ದೊಡ್ಡಬಳ್ಳಾಪುರ ಮೂಲದ ವ್ಯಕ್ತಿಗೆ ಸೋಂಕು
by GS Bharath Gudibande
ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದ ಗುಡಿಬಂಡೆ ತಾಲೂಕಿನಲ್ಲಿ ಮೂರನೇ ಅಲೆಯಲ್ಲಿ ಕೋವಿಡ್ ಮೊದಲ ಪ್ರಕರಣ ಪತ್ತೆಯಾಗಿದೆ. ಇದು ತಾಲೂಕಿನ ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದೊಡ್ಡಬಳ್ಳಾಪುರ ಮೂಲದ ವ್ಯಕ್ತಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಆತ ದೊಡ್ಡಬಳ್ಳಾಪುರ ಕ್ಕೆ ವಾಪಸ್ ಹೋಗಿದ್ದಾನೆ. ಈಗ ಆತನಿಗೆ ಪಾಸಿಟಿವ್ ಬಂದಿದ್ದು, ಆ ವ್ಯಕ್ತಿಯನ್ನು ಪತ್ತೆ ಮಾಡಿ ಕ್ವಾರಂಟೈನ್ʼಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಸಿಕೆನ್ಯೂಸ್ ನೌ ಗೆ ಮಾಹಿತಿ ನೀಡಿದ್ದಾರೆ.
ಬಹುತೇಕ ಸುರಕ್ಷಿತವಾಗಿದ್ದ ಗುಡಿಬಂಡೆಯಲ್ಲಿ ಈಗ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದೆ. ಆದರೆ. ಬೇರೆ ತಾಲೂಕಿನ ವ್ಯಕ್ತಿಯಾಗಿದ್ದ ಕಾರಣ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ.
ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು
ತಾಲೂಕಿನ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು, ಅನಾವಶ್ಯಕವಾಗಿ ಯಾರೂ ಓಡಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲಿಸಿ, ಆಗಾಗಿ ಸಾಬೂನಿನಿಂದ ಕೈ ತೊಳೆಯರಿ. ಶೀತ, ಜ್ವರ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಂಡು ಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಅಬ್ಬರ ತಗ್ಗುತ್ತಿದಂತೆ ಎಲ್ಲರೂ ಮಾಸ್ಕ್, ಸಾಮಾಜಿಕ ಅಂತರ ಮರೆತಿದ್ದಾರೆ, ಇನ್ನೇನು ಕೊರೋನಾ ಬರಲ್ಲ ಎಂದುಕೊಂಡಿದ್ದಿವರಿಗೆ ಮತ್ತೆ ಆಂತಕ ಶುರುವಾಗಿದೆ. ಕೊರೋನಾದಿಂದ ಸುರಕ್ಷಿತವಾಗಿರಲು ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ ಎಂದು ತಾಲೂಕು ಆಡಳಿತ ಮನವಿ ಮಾಡಿದೆ.
ದೊಡ್ಡಬಳ್ಳಾಪುರ ಮೂಲದ ವ್ಯಕ್ತಿ ಗುಡಿಬಂಡೆಯಲ್ಲಿ ಆರ್.ಟಿ.ಪಿ.ಸಿ.ಆರ್ ಮಾಡಿಸಿಕೊಂಡಿದ್ದು, ಆತನಿಗೆ ಪಾಸಿಟಿವ್ ಬಂದಿದೆ. ಆದರೆ ಆ ವ್ಯಕ್ತಿ ದೊಡ್ಡಬಳ್ಳಾಪುರ ಕ್ಕೆ ವಾಪಸ್ ಹೋಗಿದ್ದಾನೆ. ಅಲ್ಲಿನ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಆ ವ್ಯಕ್ತಿಯನ್ನು ಐಸೋಲೆಟ್ ಮಾಡಲಾಗಿದೆ. ಇನ್ನ ಸೋಂಕಿತನ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.
ಡಾ.ನರಸಿಂಹಮೂರ್ತಿ, ತಾಲೂಕು ಆರೋಗ್ಯ ವೈದ್ಯಾಧಿಕಾರಿ, ಗುಡಿಬಂಡೆ
ಕೋವಿಡ್ ಎರಡನೇ ಅಲೆ ಅಬ್ಬರ ಕಡಿಮೆಯಾಗಿ ಸರಕಾರಿ ಸ್ವಲ್ಪ ರಿಲ್ಯಾಕ್ಸೇಷನ್ ಕೊಟ್ಟಿತ್ತು. ಆದರೆ ಈಗ ಮೂರನೇ ಅಲೆ ಭೀತಿ ಆರಂಭವಾಗಿದದ್ದರೂ, ಎಲ್ಲರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಲು ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. 15-18 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸಬೇಕು.
ಜಿ.ಎನ್.ನವೀನ್, ಜಿಲ್ಲಾ ಯುವಾಧ್ಯಕ್ಷ, ಜಯ ಕರ್ನಾಟಕ