• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home POLITICS

“ಕಲ್ಲು ಬಂಡೆಗಳನ್ನೇ ನುಂಗಿ ಜೀರ್ಣ ಮಾಡಿಕೊಂಡವರಿಗೆ ನನ್ನ ಟೀಕೆಗಳನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟವೇ?”

cknewsnow desk by cknewsnow desk
January 3, 2022
in POLITICS, STATE
Reading Time: 2 mins read
0
ನಾಯಿ ಬೊಗಳಿದರೆ ಆನೆ ತಲೆ ಕೆಡಿಸಿಕೊಳ್ಳಲ್ಲ; ಸಿದ್ದರಾಮಯ್ಯ ಅವರದ್ದು ಯಾವ ಪಕ್ಷ? ʼಎಸ್ಎಫ್ʼ ಪಕ್ಷವೇ?
941
VIEWS
FacebookTwitterWhatsuplinkedinEmail

ಕಾಂಗ್ರೆಸ್ ಪಾದಯಾತ್ರೆಯಿಂದ ಮೇಕೆದಾಟು ಮತ್ತಷ್ಟು ಕಗ್ಗಂಟು: HDK ಆತಂಕ

ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆಯೆ ವಿನಾ ಡಿ.ಕೆ.ಶಿವಕುಮಾರ್ ಅಲ್ಲ; ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ

ಮೈಸೂರು: ಮೇಕೆದಾಟು ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಪಾದಯಾತ್ರೆ ಕೇವಲ ಪೊಲಿಟಿಕಲ್ ಗಿಮಿಕ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ನೀರಾವರಿ ವಿಷಯದಲ್ಲಿ ಆದಿಯಿಂದ ಕಾಂಗ್ರೆಸ್ ಪಕ್ಷವು ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ರಾಷ್ಟ್ರೀಯ ಪಕ್ಷವಾದ್ದರಿಂದ ಕಾಂಗ್ರೆಸ್ ಎಂದೂ ಕಾವೇರಿ ವಿಷಯದಲ್ಲಿ ರಾಜ್ಯದ ಪರ ನಿಲ್ಲಲೇ ಇಲ್ಲ ಎಂದು ಕೆಲ ಉದಾಹರಣೆಗಳ ಸಮೇತ ಕೈ ಪಕ್ಷದ ಬಣ್ಣ ಬಯಲು ಮಾಡಿದರು.

  • ಡಿ.ಕೆ.ಶಿವಕುಮಾರ್

ಮಾಧ್ಯಮಗಳ ಜತೆ ಮಾಜಿ ಮುಖ್ಯಮಂತ್ರಿಗಳು ಹಂಚಿಕೊಂಡು ವಿಚಾರಗಳು ಹೀಗಿವೆ;

ಕಾಂಗ್ರೆಸ್ʼನವರು ಮಾಡುವ ಪಾದಯಾತ್ರೆಗೆ ನಾನೇಕೆ ಹತಾಶನಾಗಲಿ? ನಾನು ರಾಜ್ಯದ ಜನತೆಯ ಮುಂದೆ ಇಟ್ಟಿರುವ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಲಿ. ಇವತ್ತು ಟ್ವೀಟ್ʼನಲ್ಲಿ ನಾನು ಪ್ರಸ್ತಾಪ ಮಾಡಿರುವ ಅಂಶಗಳ ಬಗ್ಗೆ ಅವರು ಉತ್ತರ ಕೊಡಲಿ. ಅದರ ಹೊರತಾಗಿ ಯೋಜನೆಯ ಕ್ರೆಡಿಟ್ ಪಡೆಯುವ ಅಗತ್ಯ ನನಗಿಲ್ಲ. ದೇವೇಗೌಡರು ರಾಜ್ಯಕ್ಕಾಗಿ ಎಷ್ಟೆಲ್ಲಾ ಮಾಡಿದ್ದಾರೆ, ಅವರು ಎಂದಾದರೂ ಕ್ರೆಡಿಟ್ ಕ್ಲೈಮ್ ಮಾಡಿದ್ದಾರಾ?

ಕಾವೇರಿ ನೀರಿನ ಹೋರಾಟಕ್ಕೆ ಕಾಂಗ್ರೆಸ್ ಕೊಡುಗೆ ಏನು? ಇವರು ಮೇಕೆದಾಟು ಯೋಜನೆಯನ್ನು ಕಾರ್ಯಗತ ಮಾಡಿಸಲು ಈ ಪಾದಯಾತ್ರೆ ಮಾಡುತ್ತಿದ್ದರೋ ಅಥವಾ ಈ ಪಾದಯಾತ್ರೆ ಮೂಲಕ ಪ್ರಚಾರ ಪಡೆಯಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೋ? ಎನ್ನುವುದು ನನ್ನ ಪ್ರಶ್ನೆ.

ದೆಹಲಿಯಲ್ಲಿ ಕಾಂಗ್ರೆಸ್ ಸರಕಾರ ಇತ್ತು. ರಾಜ್ಯದಲ್ಲಿ ವೀರಪ್ಪ ಮೊಯಿಲಿ ಅವರ ಕಾಂಗ್ರೆಸ್ ಸರಕಾರ ಇತ್ತು. ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯದ ಬಗ್ಗೆ ಇವರು ಕಳಿಸಿದ್ದ ಪ್ರಸ್ತಾವನೆಯನ್ನು ದಿಲ್ಲಿ ಕಾಂಗ್ರೆಸ್ ಸರಕಾರ ತಿರಸ್ಕರಿಸಿತ್ತು. ಆಮೇಲೆ ದೇವೇಗೌಡರು ಸಿಎಂ ಅದ ಮೇಲೆ ರಾಜಧಾನಿಗೆ ದಕ್ಕಬೇಕಿದ್ದ 9 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವ ಬಗ್ಗೆ ಕಳಿಸಿದ್ದ ರಾಜ್ಯದ ಮನವಿಯನ್ನೂ ಪಿ.ವಿ.ನರಸಿಂಹ ರಾವ್ ಸರಕಾರ ವಾಪಸ್ ಕಳಿಸಿತ್ತು. ಆಗ ತಮಿಳುನಾಡು ಒತ್ತಡಕ್ಕೆ ಮಣಿದು ರಾಜ್ಯಕ್ಕೆ ಕೇಂದ್ರವು ಅನ್ಯಾಯ ಮಾಡಿತ್ತು.

ಬಳಿಕ ಅದೇ ತಮಿಳುನಾಡಿನ ಡಿಎಂಕೆ ಪಕ್ಷದ 39 ಸಂಸದರ ಬೆಂಬಲದಿಂದ ದೇವೇಗೌಡರು ಪ್ರಧಾನಿ ಅದರು. ಅಂತಹ ಸಂದರ್ಭದಲ್ಲಿಯೇ ಆ ಸಂಸದರನ್ನು ಒಪ್ಪಿಸಿ ಬೆಂಗಳೂರಿಗೆ 9 ಟಿಎಂಸಿ ನೀರು ತಂದವರು ದೇವೇಗೌಡರು. ಕಾವೇರಿ ಟ್ರಿಬ್ಯೂನಲ್ ರಚನೆ ಆಗಿದ್ದು ವೀರೇಂದ್ರ ಪಾಟೀಲರು ಸಿಎಂ ಆಗಿದ್ದಾಗ. ಆಗ ದೇವೇಗೌಡರು ಸೋತಿದ್ದರು. ಆಗ ಸದನದಲ್ಲಿ ಕಾವೇರಿ ಬಗ್ಗೆ ಮಾತನಾಡುವವರು ಸಿಕ್ಕಿರಲಿಲ್ಲ. ಅವರು ನೀರು ಕೇಳಿಕೊಂಡು ಬಂದ ತಮಿಳುನಾಡು ನೀರಾವರಿ ಸಚಿವರನ್ನು ನಮ್ಮ ಮುಖ್ಯಮಂತ್ರಿ ಹಾಗೂ ನೀರಾವರಿ ಮಂತ್ರಿ ಮಾತನಾಡಲಿಲ್ಲ. ಆ ರಾಜ್ಯದವರು ಕೊನೆಗೆ ಟ್ರಿಬ್ಯೂನಲ್ ರಚನೆಗೆ ಒತ್ತಾಯಿಸಿ ಕೇಂದ್ರದ್ದ ವಿಪಿ ಸಿಂಗ್ ಸರಕಾರಕ್ಕೆ ಮನವಿ ಮಾಡಿದರು. ಕಾಂಗ್ರೆಸ್ ಬೆಂಬಲದಿಂದ ಸರಕಾರ ಮಾಡಿದ್ದ ವಿ.ಪಿ.ಸಿಂಗ್ ಅವರು ತಮಿಳುನಾಡು ಒತ್ತಡಕ್ಕೆ ಮಣಿದರು. ಆಗ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ರಾಮಕೃಷ್ಣ ಹೆಗಡೆ ಅವರೂ ಒಳಗೊಂಡಂತೆ ಎಲ್ಲರೂ ಸೇರಿ ಟ್ರಿಬ್ಯೂನಲ್ ರಚನೆಗೆ ಕಾರಣರಾದರು. ಆಗ ಕಾಂಗ್ರೆಸ್ ಮಾಡಿದ್ದು ಏನು?

  • ಸಿದ್ದರಾಮಯ್ಯ

ಸಿದ್ದರಾಮಯ್ಯ ಕಾವೇರಿ ಇತಿಹಾಸ ಅರಿಯಲಿ

ಸಿದ್ದರಾಮಯ್ಯ ಅವರು ಭಾನುವಾರದಂದು ಕಾವೇರಿ ಇತಿಹಾಸದ ಅರಿವು ಇಲ್ಲದೆ ಒಂದು ಟ್ವೀಟ್ ಮಾಡಿದ್ದಾರೆ. 1968ರಲ್ಲೇ ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ಮಾಡೋಕೆ ಹೋಗಿದ್ದರಂತೆ. ಆಗ ಯಾವುದೋ ಕೋರ್ಟ್ ವ್ಯಾಜ್ಯ ಇತ್ತಂತೆ, ಅದಕ್ಕೆ ಯೋಜನೆ ನಿಂತು ಹೋಯಿತಂತೆ. ಸಿದ್ದರಾಮಯ್ಯ ಅವರು ಆ ಎಲ್ಲ ವಿವರಗಳನ್ನು ಜನರ ಮುಂದೆ ಇಡಬೇಕು ಎನುವುದು ನನ್ನ ಒತ್ತಾಯ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ದೇವೇಗೌಡರ ಅವಿರತ ಹೋರಾಟ

1962ರಲ್ಲಿ ದೇವೇಗೌಡರು ಮೊತ್ತ ಮೊದಲ ಬಾರಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗುತ್ತಾರೆ. ಆಗ ನಿಜಲಿಂಗಪ್ಪ ಅವರು ತಮಿಳುನಾಡಿಗೆ ಹೋಗಿ ಕಾಮರಾಜ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ” ನಾವು ಎಷ್ಟು ಬೇಕಾದರೂ ನೀರು ಕೊಡುತ್ತೇವೆ. ನೀವು ಭತ್ತ ಬೆಳೆದು ನಮಗೆ ಕೊಡಿ” ಎಂದು ಭಾಷಣ ಮಾಡುತ್ತಾರೆ. ನಿಜಲಿಂಗಪ್ಪ ಅವರು ಆಗ ಕರ್ನಾಟಕದ ಸರಕಾರದ ಮುಖ್ಯಮಂತ್ರಿ. ಅವರ ಹೇಳಿಕೆಯನ್ನು ಖಂಡಿಸಿ 1964ರಲ್ಲಿ ದೇವೇಗೌಡರು ವಿಧಾನಸಭೆಯಲ್ಲಿ ಒಂದು ನಿರ್ಣಯ ಮಂಡಿಸುತ್ತಾರೆ. ಆಗ ಅದೇ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಆ ನಿರ್ಣಯ ಮಂಡನೆ ಬೇಡ ಎಂದು ಮನವಿ ಮಾಡುತ್ತಾರೆ. ಅಲ್ಲಿಗೂ ಸುಮ್ಮನಾಗದ ಗೌಡರು 1967-68ರಲ್ಲಿ ಮತ್ತೆ ಇನ್ನೊಂದು ನಿರ್ಣಯವನ್ನು ಮಂಡಿಸುತ್ತಾರೆ. ಅದರ ಫಲವೇ ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳ ನಿರ್ಮಾಣ ಹಾಗೂ ಕಾವೇರಿ ಕೊಳ್ಳದಲ್ಲಿ ಹತ್ತಾರು ಯೋಜನೆಗಳ ಜಾರಿ. ಇದೆಲ್ಲಕ್ಕೂ ಕಾರಣ ದೇವೇಗೌಡರ ಹೋರಾಟ.

1968ರಲ್ಲಿ ಸಿದ್ದರಾಮಯ್ಯ ಅವರು ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ. ಈ ಭಾಗದ ಜನರ ನೋವಿಗೆ ಸ್ಪಂದಿಸಿ ದೇವೇಗೌಡರು ಏನೆಲ್ಲಾ ಹೋರಾಟ ಮಾಡಿಕೊಂಡು ಬಂದರು ಹಾಗೂ ಕೆಆರ್ʼಎಸ್ ಕಟ್ಟುವಾಗಲೇ ಕೇವಲ 90,000 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸುವುದು ಎರಡೂ ರಾಜ್ಯಗಳ ನಡುವೆ ಆಗಿದ್ದ ಒಪ್ಪಂದ ತಿರುಳು. ಎಲ್ಲವನ್ನೂ ಇತಿಹಾಸವೇ ಹೇಳುತ್ತಿದೆ.

ಮೇಕೆದಾಟು ಯೋಜನೆಗೆ ಇವರು ಡಿಪಿಆರ್ ಕೊಟ್ಟೆವು ಎಂದು ಹೇಳಿಕೊಳ್ಳುತ್ತಿದ್ದಾರೆ. 2018ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಮತ್ತು ಭೂ ಸಾರಿಗೆ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರನ್ನು ನಾನು ಮತ್ತು ಹೆಚ್.ಡಿ.ರೇವಣ್ಣ ಭೇಟಿಯಾಗಿದ್ದೆವು. ಆಗ ನಾನು ಮೇಕೆದಾಟು ಬಗ್ಗೆ ಮನವಿ ಕೊಟ್ಟಾಗ ಅವರು ಕೂಡಲೇ ಒಂದು ಸಮಗ್ರ ಯೋಜನಾ ವರದಿ ಸಲ್ಲಿಸಿ ಎಂದು ಹೇಳಿದರು. ಆಗ ರಾಜ್ಯದ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಬಂದಿರಲಿಲ್ಲ. ನಾನೇ ಏಕಾಂಗಿಯಾಗಿ ಹೋಗಿದ್ದೆ. ಅಂದು ಗಡ್ಕರಿ ಅವರಿಗೆ ನಾನು ಮೇಕೆದಾಟು ಯೋಜನೆಯ ಎಲ್ಲ ಅಂಶಗಳನ್ನೂ ಮನವರಿಕೆ ಮಾಡಿಕೊಟ್ಟಿದ್ದೆ.

ಅದಾದ ಮೇಲೆ ಲೋಕಸಭೆ ಚುನಾವಣೆ ನಡೆದು ಹೊಸ ಜಲಶಕ್ತಿ ಸಚಿವರು ಬಂದರು. ಆ ಸಚಿವರ ಬಳಿ ಏನೇನು ಆಗಿದೆ ಎನ್ನುವುದು ನನಗೆ ಗೊತ್ತಿದೆ. ಅವರ ಬಳಿ ಪಾದಯಾತ್ರೆ ಹೊರಟಿರುವವರು ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಈಗ ಅವರೇ ಪಾದಯಾತ್ರೆಗೆ ರಿಹರ್ಸಲ್ ಮಾಡ್ತಾ ಇದ್ದಾರೆ.

ಕಾವೇರಿ ವಿಷಯದಲ್ಲಿ ಏನೂ ಮಾಡಲಾಗದೇ ಇವರ ಪಕ್ಷದ ಅಂದಿನ ಮುಖ್ಯಮಂತ್ರಿ ಅತ್ತುಕೊಂಡು ಕೈಕಟ್ಟಿ ಕೂತಿದ್ದರು. ಆದರೆ, ದೇವೇಗೌಡರು ರಾಜ್ಯಕ್ಕೆ ಅನ್ಯಾಯವಾದರೆ ಆಮರಣ ಉಪವಾಸ ಕೂತರು. 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಅಧಿಕಾರಕ್ಕೆ ಬಂದರು. ಆಗ ಜಂಟಿ ಕಲಾಪದಲ್ಲಿ ರಾಜ್ಯಪಾಲರಿಂದ, ನಮ್ಮ ಭಾಗದ ಕಾವೇರಿ ಕೊಳ್ಳದಲ್ಲಿ ಕಾವೇರಿ ಐ ತೀರ್ಪಿನ ಭಾಗವಾಗಿ ಹೊಸ, ವಿಸ್ತರಣಾ, ಆಧುನೀಕರಣ ಹಾಗೂ ನವೀಕರಣ ಯೋಜನೆಗಳನ್ನು ಕೇಂದ್ರದ ಒಪ್ಪಿಗೆ ಕೋರಿ ಕೆಲಸ ಮಾಡುತ್ತೇವೆ ಅಂತ ಭಾಷಣ ಮಾಡಿಸಿದ್ದಾರೆ. ಆಗ ಅದರ ವಿರುದ್ಧ ನಾನು ಒಂದು ನಿರ್ಣಯವನ್ನು ಕೂಡ ಮಂಡಿಸಿದ್ದೆ.

ಜನರ ಆಶೀರ್ವಾದದಿಂದ ನಮಗೆ ಅಧಿಕಾರ ಸಿಕ್ಕಿದೆ

ಹಾಸನದಿಂದ ಬಂದವರಿಗೆ ಅಧಿಕಾರ ಕೊಟ್ಟು ಸಹಿಸಿಕೊಂಡಿದ್ದೇವೆ. ಈಗ ಈ ಟೀಕೆಗಳನ್ನು ಸಹಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಖಾರವಾಗಿ ಮಾಜಿ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.

“ನಮ್ಮ ದುಡಿಮೆ ಹಾಗೂ ಜನರ ಆಶೀರ್ವಾದದಿಂದ ನಮಗೆ ಅಧಿಕಾರ ಸಿಕ್ಕಿದೆ ವಿನಾ ಇವರಿಂದ ಅಲ್ಲ. ಆ ಜನರ ಕಷ್ಟ ಸುಖ ನೋಡಿದ್ದಕ್ಕೆ ಮತ ನೀಡಿದರು. ಇವರು ಅಧಿಕಾರ ಕೊಟ್ಟರಾ ನಮಗೆ?” ಎಂದು ಅವರು ಪ್ರಶ್ನಿಸಿದರು.

ಅವರು ಕಲ್ಲುಗಳನ್ನೇ ಜೀರ್ಣ ಮಾಡಿಕೊಂಡವರು ನನ್ನ ಟೀಕೆಗಳನ್ನು ಜೀರ್ಣ ಮಾಡಿಕೊಳ್ಳಲಾರರೆ? ಕನಕಪುರದ ಸುತ್ತಮುತ್ತ ಇರುವ ಕಲ್ಲು ಬಂಡೆಗಳನ್ನೆ ನುಂಗಿ ಜೀರ್ಣ ಮಾಡಿಕೊಂಡಿದ್ದಾರೆ ಅವರು. ಇನ್ನು ನನ್ನ ಹೇಳಿಕೆ ಅವರಿಗೆ ಜೀರ್ಣ ಅಗಲ್ಲವೆ? ಎಂದು ಡಿಕೆಶಿಗೆ ಟಾಂಗ್ ಕೊಟ್ಟರು ಹೆಚ್ಡಿಕೆ.

ದೇವೇಗೌಡರ ಪಾದಯಾತ್ರೆ ಮಾಡಿದ್ದಾರೆ ನಿಜ. ಯಾವಾಗ ಸರಕಾರಗಳು ದಾರಿ ತಪ್ಪಿ ಅಧರ್ಮದ ದಾರಿಯಲ್ಲಿ ಹೋಗಿವೆಯೋ ಆಗ ಅವರು ಪಾದಯಾತ್ರೆ ಮಾಡಿದ್ದಾರೆ. ಮೊದಲು ಕುಣಿಗಲ್ʼನಲ್ಲಿ ಒಬ್ಬ ಮುಗ್ದ ಗುಂಡಿಗೆ ಬಲಿಯಾಗಿದ್ದರ ವಿರುದ್ಧ ಪಾದಯಾತ್ರೆ ಮಾಡಿದರು. ನಂತರ ನಂತರ 1983ರಲ್ಲಿ ಇಬ್ಬರು ಗೋಲಿಬಾರ್ʼಗೆ ಇಬ್ಬರು ರೈತರು ಬಲಿಯಾದ್ದನ್ನು ಖಂಡಿಸಿ ವಿಠಲೇನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದರು. ಆದರೆ, ಈಗಿನ ಮೇಕೆದಾಟು ಪಾದಯಾತ್ರೆಯಿಂದ ಯೋಜನೆ ಮತ್ತಷ್ಟು ಜಟಿಲವಾಗುತ್ತದೆ. ಸುಲಭವಾಗಿ ಆಗುವ ಯೋಜನೆ ಕಗ್ಗಂಟಾಗಲಿದೆ. ಪಾದಯಾತ್ರೆ ಬದಲಿಗೆ ದೆಹಲಿಗೆ ಹೋಗಿ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳಬೇಕು. ಈ ಪಾದಯಾತ್ರೆ ಸಂಪೂರ್ಣವಾಗಿ ಪೊಲಿಟಿಕಲ್ ಗಿಮಿಕ್. ಆ ಫೋಟೋಶೂಟ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ರೀತಿಯಲ್ಲಿದೆ. ಅಲ್ಲದೆ, ಪ್ರಶ್ನೆ ಎತ್ತಿದ ನನ್ನನ್ನು ಸಾಹಿತಿಗಳಿದ್ದೀರಿ, ಬುದ್ಧಿವಂತರಿದ್ದೀರಿ ಅನ್ನುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

Tags: cknewsnowCongressDK Shivakumarhd kumaraswamykarnatakamekedatu padayatrenewsPoliticssiddaramaiah
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಚಾಮುಂಡೇಶ್ವರಿ ವಿಶೇಷ ದರ್ಶನಕ್ಕೆ 300 ರೂ.; ಭಕ್ತರ ಆಕ್ರೋಶ

ಚಾಮುಂಡೇಶ್ವರಿ ವಿಶೇಷ ದರ್ಶನಕ್ಕೆ 300 ರೂ.; ಭಕ್ತರ ಆಕ್ರೋಶ

Leave a Reply Cancel reply

Your email address will not be published. Required fields are marked *

Recommended

ಬೆಂಗಳೂರು ಆರೋಗ್ಯಕ್ಕೆ ಟ್ರೀಟ್‌ಮೆಂಟ್:‌  ಎಲ್ಲ ಆಸ್ಪತ್ರೆಗಳು ಬಿಬಿಎಂಪಿ ಕೈತಪ್ಪಿ ಆರೋಗ್ಯ ಇಲಾಖೆ ವ್ಯಾಪ್ತಿಗೆ; ತಜ್ಞರ ವರದಿ ಪಡೆದ ನಂತರ ಕ್ರಮಕ್ಕೆ ಸರಕಾರ ನಿರ್ಧಾರ

ಬೆಂಗಳೂರು ಆರೋಗ್ಯಕ್ಕೆ ಟ್ರೀಟ್‌ಮೆಂಟ್:‌ ಎಲ್ಲ ಆಸ್ಪತ್ರೆಗಳು ಬಿಬಿಎಂಪಿ ಕೈತಪ್ಪಿ ಆರೋಗ್ಯ ಇಲಾಖೆ ವ್ಯಾಪ್ತಿಗೆ; ತಜ್ಞರ ವರದಿ ಪಡೆದ ನಂತರ ಕ್ರಮಕ್ಕೆ ಸರಕಾರ ನಿರ್ಧಾರ

5 years ago
18,00 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

18,00 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ