ದಸರಾ ಅವ್ಯವಸ್ಥೆಗೆ ವರ್ಗಾವಣೆ ಶಿಕ್ಷೆಗೆ ಗುರಿಯಾದರಾ ಐಪಿಎಸ್ ಅಧಿಕಾರಿ
ಮೈಸೂರು: ಅರಮನೆ v/s ಸರ್ಕಾರದ ಜಟಾಪಟಿ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸೀಮಾ ಅವರ ಸ್ಥಾನಕ್ಕೆ ಕರ್ನಾಟಕ ಪೊಲೀಸ್ ಅಕಾಡೆಮಿಯ (KPA) ನಿರ್ದೇಶಕರಾಗಿದ್ದ 2012ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಎನ್. ವಿಷ್ಣುವರ್ಧನ ಅವರನ್ನು ನೇಮಿಸಲಾಗಿದೆ. ಸೀಮಾ ಲಾಟ್ಕರ್ ಅವರಿಗೆ ಮುಂದಿನ ಸ್ಥಳ ನಿಯುಕ್ತಿಯನ್ನು ಇನ್ನೂ ತೋರಿಸಿಲ್ಲ.
ನಾಡಹಬ್ಬ ದಸರಾ ವೇಳೆ ಪೊಲೀಸರ ಲೋಪದ ಹಿನ್ನೆಲೆಯಲ್ಲಿ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಆಗಿದೆ ಎನ್ನಲಾಗುತ್ತಿದೆ.
ಸಾಲು-ಸಾಲು ಲೋಪ ಎಸಗಿದ್ದಕ್ಕೆ ಬೇಸರಗೊಂಡಿದ್ದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಪೊಲೀಸರ ಲೋಪಗಳ ಕುರಿತು ಪತ್ರ ಬರೆದಿದ್ದರು.
ಅಂಬಾರಿ ಕಟ್ಟುವ, ಅಂಬಾರಿ ಹಿಂತಿರುಗಿಸುವ, ಜಟ್ಟಿ ಕಾಳಗ ನಿಂತ ಪ್ರಕರಣ, ಅರಮನೆಯ ಪಾರ್ಕಿಂಗ್ ವಿಚಾರದಲ್ಲಿ ಪೊಲೀಸರ ಲೋಪ, ಅರಮನೆ ಸಿಬ್ಬಂದಿ ಜೊತೆಗೆ ಪೊಲೀಸರ ಅನುಚಿತ ವರ್ತನೆ, ಅಂಬಾರಿ ಕಟ್ಟುವ ಸ್ಥಳದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಪೊಲೀಸರು ಸೇರಿದಂತೆ ಎಲ್ಲಾ ಲೋಪಗಳ ಕುರಿತು ರಾಜಮಾತೆ ಸುಧೀರ್ಘ ಪತ್ರ ಬರೆದಿದ್ದರು.
ಈ ವೇಳೆ ಸಚಿವ ಯತೀಂದ್ರ ಅವರ ಬಳಿ ತಮ್ಮ ತಪ್ಪಿಲ್ಲ ಎಂದು ಕಮಿಷನರ್ ಸೀಮಾ ಲಾಟ್ಕರ್ ತಮ್ಮದೇನೂ ತಪ್ಪಿಲ್ಲ ಎಂದು ಹೇಳಿದ್ದರು. ನಾಲ್ಕು ಪುಟದ ಪತ್ರದ ಮೂಲಕ ಸಮಜಾಯಿಷಿ ನೀಡಿದ್ದರು.ದಸರಾ ಜಟಾಪಟಿಗೆ ಮೊದಲ ವಿಕೆಟ್ ಪತನವಾಗಿದೆ. ಮುಂದೇನು ಕಾದು ನೋಡಬೇಕಿದೆ.
ಮೈಸೂರಿನ ಮೊದಲ ಮಹಿಳಾ ಆಯುಕ್ತರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸೀಮಾ ಅವರು; ಜನವರಿ 2025ರಲ್ಲಿ ಇವರು ಡಿಐಜಿಪಿ (DIGP) ಶ್ರೇಣಿಗೆ ಬಡ್ತಿ ಪಡೆದಿದ್ದರು.

ಇನ್ನೊಂದೆಡೆ ಹಿರಿಯ ಐಪಿಎಸ್ ಅಧಿಕಾರಿ ಎನ್.ವಿಷ್ಣುವರ್ಧನ ಅವರನ್ನು ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
2012ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ವಿಷ್ಣುವರ್ಧನ ಅವರು, ಈ ಹಿಂದೆ ಪೊಲೀಸ್ ಉಪ ಮಹಾನಿರೀಕ್ಷಕರಾಗಿ (ಡಿಐಜಿ) ಹಾಗೂ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಬಹಳ ಪ್ರಭಾವಿ ಕರಗಿದ ಸೀಮಾ ಅವರು ಡಿಕೆಶಿ ಸಿಎಂ ಆದ ಕೂಡಲೇ ವರ್ಗಾವಣೆ ಆಗುತ್ತಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೆ ದಸರಾ ಅವ್ಯವಸ್ಥೆ ತುಪ್ಪ ಸುರಿಯಿತು. ಮೂರು ವರ್ಷಗಳ ಕಾಲ ಅವರು ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದರು.
ಐಪಿಎಸ್ (ವೇತನ) ನಿಯಮಗಳು, 2016ರ ನಿಯಮ 12ರ ಅಡಿಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರ ಹುದ್ದೆಯನ್ನು ಪೊಲೀಸ್ ಮಹಾನಿರ್ದೇಶಕರ ತನಿಖಾ ವಿಭಾಗದ (ಸಿಐಡಿ) ಡಿಐಜಿಪಿ ಕೇಡರ್ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿ ಹೊಂದಿರುವ ಹುದ್ದೆ ಎಂದು ಸರ್ಕಾರ ತಿಳಿಸಿದೆ.

















