• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಮಹಾ ಶಿವರಾತ್ರಿ; ನಂದಿಯಲ್ಲಿ ಇಂದು ಶಿವೋತ್ಸವ

cknewsnow desk by cknewsnow desk
March 1, 2022
in STATE
Reading Time: 2 mins read
0
ಮಹಾ ಶಿವರಾತ್ರಿ; ನಂದಿಯಲ್ಲಿ ಇಂದು ಶಿವೋತ್ಸವ
1.1k
VIEWS
FacebookTwitterWhatsuplinkedinEmail

800 ವರ್ಷಗಳ ಹಳೆಯ ಭೋಗ ನಂದೀಶ್ವರ ದೇವಾಲಯ; ಪಾರಂಪರಿಕವಾಗಿ ಆಚರಿಸುತ್ತಿದ್ದ ನಂದಿಜಾತ್ರೆ ಇಂದಿನಿಂದ ನಂದಿಯ ‘ಶಿವೋತ್ಸವ’

by GS Bharath Gudibande

ಚಿಕ್ಕಬಳ್ಳಾಪುರ: ಸುಮಾರು 2000ಕ್ಕೂ ಅಧಿಕ ವರ್ಷಗಳ ಶ್ರೀಮಂತ ಇತಿಹಾಸವಿರುವ ಹೆಗ್ಗಳಿಕೆ ಕನ್ನಡನಾಡಿನದ್ದು. ಚಾಲುಕ್ಯರು, ಹೊಯ್ಸಳರು, ಗಂಗರು ಹಾಗೂ ವಿಜಯನಗರ ಸಾಮ್ರಾಜ್ಯ ಸೇರಿದಂತೆ ಹಲವು ಮಹಾ ಸಾಮ್ರಾಜ್ಯಗಳು ಹಾಗೂ ರಾಜವಂಶಸ್ಥರು ಕನ್ನಡ ನಾಡ (ಕರ್ನಾಟಕ)ನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ, ಭಾಷಾಭಿವೃದ್ಧಿ ಹಾಗೂ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ.

‘ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು’ ಎನ್ನುವ ಚಿತ್ರಗೀತೆಯ ಸಾಲಿನಂತೆ ಕನ್ನಡ ನಾಡು ಕೇವಲ ಭಾಷೆಯಿಂದ ಮಾತ್ರವಲ್ಲದೆ ಹಲವಾರು ವಿಭಿನ್ನ ವಿಶಿಷ್ಟ ಪ್ರದೇಶ, ಸಾಂಸ್ಕೃತಿಕ ಆಚರಣೆಗಳಿಂದಲೂ ಸಹ ಹೆಸರುವಾಸಿಯಾಗಿರುವುದು ಒಂದು ಗಮನಾರ್ಹ ಸಂಗತಿ. ಅಂತಹ ಸಾಂಸ್ಕೃತಿಕ ಆಚರಣೆಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದಲ್ಲಿ ನಡೆಯುವ ಶ್ರೀ ಭೋಗನಂದೀಶ್ವರ ಜಾತ್ರಾ ಮಹೋತ್ಸವವು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ.

ಭೋಗನಂದೀಶ್ವರನ ಇತಿಹಾಸ

ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದ ಅರ್ಚಕರೇ ಹೇಳುವಂತೆ ಕ್ರಿ.ಶ. ಸುಮಾರು 6ನೇ ಶತಮಾನದ ರತ್ನಾವಳಿ ಮಹಾರಾಣಿಯವರು ಭೋಗನಂದೀಶ್ವರ ದೇವರ ಲಿಂಗ ಪ್ರತಿಷ್ಠಾಪನೆ ಮಾಡಿದರು. ಮುಂದುವರೆದು 8 ಹಾಗೂ 9ನೇ ಶತಮಾನದಲ್ಲಿ ಚೋಳ ವಂಶದ ಕೊನೆಯ ರಾಜರಾದ ರಾಜ ರಾಜೇಂದ್ರ ಚೋಳನು ದೇವಾಲಯದ ಕಟ್ಟಡಕ್ಕೆ ಅಡಿಪಾಯ ಹಾಕಿದನು ಎನ್ನಲಾಗಿದೆ.

ನಂತರದ ಹೊಯ್ಸಳ ವಂಶದ ಆಳ್ವಿಕೆಯ ಅವಧಿಯಲ್ಲಿ ನಂದಿಗ್ರಾಮದಲ್ಲಿ ಉಮಾಮಹೇಶ್ವರ ಎಂಬ ಹೆಸರಿನಲ್ಲಿ ಕಲ್ಯಾಣಮಂಟಪ ಒಂದನ್ನು ನಿರ್ಮಿಸಿದ್ದಾರೆ. ಅಂದಿನಿಂದ ಪ್ರತಿವರ್ಷ ಮಹಾಶಿವರಾತ್ರಿಯ ದಿನದಂದು ಗಿರಿಜಾ ಕಲ್ಯಾಣ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮಗಳೆಲ್ಲವೂ ಇದೆ ಕಲ್ಯಾಣಮಂಟಪದಲ್ಲಿ ನಡೆಯುತ್ತವೆ ಎಂಬುದು ವಿಶೇಷ ಆಕರ್ಷಣೆ.

ಹೊಯ್ಸಳರಷ್ಟೇ ಅಲ್ಲದೇ ಗಂಗರು, ಇತರ ರಾಜವಂಶಸ್ಥರಾದ ಪಲ್ಲವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ದೇವಾಲಯದ ಜೀರ್ಣೋದ್ದಾರಕ್ಕೆ ಶ್ರಮಿಸಿ ಕಲೆ ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಡಮರುಗ, ಢಕ್ಕೆ, ಶಿವ ನಟರಾಜ ಸ್ವರೂಪ, ಶಿಲಾಬಾಲಿಕೆ ಹಾಗೂ ವಿಷ್ಣು ದೇವರುಗಳ ಕೆತ್ತನೆಗಳು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ದೇವಾಲಯದ ಜನಪ್ರಿಯತೆಗೆ ಮುನ್ನುಡಿ ಬರೆದಿದ್ದಾರೆ.

ದೇವಾಲಯದ ಅಭಿವೃದ್ಧಿ ಕಾರ್ಯಗಳ ಯಾನವು 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀಕೃಷ್ಣದೇವರಾಯರ ಕಾಲದವರೆಗೂ ಮುಂದುವರೆದಿತ್ತು. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರಾಜಮನೆತನದವರು ಈ ದೇವಾಲಯವನ್ನು ನಿರ್ಮಿಸಿದ್ದು, ಸುಮಾರು 800 ವರ್ಷಗಳ ಅವಧಿಯನ್ನು ನಿರ್ಮಾಣ ಕಾರ್ಯಕ್ಕೆಂದು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ.

ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯ
ಬ್ರಹ್ಮರಥೋತ್ಸವಕ್ಕೆ ಹಿನ್ನೆಲೆ

ಜಾತ್ರೆಯ ಆಚರಣೆಯ ಕುರಿತು ಹೇಳುವುದಾದರೆ. ನಿರ್ದಿಷ್ಟವಾಗಿ ಇಂಥದ್ದೇ ವರ್ಷ ಆಚರಣೆಗೆ ಬಂತೆಂದು ಹೇಳಲಾಗದೇ ಇದ್ದರು ಪುರಾತನ ಕಾಲದಿಂದಲೂ ನಡೆದು ಬಂದಿದೆ ಎನ್ನುತ್ತಾರೆ ಬಲ್ಲವರು. ಜಾತ್ರೆಯ ದಿನಗಳಲ್ಲಿ ಇಲ್ಲಿನ ಜೋಡಿ ಕಲ್ಲಿನ ರಥ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಪ್ರತಿವರ್ಷದ ರಥಸಪ್ತಮಿ ದಿನದಂದು ರಥಕ್ಕೆ ಅಡಿಪಾಯ ಹಾಕಿ ಮುಂದಿನ ಪೌರ್ಣಮಿಯ ದಿನ ರಥ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಯೋಗ ಮತ್ತು ಭೋಗ ನಂದೀಶ್ವರ ಬ್ರಹ್ಮರಥೋತ್ಸವ ತೇರುಗಳನ್ನು ಕಟ್ಟುವ ಕಾರ್ಯವು ಭರದಿಂದ ಸಾಗುತ್ತಿದ್ದು, ರಥದ ಚಕ್ರಗಳಿಗೆ ಅಚ್ಚುಗಳ ಜೋಡಣೆ, 30 ಅಡಿ ಎತ್ತರದ ಗೋಪುರವನ್ನು ಸಾರ್ವೆ ಗೊಜ್ಜು , ಬಿದಿರು, ತೆಂಗಿನ ಪಟ್ಟಿಗಳಿಂದ ರಥವನ್ನು ಕಟ್ಟಲಾಗಿದೆ. ಇದನ್ನು ಶಿವರಾತ್ರಿ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ರಥವನ್ನು ಹಸ್ತಾಂತರಿಸಲಾಗುತ್ತದೆ. ಪ್ರತಿವರ್ಷ ಶಿವರಾತ್ರಿಯ ಮಾರನೆಯದಿನ ಶಿವ ಪಾರ್ವತಿ ಮತ್ತು ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಎರಡು ರಥಗಳ ಜಾತ್ರಾ ಮಹೋತ್ಸವ ಆರಂಭವಾಗಿ ಬಹಳ ವೈಭವೋಪೇತವಾಗಿ ಸಹಸ್ರಾರು ಮಂದಿ ಭಕ್ತಗಣದ ಸಮ್ಮುಖದಲ್ಲಿ ನೆರವೇರುತ್ತದೆ.

ಶ್ರೀ ಪಾರ್ವತಿ ಅಮ್ಮನವರು

ಜಾತ್ರೆಯ ಪ್ರಯುಕ್ತ ಅಂಕುಲದಾರ್ಪಣೆ, ಕಂಕಣಧಾರಣೆ, ಶೇಷವಾಹನ, ವೃಷಭವಾಹನ, ಗಿರಿಜಾ ಕಲ್ಯಾಣ, ಬ್ರಹ್ಮ ರಥೋತ್ಸವ, ಓಕುಳಿ, ವಸಂತೋತ್ಸವ, ಉಯ್ಯಾಲೋತ್ಸವ ಸೇರಿದಂತೆ ವಿಶಿಷ್ಟ ಕಾರ್ಯಕ್ರಮಗಳು ನಡೆದು ಕೊನೆ ದಿನ ವೃಷಭ ಧ್ವಜ ಅವರೋಹಣದೊಂದಿಗೆ ಮುಕ್ತಾಯವಾಗುತ್ತದೆ.
ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಪ್ರತಿ ವರ್ಷವೂ ಶಿವರಾತ್ರಿಯ ಜಾಗರಣೆ ಪ್ರಯುಕ್ತ ನೆರೆದಿರುವ ಭಕ್ತಸಮೂಹಕ್ಕೆ ದೇವಾಲಯ ಆವರಣದಲ್ಲಿ ಧಾರ್ಮಿಕ ಮುಧ ಮತ್ತು ಮನರಂಜನೆ ನೀಡುವ ಸಲುವಾಗಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುತ್ತಿದ್ದವು. ಆದರೆ ಈ ಬಾರಿ ಶಿವೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ವಿಶೇಷವಾಗಿ ಸರಿಗಮಪ ಖ್ಯಾತಿಯ ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಹೆಸರಾಂತ ಹಾಸ್ಯ ಕಲಾವಿದರಿಂದ ನಗೆ ಹಬ್ಬ, ಕೇರಳದ ಖ್ಯಾತ ಚಂಡೆ ವಾದಕರಿಂದ ಚಂಡೆ ವಾದನ, ಹರಿಕಥೆ ಹಾಗೂ ಭಜನೆ ಸೇರಿದಂತೆ ವಿಶೇಷ ಜನಪ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಜಾತ್ರೆ ನಡೆಯುವ ಅಷ್ಟೂ ದಿನಗಳು ರಥ ಬೀದಿಯ ಇಕ್ಕೆಲಗಳಲ್ಲಿ ಆಟಿಕೆ, ತಿಂಡಿ-ತಿನಿಸು, ಪಾನೀಯ ಸೇರಿದಂತೆ ವಿವಿಧ ರೀತಿಯ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಶಿವೋತ್ಸವ ಜಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸುವ ಸಲುವಾಗಿ ಜಿಲ್ಲಾಡಳಿತವು ವಿವಿಧ ಸಮಿತಿಗಳನ್ನು ರಚಿಸುವ ಮೂಲಕ ಭಕ್ತರಿಗೆ ಯಾವುದೇ ರೀತಿಯ ಕೊರತೆ ಬಾರದಂತೆ ನಿಗಾ ವಹಿಸಿದೆ.

ಜಾತ್ರೆಯಲ್ಲಿ ಕುಡಿಯುವ ನೀರಿನ ಪೂರೈಕೆ, ಅನ್ನ ಸಂತರ್ಪಣೆ, ಸ್ವಚ್ಛತಾ ನಿರ್ವಹಣೆ, ಹೆಚ್ಚಿನ ಬಸ್ ಸೌಕರ್ಯ, ಕೃಷಿ ಮತ್ತು ತೋಟಗರಿಕಾ ಬೆಳೆಗಳ ವಸ್ತು ಪ್ರದರ್ಶನ, ಸ್ವ ಸಹಾಯ ಸಂಘಗಳು ಉತ್ಪಾದಿಸಿರುವ ವಸ್ತುಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು ಸಹ ತೆರೆಯಲು ಅನುವು ಮಾಡಿಕೊಡಲಾಗಿದೆ.

ಈ ಜಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಮೊರೆಯಿಡುತ್ತಾರೆ. ಅದರಲ್ಲೂ ನೆರೆ ರಾಜ್ಯವಾದ ಆಂಧ್ರಪ್ರದೇಶದ ಜನರು ಗ್ರಾಮಕ್ಕೆ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುವುದಲ್ಲದೆ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಜನಪ್ರಿಯ ಪ್ರವಾಸಿ ತಾಣ ನಂದಿಬೆಟ್ಟವನ್ನೂ ಕೂಡ ನೋಡಿ ಸವಿಯಬಹುದಾಗಿದೆ.

ಜಾತ್ರೆಗೆ ಬಂದ ಉತ್ತಮ ರಾಸುಗಳಿಗೆ ಬಹುಮಾನ

ಪ್ರತಿ ಶಿವರಾತ್ರಿಗೆ ರಾಜ್ಯದ ವಿವಿಧ ಭಾಗದಿಂದ ಹಳ್ಳಿಕಾರ್, ಅಮೃತ್ ಮಹಲ್, ದೇವಣ್ಣಿ ಹಾಗೂ ಖಿಲ್ಲಾರಿ ಸೇರಿದಂತೆ ವಿವಿಧ ತಳಿ ರಾಸುಗಳನ್ನು ಜಾತ್ರೆಯ ವಾರದ ಮುಂಚೆಯೇ ಕರೆತಂದು ರಾಸುಗಳ ಪ್ರದರ್ಶನ ಇಡಲಾಗುತ್ತದೆ.

ಯಾರು ಏನಂತಾರೆ?

ಆರೋಗ್ಯ ಮತ್ತು ಪಶು ಇಲಾಖೆಯಿಂದ ಪ್ರದರ್ಶನಕ್ಕಿಟ್ಟ ರಾಸುಗಳನ್ನು ತಪಾಸಣೆ ಮಾಡಿ ಉತ್ತಮ ರಾಸುಗಳಿಗೆ ವಿಶೇಷವಾಗಿ ಬಹುಮಾನ ವಿತರಿಸಲಾಗುತ್ತದೆ. ನಂದಿ ಜಾತ್ರೆಯಲ್ಲಿ ಇದು ಅತ್ಯಣತ ಪ್ರಮುಖ ಆಕರ್ಷಣೆ ಆಗಿರುತ್ತದೆ.

ವಿಕಾಸ್ , ಭೋಗ ನಂದೀಶ್ವರ ದೇವಾಲಯದ ಅರ್ಚಕರು


ಕಳೆದ ಎರಡು ವರ್ಷಗಳಿಂದ ಸರ್ಕಾರದಿಂದ ಕೊರೊನಾ ಸೋಂಕು ನಿಯಂತ್ರಣ ಮಾರ್ಗಸೂಚಿಗಳಿರುವ ಕಾರಣ ನಂದಿ ಜಾತ್ರೆಯು ಸಾಂಕೇತಿಕವಾಗಿ ನಡೆದಿತ್ತು. ಈ ಬಾರಿ ಜಿಲ್ಲಾಡಳಿತದಿಂದ ಶಿವೋತ್ಸವ ವಿಜೃಂಭಣೆಯಿಂದ ಆಚರಿಸುತ್ತಿರುವುದು ತುಂಬಾ ಸಂತಸವಾಗಿದೆ.

ಬಾಬು ಆರ್.ಎಲ್., ಸ್ಥಳೀಯ ನಿವಾಸಿ
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಶಿವ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ, ಅಭಿಷೇಕ ಪ್ರಿಯ

ಶಿವ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ, ಅಭಿಷೇಕ ಪ್ರಿಯ

Leave a Reply Cancel reply

Your email address will not be published. Required fields are marked *

Recommended

ಬರಪೀಡಿತ ಗುಡಿಬಂಡೆ ಈಗ ಜಲಪೀಡಿತ!

ಚಿಕ್ಕಬಳ್ಳಾಪುರ ಜನರಿಗೆ ಎಚ್ಚರಿಕೆ ಕೊಟ್ಟ ಎಸ್ಪಿ

4 years ago
ಕನ್ನಡ ಬಿಗ್‌ಬಾಸ್ ಸೀಸನ್ 3 ಸ್ಪರ್ಧಿ, ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಇನ್ನಿಲ್ಲ; ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ನಟಿ

ಕನ್ನಡ ಬಿಗ್‌ಬಾಸ್ ಸೀಸನ್ 3 ಸ್ಪರ್ಧಿ, ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಇನ್ನಿಲ್ಲ; ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ನಟಿ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ