ವಿಜ್ಞಾನಿಗಳಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆ್ಯನಿ ಎಲ್ ಹಲ್ಲಿಯರ್ ಅವರಿಗೆ ಪುರಸ್ಕಾರ
ಸ್ಟಾಕ್‌ಹೋಮ್ (ಸ್ವೀಡನ್): ಮೂವರು ವಿಜ್ಞಾನಿಗಳಿಗೆ 2023ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪುರಸ್ಕಾರ ಸಂದಿದೆ.
ವಿಜ್ಞಾನಿಗಳಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆ್ಯನಿ ಎಲ್ ಹಲ್ಲಿಯರ್ ಅವರ ಹೆಸರನ್ನು ಸ್ವಿಡೀಶ್ ಅಕಾಡೆಮಿ ಇಂದು ಸಂಜೆ ಘೋಷಣೆ ಮಾಡಿದ್ದು, ಪ್ರಶಸ್ತಿಯನ್ನು ಮೂವುರು ವಿಜ್ಞಾನಿಗಳು ಹಂಚಿಕೊಳ್ಳಲಿದ್ದಾರೆ. ಪ್ರಶಸ್ತಿ ಮೊತ್ತ 10 ಲಕ್ಷ ಡಾಲರ್.
ಪಿಯರೆ ಅಗೋಸ್ಟಿನಿ ಫ್ರಾನ್ಸ್ ಮೂಲದವರು, ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಫೆರೆಂಕ್ ಕ್ರೌಸ್ಜ್ ಅವರು ಹಂಗೇರಿ ಮೂಲದವರು, ಸದ್ಯ ಜರ್ಮನಿಯಲ್ಲಿ ನೆಲೆಸಿದ್ದಾರೆ ಹಾಗೂ ಆ್ಯನಿ ಎಲ್ ಹಲ್ಲಿಯರ್ ಅವರು ಫ್ರಾನ್ಸ್, ಸ್ವೀಡನ್ ಪೌರತ್ವ ಹೊಂದಿದ್ದಾರೆ.
ಭೌತಶಾಸ್ತ್ರ ಕ್ಷೇತ್ರದಲ್ಲಿ ಈ ಮೂವರಿಗೆ ಬಹುದೊಡ್ಡ ಹೆಸರಿದೆ. ಆಗೋಸ್ಟಿನಿ ಅವರು ಅಮೆರಿಕದ ಕೊಲಂಬಸ್ ವಿಶ್ವವಿದ್ಯಾಲಯದ ಪ್ರೊಫೆಸರ್, ಫರೆಂಕ್ ಕ್ರೌಸ್ ಅವರು ಜರ್ಮನಿಯ ಮ್ಯಾಕ್ಸ್ ಫ್ಲಾಂಕ್ ಇನ್ಸಿಟ್ಯೂಟ್ ಆಫ್ ಕ್ವಾಂಟಮ್ ಆಪ್ಟಿಕ್ಸ್ ವಿವಿಯಲ್ಲಿ ಪ್ರಾಧ್ಯಾಪಕರು. ಅನ್ನೆ ಹ್ಯೂಲಿಯರ್ ಅವರು ಸ್ವೀಡನ್ ನ ಲುಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅತಿ ಚಿಕ್ಕದಾದ ಪರಮಾಣು ವಿಭಜನೆಗೊಂಡು ಕೇವಲ ಒಂದು ಸೆಕೆಂಡ್ ನಲ್ಲಿ ಎಲೆಕ್ಟ್ರಾನ್ ಗಳನ್ನು ವೀಕ್ಷಣೆ ಮಾಡಬಹುದು ಎಂಬುದನ್ನು ಈ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಇದು ಪರಮಾಣುಗಳು ಹಾಗೂ ಅಣುಗಳ ಒಳಗಿನ ಎಲೆಕ್ಟ್ರಾನ್‌ಗಳ ಜಗತ್ತನ್ನು ಅನ್ವೇಷಿಸಲು ಮನುಕುಲಕ್ಕೆ ಹೊಸ ಅವಕಾಶ ನೀಡಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.