• About
  • Advertise
  • Careers
  • Contact
Friday, October 23, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home BUSINESS

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

cknewsnow desk by cknewsnow desk
October 22, 2026
in BUSINESS, EXCLUSIVE, NATION, NEWS & VIEWS, POLITICS, STATE
Reading Time: 4 mins read
0
ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು
920
VIEWS
FacebookTwitterWhatsuplinkedinEmail

ಬೇಸತ್ತು ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದ ಕೇಂದ್ರ ಸಚಿವ #HDK

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪಿಸಲು ಕರ್ನಾಟಕ ಸರ್ಕಾರದಿಂದ ಕಳೆದ ಹತ್ತು ತಿಂಗಳಿನಿಂದ ಭೂಮಿ ಮಂಜೂರಾತಿಯಲ್ಲಿ ವಿಳಂಬವಾಗಿರುವ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಗುರುವಾರ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಈವರೆಗೆ ಕೈಗಾರಿಕೆ ಸ್ಥಾಪನೆ ಕುರಿತಂತೆ ನಡೆದಿರುವ ಸಭೆಗಳು, ರಾಜ್ಯ ಮತ್ತು ಕೇಂದ್ರ ನಡುವೆ ಆಗಿರುವ ಪತ್ರ ವ್ಯವಹಾರಗಳು, ವಿವಿಧ ಸಭೆಗಳ ನಡಾವಳಿಗಳು ಹಾಗೂ ಇನ್ನಿತರ ಮಹತ್ವದ ದಾಖಲೆಗಳನ್ನು ಲಗತ್ತಿಸಿ ಮುಖ್ಯಮಂತ್ರಿ ಕಚೇರಿಗೆ ಪತ್ರವನ್ನು ಕಳಿಸಿದ್ದಾರೆ. ಪತ್ರ ಜೊತೆಗೆ ಆ ಎಲ್ಲಾ ದಾಖಲೆಗಳನ್ನು ಸಚಿವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಅಲ್ಲದೆ ಮಂಡ್ಯದಲ್ಲಿ ARAI ಕೇಂದ್ರ ಸ್ಥಾಪನೆ ಕುರಿತುಂತೆ ಕೋರಲಾಗಿರುವ ಭೂ ಮಂಜೂರಾತಿಗೆ ಸಂಬಂಧಿಸಿದ ಮುಖ್ಯಮಂತ್ರಿ ಡಿಕೆಶಿ ಅವರು ನೀಡಿರುವ ಹೇಳಿಕೆಗಳ ಪತ್ರಿಕಾ ತುಣುಕುಗಳನ್ನು ಕೂಡ ಪತ್ರಕ್ಕೆ ಲಗತ್ತಿಸಿ ಕೇಂದ್ರ ಸಚಿವರು ರವಾನಿಸಿದ್ದಾರೆ.ಮಹತ್ವದ ಈ ಪತ್ರವನ್ನು ಕೇಂದ್ರ ಸಚಿವರ ಆಪ್ತರು ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಹಸ್ತಾಂತರಿಸಿದ್ದಾರೆ. ಪತ್ರ ತಲುಪಿದ ನಂತರ ಸ್ವತಃ ಹೆಚ್.ಡಿ. ಕುಮಾರಸ್ವಾಮಿ ಅವರು ತುಷಾರ್ ಗಿರಿನಾಥ್ ಅವರೊಂದಿಗೆ ಚರ್ಚಿಸಿದರು.

ಸಚಿವರ ಪತ್ರದ ಸಾರಾಂಶ ಹೀಗಿದೆ

‘ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ (ARAI) ವತಿಯಿಂದ ಪ್ರಸ್ತಾಪಿಸಲಾಗಿರುವ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪನೆಗಾಗಿ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡುವಲ್ಲಿ ರಾಜ್ಯ ಸರ್ಕಾರದಿಂದ ಕಳೆದ 10 ತಿಂಗಳಿನಿಂದ ಉಂಟಾಗಿರುವ ನಿರಂತರ ವಿಳಂಬದತ್ತ ನಾನು ತಮ್ಮ ಗಮನ ಸೆಳೆಯಲು ಬಯಸುತ್ತೇನೆ.

ಕಳೆದ 10 ತಿಂಗಳುಗಳಿಂದ ನಾವು ನಿರಂತರವಾಗಿ ಈ ಬಗ್ಗೆ ರಾಜ್ಯ ಸರ್ಕಾರದ ಸಕಾರಾತ್ಮಕ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ. ಸ್ಥಳ ಪರಿಶೀಲನೆ, ತಾಂತ್ರಿಕ ಮೌಲ್ಯಮಾಪನ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಈ ಪ್ರಕ್ರಿಯೆಯನ್ನು ಸಕ್ರಿಯವಾಗಿ ಮುಂದುವರಿಸುತ್ತಿದ್ದೇವೆ. ಇಷ್ಟೆಲ್ಲಾ ನಿರಂತರ ಪ್ರಯತ್ನಗಳ ಹೊರತಾಗಿಯೂ, ಸೂಕ್ತ ಭೂಮಿಯನ್ನು ಮಂಜೂರು ಮಾಡುವ ವಿಷಯವು ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (KIADB) ಇನ್ನೂ ಭೂಮಿ ಮಂಜೂರಾತಿ ಇತ್ಯರ್ಥಗೊಂಡಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪನೆಗಾಗಿ ಯೋಜನೆಗೆ ಜಾಗ ಗುರುತಿಸುವ ನಿಟ್ಟಿನಲ್ಲಿ ARAI (Automotive Research Association of India) ನಿರಂತರ ತ್ವರಿತಗತಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ. ದಿನಾಂಕ: 16-03-2026ರಂದು ARAI ಸಂಸ್ಥೆಯ ತಂಡವು ಮಂಡ್ಯ ತಾಲೂಕಿನ ಬಸರಾಳು, ಮಂಡ್ಯ ಸಕ್ಕರೆ ಕಾರ್ಖಾನೆ ಮತ್ತು ಕೆ.ಆರ್.ಪೇಟೆ ಕೈಗಾರಿಕಾ ವಲಯದಲ್ಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ.

📍ಬೆಂಗಳೂರು

ಮಂಡ್ಯ ಜಿಲ್ಲೆಯಲ್ಲಿ 'ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ' (CIE Test Centre) ಹಾಗೂ 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' (EV Test Centre) ಸ್ಥಾಪಿಸಲು ಕರ್ನಾಟಕ ಸರಕಾರದಿಂದ ಕಳೆದ 10 ತಿಂಗಳಿನಿಂದ ಭೂಮಿ ಮಂಜೂರಾತಿಯಲ್ಲಿ ವಿಳಂಬವಾಗಿರುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ… pic.twitter.com/xtotpDNhy1

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 22, 2026

ತದನಂತರ ಭೂಮಿ ಮಂಜೂರಾತಿ ವಿಚಾರವಾಗಿ ಮಂಡ್ಯದ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಈ ವಿಷಯವಾಗಿ ದಿನಾಂಕ: 17-03-2026 ರಂದು ವಿಕಾಸಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಲಾಗಿದೆ. ದಿನಾಂಕ: 20-03-2026 ರಂದು ARAI ಸಂಸ್ಥೆಗೆ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ವಿವರವಾದ ತಾಂತ್ರಿಕ ಅಗತ್ಯಗಳ ಮಾಹಿತಿಯನ್ನು ಕೂಡ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುತ್ತದೆ.

ನಾನು ದಿನಾಂಕ: 13-04-2026 ರಂದು ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ಅವರೊಂದಿಗೆ ಸಭೆಯನ್ನು ನಡೆಸಿ ಮಂಡ್ಯ ಜಿಲ್ಲೆಯಲ್ಲಿ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪಿಸುವ ಯೋಜನೆಯ ವಿಸ್ತೃತ ವಿವರ ಹಾಗೂ ಭೂಮಿ ಅಗತ್ಯತೆಯ ಕುರಿತು ವಿವರವಾಗಿ ಚರ್ಚಿಸಲಾಗಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿರುತ್ತದೆ.

ಮುಂದುವರೆದು, ದಿನಾಂಕ: 06-05-2026 ರಂದು ತಾಂತ್ರಿಕ ಮೌಲ್ಯಮಾಪನಕ್ಕಾಗಿ ಬಸರಾಳು ಮತ್ತು ಹೆಗ್ಗಡತಿಹಳ್ಳಿಯಲ್ಲಿ ಗುರುತಿಸಲಾದ ಭೂಮಿಯ ವಿವರಗಳನ್ನು ಮಂಡ್ಯ ಜಿಲ್ಲಾಡಳಿತವು ARAI ಸಂಸ್ಥೆಗೆ ಒದಗಿಸಲಾಗಿರುತ್ತದೆ. ತದನಂತರ ARAI ತಾಂತ್ರಿಕ ತಂಡವು ದಿನಾಂಕ: 18-05-2026 ರಂದು ಯಲೆಚಾಕನಹಳ್ಳಿ ಗ್ರಾಮ ಸೇರಿದಂತೆ ಜಿಲ್ಲಾಡಳಿತವು ಗುರುತಿಸಲಾದ ಭೂಮಿಯ ಸ್ಥಳಗಳಿಗೆ ಮತ್ತೊಮ್ಮೆ ಭೇಟಿ ನೀಡಿ, ನಂತರ ದಿನಾಂಕ: 16-09-2026 ರಂದು ವಿಕಾಸಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವರ ಅಧ್ಯಕ್ಷತೆಯಲ್ಲಿ ARAI ಸಂಸ್ಥೆಯು, ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಿತು.

ಸದರಿ ಸಭೆಯಲ್ಲಿ ಬಸರಾಳು ಮತ್ತು ಯಲೆಚಾಕನಹಳ್ಳಿಯ ಜಾಗಗಳ ಸೂಕ್ತತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಬಸರಾಳುನಲ್ಲಿರುವ ಸುಮಾರು 100 ಎಕರೆ ಜಾಗವು ರಸ್ತೆ ಸಂಪರ್ಕ ಸುಧಾರಣೆಗೆ ಒಳಪಟ್ಟು CIE ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಬಹುದು ಎಂದು ಸಭೆಯನಲ್ಲಿ ತೀರ್ಮಾನಿಸಲಾಯಿತು. ಆದರೆ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ ಕ್ಕೆ ಹೆಚ್ಚುವರಿಯಾಗಿ 60 ಎಕರೆ ಭೂಮಿಯು ಅಗತ್ಯವಿರುತ್ತದೆ. ಎರಡೂ ಸೌಲಭ್ಯಗಳನ್ನು ಒಟ್ಟಾಗಿ ಸ್ಥಾಪಿಸಲು ಯಲೆಚಾಕನಹಳ್ಳಿ ಭೂಮಿಯನ್ನು ಸಹ ಪರ್ಯಾಯ ಸ್ಥಳವಾಗಿ ಪರಿಶೀಲಿಸಲಾಯಿತು.

ಇಲ್ಲಿ ದೀರ್ಘವಾದ ಪರೀಕ್ಷಾ ಹಾದಿ (Test track) ಮತ್ತು ಪಕ್ಕದಲ್ಲೇ ಕೈಗಾರಿಕಾ ಕೇಂದ್ರವನ್ನು ಅಭಿವೃದ್ಧಿಪಡಿಸುವ ಅವಕಾಶವಿತ್ತು. ಆದಾಗ್ಯೂ ಈ ಆಯ್ಕೆಯು ಮುಖ್ಯವಾಗಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸುವುದು (ಮೈಸೂರು-ಬೆಂಗಳೂರು ಹೆದ್ದಾರಿಯಿಂದ ಸಂಪರ್ಕ ಮತ್ತು ರೈಲ್ವೆ ಮೇಲುಸೇತುವೆ ನಿರ್ಮಾಣ) ಮುಂತಾದ ಸವಾಲುಗಳನ್ನು ಹಾಗೂ ಅಡಚಣೆಗಳನ್ನು ಒಳಗೊಂಡಿರುವುದು ತಿಳಿದು ಬಂದಿದೆ. ತದನಂತರ ಪರಾಮರ್ಶೆ ಸಭೆಯ ನಂತರ, ARAI ಸಂಸ್ಥೆಯು ದಿನಾಂಕ: 17-09-2026 ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಕ್ರಮವಾಗಿ ಯಲೆಚಾಕನಹಳ್ಳಿ ಮತ್ತು ಬಸರಾಳುನಲ್ಲಿ ಭೂಮಿಯನ್ನು ಮಂಜೂರು ಮಾಡುವಂತೆ ARAI ಸಂಸ್ಥೆಯು ಕೋರಲಾಗಿರುತ್ತದೆ.

ದಿನಾಂಕ: 25-09-2026 ರಂದು ಸಭೆಯ ನಡಾವಳಿಗಳು ಲಭ್ಯವಾಗಿದ್ದು, ದಿನಾಂಕ: 28-09-2026 ರಂದು ARAI ಸಂಸ್ಥೆಯು ತನ್ನ ಮನವಿಯನ್ನು ಪರಿಷ್ಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿರುತ್ತದೆ (ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ). ಸದರಿ ಪತ್ರದಲ್ಲಿ ಬಸರಾಳುವಿನಲ್ಲಿ CIE ಸೌಲಭ್ಯಕ್ಕಾಗಿ ಸುಮಾರು 100 ಎಕರೆ ಭೂಮಿ ಮತ್ತು ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ ಸೌಲಭ್ಯಕ್ಕಾಗಿ ಹೆಚ್ಚುವರಿಯಾಗಿ 60 ಎಕರೆ ಭೂಮಿಯನ್ನು (ಆದ್ಯತೆಯ ಮೇರೆಗೆ ಮೊದಲ ಭೂಮಿಗೆ ಹೊಂದಿಕೊಂಡಿರುವಂತೆ) ಜಾಗವನ್ನು ಗುರುತಿಸುವಂತೆ ಕೋರಲಾಯಿತು. ಈ ಪರಿಷ್ಕೃತ ಪ್ರಸ್ತಾವನೆಯು ಪ್ರಾಯೋಗಿಕ ಮಾರ್ಗವನ್ನು ಒಳಗೊಂಡಿರುತ್ತದೆ.

ಏಕೆಂದರೆ ಇದು ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ಕ್ಕೆ ಅಗತ್ಯವಿರುವ ಹೆಚ್ಚುವರಿ ಭೂಮಿಯ ವಿಷಯವನ್ನು ಬಗೆಹರಿಸಿಕೊಳ್ಳುವಾಗಲೇ CIE ಸೌಲಭ್ಯದ ಕೆಲಸವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇಷ್ಟೆಲ್ಲಾ ಪ್ರಯತ್ನಗಳು ಮತ್ತು ಕಾರ್ಯಸಾಧ್ಯವಾದ ಕ್ರಮಗಳ ಗುರುತಿಸುವಿಕೆ ಹೊರತಾಗಿಯೂ ರಾಜ್ಯ ಸರ್ಕಾರ ಹಾಗೂ ಮಂಡ್ಯ ಜಿಲ್ಲಾಡಳಿತದಿಂದ ಭೂಮಿ ಮಂಜೂರಾತಿ ಆಗದೇ ಇನ್ನೂ ಬಾಕಿ ಉಳಿದಿದೆ.

ಪ್ರಸ್ತಾವಿತ ಸೌಲಭ್ಯಗಳು ಭಾರತದ ವಾಹನ ಮತ್ತು ವಿದ್ಯುತ್ ಚಾಲಿತ ವಾಹನ (electric mobility) ಪೂರಕ ವ್ಯವಸ್ಥೆಯನ್ನು ಬಲಪಡಿಸುತ್ತವೆ, ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ ಹಾಗೂ ಈ ಪ್ರದೇಶದಲ್ಲಿ ಪೂರಕ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇವು ಕರ್ನಾಟಕದಲ್ಲಿ ಸುಧಾರಿತ ಪರೀಕ್ಷೆ, ಮೌಲ್ಯಮಾಪನ ಮತ್ತು ಉತ್ಪಾದನೆಗೆ ಸಂಬಂಧಿಸಿದ ಸಂಶೋಧನೆಗಾಗಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತವೆ.

ರಾಜ್ಯ ಸರ್ಕಾರದೊಂದಿಗೆ ಸುಮಾರು 10 ತಿಂಗಳುಗಳ ಕಾಲ ಅನೇಕ ಸಭೆಗಳನ್ನು ನಡೆಸಿ, ಚರ್ಚಿಸಿ ಹಾಗೂ ಪತ್ರ ವ್ಯವಹಾರಗಳನ್ನು ನಡೆಸಿದರೂ ಸಹ ಸಾರ್ವಜನಿಕ ಉಪಯೋಗದ ಯೋಜನೆಗಳಿಗೆ ಮೂಲಭೂತ ಅಗತ್ಯವಾದ ಭೂಮಿಯನ್ನು ಮಂಜೂರು ಮಾಡುವ ರಾಜ್ಯ ಸರ್ಕಾರದ ಹಾಗೂ ಮಂಡ್ಯ ಜಿಲ್ಲಾಡಳಿತದ ನಿರ್ಧಾರಕ್ಕಾಗಿ ಇಂತಹ ಪ್ರಮುಖ ಯೋಜನೆಯು ಕಾಯುತ್ತಿರುವುದು ದುರದೃಷ್ಟಕರ ಸಂಗತಿ ಎಂದು ನಾನು ಭಾವಿಸಿದ್ದೇನೆ.

ARAI ಬೆಳವಣಿಗೆಯು ಆಟೋಮೊಬೈಲ್ ಕ್ಷೇತ್ರದ ಮೇಲೆ ಅದು ಬೀರುವ ಸಕಾರಾತ್ಮಕ ಪ್ರಭಾವ ಮತ್ತು ಭಾರತದ ವಾಹನ ವಲಯದಲ್ಲಿ ಅದರ ವಿಸ್ತರಿಸುತ್ತಿರುವ ಪಾತ್ರದ ಹಿನ್ನೆಲೆಯನ್ನು ನೋಡಿದಾಗ ಈ ಪ್ರಸ್ತಾವನೆಯ ಮಹತ್ವವು ಇನ್ನಷ್ಟು ಸ್ಪಷ್ಟವಾಗುತ್ತದೆ. 1966ರಲ್ಲಿ ಸ್ಥಾಪಿತವಾದ ARAI ಸಂಸ್ಥೆಯು ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದ್ದು, ಇದು ವಾಹನ ಮೌಲ್ಯಮಾಪನ, ಇಂಗಾಲ ಹೊರಸೂಸುವಿಕೆ (emissions), ವಾಹನ ಸುರಕ್ಷತೆ, ಎಂಜಿನ್ ಅಭಿವೃದ್ಧಿ, ರಚನಾತ್ಮಕ ಚಲನಶೀಲತೆ (Structural dynamics), ವಾಹನ ಎಲೆಕ್ಟ್ರಾನಿಕ್ಸ್, ಪ್ರಮಾಣೀಕರಣ ಮತ್ತು ಇತರ ವಿಶೇಷ ಕ್ಷೇತ್ರಗಳಲ್ಲಿ ವ್ಯಾಪಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದೆ.

ರಾಷ್ಟ್ರದಲ್ಲಿ ಇಂತಹ ಕೇಂದ್ರಗಳು ಬೆರಳೆಣಿಕೆಯಷ್ಟು ಮಾತ್ರ ಇವೆ. ಮಹಾರಾಷ್ಟ್ರದ ಪುಣೆಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI), ಹರಿಯಾಣದ ಮಾನೇಸರ್’ನಲ್ಲಿರುವ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ ಕೇಂದ್ರ (ICAT), ಚೆನ್ನೈನಲ್ಲಿರುವ ಗ್ಲೋಬಲ್ ಆಟೋಮ್ಯಾಟಿವ್ ರಿಸರ್ಚ್ ಸೆಂಟರ್ (GARC), ಕಾಶ್ಮೀರದಲ್ಲಿರುವ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ಸ್ (NATRAX) ಸಂಸ್ಥೆಗಳು ರಾಷ್ಟ್ರದಲ್ಲಿದ್ದು, ಈ ಕೇಂದ್ರಗಳ ಕೊಡುಗೆಯಿಂದ ಇಂದು ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯಗಳಾಗಿ ಬೆಳೆದಿವೆ.

ಹೀಗಾಗಿ ಇಂತಹ ಪ್ರತಿಷ್ಠಿತ ಕೇಂದ್ರಗಳು ನಮ್ಮ ಕರ್ನಾಟಕ ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿದೆ. ಯಾವುದೇ ಕಾರಣಕ್ಕೂ ARAI ಪರೀಕ್ಷಾ ಕೇಂದ್ರವನ್ನು ಕರ್ನಾಟಕ ಕಳೆದುಕೊಳ್ಳಬಾರದು ಎಂಬುದು ನನ್ನ ಕಳಕಳಿಯಾಗಿದೆ ಹಾಗೂ ರಾಜಕೀಯವನ್ನು ಮೀರಿ ಸಾರ್ವಜನಿಕ ಪ್ರಾಮುಖ್ಯತೆ ಹೊಂದಿದ ಕೇಂದ್ರ ಸರ್ಕಾರಿ ಸ್ವಾಮ್ಯದ ಈ ಪ್ರತಿಷ್ಠಿತ ಸಂಸ್ಥೆಯನ್ನು ರಾಜ್ಯಕ್ಕೆ ಬರಮಾಡಿಕೊಳ್ಳಬೇಕಾಗಿರುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಆಯ-ವ್ಯಯದ ಭಾಷಣದ ಕಂಡಿಕೆ 350ರಲ್ಲಿ ಮಂಡ್ಯದಲ್ಲಿ ‘ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ (ARAI) ಸಂಸ್ಥೆಗೆ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ ಸ್ಥಾಪನೆಗಾಗಿ ಭೂಮಿಯನ್ನು ನೀಡಲಾಗುವುದೆಂದು ಘೋಷಣೆ ಮಾಡಿರುವುದನ್ನು ಹಾಗೂ ತಾವು ಹಲವಾರು ಸಂದರ್ಭಗಳಲ್ಲಿ ಕೈಗಾರಿಕಾ ಹೂಡಿಕೆಗಳಿಗೆ ಅಗತ್ಯವಿರುವ ಭೂಮಿಯನ್ನು ತಕ್ಷಣವೇ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳಾಗಿ ತಾವು ಸಭೆ, ಸಮಾರಂಭಗಳಲ್ಲಿ ಹಾಗೂ ಸದನದಲ್ಲಿ ಹೇಳಿರುವುದನ್ನು ಸಹ ತಮ್ಮ ಗಮನಕ್ಕೆ ತರಬಯಸುತ್ತೇನೆ, ಹಾಗೂ ದಿನಾಂಕ: 28-09-2026 ರಂದು ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಉದ್ಯೋಗ ಸೃಜಿಸಲು ಬೇಕಿದ್ದರೆ ಸಾವಿರಾರು ಎಕರೆ ಭೂಮಿ ನೀಡಲಾಗುವುದು ಎಂದು ತಾವು ಹೇಳಿರುತ್ತೀರಿ. ತಮ್ಮ ಈ ಹೇಳಿಕೆಯು ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನಾನು ಭಾವಿಸಿದ್ದೇನೆ. ಅದಾಗ್ಯೂ ಪ್ರಸ್ತಾಪಿತ ಯೋಜನೆಗೆ ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಭೂ ಮಂಜೂರಾತಿಯಲ್ಲಿ ವಿಳಂಬವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಆದುದರಿಂದ, ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿ ಹಾಗೂ ಯುವ ಸಮೂಹಕ್ಕೆ ಉದ್ಯೋಗ ಸೃಜಿಸುವ ದೃಷ್ಟಿಯಿಂದ, ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಆಶ್ವಾಸನೆ ನೀಡುವ ಬದಲು ತಾವು ರಾಜ್ಯ ಸರ್ಕಾರದಿಂದ ಮಂಡ್ಯ ಜಿಲ್ಲೆಯಲ್ಲಿ ARAI ಕೇಂದ್ರಕ್ಕೆ ಅಗತ್ಯವಿರುವ ಭೂಮಿಯನ್ನು ಕೂಡಲೇ ಮಂಜೂರು ಮಾಡಬೇಕೆಂದು ಮತ್ತೊಮ್ಮೆ ಈ ಪತ್ರದ ಮೂಲಕ ಕೋರುತ್ತೇನೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪತ್ರದಲ್ಲಿ ಬರೆದಿದ್ದಾರೆ.

Tags: araiCIE Test CentreDK Shivakumarev testing centerhd kumaraswamykarnataka industriesmandyarow about land
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

by cknewsnow desk
October 22, 2026
0

ಮೈಸೂರು ದಸರಾದಲ್ಲಿ ಅವಮಾನ ಪ್ರಸಂಗ; ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!; ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ

ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

by cknewsnow desk
October 22, 2026
0

ಜೂನಿಯರ್ ಖರ್ಗೆ ರಾಜೀನಾಮೆಗೆ ಜೆಡಿಎಸ್ ದಲಿತ ನಾಯಕರ ಅಗ್ರಹ; ಶಿಷ್ಟಾಚಾರ ಲೋಪಕ್ಕೆ ಗೃಹ ಇಲಾಖೆ ಕಾರಣ

ಅಭ್ಯರ್ಥಿಗಳಿಗೆ ಬರ; ಬಿಜೆಪಿ ಅತೃಪ್ತರಿಗೆ ಕಾಂಗ್ರೆಸ್ ಟಿಕೆಟ್ ಭಾಗ್ಯ!

ಡಿಕೆಶಿ ಸರಕಾರ ಪತನ ಸನ್ನಿಹಿತ

by cknewsnow desk
October 19, 2026
0

ಕಾಂಗ್ರೆಸ್ ಸರಕಾರ ಅಂತ್ಯದ ಹತ್ತಿರದಲ್ಲಿದೆ, ಸ್ಟಿಂಗ್'ಗೆ ಸರಕಾರ ಬಲಿಯಾಗಲಿದೆ ಎಂದ HDK

ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

ಬರದಿಂದ ಭವಿಷ್ಯದಲ್ಲಿ ಅನ್ನ, ನೀರಿಗೂ ಹಾಹಾಕಾರ

by cknewsnow desk
October 19, 2026
0

ಮುಂಗಾರು ವೈಫಲ್ಯದಿಂದ ಶೇ.82ರಷ್ಟು ಆಹಾರ ಉತ್ಪಾದನೆ ಕುಂಠಿತ

ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ

ಖಾಸಗಿ ವಾಹಿನಿ ಮುಖ್ಯಸ್ಥನ ವಿರುದ್ಧ ಶ್ರೀಮತಿ ಅನಿತಾ ಕುಮಾರಸ್ವಾಮಿ ಕಿಡಿ

by cknewsnow desk
October 19, 2026
0

ಎಲ್ಲರಿಗೂ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆ ಎಂದ ಮಾಜಿ ಶಾಸಕಿ

ಹೆಚ್.ಡಿ.ಕುಮಾರಸ್ವಾಮಿ ಬೀಸಿದ ಚಾಟಿಯಿಂದ ಎಚ್ಚೆತ್ತ ಸರಕಾರ

ಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ಲವೇ?

by cknewsnow desk
October 17, 2026
0

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಬೇಸರ

Leave a Reply Cancel reply

Your email address will not be published. Required fields are marked *

Recommended

ಸೂರ್ಯನತ್ತ ಭಾರತ; ಜಗತ್ತನ್ನು ತುದಿಗಾಲ ಮೇಲೆ ನಿಲ್ಲಿಸಿದ ಇಸ್ರೋ

ಸೂರ್ಯನತ್ತ ಭಾರತ; ಜಗತ್ತನ್ನು ತುದಿಗಾಲ ಮೇಲೆ ನಿಲ್ಲಿಸಿದ ಇಸ್ರೋ

3 years ago
ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

6 years ago

Popular News

  • ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

    10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

    0 shares
    Share 0 Tweet 0
  • ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

    0 shares
    Share 0 Tweet 0
  • ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

    0 shares
    Share 0 Tweet 0
  • ಡಿಕೆಶಿ ಸರಕಾರ ಪತನ ಸನ್ನಿಹಿತ

    0 shares
    Share 0 Tweet 0
  • ಬರದಿಂದ ಭವಿಷ್ಯದಲ್ಲಿ ಅನ್ನ, ನೀರಿಗೂ ಹಾಹಾಕಾರ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

October 22, 2026
ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

October 22, 2026
ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

October 22, 2026
ಅಭ್ಯರ್ಥಿಗಳಿಗೆ ಬರ; ಬಿಜೆಪಿ ಅತೃಪ್ತರಿಗೆ ಕಾಂಗ್ರೆಸ್ ಟಿಕೆಟ್ ಭಾಗ್ಯ!

ಡಿಕೆಶಿ ಸರಕಾರ ಪತನ ಸನ್ನಿಹಿತ

October 19, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ