ಪವಿತ್ರಾ ವಿರುದ್ಧ ವಾಹಿನಿಯಿಂದಲೂ ಪ್ರತಿದೂರು
ಮೈಸೂರು: ಖಾಸಗಿ ಸುದ್ದಿ ವಾಹಿನಿ ವಿರುದ್ಧ ನಟಿ ಪವಿತ್ರ ಲೋಕೇಶ್ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ನರೇಶ್ ಹಾಗೂ ಪವಿತ್ರಾ ವಿಚಾರದ ವಿವಾದದ ನಡುವೆ ಅವರು ಶನಿವಾರ ರಾತ್ರಿ ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಖಾಸಗಿ ವಾಹಿನಿ ವಿರುದ್ದ ದೂರು ದಾಖಲಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯವರು ನಾನು ಎಲ್ಲಿ ಹೋದರು ಬೆನ್ನಟ್ಟಿ ಬರುತ್ತಾರೆ. ನನ್ನ ಮನೆ ಮತ್ತು ಮಕ್ಕಳ ಫೋಟೋಗಳನ್ನು ತೆಗೆಯುತ್ತಿದ್ದಾರೆ ಇದರಿಂದ ನನಗೆ ಆತಂಕವಾಗುತ್ತಿದೆ ಹಾಗಾಗಿ ನನಗೆ ರಕ್ಷಣೆ ನೀಡಿ ಎಂದು ದೂರು ನೀಡಿದ್ದಾರೆ. ಈ ದೂರಿಗೆ ಪ್ರತಿಯಾಗಿ ಖಾಸಗಿ ಮಾಧ್ಯಮವೂ ಕೂಡ ಪವಿತ್ರ ಲೋಕೇಶ್ ವಿರುದ್ಧ ದೂರು ನೀಡಿದೆ.
ನಾವು ಸುದ್ದಿ ಮಾಡಲು ನಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಪವಿತ್ರ ಲೋಕೇಶ್ ಕಾರಿನಲ್ಲಿದ್ದ ಇಬ್ಬರು ಬೆಂಗಾವಲುಗಾರರು ಕಾರಿನಿಂದ ಇಳಿದು ನಮ್ಮ ಮೊಬೈಲ್ ಮತ್ತು ಐಡಿ ಕಾರ್ಡ್ ಕಸಿದುಕೊಂಡು ಮತ್ತೆ ಇತ್ತ ಬಂದರೆ ಸಾಯಿಸುತ್ತೇವೆ ಎಂದು ತೆಲುಗಿನಲ್ಲಿ ಪ್ರಾಣ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.
ರಮ್ಯಾ ಗಂಭೀರ ಆರೋಪ
ಪವಿತ್ರ ಲೋಕೇಶ್ ವಿರುದ್ಧ ಗಂಭೀರ ಆರೋಪ ಮಾಡಿದ ರಮ್ಯ ರಘುಪತಿ, ನಾನು ಅವರ ಬಗ್ಗೆ ಮಾತನಾಡಲ್ಲಾ. ಅವರ ಬಗ್ಗೆ ಅಷ್ಟೋ ಇಷ್ಟು ಗೌರವ ಇತ್ತು, ಈಗ ಇಲ್ಲಾ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅವರ ಬಗ್ಗೆ ಅಯ್ಯೋ ಪಾಪ ಅಂದಿದ್ದೆ, ಹಣ ಕಾಸಿಗಾಗಿ ಪವಿತ್ರ ಲೋಕೇಶ್ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಅತ್ತೆ ಒಡವೆ ಮೇಲೆ ನನಗೆ ಹಕ್ಕಿದೆ. ನಮ್ಮ ಮನೆ ವಸ್ತು ಏಕೆ ಹೊರಗೆ ಹೋಗಿದೆ ಎಂಬ ಪ್ರಶ್ನೆ ಮಾಡಿದ್ದೇನೆ ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ನನ್ನ ಗಂಡನೇ ಸರಿ ಇಲ್ಲಾ. ಅವರು ಯಾರ ಯಾರ ಜೊತೆ ಇದ್ದಾರೆ ಎಂಬುದೆಲ್ಲಾ ನನಗೆ ಗೊತ್ತಿದೆ, ನಮ್ಮ ಅತ್ತೆಗೆ ಕೊಟ್ಟಿರುವ ಮಾತಿನಿಂದ ನಾನು ಇಷ್ಟು ದಿನ ಸುಮ್ಮನಿದೆ ಇನ್ನು ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಹೈದರಾಬಾದ್ ನನ್ನ ಅತ್ತೆ ಮನೆ. ಬೆಂಗಳೂರು ನಾನು ಹುಟ್ಟಿದ ಊರು.ನಾನು ಬೆಳೆದ ಮನೆ ಅಲ್ಲೇ ಇದೆ,ನನ್ನ ಬಗ್ಗೆ ಇಲ್ಲ,ಸಲ್ಲದ ಆರೋಪ ಮಾಡುತ್ತಿದ್ದಾರೆ
ನಾನು ಫ್ರೂಫ್ ಸಮೇತ ಎಲ್ಲಾವನ್ನು ಇಟ್ಟಿದ್ದೇನೆ ಎಂದು ರಮ್ಯಾ ತಿಳಿಸಿದರು. ನನ್ನ ಮಗನಿಗೆ ಅಪ್ಪ ಅಮ್ಮ ಇಬ್ಬರು ಬೇಕು,ಅವರು ಕೋರ್ಟ್ ಗೆ ಕರೆದಿದ್ದಾರೆ.ನಾನು ಯಾವುದೇ ಕಾರಣಕ್ಕೂ ಡೈವರ್ಸ್ ಕೊಡುವುದಿಲ್ಲ ಎಂದು ರಮ್ಯ ರಘುಪತಿ ಸ್ಪಷ್ಟಪಡಿಸಿದರು.