• About
  • Advertise
  • Careers
  • Contact
Wednesday, May 6, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಉಕ್ರೇನ್ʼನಲ್ಲಿ ಸಿಲುಕಿಕೊಂಡ ಗುಡಿಬಂಡೆ ವಿದ್ಯಾರ್ಥಿಗಳು; ಸುರಕ್ಷಿತ ಸ್ಥಳ ತಲುಪಲು 30 ಕಿ.ಮೀ ನಡಿಗೆ

cknewsnow desk by cknewsnow desk
March 4, 2022
in EDITORS'S PICKS, NATION, STATE, WORLD, WORLD
Reading Time: 3 mins read
1
ಉಕ್ರೇನ್ʼನಲ್ಲಿ ಸಿಲುಕಿಕೊಂಡ ಗುಡಿಬಂಡೆ ವಿದ್ಯಾರ್ಥಿಗಳು; ಸುರಕ್ಷಿತ ಸ್ಥಳ ತಲುಪಲು 30 ಕಿ.ಮೀ ನಡಿಗೆ

ಖಾರ್ಕೀವ್ ನ್ಯಾಷನಲ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಗುಡಿಬಂಡೆಯ ನಂದ ಪ್ರಸಾದ್, .

1.8k
VIEWS
FacebookTwitterWhatsuplinkedinEmail

ರಕ್ಷಣೆಗೆ ಬಂದ ಭಾರತದ ಧ್ವಜ, ವಂದೇ ಮಾತರಂ; ಉಕ್ರೇನ್ ಸೇನೆಯಿಂದ ಎಸ್ಕಾರ್ಟ್; ಸದ್ಯಕ್ಕೆ ಹಳ್ಳಿಯೊಂದರಲ್ಲಿ ಆಶ್ರಯ; ಎರಡು ಮೂರು ದಿನಗಳಿಂದ ಊಟವಿಲ್ಲ

by GS Bharath Gudibande

ಗುಡಿಬಂಡೆ: ರಷ್ಯಾ ಮತ್ತು ಉಕ್ರೇನ್ ದೇಶಗಳ‌ ನಡುವೆ ಸಮರ ನಡೆಯುತ್ತಿದ್ದು, ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಕೈಮೀರುತ್ತಿದೆ. ಇನ್ನು ಅನೇಕ ಭಾರತೀಯರು ಯುದ್ಧಪೀಡಿತ ದೇಶದಲ್ಲೇ ಸಿಲುಕಿಕೊಂಡಿದ್ದು, ಅವರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವಿದ್ಯಾರ್ಥಿಗಳೂ ಇದ್ದಾರೆ.

ಖಾರ್ಕೀವ್ ನ್ಯಾಷನಲ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಗುಡಿಬಂಡೆಯ ನಂದ ಪ್ರಸಾದ್, .

ಜಿಲ್ಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್ʼನಲ್ಲಿ ಸಿಲುಕಿಕೊಂಡಿರುವುದಾಗಿ ಮಾಹಿತಿ ಇದ್ದು, ಈ ಪೈಕಿ ಗುಡಿಬಂಡೆ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ನವನೀತ್ ಕುಮಾರ್ ಮತ್ತು ಕಂಬಾಲಹಳ್ಳಿಯ ನಂದ ಪ್ರಸಾದ್ ಆ ದೇಶದಿಂದ ಸ್ವದೇಶಕ್ಕೆ ವಾಪಸ್ಸಾಗಲು ಒದ್ದಾಡುತ್ತಿದ್ದಾರೆ.

ಜತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳು ಯುದ್ಧಭೂಮಿಯಲ್ಲಿ ಸಿಲುಕಿದ್ದಾರೆ ಎಂದು ಅವರ ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ.

ವೈದ್ಯ ಶಿಕ್ಷಣಕ್ಕೆಂದು ಉಕ್ರೇನ್ʼನ ವಿವಿಧ ಮೆಡಿಕಲ್‌ ಕಾಲೇಜುಗಳಿಗೆ ಸೇರಿಕೊಂಡಿದ್ದರು ಇವರು.‌ ಈಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಅದು ದಿನೇದಿನೆ ತೀವ್ರವಾಗುತ್ತಿದೆ. ಶಿಕ್ಷಣಕ್ಕಿಂತ ನಮಗೆ ನಮ್ಮ ಮಗನೇ ಮುಖ್ಯ.‌ ಅವರವರ ದ್ವೇಷಗಳಿಗೆ ನಮ್ಮ ಮಕ್ಕಳನ್ನು ಹಿಂಸಿಸುವುದು ಸರಿಯಲ್ಲ ಎಂದು ಪೋಷಕರು ಅಳಲು  ತೋಡಿಕೊಂಡಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಶೆಲ್‌, ಬಾಂಬ್‌, ಕ್ಷಿಪಣಿ ದಾಳಿ ನಡೆಸುತ್ತಿರುವುದು ಹಾಗೂ ಶೆಲ್‌ ದಾಳಿಗೆ ಹಾವೇರಿ ವಿದ್ಯಾರ್ಥಿ ನವೀನ್‌ ಮೃತಪಟ್ಟಿರುವುದು ಪೋಷಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಹೀಗಾಗಿ ತಮ್ಮ ಮಕ್ಕಳನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್‌ ಕರೆತರುವಂತೆ ಅವರೆಲ್ಲರೂ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಮನವಿ ಮಾಡುತ್ತಿದ್ದಾರೆ.

ಖಾರ್ಕೀವ್‌ ನ್ಯಾಷನಲ್‌ ಮೆಡಿಕಲ್‌ ಕಾಲೇಜ್‌ ವಿದ್ಯಾರ್ಥಿ ನಂದ ಪ್ರಸಾದ್‌ ಅವರ ಕುಟುಂಬದ ಜತೆ ತಹಸೀಲ್ದಾರ್‌ ಸಿಗ್ಬತ್‌ ವುಲ್ಲಾ.

ಧೈರ್ಯ ತುಂಬಿದ ತಹಶೀಲ್ದಾರ್

ಇದೇ ವೇಳೆ ಗುಡಿಬಂಡೆ ತಹಸೀಲ್ದಾರ್ ಸಿಬ್ಗತ್ ವುಲ್ಲಾ ಅವರು ಉಕ್ರೇನ್ʼನಲ್ಲಿ ಸಿಲುಕಿಕೊಂಡಿರುವ ಗುಡಿಬಂಡೆ ತಾಲೂಕಿನ ಇಬ್ಬರು ವಿದ್ಯಾರ್ಥಿಗಳ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ಅವರು ಚರ್ಚಿಸಿದ್ದಾರೆ.

ಯುದ್ಧಪೀಡಿತ ದೇಶದಿಂದ ನಿಮ್ಮ ಮಕ್ಕಳನ್ನು ಕರೆತರುವ ಎಲ್ಲ ಪ್ರಯತ್ನಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾಡುತ್ತಿದ್ದು, ನೀವು ನಿಶ್ಚಿಂತೆಯಿಂದ ಇರಿ ಎಂದು ಅವರು ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ, ಅವರು ಇಬ್ಬರು ವಿದ್ಯಾರ್ಥಿಗಳನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ಅವರಿಬ್ಬರೂ ತಮಗಾಗುತ್ತಿರುವ ತೊಂದರೆಯನ್ನು ಎಳೆಎಳೆಯಾಗಿ ತೋಡಿಕೊಂಡಿದ್ದಾರೆ.


ಉಕ್ರೇನ್ʼನಲ್ಲಿರುವ ಕನ್ನಡಿಗರ ಪರಿಸ್ಥಿತಿ ಭಯಾನಕವಾಗಿದೆ. ಅವರೆಲ್ಲರೂ ಭಯದ ವಾತಾವರಣದಲ್ಲಿ ಉಸಿರು ಅಂಗೈಯ್ಯಲ್ಲಿಟ್ಟುಕೊಂಡು ಊಟ ನೀರಿಲ್ಲದೆ ಪರದಾಡುತ್ತಿದ್ದಾರೆ. ಗುಡಿಬಂಡೆ ತಾಲೂಕಿನ ನಂದ ಪ್ರಸಾದ್ ಎಂಬ ವೈದ್ಯ ವಿದ್ಯಾರ್ಥಿ ಹಾಗೂ ಅವರ ಜತೆಗಿರುವ ಭಾರತೀಯ ವಿದ್ಯಾರ್ಥಿಗಳು ಎರಡು ದಿನಗಳಿಂದ ಊಟವಿಲ್ಲದೆ  ಪರದಾಡುತ್ತಿದ್ದಾರೆ. ಅವರನ್ನು ರಕ್ಷಿಸಲು ಭಾರತ ಸರಕಾರ ಮುಂದಾಗಬೇಕು ಎಂದು ನಂದ ಪ್ರಸಾದ್ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಅಲ್ಲಿನ ಪರಿಸ್ಥಿತಿ ಭಯಾನಕ

ಉಕ್ರೇನ್ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅಲ್ಲಿ ಕ್ಷಣಕ್ಷಣಕ್ಕೂ ಜೀವಗಳು ಹೋಗುತ್ತಿವೆ. ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದಂತೆ ಆಹಾರ ಸಾಮಗ್ರಿಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಲಾಗಿತ್ತು. ಅವೆಲ್ಲ ಮುಗಿದು ಹೋಗಿವೆ. ಈಗ ಊಟವಿಲ್ಲದೆ ಅವರೆಲ್ಲರೂ ಒದ್ದಾಡುತ್ತಿದ್ದಾರೆ. ಅಲ್ಲಿನ ಬಂಕರ್ʼಗಳಲ್ಲಿ ಪ್ರಾಣ ಉಳಿಸಿಕೊಳ್ಳಲು ಹರಸಾಹಸ  ಪಡುತ್ತಿರುವುದಾಗಿ ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಉಕ್ರೇನ್ ಸೇನೆಯಿಂದ ಎಸ್ಕಾರ್ಟ್

ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಉಕ್ರೇನ್ ಸೇನೆ ಎಸ್ಕಾರ್ಟ್ ಮಾಡಿದೆ ವಿದ್ಯಾರ್ಥಿಗಳಿಬ್ಬರು ತಿಳಿಸಿದ್ದಾರೆ. ಆದರೆ, ಎಲ್ಲೇ ಹೋದರೂ ಸುರಕ್ಷತೆ ಬಗ್ಗೆ ಖಾತರಿ ಇಲ್ಲ. ಹೀಗಾಗಿ ಭಾರತ ಸರಕಾರ ನಮ್ಮ ಆದಷ್ಟು ಬೇಗ ರಕ್ಷಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿ ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂದು, ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆಗಳನ್ನು ಕೂಗುತ್ತಾ ನಡೆದಿದ್ದಾರೆ.

ಯುದ್ಧಪೀಡಿತ ಉಕ್ರೇನ್‌ʼನ ಖಾರ್ಕೀವ್‌ʼನಿಂದ 30 ಕಿ.ಮಿ.ನಡೆದ 1000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು.
ಗುಡಿಬಂಡೆಯ ನಂದ ಪ್ರಸಾದ್‌, ನವನೀತ್‌ ಪ್ರಸಾದ್‌ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ಯಾರ್ಥಿಗಳೂ ಇವರಲ್ಲಿದ್ದಾರೆ. pic.twitter.com/27Eef0Z38Z

— cknewsnow.com (@cknewsnow) March 4, 2022

ಉಕ್ರೇನ್‌ ಸೇನೆ ಇವರೆಲ್ಲರಿಗೂ ಎಸ್ಕಾರ್ಟ್‌ ಕೊಟ್ಟು ʼಪಿಶೋಚಿನ್ʼ ಎಂಬ ಸ್ಥಳವನ್ನು ತಲುಪಿಸಿದೆ. ಭಾರತೀಯ ರಾಯಭಾರ ಕಚೇರಿ ಇವರ ಸಂಪರ್ಕದಲ್ಲಿದ್ದು, ಎಲ್ಲರೂ ಸುರಕ್ಷಿತವಾಗಿ ಭಾರತ ತಲುಪಲಿ ಎಂದು @cknewsnow ಪ್ರಾರ್ಥಿಸುತ್ತದೆ.#UkraineWar #UkraineUnderAttaсk #Russia #India @Bharath_Gs17 @pkcklb

— cknewsnow.com (@cknewsnow) March 4, 2022

ಎರಡು ಮೂರು ದಿನಗಳಿಂದ ಊಟವಿಲ್ಲ

ನಂದಪ್ರಸಾದ್ ಪ್ರತಿಭಾವಂತ ಹುಡುಗ. ವೈದ್ಯನಾಗಬೇಕು, ಜನರ ಸೇವೆ ಮಾಡಬೇಕು ಎಂಬ ಆಸೆಯಿಂದ, ಉಕ್ರೇನ್ ನಲ್ಲಿ ಶಿಕ್ಷಣಕ್ಕಾಗಿ ಹೋಗಿದ್ದಾನೆ, ಆದರೆ ಇಂತಹ ಪರಿಸ್ಥಿತಿ ಎದುರಿಸುತ್ತಿರುವುದು ನನಗೆ ಆತಂಕ ಉಂಟು ಮಾಡಿದೆ. ನಂದಪ್ರಸಾದ್ ಅವರ ತಂದೆ, ತಾಯಿ ಮಗನ ಬಗ್ಗೆ ತೀವ್ರ ಆತಂಕಗೊಂಡಿದ್ದಾರೆ. ಅವರ ಆರೋಗ್ಯವೂ ಸರಿ ಇಲ್ಲ. ಈಗಿನ ಉಕ್ರೇನ್ ಪರಿಸ್ಥಿತಿ ನೋಡಿದರೆ ಭಯವಾಗುತ್ತಿದೆ.

  • ‌ನಂದಪ್ರಸಾದ್ ಅವರ ಭಾರತೀಯ ಸಹಪಾಠಿಗಳು.

ಉಕ್ರೇನ್ ನಲ್ಲಿ ನಂದ ಪ್ರಸಾದ್ ಸಿಲುಕಿಕೊಂಡು ನರಕಯಾತನೆ ಅನುಭವಿಸುತ್ತಿದ್ದಾನೆ. ಎರಡು ಮೂರು ದಿನಗಳಿಂದ ಊಟವಿಲ್ಲ, ಯಾರು ಅವರ ಸಹಾಯಕ್ಕೆ ಬರುತ್ತಿಲ್ಲ. 448ಕ್ಕೂ ಹೆಚ್ಚು ಭಾರತೀಯರು ಇದ್ದಾರೆ. ಪ್ರಸ್ತುತ ಪಿಶ್ಚಿಯಾನ್ ಎಂಬ ಉಕ್ರೇನ್ ನ ಗ್ರಾಮವೊಂದರಲ್ಲಿದ್ದಾರೆ. ಭಾರತೀಯರು ತಮ್ಮನ್ನು ರಕ್ಷಿಸಿಕೊಳ್ಳಲು ಅಲ್ಲಿನ ರೈಲ್ವೇ ನಿಲ್ದಾಣಕ್ಕೆ ಬಂದು 5-6 ತಾಸು ಪ್ರಯತ್ನ ಮಾಡಿದರೂ ಉಪಯೋಗವಾಗಿಲ್ಲ. ಉಕ್ರೇನ್ ದೇಶದ ಮಕ್ಕಳಿಗೆ, ಹಿರಿಯರಿಗೆ ಆದ್ಯತೆ ನೀಡಿದ ಕಾರಣ ನಮಗೆ ಉಕ್ರೇನ್ ಗಡಿ ಪ್ರದೇಶಕ್ಕೆ ತಲುಪಲು ಸಾಧ್ಯವಾಗಿಲ್ಲ. ನಂತರ ಭಾರತ ಸರಕಾರ ನಮಗೆ ಹೇಗಾದರೂ ಮಾಡಿ ಗಡಿ ಪ್ರದೇಶಕ್ಕೆ ಬಂದು ಬಿಡಿ ಎಂದು ಮಾಹಿತಿ ನೀಡಿದೆ. ಹಾಗಾಗಿ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣದಿಂದ ನಡೆದುಕೊಂಡು ಹೊಗಲು ಪ್ರಯತ್ನ ಮಾಡಿದ್ದಾರೆ. ಹೋಗುವ ದಾರಿಯಲ್ಲಿ ಯುದ್ಧ ವಿಮಾನಗಳ ಹಾರಾಟ, ಧ್ವಂಸವಾಗಿರುವ ರಸ್ತೆಗಳು, ಭಯಾನಕ ವಾತಾವರಣದಲ್ಲಿದ್ದಾಗ ಉಕ್ರೇನ್ ಸೇನೆ ಇವರಿಗೆ ಎಸ್ಕಾರ್ಟ್ ಮಾಡಿ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಪ್ರಯತ್ನ ಮಾಡಿದೆ. ಪ್ರಸ್ತುತ ಉಕ್ರೇನ್ ದೇಶದ ಪಿಶ್ಚಿಯಾನ್ ಗ್ರಾಮದಲ್ಲಿ ತಂಗಿದ್ದಾರೆ ಎಂಬ ಮಾಹಿತಿಯನ್ನು ನಂದಪ್ರಸಾದ್ ಅವರ ಸಂಬಂಧಿ ಮೂರ್ತಿ ಅವರು ಸಿಕೆನ್ಯೂಸ್ ನೌ ಜತೆ ಹಂಚಿಕೊಂಡಿದ್ದಾರೆ.

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ತೆರಿಗೆ ಸಂಗ್ರಹದ ಲೆಕ್ಕ ಪರಿಶೀಲನೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ: ಪೆಟ್ರೋಲ್,  ಡೀಸೆಲ್‌ನಿಂದ 15,861 ಕೋಟಿ ರೂ. ಟ್ಯಾಕ್ಸ್‌ ಕಲೆಕ್ಷನ್‌

75,000 ಕೋಟಿ ರೂ. ಸಾಲಕ್ಕೆ ಸರಕಾರ ಐಡಿಯಾ

Comments 1

  1. G V GANGAPPA says:
    4 years ago

    ಬರೀ ಪುಕ್ಕಟೆ ಪ್ರಚಾರ ಮಾಡಿ ವೋಟು ಗಿಟ್ಟ ಸಿಕೊಳ್ಳಲು ಆಪರೇಷನ್ ಗಂಗಾ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಪ್ರಚರಿಸಿ ಭಾರತದ ಸಾಮಾನ್ಯರ ಜೀವಗಳ ವೇಲೆ ಆಟ ಆಡುತ್ತಿರುವ ಅಸಮರ್ಥ ಕೇಂದ್ರ ಸರ್ಕಾರಕ್ಕೆ ಮಕ್ಕಳ ಹಸಿವಿನ ಶಾಪ ತಟ್ಟಲಿದೆ.

    Reply

Leave a Reply Cancel reply

Your email address will not be published. Required fields are marked *

Recommended

ರಾಜ್ಯ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ; ರಾಜ್ಯದ 31 ಜಿಲ್ಲೆಗಳಲ್ಲಿ ಖೇಲೊ ಇಂಡಿಯಾ ಕೇಂದ್ರಗಳ ಸ್ಥಾಪನೆ ಮಾಡಲು ಅನುಮೋದನೆ

ರಾಜ್ಯ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ; ರಾಜ್ಯದ 31 ಜಿಲ್ಲೆಗಳಲ್ಲಿ ಖೇಲೊ ಇಂಡಿಯಾ ಕೇಂದ್ರಗಳ ಸ್ಥಾಪನೆ ಮಾಡಲು ಅನುಮೋದನೆ

5 years ago
ಸೋವಿಯತ್‌ ಹಾದಿಯಲ್ಲಿ ಚೀನಾ

ಸೋವಿಯತ್‌ ಹಾದಿಯಲ್ಲಿ ಚೀನಾ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ