• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಸೇವೆಯನ್ನು ದೈವ ಎಂದು ನಂಬಿದ್ದೇನೆ: ಶಾಸಕ ಎಸ್.ಎನ್.‌ಸುಬ್ಬಾರೆಡ್ಡಿ

cknewsnow desk by cknewsnow desk
May 7, 2022
in STATE, TALK
Reading Time: 1 min read
0
ಬಾಗೇಪಲ್ಲಿ ನಂತರ ಗುಡಿಬಂಡೆಯಲ್ಲಿ ನಾಳೆ ಶಾಸಕರಿಂದ 35,000 ಫುಡ್‌ ಕಿಟ್‌ ವಿತರಣೆ
1.3k
VIEWS
FacebookTwitterWhatsuplinkedinEmail

ಇಂದು ಶಾಸಕರ ಜನ್ಮದಿನ; ಸಿಕೆನ್ಯೂಸ್‌ ನೌ ಜತೆ ಚಿಟ್‌ಚಾಟ್

by GS Bharath Gudibande

ಗುಡಿಬಂಡೆ: ಸಮಾಜಕ್ಕಾಗಿ ಬದುಕುವುದರಲ್ಲಿ ಇರುವ ಸಂತೋಷ ಮತ್ಯಾವುದರಲ್ಲೂ ಇಲ್ಲ ಎಂಬುದು ನಾನು ನಂಬಿರುವ ತತ್ತ್ವ. ಇದೇ ದಿಕ್ಕಿನಲ್ಲಿ ನನ್ನ ಜೀವನವನ್ನು ರೂಪಿಸಿಕೊಂಡಿದ್ದೇನೆ ಎಂದು ಶಾಸಕ ಎಸ್.ಎನ್.‌ ಸುಬ್ಬಾರೆಡ್ಡಿ ಹೇಳಿದ್ದಾರೆ.

೫೬ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಿಕೆನ್ಯೂಸ್‌ ನೌ ಜತೆ ಮಾತನಾಡಿದ ಅವರು, ತಮ್ಮ ಬದುಕಿನ ಮಜಲುಗಳನ್ನು, ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡರಲ್ಲದೆ ಮುಂದಿನ ದಿನಗಳಲ್ಲಿಯೂ ಬಾಗೇಪಲ್ಲಿ ಕ್ಷೇತ್ರದ ಜನರ ಸೇವೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.

ತಮ್ಮ ಜೀವನದ ಬಗ್ಗೆ ಹಾಗೂ ತಾವು ಎದುರಿಸಿದ ಸವಾಲುಗಳ ಬಗ್ಗೆ ಅವರು ಹೇಳಿದ್ದಿಷ್ಟು;

ಒಂದು ದಶಕದ ಹಿಂದೆ ಬಾಗೇಪಲ್ಲಿ ಅಂದರೆ ಹಿಂದುಳಿದ, ಬರಪೀಡಿತ ಕ್ಷೇತ್ರವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜನರು ಸಂಕಷ್ಟಕ್ಕೆ ಸಿಲುಕಿ, ಜಾನುವಾರಗಳಿಗೆ ಮೇವು ಇಲ್ಲದೆ ಪರದಾಡುತ್ತಿದ್ದ ಸಂದರ್ಭವಿತ್ತು. ಕೇತ್ರದ ಜನರಿಗೆ ಹೊಸ ಭರವಸೆ, ಜೀವನದ ಆಶಾ ಭಾವನೆ ಮೂಡಿಸಿ ಅವರಲ್ಲಿ ಭವಿಷ್ಯದ ಬಗ್ಗೆ ಆಶಾಕಿರಣ ಮೂಡಿಸುವುದು ನನ್ನ ಉದ್ದೇಶವಾಗಿತ್ತು. ಸಾಕಷ್ಟು ಸಮಸ್ಯೆಗಳ ನಡುವೆ ಒದ್ದಾಡುತ್ತಿದ್ದ ಜನರಿಗೆ ನನ್ನ ಕೈಲಾದ ನೆರವು ನೀಡುತ್ತಾ ಬಂದೆ. ಕ್ಷೇತ್ರದ ಯಾವುದೇ ಭಾಗದಿಂದ ಜನರು ಕಷ್ಟ ಎಂದು ಬಂದರೆ ನಾನು ಅವರನ್ನು ವಿಚಾರಿಸಿ ಅವರ ಸಮಸ್ಯೆಗೆ ಪರಿಹಾರ ಒದಗಿಸುತ್ತಿದ್ದೆ.

ನನ್ನದು ಮೂಲತಃ ಬಾಗೇಪಲ್ಲಿ ತಾಲೂಕೇ ಆಗಿದ್ದರೂ ಸಮಾಜ ಸೇವೆಯ ಉದ್ದೇಶದೊಂದಿಗೆ ನಾನು 2003ರಲ್ಲಿ ಬಾಗೇಪಲ್ಲಿಗೆ ಹೋದೆ. ಆಗ ಜನರು ತೋರಿಸಿದ ಪ್ರೀತಿಗೆ ಸೋತೆ. ಕ್ಷೇತ್ರದ ಜನರೇ ನನ್ನ ಕುಟುಂಬ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೂ ಕೇತ್ರದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತೇನೆ. ಶಾಸಕನಾಗುವುದಕ್ಕೆ ಮೊದಲು, ಶಾಸಕನಾದ ನಂತರವೂ ನಾನು ನಿತ್ಯವೂ ಜನ ಸಂಪರ್ಕ ಇದ್ದೇ ಇರುತ್ತದೆ. ಇದನ್ನು ನಾನೆಂದು ತಪ್ಪಿಸುವುದಿಲ್ಲ.

ನನ್ನ ಮನೆಯಲ್ಲಿ ಎಲ್ಲರೂ ಸಮಾನರೇ: ಶಾಸಕ ಎಸ್.‌ಎಸ್‌.ಸುಬ್ಬಾರೆಡ್ಡಿ #ಎಸ್_ಎಸ್‌_ಸುಬ್ಬಾರೆಡ್ಡಿ pic.twitter.com/oF3D8a3HEu

— cknewsnow.com (@cknewsnow) May 6, 2022

ಬಾಗೇಪಲ್ಲಿ ಟು ಬೆಂಗಳೂರು

ನಾನು ಮೂಲತಃ ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದವನು. ನನ್ನ ತಂದೆ ನಂಜರೆಡ್ಡಿ, ತಾಯಿ ಆದಿಲಕ್ಷ್ಮಮ್ಮ. ನಾವು ನಾಲ್ವರು ಮಕ್ಕಳು. ಅತ್ಯಂತ ಕಡು ಬಡತನದ ಕುಟುಂಬ ನಮ್ಮದು. 1966ರಲ್ಲಿ ನಾನು ಹುಟ್ಟಿದೆ.  ತಂದೆಯವರು ನನಗೆ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಕೊಡಿಸಿದರು. ಸರಕಾರಿ ಶಾಲೆಯಲ್ಲೇ ನನ್ನ ಓದು. ಮಧ್ಯಾಹ್ನದ ಊಟ ಇರಲಿಲ್ಲ, ಸಮವಸ್ತ್ರ ಕೊಡುತ್ತಿರಲಿಲ್ಲ. ಬೆಳಗ್ಗೆ ಮುದ್ದೆ ತಿಂದು ಹೊರಟರೆ ಮತ್ತೆ ಊಟ ಅಂದರೆ ರಾತ್ರಿಯೇ. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಗೂಳೂರಿನಲ್ಲಿ ಮುಗಿಸಿ, ನಂತರ ಪದವಿಪೂರ್ವ ಶಿಕ್ಷಣವನ್ನು ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಪೂರೈಸಿದೆ. ಪ್ರೌಢಶಾಲೆ ವ್ಯಾಸಂಗ ಮುಗಿಸುವ ತನಕ ಬಹಳ ಕಷ್ಟಪಟ್ಟಿದ್ದೇನೆ. ಆ ಕಷ್ಟಗಳನ್ನು ನೆನಪಿಟ್ಟುಕೊಂಡೇ ಇವತ್ತು ನಾನು ಈ ಸೇವಾಕಾರ್ಯಗಳಲ್ಲಿ ತೊಡಗಿದ್ದೇನೆ.

ನಂತರ ಕುಟುಂಬ ಪೋಷಣೆಗಾಗಿ ಬಾಗೇಪಲ್ಲಿ ಬಿಟ್ಟು ಸ್ನೇಹಿತ ರಾಮಕೃಷ್ಣ ಅವರ ಜತೆಗೂಡಿ ಬೆಂಗಳೂರಿಗೆ ಬಂದೆ. ಅಲ್ಲಿ ಓದುತ್ತಲೇ ಪಾರ್ಟ್‌ ಟೈಂ ಜಾಬ್‌ ಮಾಡಿದೆ. ಕಷ್ಟದ ದಿನಗಳಲ್ಲಿ ಬಾರ್ʼವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಪ್ರತಿಯೊಂದು ಪೈಸೆಪೈಸೆ ಸೇರಿಸಿ 20 ಸಾವಿರ ಹಣವನ್ನು ಕೂಡಿಟ್ಟು ಸ್ನೇಹಿತನ ಜೊತೆಗೆ ಸೇರಿ 40 ಸಾವಿರ ರೂಪಾಯಿ ಹಣದಿಂದ ʼಶ್ರೀನಿವಾಸ ಬಾರ್ ಅಂಡ್‌  ರೆಸ್ಟೋರೆಂಟ್ʼ ಅನ್ನು ಖರೀದಿಸಿ ನನ್ನ ವ್ಯಾಪಾರ ಆರಂಭ ಮಾಡಿದೆ. ನಂತರ ಗುರುಗಳೊಬ್ಬರ ಸಲಹೆಯಂತೆ ಶ್ರೀನಿವಾಸ ಬಾರ್‌ʼಗೆ ʼಭಗಿನಿʼ ಎಂದು ಹೆಸರಿಟ್ಟೆ. ಈ ವ್ಯಾಪಾರದಲ್ಲಿ ನಾನು ಒಂದೇ ದಿನ ಸಾಹುಕಾರನಾಗಲಿಲ್ಲ. ಹಂತ ಹಂತವಾಗಿ ಬೆಳೆದೆ. ಒಂದೊಂದೇ ಮೆಟ್ಟಿಲು ಹತ್ತಿದೆ. ಒಮ್ಮೆಲೆ ಎರಡೆರಡು ಮೆಟ್ಟಿಲು ಹತ್ತಿದವನಲ್ಲ. ಇದು ನಾನು ಕಲಿತ ಜೀವನ ಪಾಠ.

ನಂತರ ನನ್ನ ಮದುವೆ ಶೀಲಾ ಅವರೊಂದಿಗೆ ನೆರೆವೇರಿತು. ಅವರು ಮಧ್ಯಮ ವರ್ಗದ ಕುಟುಂಬದ ಹೆಣ್ಣುಮಗಳು. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಅಲ್ಲಿಂದ ನನ್ನ ವ್ಯಾಪಾರ ಚೆನ್ನಾಗಿ ಬೆಳೆಯುತ್ತಾ ಹೋಯಿತು. ನನ್ನ ಶ್ರಮ, ಬದ್ಧತೆ, ಪ್ರಾಮಾಣಿಕತೆ ನನ್ನ ಕೈ ಹಿಡಿಯಿತು. ಅಲ್ಲಿಂದ ನಾನು ಹಿಂದಿರುಗಿ ನೋಡಿದ್ದೇ ಇಲ್ಲ. ಹುಟ್ಟಿದ ಊರಿಗೆ ಹಾಗೂ ಕ್ಷೇತ್ರದ ಜನರಿಗೆ ಸೇವೆ ಮಾಡಲು ಇದು ಪ್ರೇರಣೆ ಆಯಿತು. ಪುನಾ ನಾನು ಬೆಂಗಳೂರಿನಿಂದ ಬಾಗೇಪಲ್ಲಿ ಕಡೆ ಬರುವಂತಾಯಿತು.

2006ರಲ್ಲಿ ನಾನು ಬಾಗೇಪಲ್ಲಿ ಕ್ಷೇತ್ರಕ್ಕೆ ಬಂದೆ. ʼಸುಬ್ಬಾರೆಡ್ಡಿ ಚಾರಿಟೆಬಲ್ ಟ್ರಸ್ಟ್ʼ ಮೂಲಕ 3,800ಕ್ಕೂ ಹೆಚ್ಚು ಉಚಿತ ಮದುವೆ ಕಾರ್ಯಕ್ರಮಗಳು, 1,800ಕ್ಕೂ ಹೆಚ್ಚು ಜೋಡಿಗಳ ಜೀವನಕ್ಕಾಗಿ ಹಸುಗಳನ್ನು ನೀಡಿದ್ದೇನೆ. ಅಷ್ಟೂ ಕುಟುಂಬಗಳಿಗೆ ಜೀವನಾಧಾರ ಆಗಿದೆ. ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕು ಕೇಂದ್ರಗಳಿಗೆ ಉಚಿತ ಆಂಬ್ಯುಲೆನ್ಸ್, ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಪ್ರತೀ ವರ್ಷ ಕ್ಷೇತ್ರದಲ್ಲಿ ವೃದ್ಧರಿಗೆ ಉಚಿತ ನೇತ್ರ ಪರೀಕ್ಷೆ ಹಾಗೂ ಚಿಕಿತ್ಸೆ, ಬೃಹತ್ ಆರೊಗ್ಯ ಮೇಳ, ಉದ್ಯೋಗ ಮೇಳ, ಕೋವಿಡ್ ಸಂದರ್ಭದಲ್ಲಿ ಇಡೀ ಕ್ಷೇತ್ರದ ಜನರಿಗೆ 1 ಲಕ್ಷಕ್ಕೂ ಹೆಚ್ಚು ಆಹಾರ್ ಕಿಟ್ʼಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಿದ್ದೇನೆ.

ಸೇವೆ ಎನ್ನುವುದನ್ನು ದೈವ ಎಂದು ನಂಬಿ ಮಾಡುತ್ತಿದ್ದೇನೆ. ನನ್ನ ಜೀವನದ ಹಿಂದಿನ ದಿನಗಳು, ನಾನು ಬೆಳೆದು ಬಂದ ದಾರಿ ನನಗೆ ಸದಾ ಪ್ರೇರಣೆ. ಕಷ್ಟ ಬಂದಾಗ ಕುಗ್ಗಿಲ್ಲ, ಸುಖ ಬಂದಾಗ ಹಿಗ್ಗಿಲ್ಲ. ಬದುಕಿನ ಬೇವುಬೆಲ್ಲವನ್ನು ಸಮಚಿತ್ತದಿಂದ ಸ್ವೀಕಾರ ಮಾಡಿದ್ದೇನೆ. ಬಾಗೇಪಲ್ಲಿ ಕ್ಷೇತ್ರದ ಜನತೆಗೆ ಇನ್ನಷ್ಟು ಒಳ್ಳೆಯದು ಮಾಡಬೇಕು ಎನ್ನುವ ಅಭಿಲಾಶೆ ಇದೆ.

ಯಾರು ಏನಂತಾರೆ?

ಬಾಗೇಪಲ್ಲಿ ಕ್ಷೇತ್ರದ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಶನಿವಾರದಂದು ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ, ಗ್ರಾಮ ಪಂಚಾಯತಿ ನೌಕರರಿಗೆ ಆಹಾರ ಕಿಟ್ ವಿತರಣೆ ಹಾಗೂ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕ್ಷೇತ್ರಕ್ಕಾಗಿ ಉತ್ತಮ ಕೆಲಸ ಮಾಡುತ್ತಿರುವ ಶಾಸಕರನ್ನು ಈ ಮೂಲಕ ಸತ್ಕರಿಸುತ್ತಿದ್ದೇವೆ.

ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರು ಬಾಲೇನಹಳ್ಳಿ

ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಗುಡಿಬಂಡೆ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಸಾರ್ವಜನಿಕರ ಸೇವೆಗೆ ಸದಾ ನಾವು ಮುಂಚೂಣಿಯಲ್ಲಿ ಇದ್ದೇವೆ. ಮುಂದಿನ ದಿನಗಳಲ್ಲಿ ಶಾಸಕರಿಂದ ಕ್ಷೇತ್ರಕ್ಕೆ ಇನ್ನಷ್ಟು ಉತ್ತಮ ಕೆಲಸಗಳು ಆಗುತ್ತವೆ.

ಬಾಲಕೃಷ್ಣ ರೆಡ್ಡಿ, ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ, ಕಡೇಹಳ್ಳಿ
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಜನ್ಮದಿನ; ಗುಡಿಬಂಡೆಯಲ್ಲಿ ಅನ್ನದಾನ

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಜನ್ಮದಿನ; ಗುಡಿಬಂಡೆಯಲ್ಲಿ ಅನ್ನದಾನ

Leave a Reply Cancel reply

Your email address will not be published. Required fields are marked *

Recommended

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಹಾಲಿನ ಖರೀದಿ ದರ ಕಡಿತಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

2 years ago
ರಾಜ್ಯದಲ್ಲಿ 2,000 ಅಕ್ರಮ ಕ್ವಾರಿಗಳಿವೆ, ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ ತನಿಖೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

ರಾಜ್ಯದಲ್ಲಿ 2,000 ಅಕ್ರಮ ಕ್ವಾರಿಗಳಿವೆ, ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ ತನಿಖೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ