• About
  • Advertise
  • Careers
  • Contact
Sunday, October 18, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ಲವೇ?

cknewsnow desk by cknewsnow desk
October 17, 2026
in NATION, POLITICS, STATE
Reading Time: 1 min read
0
ಹೆಚ್.ಡಿ.ಕುಮಾರಸ್ವಾಮಿ ಬೀಸಿದ ಚಾಟಿಯಿಂದ ಎಚ್ಚೆತ್ತ ಸರಕಾರ
914
VIEWS
FacebookTwitterWhatsuplinkedinEmail

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಬೇಸರ

ಹೋರಾಟ ಇಲ್ಲಿಗೇ ಬಿಡುವುದಿಲ್ಲ, ವಿಜಯದಶಮಿ ನಂತರ ಮತ್ತೆ ಬೀದಿಗೆ ಇಳಿಯುತ್ತೇನೆ

ಬೆಂಗಳೂರು: ಅತ್ಯಂತ ಅಪಮಾನಕರವಾಗಿ ಅಧಿಕಾರದಿಂದ ಕೆಳಗಿಳಿದ ಸಿದ್ದರಾಮಯ್ಯನವರಿಗೆ ತಮ್ಮ ವಿರುದ್ಧ ನಡೆದಿರುವ ಸಂಚಿನ ಬಗ್ಗೆ ರಕ್ತ ಕುದಿಯುತ್ತಿಲ್ಲವೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಬ್ಲಾಕ್ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಮತ್ತು ಆತನ ಸಂಗಡಿಗರನ್ನು ಬಂಧಿಸಲು ಒತ್ತಾಯಿಸಿ ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿ ಆವರಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ನನಗೆ ಬಹಳ ಆಶ್ಚರ್ಯವಾಗುತ್ತಿದೆ. ಸಿದ್ದರಾಮಯ್ಯನವರು ಮೌನದಿಂದ ಇರುವ ವ್ಯಕ್ತಿಯಲ್ಲ. ತಮ್ಮ ವಿರುದ್ಧ ಅನ್ಯಾಯ ನಡೆದರೆ ಸಹಿಸುವ ಜಾಯಮಾನದವರಲ್ಲ. ತಮ್ಮ ವಿರುದ್ಧ ರಾಜ್ಯದ ಈಗಿನ ಮುಖ್ಯಮಂತ್ರಿ ಮತ್ತು ಕಿಡಿಗೇಡಿ ರಾಕೇಶ್ ಶೆಟ್ಟಿ ಸೇರಿ ನಡೆಸಿದ ಸಂಚಿನ ಕುರಿತಂತೆ ಅವರು ಮೌನ ವಹಿಸಿರುವುದು ನನಗೆ ನೋವು ತಂದಿದೆ ಎಂದು ಸಚಿವರು ಹೇಳಿದರು.

ಈ ವಿಷಯವನ್ನು ನಾನು ಇಲ್ಲಿಗೆ ಬಿಡುವ ಪ್ರಶ್ನೆ ಇಲ್ಲ. ಈಗಾಗಲೇ ಪೊಲೀಸ್ ಆಯುಕ್ತರಿಗೆ, ಇಂದು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದೇವೆ. ಇದರ ಮೇಲೆ ಪೊಲೀಸರು ಕ್ರಮ ಜರುಗಿಸದೆ ಇದ್ದರೆ ಮುಂದೆ ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಸ್ಟಿಂಗ್ ಮಾಡಿದ ಕಿರಾತಕರನ್ನು ಬಂಧಿಸದ ಹೊರತು ನಾವು ವಿಶ್ರಮಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಪೊಲೀಸ್ ಮಹಾನಿರ್ದೇಶಕರಿಗೆ ಸುದೀರ್ಘ ದೂರನ್ನು ಕೊಟ್ಟಿದ್ದೇವೆ. ರಾಕೇಶ್ ಶೆಟ್ಟಿ ಮತ್ತು ಆತನ ಸಹಚರರು ನಡೆಸಿರುವ ಅಕ್ರಮಗಳು, ರಹಸ್ಯ ಕಾರ್ಯಾಚರಣೆ ಹೆಸರಿನಲ್ಲಿ ಮಾಡಿರುವ ಹಣ ವಸೂಲಿ ರಾಜಕಾರಣಿಗಳು, ಪೊಲೀಸರು ಮತ್ತು ಸರ್ಕಾರದ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಬ್ಲಾಕ್ ಮೇಲ್ ಮಾಡಿರುವ ಎಲ್ಲಾ ಅಂಶಗಳನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ಅವನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳದೆ ಇದ್ದರೆ ವಿಜಯದಶಮಿ ನಂತರ ಸ್ವತಃ ನಾನೇ ಮತ್ತೊಮ್ಮೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಸಚಿವರು ನೇರ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಅವರಿಗೆ ರಕ್ತ ಕುಡಿಯುತ್ತಿಲ್ಲವೆ ಎಂದು ಮತ್ತೆ ಮತ್ತೆ ಕೇಳಿದ ಕುಮಾರಸ್ವಾಮಿ ಅವರು; ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳು ಮಾಡಲು ಈ ಸ್ಟಿಂಗ್ ಆಪರೇಷನ್ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಆದರೆ ಅವರ ಹೆಸರನ್ನು ಹಾಳು ಮಾಡಲು, ಆ ಮೂಲಕ ಹಣ ವಸೂಲಿ ಮಾಡಲು ಈ ವಿಡಿಯೋ ಮಾಡಲಾಗಿದೆ. ಇದೆಲ್ಲವನ್ನೂ ನೋಡಿ ಸಿದ್ದರಾಮಯ್ಯ ಅವರಿಗೆ ರಕ್ತ ಕುದಿಯುತ್ತಿಲ್ಲವೇ? ಎಂದು ಕೇಂದ್ರ ಸಚಿವರು ಕಿಡಿಕಾರಿದರು.

ನಾನು ಮತ್ತು ಸಿದ್ದರಾಮಯ್ಯ ಅವರು ಅನೇಕ ವಿಷಯಗಳಲ್ಲಿ ಸಂಘರ್ಷ ಮಾಡಿಕೊಂಡಿದ್ದೇವೆ. ವಿಧಾನಸಭೆಯಲ್ಲಿ ವಾಗ್ವಾದ ನಡೆಸಿದ್ದೇವೆ. ಆದರೆ ಇಂಥ ವಿಷಯಕ್ಕೆ ನನ್ನ ಬೆಂಬಲ ಇಲ್ಲ. ಅವರ ವಿರುದ್ಧ ನಡೆದಿರುವ ಸಂಚನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ಅವರು ಬಿಟ್ಟರು ನಾನು ಬಿಡುವ ಪ್ರಶ್ನೆಯೇ ಇಲ್ಲ. ವಿಜಯದಶಮಿ ನಂತರ ಪುನಾ ಹೋರಾಟ ಕೈಗೆತ್ತಿಕೊಳ್ಳುತ್ತೇನೆ ಎಂದು ಅವರು ಗುಡುಗಿದರು.

ಆ ಕ್ರಿಮಿನಲ್’ಗೆ ಕರ್ನಾಟಕ ರತ್ನ ಕೊಟ್ಟುಬಿಡಿ

ಡಿಜಿ ಅವರು ನಾವು ಕೊಟ್ಟ ದೂರನ್ನು ಮೌನದಿಂದ ಸ್ವೀಕಾರ ಮಾಡಿದ್ದಾರೆ‌. ಪೊಲೀಸ್ ಆಯುಕ್ತರದ್ದು ಆಯಿತು, ಈಗ ಡಿಜಿ ಏನು ಮಾಡುತ್ತಾರೋ ನೋಡೋಣ. ಮಂತ್ರಿಗಳ ವಿರುದ್ಧ ಸ್ಟಿಂಗ್ ಮಾಡಲಾಗಿದೆ ಮುಖ್ಯಮಂತ್ರಿಯೇ ಸಂಪುಟ ಸಭೆಯಲ್ಲಿ ಹೇಳುತ್ತಾರೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದು ಇದೆಯೇ? ಎಂದು ಸಚಿವರು ಕಿಡಿಕಾರಿದರು.

ಮಂತ್ರಿಗಳು ಮತ್ತು ಶಾಸಕರನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಈ ಮುಖ್ಯಮಂತ್ರಿ ಆರೋಪಿ ರಾಕೇಶ್ ಶೆಟ್ಟಿ ಜತೆ ಸೇರಿ ಸ್ಟಿಂಗ್ ರೀತಿಯ ಹೀನ ಕೃತಿಗಳನ್ನು ಎಸಗುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಗೃಹಮಂತ್ರಿ ರಾಜಾರೋಷವಾಗಿ ಲಜ್ಜೆಗೆಟ್ಟು ಮಾತನಾಡುತ್ತಿದ್ದಾರೆ. ಇನ್ನು ಪೊಲೀಸರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ? ಈ ಸರ್ಕಾರ ಸ್ಟಿಂಗ್ ನಡೆಸುವ ಅಪರಾಧಿಯ ಬೂಟ್ ಪಾಲಿಶ್ ಮಾಡಿಕೊಂಡು ಕೂತಿದೆ. ನಾಚಿಕೆಯಾಗಬೇಕು ಇವರಿಗೆ. ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಮಾಡುತ್ತಿರಲ್ಲ, ಅವತ್ತು ಸಿದ್ದರಾಮಯ್ಯ ಸಂಚು ರೂಪಿಸಿ ಅಧಿಕಾರದಿಂದ ಕೆಳಗಿಳಿಸಿ ತನಗೆ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿದ ಆ ಕ್ರಿಮಿನಲ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟುಬಿಡಿ ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

Tags: ckhd kumaraswamykarnatakanewsPoliticssiddaramaiahsting aginist ex chief minister
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ರೊಚ್ಚಿಗೆದ್ದು ರಸ್ತೆಗಿಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ರೊಚ್ಚಿಗೆದ್ದು ರಸ್ತೆಗಿಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

by cknewsnow desk
October 17, 2026
0

ಜೆಡಿಎಸ್ ಕಚೇರಿಯಿಂದ ಪ್ರೀಡಂ ಪಾರ್ಕ್'ವರೆಗೂ ಪಾದಯಾತ್ರೆ ನಡೆಸಿದ ಕೇಂದ್ರ ಸಚಿವರು

ಮುಂದಿನ ತಿಂಗಳೇ 5 ಗ್ಯಾರಂಟಿ!

ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ಜರ್ನಲಿಸ್ಟ್ ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು

by cknewsnow desk
October 16, 2026
0

ಸ್ಟಿಂಗ್ ಸಂಚಿಗೆ ದಾರಿತಪ್ಪಿದ ಕಾಂಗ್ರೆಸ್ ಹೈಕಮಾಂಡ್

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

HDK #preesmeet #Live

by cknewsnow desk
October 15, 2026
0

ಮುಖ್ಯಮಂತ್ರಿ ಡಿಕೆಶಿ ಮತ್ತು ಸ್ಟಿಂಗ್ ಪಿನ್ ಸಂಬಂಧದ ಬಗ್ಗೆ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ ಕೇಂದ್ರ ಸಚಿವರು

ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

by cknewsnow desk
October 14, 2026
0

ಷಡ್ಯಂತ್ರ್ಯದ ವಿರುದ್ಧ ಸಿದ್ದರಾಮಯ್ಯ ಗಟ್ಟಿ ದನಿ ಎತ್ತಲಿ ಎಂದ ಕೇಂದ್ರ ಸಚಿವರು; ರಾಜಕೀಯ ವಿರೋಧಿಗಳು, ಶಾಸಕರು, ಸಚಿವರ ವಿರುದ್ಧ ಸದಾಶಿವನಗರದಲ್ಲಿ ಫೋನ್ ಟ್ಯಾಪಿಂಗ್ ಸೆಂಟರ್

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

by cknewsnow desk
October 13, 2026
0

ಬೆಂಗಳೂರು ಜೆ.ಪಿ. ಭವನದಿಂದ ನೇರ ಪ್ರಸಾರ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

by cknewsnow desk
October 13, 2026
0

ವಿಡಿಯೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಬೇಕೆಂದು ಅಸಲು ದಾವೆ

Leave a Reply Cancel reply

Your email address will not be published. Required fields are marked *

Recommended

ಜನವರಿ 1ರಿಂದಲೇ ವಿದ್ಯಾಗಮ ಪುನಾರಂಭ; ಸರ್ವ ಮುನ್ನೆಚ್ಚರಿಕೆಗಳೊಂದಿಗೆ ತಯಾರಿ ನಡೆಸಿದೆ ಸಾರ್ವಜನಿಕ ಶಿಕ್ಷಣ ಇಲಾಖೆ, ಸರಕಾರದಿಂದ ಆದೇಶ

ಕಂಟ್ರೋಲ್‌ಗೆ ಬಾರದ ಕೋವಿಡ್‌ ಎರಡನೇ ಅಲೆ; ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಪ್ರಾಕ್ಟಿಕಲ್‌ ಪರೀಕ್ಷೆ ಮುಂದೂಡಿಕೆ: ಸಚಿವ ಸುರೇಶ್‌ ಕುಮಾರ್‌ ಪ್ರಕಟಣೆ

5 years ago
ಟೊಯೋಟ-ಕಿರ್ಲೋಸ್ಕರ್‌ ಬಿಕ್ಕಟ್ಟು; ಕಂಪನಿಯಲ್ಲಿ ಮುಷ್ಕರ ನಿಷೇಧ, ಲಾಕ್‌ಔಟ್‌ ತೆರವು

ಟೊಯೋಟ-ಕಿರ್ಲೋಸ್ಕರ್‌ ಬಿಕ್ಕಟ್ಟು; ಕಂಪನಿಯಲ್ಲಿ ಮುಷ್ಕರ ನಿಷೇಧ, ಲಾಕ್‌ಔಟ್‌ ತೆರವು

6 years ago

Popular News

  • ಹೆಚ್.ಡಿ.ಕುಮಾರಸ್ವಾಮಿ ಬೀಸಿದ ಚಾಟಿಯಿಂದ ಎಚ್ಚೆತ್ತ ಸರಕಾರ

    ಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ಲವೇ?

    0 shares
    Share 0 Tweet 0
  • ರೊಚ್ಚಿಗೆದ್ದು ರಸ್ತೆಗಿಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

    0 shares
    Share 0 Tweet 0
  • ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ಜರ್ನಲಿಸ್ಟ್ ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು

    0 shares
    Share 0 Tweet 0
  • ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

    0 shares
    Share 0 Tweet 0
  • HDK #preesmeet #Live

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಹೆಚ್.ಡಿ.ಕುಮಾರಸ್ವಾಮಿ ಬೀಸಿದ ಚಾಟಿಯಿಂದ ಎಚ್ಚೆತ್ತ ಸರಕಾರ

ಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ಲವೇ?

October 17, 2026
ರೊಚ್ಚಿಗೆದ್ದು ರಸ್ತೆಗಿಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ರೊಚ್ಚಿಗೆದ್ದು ರಸ್ತೆಗಿಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

October 17, 2026
ಮುಂದಿನ ತಿಂಗಳೇ 5 ಗ್ಯಾರಂಟಿ!

ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ಜರ್ನಲಿಸ್ಟ್ ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು

October 16, 2026
ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ