• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಸಿದ್ದರಾಮಯ್ಯ ಸರಕಾರದಿಂದ ಪರಿಸರ ಸಮಿತಿಗಳಿಗೆ ಅನರ್ಹರ ಶಿಫಾರಸು; ಕಾರಣ ಕೊಟ್ಟು ದಾಖಲೆಗಳ ಸಮೇತ ತಿರಸ್ಕರಿಸಿದ ಕೇಂದ್ರ

cknewsnow desk by cknewsnow desk
February 26, 2024
in EDITORS'S PICKS, NATION, NEWS & VIEWS, STATE
Reading Time: 2 mins read
0
ಸಿದ್ದರಾಮಯ್ಯ ಸರಕಾರದಿಂದ ಪರಿಸರ ಸಮಿತಿಗಳಿಗೆ ಅನರ್ಹರ ಶಿಫಾರಸು; ಕಾರಣ ಕೊಟ್ಟು ದಾಖಲೆಗಳ ಸಮೇತ ತಿರಸ್ಕರಿಸಿದ ಕೇಂದ್ರ
1.2k
VIEWS
FacebookTwitterWhatsuplinkedinEmail

ಅನರ್ಹರಿಗೆ ಮಣೆ; ಸ್ವಜನರಿಗೆ ರತ್ನಗಂಬಳಿ ಹಾಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿಗೆ ಅನರ್ಹರನ್ನು ತಂದು ಕೂರಿಸುವ ರಾಜ್ಯ ಸರಕಾರದ ಪರಿಪಾಠಕ್ಕೆ ರಾಜ್ಯ ಹೈಕೋರ್ಟ್‌ ಪದೇಪದೆ ಚಾಟಿ ಬೀಸಿದ ನಂತರವೂ ಎಮ್ಮೆ ಚರ್ಮದ ಆಡಳಿತಗಾರರು ಪುನಾ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ.

ಪರಿಸರಕ್ಕೆ ಸಂಬಂಧಪಟ್ಟ ಯಾವುದೇ ಸಮಿತಿಗೆ ಅರ್ಹರು, ಸೇವಾನಿಷ್ಠೆ ಹೊಂದಿರುವವರು, ಅದರಲ್ಲೂ ವಿಷಯತಜ್ಞರನ್ನೇ ನೇಮಕ ಮಾಡಬೇಕು ಎಂದು ನಿಯಮವಿದ್ದರೂ ರಾಜ್ಯ ಕಾಂಗ್ರೆಸ್‌ ಸರಕಾರ ಹಿಂದಿನ ಬಿಜೆಪಿ ಸರಕಾರದ ಹಾದಿಯನ್ನೇ ತುಳಿದು ಅನರ್ಹರು ಹಾಗೂ ಸ್ವಜನರಿಗೆ ರತ್ನಗಂಬಳಿ ಹಾಸಿದೆ. ಈ ನೇಮಕಾತಿಗಳು ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲಿಯೇ ರಾಜಕೀಯ ಬಿರುಗಾಳಿ ಸೃಷ್ಟಿಸಿವೆ.

ನಿಯಮಗಳನ್ನು ಗಾಳಿಗೆ ಬಿಟ್ಟ ಸರಕಾರ!

ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ (State Environmental Impact Assessment Authority -SEIAA) ರಾಜ್ಯ ತಜ್ಞರ ಮೌಲ್ಯಮಾಪನ ಸಮಿತಿ (State Expert Appraisal Committee -SEAC) ಗಳ ನೇಮಕಾತಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿದೆ ಹಾಗೂ ಸ್ವಜನ ಪಕ್ಷಪಾತಕ್ಕೆ ರತ್ನಗಂಬಳಿ ಹಾಸಿರುವ ಅಂಶವು ದಾಖಲೆಗಳ ಸಮೇತ ಬಹಿರಂಗವಾಗಿದೆ. ಈ ದಾಖಲೆಗಳು ಸಿಕೆನ್ಯೂಸ್‌ ನೌ ಗೆ ಲಭ್ಯವಾಗಿವೆ.

ಪರಿಸರ ಸಂರಕ್ಷಣೆಗೆ ಸಂಬಂಧಿಸಿ ಈ ಎರಡೂ ಸಮಿತಿಗಳು ಮಹತ್ವದ್ದಾಗಿವೆ. ಕಳೆದ ಮೂರು ತಿಂಗಳಿಂದ ಇವುಗಳಿಗೆ ಸದಸ್ಯರ ನೇಮಕಾತಿ ನೆನೆಗುದಿಗೆ ಬಿದ್ದಿದೆ. ಆದರೆ, ರಾಜಕೀಯ ಮತ್ತು ಸ್ವಜನಪಕ್ಷಪಾತದ ಒತ್ತಡದ ಹಿನ್ನೆಲೆಯಲ್ಲಿ ಎರಡೂ ಸಮಿತಿಗಳ ಸದಸ್ಯ ಸ್ಥಾನಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿರುವ ಬಹುತೇಕ ಹೆಸರುಗಳನ್ನು ಕೇಂದ್ರ ಸರಕಾರ ನೇರವಾಗಿ ತಿರಸ್ಕಾರ ಮಾಡಿದೆ.

ತಿರಸ್ಕೃತಕ್ಕೆ ಕಾರಣ; ಸಿದ್ದರಾಮಯ್ಯ ಅವರ ಸರಕಾರದಿಂದ ಶಿಫಾರಸು ಮಾಡಲ್ಪಟ್ಟಿರುವ ಬಹುತೇಕರಿಗೆ SEIAA, SEAC ಗಳಿಗೆ ನೇಮಕಗೊಳ್ಳುವ ಅರ್ಹತೆಯೇ ಇಲ್ಲ! ಅಂದರೆ; ರಾಜ್ಯ ಸರಕಾರ ಅನರ್ಹರನ್ನೇ ಶಿಫಾರಸು ಮಾಡಿದೆ!!

ಪರಿಸರ ಸಚಿವಾಲಯ ಸೈಡ್‌ಲೈನ್‌!!

ರಾಜ್ಯ ಸರಕಾರ ಶಿಫಾರಸು ಮಾಡಿರುವ ವ್ಯಕ್ತಿಗಳ ಹೆಸರುಗಳು ಭಾರೀ ಅಚ್ಚರಿಗೆ ಕಾರಣವಾಗಿವೆ. ಅಲ್ಲದೆ, ಈ ಹೆಸರುಗಳ ಬಗ್ಗೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲಿಯೂ ತೀವ್ರ ಅಸಮಾಧಾನವಿದೆ. ರಾಜ್ಯ ಅರಣ್ಯ ಮತ್ತು ಪರಿಸರ ಸಚಿವಾಲಯವನ್ನೇ (ಸಚಿವ ಈಶ್ವರ ಖಂಡ್ರೆ) ಸೈಡ್‌ ಲೈನ್‌ ಮಾಡಿ ಮುಖ್ಯಮಂತ್ರಿಗಳ ಕಾರ್ಯಾಲಯವೇ ಈ ಹೆಸರುಗಳಲ್ಲಿ ಅಂತಿಮಗೊಳಿಸಿ ಕೇಂದ್ರಕ್ಕೆ ಕಳಿಸಿದೆ ಎಂಬ ಅಂಶ ಉನ್ನತ ಮೂಲಗಳಿಂದ ಸಿಕೆನ್ಯೂಸ್‌ ನೌ ಗೆ ಗೊತ್ತಾಗಿದೆ.

ಶಿಫಾರಸುಗೊಂಡವರಿಗೆ ಅರ್ಹತೆ, ವಿದ್ಯಾರ್ಹತೆಯೇ ಇಲ್ಲ!

ಕಳೆದ 2023 ಡಿಸೆಂಬರ್‌ 27ರಂದು ಕೇಂದ್ರದ ಪರಿಸರ, ಅರಣ್ಯ ಸಚಿವಾಲಯವು ಸಿದ್ದರಾಮಯ್ಯ ಅವರ ಸರಕಾರದಿಂದ ಶಿಫಾರಸು ಮಾಡಲ್ಪಟ್ಟ ಪಟ್ಟಿಯಲ್ಲಿ ಆರು ಜನರ ಹೆಸರುಗಳನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಅದಕ್ಕೆ ಪೂರಕವಾಗಿ ಅನರ್ಹತೆ ಕಾರಣವನ್ನೂ ಸ್ಪಷ್ಟವಾಗಿ ನಮೂದಿಸಿತ್ತು. ಈ ಪೈಕಿ ಶಿಫಾರಸುಗೊಂಡ ಇತರೆ ಏಳು ಸದಸ್ಯರು ಅರ್ಹತೆಯ ಮಾನದಂಡಕ್ಕೆ ಸರಿ ಹೊಂದುತ್ತಾರೆ ಎಂದೂ ತಿಳಿಸಿದೆ.

2023 ಡಿಸೆಂಬರ್‌ 27 ರಂದು ಕೇಂದ್ರ ಸರಕಾರ ಬರೆದಿರುವ ಪತ್ರ

ನಂತರ, ಅಂದರೆ; 2024 ಫೆಬ್ರವರಿ 9ರಂದು ಕೇಂದ್ರದ ಪರಿಸರ, ಅರಣ್ಯ ಸಚಿವಾಲಯವು ಸಿದ್ದರಾಮಯ್ಯ ಅವರ ಸರಕಾರ ಎರಡೂ ಸಮಿತಿಗಳಿಗೆ ಶಿಫಾರಸು ಮಾಡಿದ್ದ ಇತರೆ ಆರು ಮಂದಿ ಹೆಸರುಗಳನ್ನೂ ತಿರಸ್ಕರಿಸಿತ್ತು. ಕೇಂದ್ರ ಸರಕಾರವು ಶಿಫಾರಸುಗೊಂಡಿದ್ದ ವ್ಯಕ್ತಿಗಳ ವಿದ್ಯಾರ್ಹತೆ, ಅರ್ಹತೆ ಮಾನದಂಡ ಇತ್ಯಾದಿಗಳ ಬಗ್ಗೆ ತೀವ್ರ ಪರಿಶೀಲನೆ ನಡೆಸಿತ್ತು. ಆ ಪೈಕಿ ಕೆಲವರ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳು (FIR) ಬಾಕಿ ಇದ್ದವು ಹಾಗೂ ಕೆಲವರ ಸೇವಾ ದಾಖಲೆಗಳು ತೃಪ್ತಿಕರವಾಗಿರಲಿಲ್ಲ, ಬಹಳಷ್ಟು ನಕಾರಾತ್ಮಕ ಅಂಶಗಳು ಅದರಲ್ಲಿ ನಮೂದಾಗಿದ್ದವು. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಪಟ್ಟಿಯನ್ನು ತಿರಸ್ಕಾರ ಮಾಡಿತ್ತು.

2024 ಫೆಬ್ರವರಿ 9 ರಂದು ಕೇಂದ್ರ ಸರಕಾರ ಬರೆದಿರುವ ಪತ್ರ

ವಿಚಿತ್ರವೆಂದರೆ; ಗಂಭೀರ ಕಾರಣಗಳನ್ನು ನೀಡಿ ಕೇಂದ್ರದ ಪರಿಸರ, ಅರಣ್ಯ ಸಚಿವಾಲಯವು ತಿರಸ್ಕರಿಸಿದ್ದ ಹೆಸರುಗಳನ್ನೇ ರಾಜ್ಯ ಸರಕಾರ ಮತ್ತೆ ಶಿಫಾರಸು ಮಾಡಿದೆ! ಇದು ಎಲ್ಲರ ಹುಬ್ಬೆರಿಸಿದೆ ಹಾಗೂ ನಾನಾ ಅನುಮಾನಗಳಿಗೆ ಕಾರಣವಾಗಿದೆ.

ತಿರಸ್ಕರಿಸಲು ಕಾರಣ ಕೊಟ್ಟಿರುವ ಕೇಂದ್ರ ಸರಕಾರವು, ಅದಕ್ಕೆ ಪೂಚರಕವಾದ ಎಲ್ಲಾ ದಾಖಲೆಗಳನ್ನು ರಾಜ್ಯ ಸರಕಾರಕ್ಕೆ ಕಳಿಸಿದೆ. ಸಾಹಿತಿಯೊಬ್ಬರ ಪುತ್ರಿಯೂ ಹೀಗೆ ತಿರಸ್ಕೃತಗೊಂಡ ಪಟ್ಟಿಯಲ್ಲಿ ಇರುವುದು ಗಮನಾರ್ಹ.

ಲೋಕಾಯುಕ್ತ ತನಿಖೆ ಬಾಕಿ

ಮುಖ್ಯಮಂತ್ರಿ ಕಚೇರಿಯಿಂದ ಶಿಫಾರಸುಗೊಂಡಿರುವ ಮುಖ್ಯ ಎಂಜಿನೀಯರ್‌ ಒಬ್ಬರ ಮೇಲೆ ಲೋಕಾಯುಕ್ತದಲ್ಲಿ ತನಿಖೆ ಬಾಕಿ ಇದೆ. ಉಳಿದ ಮೂವರು ಕಾಂಗ್ರೆಸ್‌ ಪಕ್ಷದ ಸಕ್ರಿಯ ಪೂರ್ಣಾವಧಿ ಕಾರ್ಯಕರ್ತರು, ಇವರು ಪ್ರಾಧಿಕಾರ ಮತ್ತು ಸಮಿತಿಗೆ ನೇಮಕವಾಗುವ ಯಾವುದೇ ಮಾನದಂಡ ಹೊಂದಿಲ್ಲ ಹಾಗೂ ಮಾನದಂಡಕ್ಕೆ ಅನುಗುಣವಾಗಿ ಅವರು ವಿದ್ಯಾರ್ಹತೆ, ಅನುಭವ ಹೊಂದಿರುವುದಿಲ್ಲ. ಇನ್ನು ಮೂವರು ಹೆಸರುಗಳನ್ನು, ದೊಡ್ಡ ಗಣಿಗಾರಿಕೆ ಕಂಪನಿಗಳ ಜತೆ ಸಂಬಂಧ ಹೊಂದಿರುವ ಕಾರಣಕ್ಕೆ ರಿಜೆಕ್ಟ್‌ ಮಾಡಲಾಗಿದೆ. ಉಳಿದವರಲ್ಲಿ ಒಬ್ಬರು ವೈದ್ಯರು! ಪರಿಸರಕ್ಕೂ ಅವರಿಗೂ ಸಂಬಂಧವೇ ಇಲ್ಲ. MSW ಹಾಗೂ ಎಂಜಿನೀಯರಿಂಗ್‌ ಪದವೀಧರರನ್ನು ನೇಮಕಕ್ಕೆ ಪರಿಗಣಿಸುವ ಮಾನದಂಡ ಇಲ್ಲ, ಅವರು ಅರ್ಹ ಮಾನದಂಡ ಹೊಂದಿರುವುದಿಲ್ಲ.

ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿಯೂ ಇಂಥದ್ದೇ ಅನರ್ಹರಿಗೆ ಮಣೆ ಹಾಕುವ ಪ್ರಯತ್ನ ಆಗಿತ್ತು. ಆದರೆ, ಅಲ್ಲಿಯೂ ಅನರ್ಹತೆ ಕಾರಣಕ್ಕೆ ಕಾರಣಕ್ಕೆ ಶಿಪಾರಸುಗೊಂಡಿದ್ದ ವ್ಯಕ್ತಿಗಳು ನಾಮ ನಿರ್ದೇಶನ ಆಗಿರಲಿಲ್ಲ.

ಗುರುತರ ಹೊಣೆಗಾರಿಕೆ, ಪರಿಸರ ಸಂರಕ್ಷಣೆ ಹೊಣೆ

ರಾಜ್ಯ ಅರಣ್ಯ, ಪರಿಸರ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅವರು SEIAA ಮತ್ತು SEAC ಅಧ್ಯಕ್ಷ, ಸದಸ್ಯರ ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದ್ದರು. ಇವೆರಡೂ ಸಮಿತಿಗಳು ಗುರುತರ ಹೊಣೆಗಾರಿಕೆ ಹೊಂದಿದವುಗಳಾಗಿದ್ದು, ಪರಿಸರಾತ್ಮಕ ಒಪ್ಪಿಗೆ ನೀಡುವ, ಪರಿಸರದ ಮೇಲೆ ಬೀರುವ ಪರಿಣಾಮ ಇನ್ನಿತರೆ ಮಹತ್ವದ ಅಂಶಗಳನ್ನು ಅಧ್ಯಯನ ಮಾಡುವ ಅಧಿಕಾರ ಹೊಂದಿರುತ್ತವೆ. ಹೀಗಾಗಿ ಈ ಎರಡೂ ಸಮಿತಿಗಳಿಗೆ ನಾಮನಿರ್ದೇಶನಗೊಳ್ಳು ವ್ಯಕ್ತಿಗಳು 1986ರ ಅರಣು, ಪರಿಸರ ಸಂರಕ್ಷಣಾ ಕಾಯ್ದೆಯನ್ವಯ ನಿರ್ದಿಷ್ಟ ಮಾನದಂಡಗಳನ್ನು ಹೊಂದಿರಲೇಬೇಕಾಗುತ್ತದೆ. ಬಿ ವರ್ಗದ ಯೋಜನೆಗಳಿಗೆ ಪರಿಸರಾತ್ಮಕ ಅನುಮೋದನೆಯನ್ನು SEACನಿಂದಲೇ ರಾಜ್ಯ ಮಟ್ಟದಲ್ಲಿ ನೀಡಬೇಕಾಗಿದೆ.

ನೇಮಕಾತಿ ಅಧಿಸೂಚನೆಯ ಪ್ರಕಾರ, ಪರಿಸರ ಗುಣಮಟ್ಟ, ಪರಿಸರ ಪ್ರಭಾವ ಮೌಲ್ಯಮಾಪನ ಪ್ರಕ್ರಿಯೆ, ಅಪಾಯದ ಮೌಲ್ಯಮಾಪನ, ಜೀವ ವಿಜ್ಞಾನ ಮತ್ತು ಮುಂತಾದ ವಿಭಾಗಗಳಲ್ಲಿ ಪರಿಣಿತರಾಗಿರಬೇಕು. ಅಂಥ ವ್ಯಕ್ತಿಗಳನ್ನೇ ಈ ಸಮಿತಿಗಳಿಗೆ ಪರಿಗಣಿಸಬೇಕು. Ph.D ಪದವಿ ಹೊಂದಿಲ್ಲದವರಿಗೆ 15 ವರ್ಷಗಳ ಸುದೀರ್ಘ ಅನುಭವ ಮತ್ತು Ph.D ಪದವಿ ಹೊಂದಿರುವವರಿಗೆ 10 ವರ್ಷಗಳ ಅನುಭವ ಕಡ್ಡಾಯವಾಗಿರುತ್ತದೆ. ಆದರೆ, ಕೇಂದ್ರ ಸರಕಾರದಿಂದ ತಿರಸ್ಕೃತಗೊಂಡಿರುವ ಅಭ್ಯರ್ಥಿಗಳೆಲ್ಲರೂ ಈ ಅರ್ಹತೆ, ಮಾನದಂಡಕ್ಕೆ ಸರಿ ಹೊಂದುವುದಿಲ್ಲ ಎನ್ನಲಾಗಿದೆ.

Tags: bjpCongressenvironmentreject by central governmentSEACSEIAAsiddaramaiahState Environmental Impact Assessment AuthorityState Expert Appraisal Committee
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಬರಪೀಡಿತ ರೈತರಿಗೆ ಬಿಡಿಗಾಸಿಲ್ಲ! ಆದರೂ, ಸಿದ್ದರಾಮಯ್ಯ ಸರಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ಭರ್ತಿ ₹200 ಕೋಟಿ!

ಬರಪೀಡಿತ ರೈತರಿಗೆ ಬಿಡಿಗಾಸಿಲ್ಲ! ಆದರೂ, ಸಿದ್ದರಾಮಯ್ಯ ಸರಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ಭರ್ತಿ ₹200 ಕೋಟಿ!

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ v/s ಸರಕಾರ; ಕೋವಿಡ್ ನಡುವೆ ಸಖತ್ ಪಾಲಿಟಿಕ್ಸ್

ಭಾರತ ನಾವೀನ್ಯತಾ ಸೂಚ್ಯಂಕ-2020 ಪ್ರಕಟಿಸಿದ ನೀತಿ ಆಯೋಗ; ಸತತ ಎರಡನೇ ಬಾರಿಯೂ ನಂ.1 ಆಗಿ ಹೊರಹೊಮ್ಮಿದ ಕರ್ನಾಟಕ

5 years ago
ನವರಾತ್ರಿಗೆ ಕತ್ತಲೆಭಾಗ್ಯ ಖಾತರಿ; ಹೊಸ ವರ್ಷಕ್ಕೆ ಕಗ್ಗತ್ತಲೆಭಾಗ್ಯ!!

ನವರಾತ್ರಿಗೆ ಕತ್ತಲೆಭಾಗ್ಯ ಖಾತರಿ; ಹೊಸ ವರ್ಷಕ್ಕೆ ಕಗ್ಗತ್ತಲೆಭಾಗ್ಯ!!

3 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ