• About
  • Advertise
  • Careers
  • Contact
Wednesday, November 18, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

Belonging: A Journey of Love

cknewsnow desk by cknewsnow desk
November 17, 2026
in CKPLUS, CKPRESS, EDITORS'S PICKS, EXCLUSIVE, NEWS & VIEWS
Reading Time: 3 mins read
0
917
VIEWS
FacebookTwitterWhatsuplinkedinEmail

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆಯ ಚಿತ್ರಗಳು

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಸೋಮವಾರ ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಅಧಿಕೃತವಾಗಿ ಬಿಡುಗಡೆಯಾಯಿತು.

ಹಾರ್ಪರ್ ಕಾಲಿನ್ಸ್ ಇಂಡಿಯಾ (HarperCollins India) ಪ್ರಕಟಿಸಿರುವ ಈ 544 ಪುಟಗಳ ಕೃತಿಯು, ಈಗಾಗಲೇ ಮಾರಾಟದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಸತ್ಯವನ್ನು ತೆರೆದಿಡುವ ಪ್ರಯತ್ನ

ಸೋನಿಯಾ ಗಾಂಧಿಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, “ನನ್ನ ಹಾಗೂ ನಮ್ಮ ಕುಟುಂಬದ ಬಗ್ಗೆ ಅನೇಕ ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಬರೆಯಲಾಗಿದೆ. ನನ್ನ ವೈಯಕ್ತಿಕ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಸತ್ಯವನ್ನು ಜನರ ಮುಂದಿಡಲು ಈ ಪುಸ್ತಕವನ್ನು ಬರೆದಿದ್ದೇನೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅವರು ತಮ್ಮ ಅತ್ತೆ ಇಂದಿರಾ ಗಾಂಧಿ ಅವರಿಗೆ ಸೇರಿದ್ದ ನೇರಳೆ-ಗುಲಾಬಿ ಬಣ್ಣದ ಬಲುಚರಿ ಸೀರೆಯನ್ನು ಧರಿಸಿ ಗಮನ ಸೆಳೆದರು. ವೇದಿಕೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಅವರೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಅವರು ಭಾವುಕರಾಗಿ ಸ್ಮರಿಸಿದರು.

ಇಟಲಿಯ ವೆನೆಟೊದಲ್ಲಿನ ಬಾಲ್ಯ, 1965ರಲ್ಲಿ ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮಕಥೆ ಮತ್ತು ಭಾರತಕ್ಕೆ ಬಂದು ಇಲ್ಲಿನ ಸಂಸ್ಕೃತಿಗೆ ಒಗ್ಗಿಕೊಂಡ ಬಗೆಯನ್ನು ಕೃತಿಯಲ್ಲಿ ವಿವರಿಸಲಾಗಿದೆ.

ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ಆಘಾತ, ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿದ ಸಂದರ್ಭ, 2004ರಲ್ಲಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ನಿರ್ಧಾರ ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದಂತಹ ಮಹತ್ವದ ಘಟನೆಗಳನ್ನು ಈ ಪುಸ್ತಕದಲ್ಲಿ ಮುಕ್ತವಾಗಿ ತೆರೆದಿಡಲಾಗಿದೆ.

ಮಾರಾಟದಲ್ಲಿ ಹೊಸ ದಾಖಲೆ

ನವೆಂಬರ್ 10ರಂದು ಮಾರುಕಟ್ಟೆಗೆ ಬಂದ ಈ ಪುಸ್ತಕವು ಬಿಡುಗಡೆಯಾದ ಒಂದೇ ವಾರದೊಳಗೆ 2 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ ಎಂದು ಹಾರ್ಪರ್ ಕಾಲಿನ್ಸ್ ಇಂಡಿಯಾದ ಸಿಇಒ ಅನಂತ್ ಪದ್ಮನಾಭನ್ ತಿಳಿಸಿದ್ದಾರೆ. ಪುಸ್ತಕ ಬಿಡುಗಡೆಯಾದ ಮೊದಲ ದಿನವೇ ತ್ವರಿತ ಡೆಲಿವರಿ ಆ್ಯಪ್‌ಗಳ ಮೂಲಕ 15,000ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುವ ಮೂಲಕ ದೇಶದ ಅತಿ ವೇಗವಾಗಿ ಮಾರಾಟವಾದ ಆತ್ಮಚರಿತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗಣ್ಯರ ಉಪಸ್ಥಿತಿ

ಕೇವಲ ಆಹ್ವಾನಿತರಿಗೆ ಮಾತ್ರ ಸೀಮಿತವಾಗಿದ್ದ ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ಭಾಗವಹಿಸಿದ್ದರು.

ವಿಶೇಷವೆಂದರೆ, ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ನಾಯಕರು, ತಮಿಳುನಾಡು ಮುಖ್ಯಮಂತ್ರಿ ವಿಜಯ್, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಉಪಸ್ಥಿತಿಯು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

Tags: belonging a journey of loveckcknewsnowcongress partyPoliticsPriyanka Gandhi
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾವೇರಿ ಬಿಕ್ಕಟ್ಟು; ಮೋದಿ ಮಧ್ಯಪ್ರವೇಶಕ್ಕೆ ಹೆಚ್.ಡಿ.ದೇವೇಗೌಡರ ಒತ್ತಾಯ

ಕಾವೇರಿ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

by cknewsnow desk
November 17, 2026
0

ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಾವೇರಿ ನ್ಯಾಯಮಂಡಳಿ ತೀರ್ಪು ಮರು ಪರಿಶೀಲಿಸಿ ಎಂದು ಆಗ್ರಹ

ರಾಜ್ಯ ರಾಜಕಾರಣಕ್ಕೆ ಬರ್ತೀರಾ ಎಂದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ HDK

ರಾಜ್ಯ ರಾಜಕಾರಣಕ್ಕೆ ಬರ್ತೀರಾ ಎಂದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ HDK

by cknewsnow desk
November 15, 2026
0

ರಾಷ್ಟ್ರ ರಾಜಕಾರಣದಲ್ಲಿ ಎಷ್ಟೇ ಬ್ಯುಸಿ ಇದ್ದರೂ ರಾಮನಗರಕ್ಕೆ ಸಮಯ ಕೊಡುತ್ತೇನೆ

ಶ್ರೀ ಹಾಸನಾಂಬೆ ದರ್ಶನೋತ್ಸವ, ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ #live

ಶ್ರೀ ಹಾಸನಾಂಬೆ ದರ್ಶನೋತ್ಸವ, ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ #live

by cknewsnow desk
November 15, 2026
0

ಭಕ್ತರಿಂದ ಕಳೆಗಟ್ಟಿದ ಹಾಸನ ನಗರ

ಕರ್ನಾಟಕ, ತಮಿಳುನಾಡು ಜಲ ಸಂಕಷ್ಟಕ್ಕೆ ಮೇಕೆದಾಟು ಒಂದೇ ಪರಿಹಾರ ಎಂದ ಸಿಎಂ

ಕಾವೇರಿ ನೀರಿನ ವಿಷಯವೇ ತಮಿಳುನಾಡು ರಾಜಕೀಯ ಪಕ್ಷಗಳಿಗೆ ವೋಟಿನಾಧಾರ!

by cknewsnow desk
November 15, 2026
0

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿ

ದಸರಾ ಜಟಾಪಟಿ: ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ವರ್ಗಾವಣೆ

ದಸರಾ ಜಟಾಪಟಿ: ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ವರ್ಗಾವಣೆ

by cknewsnow desk
November 15, 2026
0

ದಸರಾ ಅವ್ಯವಸ್ಥೆಗೆ ವರ್ಗಾವಣೆ ಶಿಕ್ಷೆಗೆ ಗುರಿಯಾದರಾ ಐಪಿಎಸ್ ಅಧಿಕಾರಿ

ಕರ್ನಾಟಕ ಲೋಕಸೇವಾ ಆಯೋಗ ಮೂಲಕ 750 ಕೃಷಿ ಅಧಿಕಾರಿಗಳ ಹುದ್ದೆಗಳ ಭರ್ತಿ

Kpsc ಪ್ರೊಬೇಷನರ್‌ ಪರೀಕ್ಷೆಗೆ ಖಾಕಿ ಸರ್ಪಗಾವಲು

by cknewsnow desk
November 15, 2026
0

15 ಜಿಲ್ಲೆಗಳ 345 ಉಪಕೇಂದ್ರಗಳಲ್ಲಿ ಪರೀಕ್ಷೆ; ಎಲ್ಲೆಡೆ ಹದ್ದಿನ ಕಣ್ಣು, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆ ಸಿಪಿಐ ಲಿಂಗರಾಜು ಸಮಾಜಮುಖಿ ಕೆಲಸಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಪ್ರಶಂಸೆ

ಗುಡಿಬಂಡೆ ಸಿಪಿಐ ಲಿಂಗರಾಜು ಸಮಾಜಮುಖಿ ಕೆಲಸಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಪ್ರಶಂಸೆ

5 years ago
ಶಿಕ್ಷಣವನ್ನು ಶೀಲ ಸಂಪತ್ತು ಎಂದಿದ್ದರು ಸ್ವಾಮಿ ವಿವೇಕಾನಂದರು

ಶಿಕ್ಷಣವನ್ನು ಶೀಲ ಸಂಪತ್ತು ಎಂದಿದ್ದರು ಸ್ವಾಮಿ ವಿವೇಕಾನಂದರು

5 years ago

Popular News

  • Belonging: A Journey of Love

    0 shares
    Share 0 Tweet 0
  • ಕಾವೇರಿ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

    0 shares
    Share 0 Tweet 0
  • ರಾಜ್ಯ ರಾಜಕಾರಣಕ್ಕೆ ಬರ್ತೀರಾ ಎಂದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ HDK

    0 shares
    Share 0 Tweet 0
  • ಶ್ರೀ ಹಾಸನಾಂಬೆ ದರ್ಶನೋತ್ಸವ, ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ #live

    0 shares
    Share 0 Tweet 0
  • ಕಾವೇರಿ ನೀರಿನ ವಿಷಯವೇ ತಮಿಳುನಾಡು ರಾಜಕೀಯ ಪಕ್ಷಗಳಿಗೆ ವೋಟಿನಾಧಾರ!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

Belonging: A Journey of Love

November 17, 2026
ಕಾವೇರಿ ಬಿಕ್ಕಟ್ಟು; ಮೋದಿ ಮಧ್ಯಪ್ರವೇಶಕ್ಕೆ ಹೆಚ್.ಡಿ.ದೇವೇಗೌಡರ ಒತ್ತಾಯ

ಕಾವೇರಿ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

November 17, 2026
ರಾಜ್ಯ ರಾಜಕಾರಣಕ್ಕೆ ಬರ್ತೀರಾ ಎಂದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ HDK

ರಾಜ್ಯ ರಾಜಕಾರಣಕ್ಕೆ ಬರ್ತೀರಾ ಎಂದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ HDK

November 15, 2026
ಕರ್ನಾಟಕ, ತಮಿಳುನಾಡು ಜಲ ಸಂಕಷ್ಟಕ್ಕೆ ಮೇಕೆದಾಟು ಒಂದೇ ಪರಿಹಾರ ಎಂದ ಸಿಎಂ

ಕಾವೇರಿ ನೀರಿನ ವಿಷಯವೇ ತಮಿಳುನಾಡು ರಾಜಕೀಯ ಪಕ್ಷಗಳಿಗೆ ವೋಟಿನಾಧಾರ!

November 15, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ