾಣ

5 years ago
ಅಪ್ರತಿಮ ಚಾಣಾಕ್ಷ, ಟ್ರಬಲ್ ‌ಶೂಟರ್‌ ಹಾಗೂ ಭಾರತದ ರಿಯಲ್‌ ಲೈಫಿನ #JamesBond ಅಜಿತ್ ಡೋವಲ್‌ಗೆ  ಒಂದು ಸೆಲ್ಯೂಟ್‌ ಮಾಡೋಣ

ಅಪ್ರತಿಮ ಚಾಣಾಕ್ಷ, ಟ್ರಬಲ್ ‌ಶೂಟರ್‌ ಹಾಗೂ ಭಾರತದ ರಿಯಲ್‌ ಲೈಫಿನ #JamesBond ಅಜಿತ್ ಡೋವಲ್‌ಗೆ ಒಂದು ಸೆಲ್ಯೂಟ್‌ ಮಾಡೋಣ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ