ಗುಡಿಬಂಡೆಯಲ್ಲಿ 15-18 ವರ್ಷದ ಮಕ್ಕಳಿಗೆ ಲಸಿಕೀಕರಣ; ಶಾಲೆಗಳಲ್ಲೇ ವ್ಯಾಕ್ಸಿನ್
By GS Bharath Gudibande
ಗುಡಿಬಂಡೆ: ದೇಶದಲ್ಲಿ ಕೊರೋನಾ 3ನೇ ಅಲೆ ಭೀತಿಯ ನಡುವೆ ಕೇಂದ್ರ ಸರಕಾರ ಮಕ್ಕಳಿಗೆ ಕೋವಿಡ್ ಲಸಿಕೆ ಹಾಗೂ ಹಿರಿಯರಿಗೆ ಬೂಸ್ಟರ್ ಡೋಸ್ ನೀಡಲು ಮುಂದಾಗಿದೆ.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನಾಳೆ (ಸೋಮವಾರ) 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಅವರು ಸಿಕೆನ್ಯೂಸ್ ನೌ ಗೆ ಮಾಹಿತಿ ನೀಡಿದರು.
ತಾಲೂಕಿನಲ್ಲಿ 1494 ಮಕ್ಕಳಿದ್ದಾರೆ
ಗುಡಿಬಂಡೆ ತಾಲೂಕಿನ ಶಾಲಾ ಕಾಲೇಜುಗಳಿಗೆ ಭೇಟಿ ಮಾಡಿ ಲಸಿಕೆ ನೀಡುತ್ತೇವೆ ಹಾಗೂ 2007ಕ್ಕಿಂತ ಮುಂಚೆ ಜನಸಿದ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ. ಕೋವಿಡ್-19 ರೂಪಾಂತರಿ ವೈರಸ್ ಒಮಿಕ್ರಾನ್ ವಿರುದ್ಧ ಮಕ್ಕಳ ರಕ್ಷಣೆಗೆ ಈ ಲಸಿಕೆ ಪರಿಣಾಮಕಾರಿ ಎಂದು ಡಾ.ನರಸಿಂಹಮೂರ್ತಿ ತಿಳಿಸಿದರು.
ನಮ್ಮ ಆರೋಗ್ಯ ತಂಡವು ಪ್ರತಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ 15-18 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡಲು ತಂಡ ಸಿದ್ದವಾಗಿದೆ. ಹಾಗಾಗಿ ನಾಳೆಯಿಂದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
ಜಿಲ್ಲಾದ್ಯಂತ 16.346 ಮಕ್ಕಳು
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಒಟ್ಟು 16 ಕ್ಕೂ ಹೆಚ್ಚು ಮಕ್ಕಳಿದ್ದಾರೆ, ಎಲ್ಲರಿಗೂ ನಾಳೆಯಿಂದ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ. ಯಾರೂ ಭಯಪಡುವ ಅಗತ್ಯವಿಲ್ಲ, ಎಲ್ಲರೂ ಧೈರ್ಯವಾಗಿ ಲಸಿಕೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಾಳೆ ಆಸ್ಪತ್ರೆಯಲ್ಲಿ 15-18 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ. ನಮ್ಮ ತಂಡ ಪ್ರತಿ ಶಾಲಾ ಕಾಲೇಜುಗಳಿಗೆ ಬೇಟಿ ಮಾಡಿ ಲಸಿಕೆ ನೀಡಲಿದ್ದಾರೆ, ತಾಲೂಕಿನಲ್ಲಿ ಒಟ್ಟು 1494 ಮಕ್ಕಳಿದ್ದಾರೆ. ಯಾರೂ ಭಯ ಪಡೆದು ಅರ್ಹ ಮಕ್ಕಳು ಲಸಿಕೆ ಪಡೆಯಬೇಕು.
ಡಾ.ನರಸಿಂಹಮೂರ್ತಿ, ತಾಲೂಕು ಆರೋಗ್ಯ ವೈದ್ಯಾಧಿಕಾರಿ, ಗುಡಿಬಂಡೆ
Good work 👍👍