• About
  • Advertise
  • Careers
  • Contact
Thursday, May 7, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಓಶೋ ಎಂಬ ಅಧುನಿಕ ಝೆನ್

cknewsnow desk by cknewsnow desk
December 12, 2021
in GUEST COLUMN
Reading Time: 2 mins read
0
ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..
1.1k
VIEWS
FacebookTwitterWhatsuplinkedinEmail

ಡಿಸೆಂಬರ್‌ 11; ಓಶೋ ಜನ್ಮದಿನ

by DR.Guru Prasad Rao Hawaldar

ಮೂವತ್ತು ವರ್ಷಗಳ ಕಾಲ ಜಗತ್ತಿನ ಬಹುತೇಕ ವಿಷಯಗಳ ಕುರಿತು ಅತ್ಯಂತ ಅಧಿಕಾರಯುತವಾಗಿ ಮಾತನಾಡಿ ಹೊಸ ಅಂತರ್ ದೃಷ್ಟಿ ಸೃಷ್ಟಿಸಿ, ಪೂರ್ವ ಮತ್ತು ಪಾಶ್ಚಿಮಾತ್ಯದ ಸಮಾಗಮವಾದವರು ಓಶೋ. ಆದರೆ ಯಾವುದೇ ಧರ್ಮ, ದೇಶ, ಗಡಿ, ಭಾಷೆಯ ಸೀಮಿತಕ್ಕೆ ಒಳಗಾಗದೆ ಇಡೀ ಅಸ್ತಿತ್ವದಲ್ಲಿ ಸೇರ್ಪಡೆಗೊಂಡು ಬದುಕಿ ಬದುಕುವ ಅರಿವನ್ನು ಬೋಧಿಸಿದ ಆಧುನಿಕ ಝೆನ್ ಎಂದು ಅವರನ್ನು ಎಂದು ಕರೆಯಬಹುದು.

ಆಚಾರ್ಯ ರಜನೀಶ್ ಅವರ ಪ್ರಭಾವಕ್ಕೆ ಒಳಗಾದವರು ಜಗತ್ತಿನ ತುಂಬಾ ಕೋಟ್ಯಂತರ ಜನ ಸಿಗುತ್ತಾರೆ. ಪ್ರಪಂಚದ ಎಲ್ಲೆಡೆ ಓಶೋ ವಿಚಾರಗಳನ್ನು ಮುಕ್ತವಾಗಿ ಯಾವುದೇ ಪೂರ್ವಗ್ರಹಪೀಡಿತರಾಗದೇ ಒಪ್ಪಿಕೊಂಡು ಅಪ್ಪಿಕೊಂಡವರು ಸಹ ಲಕ್ಷಾಂತರ ಜನ ಇದ್ದಾರೆ.

ಓಶೋ ಮಾತನಾಡಿರದೇ ಇರುವ ವಿಷಯಗಳು, ವಿಶೇಷ ವ್ಯಕ್ತಿಗಳು ಬಹುಶಃ ಯಾರೂ ಇಲ್ಲವೇ ಎನ್ನಬಹುದು. ಅವರ ಕಾಲಘಟ್ಟದ ಪರಿಧಿಯ ಅಂಚಿನವರೆಗೂ ಜಗತ್ತಿಗೆ ವಿಶೇಷರೂ ಅಂತ ಚಿರಪರಿಚಿತರಾದ ಎಲ್ಲರ ಕುರಿತು ಓಶೋ ಮುಕ್ತವಾಗಿ ಮಾತನಾಡಿದ್ದಾರೆ.

ಅತ್ಯಂತ ಪ್ರಭಾವಶಾಲಿಯಾಗಿ ಹೊಳೆಯುವ ನೇತ್ರಗಳು, ತುಂಬಾ ಶಾಂತಿಯಿಂದ ಕಂಗೊಳಿಸುತ್ತಿರುತ್ತವೆ ಆ ನಯನಗಳು. ಸಮಾಧಾನ ಚಿತ್ತದ ಮಾತುಗಳು, ಉದ್ದನೆಯ ಗಡ್ಡ, ವಿಶಿಷ್ಟವಾದ ಆಕರ್ಷಕ ಉಡುಪು, ಪ್ರತಿ ಮಾತಿನಲ್ಲಿಯೂ ಸಹ ಅತ್ಯಂತ ತಲ್ಲೀನತೆ, ಹೊಸತನ, ತಲೆ ಮೇಲೊಂದು ವಿಶಿಷ್ಟ ಟೊಪ್ಪಿಗೆ. ಅವರ ಮಾತುಗಳನ್ನು ಆಲಿಸುವಾಗ ಅವರ ಚಲನೆಯಲ್ಲಿ ಮಾತಿನಲ್ಲೇ ಬುದ್ಧನ ಪ್ರೀತಿ ಅರಿವಿನ ಸೌಂದರ್ಯದ ಪ್ರತೀಕವಾಗಿ ಜಗತ್ತಿಗೆ ಕಂಡು ಬರುತ್ತಾರೆ ಓಶೋ.

ಓಶೋ ಅವರು ಜನಿಸಿದ್ದು ಮಧ್ಯಪ್ರದೇಶದ ಕುಚ್ ವಾಡಾ ಗ್ರಾಮದಲ್ಲಿ ಡಿಸೆಂಬರ್ 11, 1931ರಂದು. ಮಾರ್ಚ್ 21, 1953ರಂದು ಅವರು ಜೀವನದಲ್ಲಿ ಪರಮ ಸಿದ್ಧಿಯನ್ನು ಪಡೆದರೆಂದು ಹೇಳಲಾಗುತ್ತದೆ. 1960ರ ದಶಕದಲ್ಲಿ ಆಚಾರ್ಯ ರಜನೀಶ ಎಂದು, 1970ರ ದಶಕ ಹಾಗೂ 1980ರ ದಶಕಗಳಲ್ಲಿ ಭಗವಾನ್ ರಜನೀಶ್ ಎಂದು; ಮತ್ತೂ ಬಳಿಕ ಓಶೊ ಎಂದೂ ಪರಿಚಿತವಾಗಿದ್ದ ಚಂದ್ರ ಮೋಹನ್ ಜೈನ್ (1931–1990) ಅಂತಾರಾಷ್ಟ್ರೀಯ ಅನುಯಾಯಿಗಳನ್ನು ಹೊಂದಿರುವ ಭಾರತೀಯ ಗುರು, ಆಧ್ಯಾತ್ಮಿಕ ಶಿಕ್ಷಕ. ಆದರೆ ಇಷ್ಟನ್ನೇ ಹೇಳಿದರೆ ಓಶೋ ವ್ಯಕ್ತಿತ್ವ ದರ್ಶನವಾಗಲಾರದು.

ಓಶೋ ಎಂಬುದು ನಾಮಪದವಲ್ಲ, ಅದೊಂದು ಗುಣ, ಅದೊಂದು ಸ್ಥಿತಿ. ವಿಲಿಯಮ್ ಜೇಮ್ಸ್ ಅವರ ಶಬ್ದಕೋಶದಲ್ಲಿ ಓಶೋ ಎಂದರೆ ಸಾಗರದಷ್ಟು ವಿಶಾಲತೆಯನ್ನು ಹೊಂದಿದವರು ಎಂದರ್ಥ.

ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ರಜನೀಶ್ 1960ರ ದಶಕದಲ್ಲಿ ಸಾರ್ವಜನಿಕ ಭಾಷಣಕಾರರಾಗಿ ದೇಶಾದ್ಯಂತ ಪ್ರಯಾಣ ಮಾಡಿದರು. ಅವರ ಮುಚ್ಚುಮರೆ ಇಲ್ಲದ ಮಾತುಗಳನ್ನು ವಿವಾದಾತ್ಮಕ ವ್ಯಕ್ತಿಯನ್ನಾಗಿಸಿದವು. ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವ ರಜನೀಶ್ ಅವರನ್ನು ’ಸೆಕ್ಸ್ ಗುರು‘ ಎಂದು ಟೀಕಿಸಿದರು. ಆದರೆ ಓಶೋ ಅದಕ್ಕೆ ಮಾತ್ರ ಸೀಮಿತರಲ್ಲ. ಎಲ್ಲ ವಿಷಯಗಳ ಬಗ್ಗೆ ತರ್ಕಬದ್ಧವಾಗಿ ಮಾತನಾಡುತ್ತಿದ್ದರು.

ತಾವು ಕಂಡುಕೊಂಡ ಬದುಕಿನ ಸತ್ಯವನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತಾ ಹೋದರು. ಓಶೋ ಮಾತನಾಡುವುದೇ ಕಥೆಯ ಮೂಲಕ. ಕಥೆಯಿಂದಲೇ ಮಾತು ಆರಂಭ. ಕಥೆಗೊಂದು ಕಥೆ, ಅದಕ್ಕೊಂದು ಉಪಕಥೆ, ಕಥೆಯಲ್ಲಿಯೇ ಬದುಕಿನ ದರ್ಶನ. ಅಧ್ಯಾತ್ನ, ಝೆನ್, ಬೌದ್ಧ, ಸೂಫೀ, ಪ್ರೇಮ, ಕಾಮ, ಮದುವೆ, ಬದುಕು, ವಿಡಂಬನೆ, ಸಾಮಾಜಿಕ, ರಾಜಕೀಯ… ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಹೇಳುತ್ತಾ ಸಭಿಕರನ್ನು ಮೋಡಿ ಮಾಡುತ್ತಾ ಸಾಗಿದರು. ದೇಶವಿದೇಶಗಳಲ್ಲಿ ಅವರು ನೀಡಿದ ಉಪನ್ಯಾಸಗಳಿಗೆ ಜನರು ಮುಗಿಬಿದ್ದು ಬಂದರು. ವಿಶ್ವವಿಖ್ಯಾತರಾದರು. ಅಷ್ಟೇ ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡರು.

ತಮ್ಮ ಪ್ರವಚನಗಳ ಮೂಲಕ ಅವರು ಮಾನವ-ಚೇತನದ ವಿಕಾಸದ ಎಲ್ಲಾ ಸ್ತರಗಳತ್ತಲ್ಲೂ ಪ್ರಕಾಶ ಬೀರಿದರು ಓಶೋ. ಅವರು ಬುದ್ಧ, ಮಹಾವೀರ, ಕೃಷ್ಣ, ಶಿವ, ಶಾಂಡಿಲ್ಯ, ನಾರದ, ಜೀಸಸ್ ಮುಂತಾದವರೊಂದಿಗೆ ಭಾರತದ ಆಧ್ಯಾತ್ಮಿಕ ಜಗತ್ತಿನ ತಾರೆಗಳಾದ ಆದಿಶಂಕರಾಚಾರ್ಯ, ಗೋರಾಖ್, ಕಬೀರ್, ನಾನಕ್, ಮಾಲೂಕ್ ದಾಸ್, ರೈದಾಸ್, ದರಿಯಾದಾಸ್, ಮೀರಾ ಮುಂತಾದವರ ಬಗ್ಗೆ ಸಾವಿರಾರು ಪ್ರವಚನಗಳನ್ನು ನೀಡಿದ್ದಾರೆ. ಇವರ ಪ್ರವಚನಗಳು ಸ್ಪರ್ಶಿಸದೆ ಇರುವಂತಹ ಜೀವನದ ಆಯಾಮಗಳೇ ಇಲ್ಲವೆನ್ನಬೇಕು.

ಯೋಗ, ತಂತ್ರ, ಝೆನ್, ಹಸೀದ್, ಸೂಫಿ ಮುಂತಾದ ಸಾಧನೆಯ ಪರಂಪರೆಗಳ ಗೂಢ ರಹಸ್ಯಗಳ ಮೇಲೆ ಇವರು ಸವಿಸ್ತಾರವಾಗಿ ಬೆಳಕು ಚೆಲ್ಲಿದ್ದಾರೆ ಅವರು. ಇದರೊಟ್ಟಿಗೆ ರಾಜನೀತಿ, ಕಲೆ, ವಿಜ್ಞಾನ, ಮನೋವಿಜ್ಞಾನ, ದರ್ಶನ, ಶಿಕ್ಷಣ, ಪರಿವಾರ, ಸಮಾಜ, ಬಡತನ, ಜನಸಂಖ್ಯಾ ಸ್ಪೋಟ, ಪರಿಸರ ಮತ್ತು ಸಂಭವನೀಯ ಪರಮಾಣು ಯುದ್ಧ, ಏಡ್ಸ್ ಮಹಾಮಾರಿ ಮುಂತಾದ ವಿಶ್ವ-ಸಂಕಟಗಳ ಬಗ್ಗೆಯೂ ಇವರು ತಮ್ಮ ಕ್ರಾಂತಿಕಾರಕ ವಿಚಾರಗಳ ಬಗ್ಗೆ ಪ್ರವಚನ ನೀಡಿದ್ದಾರೆ.

ತಮ್ಮ ಪ್ರವಚನಗಳಿಂದ ಆಧುನಿಕ ಜಗತ್ತಿನಲ್ಲಿ ಆಧ್ಯಾತ್ಮಿಕತೆಯ ಬಿರುಗಾಳಿಯನ್ನೇ ಸೃಷ್ಟಿಸಿದವರು ಅವರು. ಉಪನಿಷತ್ತುಗಳು, ಭಗವದ್ಗೀತೆ, ಧಮ್ಮಪದ, ಝೆನ್‌ ಕಥೆ, ಶಿವಸೂತ್ರಗಳು – ಹೀಗೆ ಜಗತ್ತಿನ ಹಲವು ಧಾರೆಗಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳಿಗೆ ಹೊಸದಾದ ಕಳೆಯನ್ನು ನೀಡಿದರು. ಕೃಷ್ಣ, ಬುದ್ಧ, ಯೇಸು, ಕಬೀರ್, ಮೀರಾ, ಝರತುಷ್ಟ್ರಾ – ಇಂಥ ಹಲವರು ಮಹಾತ್ಮರ ಉಪದೇಶಗಳನ್ನು ಆಧುನಿಕ ಜಗತ್ತಿಗೆ ಅಳವಡುವಂತೆ ಬಗ್ಗಿಸಿದರು. ಅಪಾರ ಓದು, ಒಳನೋಟಗಳಿಂದ ದಕ್ಕಿಸಿಕೊಂಡ ಅವರ ಅರಿವಿನ ಬೆಳಕಿನ ಮೂಲಕ ಆಧ್ಯಾತ್ಮಿಕಲೋಕದ ವಿಸ್ಮಯ ತೆರೆದಿಟ್ಟರು.

‘ನೀವೆಲ್ಲರೂ ಬುದ್ಧರೇ ಹೌದು. ನೀವು ನಿದ್ರಿಸುತ್ತಿರಬಹುದು, ಕನಸನ್ನು ಕಾಣುತ್ತಿರಬಹುದು; ಆದರೆ ನೀವೆಲ್ಲರೂ ಬುದ್ಧರೇ. ನಿಮ್ಮನ್ನು ಬುದ್ಧರನ್ನಾಗಿಸುವುದು ನನ್ನ ಕೆಲಸವಲ್ಲ, ಏಕೆಂದರೆ ನೀವು ಈಗಾಗಲೇ ಬುದ್ಧರಾಗಿದ್ದೀರಿ. ಅದನ್ನು ನಿಮಗೆ ನೆನಪಾಗಲು ಸಹಾಯ ಮಾಡುವುದಷ್ಟೆ ನನ್ನ ಕೆಲಸ. ಎಚ್ಚರಿಸುವುದಷ್ಟೆ ನನ್ನ ಕೆಲಸ…’ – ಹೀಗೆ ಹೇಳುತ್ತಲೇ ಅಧ್ಯಾತ್ಮದ ಹಲವು ದಾರಿಗಳನ್ನು ತೋರಿಸಿಕೊಟ್ಟವರು ಓಶೋ.

ಹೊಸ ರೀತಿಯ ಮನುಷ್ಯನ ಹುಟ್ಟಿಗೆ ಬೇಕಾದ ಪರಿಸ್ಥಿತಿಗಳನ್ನು ಸೃಷ್ಟಿಸಲು ತಾನು ಸಹಾಯ ಮಾಡುತ್ತಿದ್ದೇನೆ ಎನ್ನುವ ಓಶೋ. ಸೃಜನಶೀಲತೆಯ ಆಳ, ಅಗಲ, ಹರಿವು, ಸೃಷ್ಟಿ ಎಲ್ಲವನ್ನೂ ಒಂದು ಕಣ್ಣೋಟಕ್ಕೆ ಸಿಕ್ಕುವಂತೆ ವಿಚಾರಗಳನ್ನು ಮನದಟ್ಟು ಮಾಡುವಾಗ ಸಿಗ್ಮಂಡ್ ಫ್ರಾಯ್ಡ್, ನೀಶೆ, ಬುದ್ಧ, ಸಾಕ್ರೆಟಿಸ್, ಶಹಜಹಾನ್ ಎಲ್ಲರನ್ನೂ ಸಮೀಕರಿಸುತ್ತಾರೆ. ಅಲ್ಲಲ್ಲಿ ಝೆನ್ ಮತ್ತು ಮುಲ್ಲಾ ನಸರುದ್ದೀನ್ ಕಥೆಗಳಿಂದ ತತ್ವಜ್ಞಾನವನ್ನು ಕಡ ಪಡೆಯುತ್ತಾರೆ. ಅವೆಲ್ಲವನ್ನು ಬಳಸಿಕೊಂಡೂ ಸ್ವತಂತ್ರ ವಿಚಾರವೊಂದನ್ನು ಮಂಡಿಸುವ ಓಶೋವಿನ ಶೈಲಿಯಾಗಿದೆ. ಸಂಕೀರ್ಣ ವಿಚಾರಗಳನ್ನೂ ಸರಳವಾಗಿ ಮಂಡಿಸುವ ಕಾರಣದಿಂದಾಗಿಯೇ ಓಶೋ ಜಗತ್ತಿನೆಲ್ಲೆಡೆ ಜನಪ್ರಿಯರಾಗಿದ್ದಾರೆ .
ಓಶೋ ಆಧ್ಯಾತ್ಮಿಕತೆ ಎನ್ನುವುದು ಘನಗಂಭೀರವಾದ ಪ್ರಕ್ರಿಯೆ ಎಂಬ ಗ್ರಹಿಕೆಯನ್ನು ತಪ್ಪಿಸುವುದಕ್ಕಾಗಿಯೋ ಎಂಬಂತೆ ಕಥೆಗಳು, ನಗೆಹನಿಗಳ ಮೂಲಕವೂ ಗಹನವಾದ ತತ್ತ್ವಗಳನ್ನು ನಿರೂಪಿಸಿರುವುದು ಅವರ ಇನ್ನೊಂದು ಹೆಗ್ಗಳಿಕೆ.

ಮಹಾನ್ ಋಷಿಮುನಿಗಳು ತೋರಿದ ಹಾದಿ, ಧಾರ್ಮಿಕ ಗ್ರಂಥಗಳ ವಿಶ್ಲೇಷಣೆಗಳನ್ನು ಅವರು ಸುಮಾರು 30ಕ್ಕೂ ವರ್ಷಗಳ ಕಾಲ ನೀಡಿದರು. 1931ರ ಡಿಸೆಂಬರ್ 11ರಂದು ಪುಣೆಯಲ್ಲಿ ಜನಿಸಿದ ಚಂದ್ರ ಮೋಹನ್ ಜೈನ್ ಬದುಕಿದ್ದು 60 ವರ್ಷಗಳು ಮಾತ್ರ. ಆದರೆ ಈ ಅವಧಿಯಲ್ಲಿ ಪ್ರಪಂಚದ ಎಲ್ಲೆಡೆ ಶಿಷ್ಯರನ್ನು ಸಂಪಾದಿಸಿದ್ದರು. ಪುಣೆಯಲ್ಲಿಯೇ ಅತಿ ದೊಡ್ಡ ಧ್ಯಾನ ಕೇಂದ್ರವನ್ನು ತೆರೆದರು.

ಭಗವಾನ್ ರಜನೀಶ್ ಎಷ್ಟು ದೊಡ್ಡ ಹೆಸರು ಗಳಿಸಿದ್ದರೋ ಅಷ್ಟೇ ಪ್ರಮಾಣದಲ್ಲಿ ಆಸ್ತಿಯನ್ನೂ ಗಳಿಸಿದ್ದರು ಎನ್ನಲಾಗುತ್ತದೆ. ಆಸ್ತಿಪಾಸ್ತಿಯೂ ಅವರ ನಿಧನದ ಬಳಿಕ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ರಜನೀಶ್ ಅವರು ಬದುಕಿನ ಉತ್ತುಂಗ ಕಾಲದಲ್ಲಿದ್ದಾಗ ಸಾಕಷ್ಟು ವಿಲಾಸಿ ಜೀವನವು ಅದರೊಂದಿಗೆ ಥಳುಕು ಹಾಕಿಕೊಂಡಿತ್ತು. ರೋಲ್ಸ್‌ ರಾಯ್‌ ಕಾರುಗಳೆಂದರೆ ಬಹಳ ಪ್ರೀತಿ. ಅವರ ಬಳಿ 80ಕ್ಕೂ ಹೆಚ್ಚು ವಿಲಾಸಿ ಕಾರುಗಳಿದ್ದವು ಎನ್ನುತ್ತವೆ ಮೂಲಗಳು. ಅವರಿಗೆ ಇಂತಹ ಉಡುಗೊರೆಗಳನ್ನು ನೀಡಲು ಗಣ್ಯರು ಸಾಲುಗಟ್ಟುತ್ತಿದ್ದರು.

1980ರ ದಶಕದಲ್ಲಿ ಅವರ ಮೇಲೆ ಅನೇಕ ಆರೋಪಗಳು ಕೇಳಿಬಂದವು. ಅವರನ್ನು ವಿದೇಶದಿಂದ ಗಡೀಪಾರು ಮಾಡಲಾಯಿತು. ಅವರು ಉಪನ್ಯಾಸ ನೀಡುತ್ತಿದ್ದ ಹಲವು ದೇಶಗಳಿಗೆ ಅವರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಓಶೋ ಅವರು ಪುಣೆಗೆ ಮರಳಿ ಮತ್ತೆ ತಮ್ಮ ಕಾರ್ಯಕ್ರಮ ಮುಂದುವರಿಸಿದರು.

ಓಶೋ ಅವರ ಪತಂಜಲಿ ಯೋಗಸೂತ್ರ, ಶಂಕರಾಚಾರ್ಯರ ಭಜ ಗೋವಿಂದಂ ಮೂಢಮತೆ, ಸಂಭೋಗದಿಂದ ಸಮಾಧಿಯ ಕಡೆಗೆ, ಬುದ್ಧನ ‘Diamond Sutra’, ಯೋಗ ಮತ್ತು Insights for a New Way of Living ಮಾಲಿಕೆಯಲ್ಲಿನ Intelligence, Creativity, Awareness, Courage , ಓಶೋ ಶಿಷ್ಯಂದಿರು ಮತ್ತು ಸಾಧಕರಿಗೆ ವಿಷಯಗಳ ಕುರಿತ ನೀಡಿದ ಪ್ರವಚನಗಳು 650ಕ್ಕೂ ಹೆಚ್ಚು ಪುಸ್ತಕಗಳ ರೂಪದಲ್ಲಿ ಮುದ್ರಿತಗೊಂಡಿವೆ ಮತ್ತು ಮೂವತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಮಾಡಲ್ಪಟ್ಟಿವೆ. ಅವರ ಪ್ರವಚನಗಳು, ಧ್ವನಿಮುದ್ರಿಕೆಗಳ ಜಗತ್ತಿನಾದ್ಯಂತದ ಅಪಾರ ಮನ್ನಣೆ ಗಳಿಸಿವೆ.

ಓಶೋ ಹೇಳುತ್ತಾರೆ, ”ನನ್ನ ಸಂದೇಶಗಳು ಯಾವುದೇ ಸಿದ್ಧಾಂತ ಅಥವಾ ಚಿಂತನೆಯನ್ನು ಕುರಿತಾದದ್ದಲ್ಲ. ನನ್ನ ಸಂದೇಶಗಳು ರೂಪಾಂತರಣೆಗಾಗಿನ ರಾಸಾಯನಿಕ ಕ್ರಿಯೆಯಾಗಿದ್ದು ವಿಜ್ಞಾನವೇ ಆಗಿದೆ.”

ಜನವರಿ 19, 1990ರಂದು ಓಶೋ ಅವರು ಕಮ್ಯೂನ್ ಇಂಟರ್ ನ್ಯಾಷನಲ್ ನಲ್ಲಿ ದೇಹತ್ಯಾಗ ಮಾಡಿದರು. ಓಶೋರವರ ಸಮಾಧಿಯ ಮೇಲೆ ಸ್ವರ್ಣ ಅಕ್ಷರಗಳಲ್ಲಿ ಹೀಗೆ ಬರೆಯಲಾಗಿದೆ:
OSHO
Never Born
Never Died
Only Visited This
Planet Earth Between
Dec 11 1931 – Jan 19 1990
ಇಂದಿನ ದಿನಮಾನಗಳಲ್ಲಿ ಅಧ್ಯಾತ್ಮದ ಹೆಸರಿನಲ್ಲಿ ಹಣ, ಅಧಿಕಾರ, ಪ್ರತಿಷ್ಠೆ, ಪ್ರಭಾವ ಗಳನ್ನು ಸಂಪಾದಿಸಿಕೊಳ್ಳುವ ಉದ್ದೇಶವುಳ್ಳ ಕಾರ್ಪೊರೇಟ್ ಗುರುಗಳು ಜನರ ಸಾಮಾನ್ಯ ನಂಬಿಕೆಗಳೊಂದಿಗೆ ಹಾಗೂ ಪ್ರಭುತ್ವದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವರ ಮಧ್ಯೆ ಓಶೋ ವಿಭಿನ್ನ ವಾಗಿ ನಿಲ್ಲುತ್ತಾರೆ.


ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: cknewsnowguest columnindianewsoshoosho birth anniversarypunespiritual guru
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ಭಾರತದ ಸಂಧು ಭುವನ ಸುಂದರಿ

ಭಾರತದ ಸಂಧು ಭುವನ ಸುಂದರಿ

Leave a Reply Cancel reply

Your email address will not be published. Required fields are marked *

Recommended

ಪುಣೆಯಂತೆಯೇ ಬೆಳಗಾವಿ ಶೈಕ್ಷಣಿಕ ನಗರ

ಪುಣೆಯಂತೆಯೇ ಬೆಳಗಾವಿ ಶೈಕ್ಷಣಿಕ ನಗರ

4 years ago
man looking through a microscope

ಕೊನೆಗೂ ಕೋವಿಡ್-19 ಲಸಿಕೆ; 6 ತಿಂಗಳಲ್ಲಿ ತಾತ್ಕಾಲಿಕ ಲೈಸೆನ್ಸ್

6 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ