• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಕೋಡಿ ಹರಿದ ಅಮಾನಿ ಭೈರಸಾಗರ; ಕೆರೆಕಟ್ಟೆಯಲ್ಲಿ ಜನಸಾಗರ

cknewsnow desk by cknewsnow desk
October 8, 2021
in EDITORS'S PICKS, STATE
Reading Time: 2 mins read
0
ಕೋಡಿ ಹರಿದ ಅಮಾನಿ ಭೈರಸಾಗರ; ಕೆರೆಕಟ್ಟೆಯಲ್ಲಿ ಜನಸಾಗರ
1.4k
VIEWS
FacebookTwitterWhatsuplinkedinEmail

ಕೆರೆ ಕೋಡಿ ನೋಡಲು ಓಡೋಡಿ ಬಂದ ಪ್ರವಾಸಿಗರು

By GS Bharath Gudibande

ಗುಡಿಬಂಡೆ: ನಾಲ್ಕೈದು ವರ್ಷಗಳ ಬಳಿಕ ರಾಜ್ಯಲ್ಲಿಯೇ 4ನೇ ಅತಿ ದೊಡ್ಡ ಕೆರೆಯಾದ ಇಲ್ಲಿನ ಅಮಾನಿ ಭೈರಸಾಗರ ಕೆರೆ ಕೋಡಿ ಹರಿದಿದೆ.

ಕಳೆದ ತಿಂಗಳಿಂದ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಇಂದು ಕೆರೆ ಕೋಡಿ ಹೋಗಿದ್ದು, ತಾಲೂಕಿನ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಆಕಾಶದಿಂದ ನೋಡಿದರೆ ಭಾರತದ ಭೂಪಟದಂತೆ ಕಾಣುವ ಅಮಾನಿ ಭೈರಸಾಗರ ಕೆರೆಯು ಸುತ್ತಲೂ ಹಸಿರು ಆವರಿಸಿಕೊಂಡು ನಡುವೆ ವಿಶಾಲವಾದ ನೀರಿನ ಸಾಗರದಂತೆ ಕಾಣಿಸುತ್ತದೆ. ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿ ನಿರ್ಮಾಣವಾಗಿರುವ ಕೆರೆಕಟ್ಟೆ ಮೇಲೆ ಸಾಗಿದರೆ ಎಂಥವರಿಗೂ ಆಹ್ಲಾದಕರವಾದ ಅನುಭವ ಸಿಗುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಕೆರೆಗಳಲ್ಲಿ ಒಂದಾಗಿರುವ ಅಮಾನಿ ಭೈರಸಾಗರವು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು; ಅದರ ಜತೆಗೆ ಒಂದೆಡೆ ಹಸಿರ ಸಿರಿ, ಇನ್ನೊಂದೆಡೆ ಐತಿಹಾಸಿಕ ತಾಣಗಳು, ಏಳುಸುತ್ತಿನ ಕೋಟೆಯ ಸುರಸದ್ಮಗಿರಿ, ಜತೆಗೆ ಸಾಲು ಸಾಲು ಗಿರಿ ಶ್ರೇಣಿ ಕಣ್ಮನ ಸೆಳೆಯುತ್ತದೆ.

ಇವೆಲ್ಲವುಗಳಿಗೆ ಕಲಶ ಇಟ್ಟಂತೆ ಪಟ್ಟಣಕ್ಕೆ ಪ್ರವೇಶ ಪಡೆಯುವ ಮುನ್ನವೇ ಎದುರಾಗುವ ಈ ಕೆರೆ ಒಮ್ಮೆಲೆ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ.

  • ಭಾರತ ಭೂಪಟದಂತೆ ಕಾಣುವ ಅಮಾನಿ ಭೈರಸಾಗರ

ಎಲ್ಲಿದೆ ಈ ಕೆರೆ?

ಈ ಕೆರೆ ನೋಡಲು ಹೋಗಬೇಕಾದರೆ ಚಿಕ್ಕಬಳ್ಳಾಪುರ ನಗರದಿಂದ 35 ಕಿ.ಮೀ. ಕ್ರಮಿಸಿ ಗುಡಿಬಂಡೆ ಪಟ್ಟಣಕ್ಕೆ ಹೋಗಬೇಕು. ಬೆಂಗಳೂರಿನಿಂದ ಕೇವಲ 100 ಕಿ.ಮೀ ದೂರದಲ್ಲಿದೆ. ಗುಡಿಬಂಡೆದ ಮೇಲೆ ಹತ್ತಿದರೆ ಭಾರತದ ಭೂಪಟದಂತೆ ಕಾಣುವ ಈ ಕೆರೆಯನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ.

ಐತಿಹಾಸಿಕ ಕೆರೆ ಕಥೆ

ಸುಮಾರು 400 ವರ್ಷಗಳ ಹಿಂದೆ ಈ ಪ್ರದೇಶವನ್ನಾಳಿದ ಹಾವಳಿ ಭೈರೇಗೌಡರು ಕಟ್ಟಿಸಿದ ಕೆರೆ ಇದು. ಜನರ ಹಿತ ಕಾಯುತ್ತಿದ್ದ ಕ್ರಾಂತಿಕಾರಿ ಮನೋಭಾವದ ಪಾಳೇಗಾರನಾಗಿದ್ದ. ಆತನ ದೂರದೃಷ್ಟಿ ಪ್ರತೀಕವೇ ಗುಡಿಬಂಡೆ ಬೆಟ್ಟದ  ಏಳು ಸುತ್ತಿನಕ ಓಟೆ, ಅಮಾನಿ ಭೈರಸಾಗರ ಕೆರೆ ಇತ್ಯಾದಿ.

ಪ್ರಾಂತೀಯ ಮನೋಭಾವನೆ ಹೆಚ್ಚಾಗಿದ್ದ ಅಂದಿನ ಕಾಲದಲ್ಲಿ ನಿರ್ಮಾಣವಾದ ಈ ಕೆರೆ ಕಾಕತಾಳೀಯ ಎಂಬಂತೆ ಕ್ರಮೇಣ ರಾಷ್ಟ್ರೀಯ ಸಮಗ್ರತೆಯನ್ನು ಸಾರುವ ಭಾರತದ ಭೂಪಟದಂತೆ ರೂಪುಗೊಂಡಿದೆ. ಬರಪೀಡಿತ ಪ್ರದೇಶವಾದ ಗುಡಿಬಂಡೆಗೆ ಈ ಕೆರೆಯೇ ಜೀವಾಳ. ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹಚ್ಚಿಕೊಂಡು, ಅಭಿವೃದ್ಧಿ ಕಾಣದಿರುವ ಗುಡಿಬಂಡೆ ಜನರಿಗೆ ಅಂದಿನಿಂದ ಇಂದಿನವರೆಗೂ ಭೈರಸಾಗರದ ನೀರೇ ಜೀವಜಲ.

ಕೆರೆಗೆ ಹಾರ

ನಾವು ಪಠ್ಯದಲ್ಲಿ ಓದಿದಂತೆ ಕೆರೆಗೆಹಾರದ ಕಥೆಯೂ ಇಲ್ಲಿಯೂ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಕೆರೆಯ ನಿರ್ಮಾಣ ಕಾಲದಲ್ಲಿ ನೀರಿನ ರಭಸಕ್ಕೆ ಕೆರೆ ಕಟ್ಟೆಯು ನಿಲ್ಲದೆ ಪದೇಪದೆ ಒಡೆದು ಹೋಗುತ್ತಿತ್ತು. ಇದನ್ನು ನಿಲ್ಲಿಸಬೇಕೆಂದರೆ ಒಬ್ಬ ಗರ್ಭಿಣಿ ಹೆಂಗಸನ್ನು ಕೆರೆಗೆ ಬಲಿ ಕೊಡಬೇಕೆಂದು ಹಿರಿಯರು ಸಲಹೆ ನೀಡಿದರಂತೆ. ಯಾರ  ಬಲವಂತ, ಒತ್ತಾಯವಿಲ್ಲದೆ ಸ್ವ ಇಚ್ಚೆಯಿಂದ ಬಲಿಯಾಗಬೇಕೆಂಬುದು ನಂಬಿಕೆ ಇತ್ತಂತೆ. ಅದರಂತೆ ಬಲಿಗೆ ಹುಡುಕಾಟ ನಡೆಸಿದ ಪಾಳೇಯಗಾರರಿಗೆ ಅಂಥ ಮಹಿಳೆ ಸಿಗದಿದ್ದಾಗ ಚಿಂತೆಗೀಡಾಗಿದ್ದ ಭೈರೇಗೌಡರ  ಮನದಾಳವನ್ನು ಅರಿತ ಅವರ ಗರ್ಭಿಣಿ ಸೊಸೆ ಒಡ್ಡೆಮ್ಮ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಎಲ್ಲರಿಗೂ ಒಳ್ಳೆಯದಾಗುವುದಾದರೆ ತಾನು ಕೆರೆಗೆ ಅರ್ಪಣೆ ಮಾಡಿಕೊಳ್ಳಲು ಸಿದ್ದಳಾದಳು ಎಂಬ ಕಥೆ ಇದೆ.

ಅದರಂತೆ ಇಡೀ ಸಾವಿರಾರು ಜನರು ಸಂಭ್ರಮದ ನಡುವೆ ಆಕೆಗೆ ದೈವದಂತೆ ಪೂಜಿಸಿ, ಆಕೆಯನ್ನು ಕೆರೆಯ ಮಧ್ಯ ಭಾಗಕ್ಕೆ ಕರೆತಂದು ಶ್ರದ್ದಾಭಕ್ತಿಯಿಂದ ಪೂಜಿಸಲ್ಪಟ್ಟು, ಆಕೆ ಜೀವಂತವಿದ್ದಾಗಲೇ ಮಣ್ಣನ್ನು ಸುರಿದು ಕೆರೆಯ ಕಟ್ಟೆಯನ್ನು ಕಟ್ಟುತ್ತಾರೆಂದು ಹೇಳಲಾಗಿದೆ. ಅಂದಿನಿಂದ ಕೆರೆಯ ಕಟ್ಟೆಯು ಸುಭದ್ರವಾಗಿ ನಿಂತಿತು ಎಂದು ಹೇಳಲಾಗುತ್ತಿದೆ. ತನ್ನ ಮುತ್ತೈದೆತನವನ್ನು ಬಲಿಕೊಟ್ಟ ಆ ಸಾಧ್ವಿಯ ಸಲುವಾಗಿ ನೀರು ಕೆಂಪಾಯಿತು ಎಂದು  ನಂಬಿದ ಜನತೆ ಈಗಲೂ ಕೆರೆ ಕಟ್ಟೆಯ ಮಧ್ಯಭಾಗದಲ್ಲಿ ಒಡ್ಡೆಮ್ಮ ಗುಡಿಗೆ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಪ್ರತಿ ವರ್ಷ ಗುಡಿಬಂಡೆ ಸುತ್ತಮುತ್ತಲಿನ ಜನರು ದೀಪಾರಾಧನೆ ಮಾಡಿ ಭಕ್ತಿಯಿಂದ ಒಡ್ಡೆಮ್ಮನನ್ನು ಪೂಜಿಸುತ್ತಾರೆ.

ಇಲ್ಲಿಗೆ 6 ಕಿ.ಮೀ ದೂರದಲ್ಲಿರುವ ಪಂಚಗಿರಿಗಳಲ್ಲೊಂದಾದ ಧೇನುಗಿರಿ (ಆವಲಕೊಂಡ)ಯಲ್ಲಿ ಉಗಮವಾಗುವ,  ಕೇವಲ ಮಳೆಗಾಲದಲ್ಲಿ ಮಾತ್ರ ಹರಿಯುವ ʼಕುಶಾವತಿʼ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದೊಡ್ಡಕೆರೆ ಇದಾಗಿದ್ದು, ಅಂದಾಜಿನಂತೆ ಸುಮಾರು 300 ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರುಣಿಸುತ್ತದೆ. ಈ ಕೆರೆಯನ್ನೇ ನಂಬಿರುವ ರೈತರ ಹಸಿವನ್ನು ತಣಿಸುತ್ತಿದೆ.

ಕೋಡಿ ಹರಿದ ನೀರು ಎಲ್ಲಿಗೆ ಹೋಗುತ್ತದೆ?

ಈ ಕೆರೆ ತುಂಬಿದ ನಂತರ ಕೋಡಿ ಹರಿದ ನೀರು ತಾಲೂಕಿನ ದಪ್ಪರ್ತಿ, ಹಂಪಸಂದ್ರ, ಕಡೇಹಳ್ಳಿ ಮೂಲಕ ನೆರೆಯ ಆಂಧ್ರ ಪ್ರದೇಶದ ಚಿಲಮತ್ತೂರು, ಕೋಡೂರು ಮುಖಾಂತರ ಬುಕ್ಕಪಟ್ಟಣಂ ಕೆರೆ ಸೇರಿ ಪಾಲಾರ್ ನದಿ ಮೂಲಕ ಸಮುದ್ರ ಸೇರುತ್ತದೆ. ಇದಲ್ಲದೇ ಮತ್ತೊಂದು ಕಡೆ ಹರಿಯುವ ಕೋಡಿ ನೀರು ಪಕ್ಕದ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಕೆರೆಗೆ ಸೇರುತ್ತದೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಿನ ಕೆರೆ ಕುಂಟೆಗಳು ತುಂಬಿವೆ. ಪಟ್ಟಣದ ಅಮಾನಿ ಭೈರಸಾಗರ ಕೆರೆ ಕೋಡಿ ಹೋಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪ್ರವಾಸಿಗರು, ತಾಲೂಕಿನ ಜನರು, ಮಕ್ಕಳು, ಹಿರಿಯರು ಕೆರೆ ಕೋಡಿ ಬಳಿ ಬಂದು ಜಲರಾಶಿಯನ್ನು ಕಂಡು ಸಂಸತಸ ವ್ಯಕ್ತಪಡಿಸಿದರು.

ಸುಮಾರು 4-5 ವರ್ಷಗಳ ಬಳಿಕ ಕೆರೆ ತುಂಬಿ ಕೋಡಿ ಹರಿಯುತ್ತಿರುವುದು ನಮಗೆ ಸಂತೋಷವಾಗಿದೆ. ಕೆರೆ ಕೋಡಿ ಹೋಗುತ್ತಿರುವ ವಿಷಯ ತಿಳಿದ ತಕ್ಷಣ ನಾವು ಮಕ್ಕಳ ಮತ್ತು ಕುಟುಂಬದ ಜತೆಗೆ ಬಂದು ಸ್ವಲ್ಪ ಸಮಯ ನೀರಿನಲ್ಲಿ ಆಟವಾಡಿದ್ದು ಖುಷಿ ನೀಡಿದೆ.

ಶ್ರೀನಾಥ್ ಜಿ.ವಿ., ಸ್ಥಳೀಯ
  • ಕೆರೆ ಕೋಡಿ ನೋಡಲು ಬಂದವರಿಗೆ ಕೋವಿಡ್‌ ವ್ಯಾಕ್ಸಿನ್‌ ನೀಡಲಾಯಿತು.

ಕೆರೆ ಕೋಡಿಯಲ್ಲೇ ಲಸಿಕೆ

ವಿಶೇಷವೆಂದರೆ, ತಾಲೂಕು ಆಸ್ಪತ್ರೆ ಸಿಬ್ಬಂದಿ ಅಮಾನಿ ಭೈರಸಾಗರ ಕೋಡಿಯ ಬಳಿಯೇ ಲಸಿಕೆ ಪಡೆಯದೇ ಇದ್ದವರಿಗೆ ಕೋವಿಡ್‌ ವ್ಯಾಕ್ಸಿನ್‌ ನೀಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ಮತ್ತು ಸಿಬ್ಬಂದಿ ಅನೇಕರಿಗೆ ಲಸಿಕೆ ನೀಡಿದರು.

Tags: amani bhyarasagarachikkaballapuracknewsnowcovid19gudibandegudibande kerekarnatakalakenews
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
#COVID19KARNATAKA‌ : ಕೋಲಾರ ಕೋವಿಡ್‌ ಪರಿಸ್ಥಿತಿ ಪರಿಶೀಲಿಸಿದ ಉಪ ಮುಖ್ಯಮಂತ್ರಿ: ಜಿಲ್ಲೆಗೆ 300 ಆಕ್ಸಿಜನ್‌ ‍& 150 ICU ಬೆಡ್‌; 10 ದಿನದಲ್ಲಿ SNR ಆಸ್ಪತ್ರೆಯಲ್ಲಿ 1,000 ಕೆಎಲ್ ಆಮ್ಲಜನಕ ಪೂರೈಕೆ ವ್ಯವಸ್ಥೆ

ಅತಿಥಿ ಉಪನ್ಯಾಸಕರ ಸೇವೆ  ಮುಂದುವರಿಸಲು ಸರಕಾರ ನಿರ್ಧಾರ

Leave a Reply Cancel reply

Your email address will not be published. Required fields are marked *

Recommended

ಬಾಗೇಪಲ್ಲಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪರಿಸರ ಜಾಗೃತಿ

ಬಾಗೇಪಲ್ಲಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪರಿಸರ ಜಾಗೃತಿ

5 years ago
ಹೆಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ತೋಟದಲ್ಲಿ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್ ರೌಂಡ್ಸ್

ಹೆಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ತೋಟದಲ್ಲಿ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್ ರೌಂಡ್ಸ್

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ