• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home ET CINEMA

ಚಿರಸ್ಮರಣೀಯ ಚಿರಂಜೀವಿ

P K Channakrishna by P K Channakrishna
July 27, 2020
in ET CINEMA
Reading Time: 1 min read
0
ಚಿರಸ್ಮರಣೀಯ ಚಿರಂಜೀವಿ
921
VIEWS
FacebookTwitterWhatsuplinkedinEmail

ಯಾಕೆ ಹೀಗೆ ಮಾಡಿಬಿಟ್ಟಿರಿ? ಎಲ್ಲರೂ ಹೋಗುವವರೇ? ಇಂದಲ್ಲ, ನಾಳೆ ಅಥವಾ ನಾಡಿದ್ದು. ಆದರೆ ನೀವು ಹೋಗುವ ಸಮಯ ಖಂಡಿತಾ ಇದಾಗಿರಲಿಲ್ಲ. ಬಹಳಷ್ಟು ಆತುರ ನಿಮ್ಮದು. ನಿಮ್ಮ ನಗು, ನಿಮ್ಮ ಮುಗ್ಧತೆ ಅದೆಷ್ಟು ಸಹಜ.. ಅದೆಷ್ಟು ತಿಳಿ. ಅಷ್ಟೇ ಸಹಜತೆಯಿಂದ ಪುಟ್ಟ ಜೀವನವನ್ನು ಮುಗಿಸಿ ನಮ್ಮ ಪಾಲಿಗೆ ಬೆಟ್ಟದಷ್ಟು ಕನಸುಗಳನ್ನು ಬಿಟ್ಟು ಹೊರಟುಬಿಟ್ಟಿದ್ದೀರಿ.

‘ವಾಯುಪುತ್ರ’ದಿಂದ ಮೊದಲುಗೊಂಡು ‘ಆದ್ಯಾ’ ವರೆಗಿನ ನಿಮ್ಮ ಚಿತ್ರಗಳಲ್ಲಿ ನನ್ನನ್ನು ಇನ್ನಿಲ್ಲದಂತೆ ಕಾಡಿದ್ದು ’ಅಮ್ಮ ಐ ಲವ್ ಯು’. ಈ ಸಿನಿಮಾದಲ್ಲಿ ನಿಮ್ಮ ನಟನೆ ಮನೋಜ್ಞ. ಪ್ರತಿ ದೃಶ್ಯದಲ್ಲೂ ಕಣ್ಣಾಲಿಗಳಿಗೆ ಕಂಬನಿ ಸ್ಪರ್ಶಿಸುವಂತೆ ಮಾಡಿದ ನಿಮ್ಮ ಅಭಿನಯಕ್ಕೆ ಅದೆಷ್ಟು ದೊಡ್ಡ ’ಅಕ್ಷರಮಾಲೆ’ ಕಟ್ಟಿದರೂ ಸಾಲದು. ಪ್ರತಿ ತಾಯಿಗೂ ನಿಮ್ಮಂಥ ಮಗನೇ ಇರಲಿ ಎನ್ನುವಂತೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ನೀವು, ಆ ಚಿತ್ರದ ಮೂಲಕ ಎಲ್ಲ ಅಮ್ಮಂದಿರ ಕನಸಿನ ಮಗನಾಗಿಬಿಟ್ಟಿದ್ದಿರಿ. ಈಗ ಅಂತಹ ತಾಯಂದಿರಿಂದ ಕಣ್ಣೀರು ಹಾಕಿಸುತ್ತಿದ್ದೀರಿ. ಯಾಕೆ ಹೀಗೆ ಮಾಡಿದಿರಿ ಚಿರಂಜೀವಿ?

ಭಾನುವಾರ ಸಂಜೆ ವೇಳೆಗೆ ನಿಮ್ಮ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಎದೆ ಒಡೆದ ಹಾಗಾಯಿತು. ಕ್ಷಣಮಾತ್ರದಲ್ಲಿ ನಿಮ್ಮ ಕಲ್ಮಶವಿಲ್ಲದ ನಗುವು ಮತ್ತು ’ಅಮ್ಮ ಐ ಲವ್ ಯು’ ಚಿತ್ರದಲ್ಲಿನ ನಿಮ್ಮ ಸಹಜಾಭಿನಯ ಕಣ್ಣಲ್ಲಿ ತುಂಬಿಹೋಯಿತು. ಆಗರ್ಭ ಸಿರಿವಂತರ ಮನೆಮಗನೊಬ್ಬ ಅನಾರೋಗ್ಯಕ್ಕೆ ಗುರಿಯಾದ ತಾಯಿಯನ್ನು ಉಳಿಸಿಕೊಳ್ಳಲು ಒಂದು ಮಂಡಲಕಾಲ ಭಿಕ್ಷಾಟನೆ ಮಾಡುವ ಕಥೆ.. ಹಾಗೆ ಅಮ್ಮನನ್ನು ಉಳಿಸಿಕೊಳ್ಳಲು ಭಿಕ್ಷೆ ಬೇಡಿದ್ದ ನೀವು ಆ ಜವರಾಯನನ್ನು ಹೇಗಾದರೂ ಹಿಮ್ಮಟ್ಟಿಸಿ ಬಹಳಷ್ಟು ದಿನ ನಮ್ಮ ಜತೆಯಲ್ಲೇ ಇರಬಹುದಿತ್ತಲ್ಲವೇ ಚಿರಂಜೀವಿ?

ಸಾವಿನ ಕ್ಷಣಗಳನ್ನು ಎಣಿಸುತ್ತ ಮಲಗಿದ್ದ ತಾಯಿಯನ್ನು ಉಳಿಸಿಕೊಳ್ಳಲು ನೀವೆಷ್ಟು ಕಷ್ಟಪಟ್ಟೀರಿ. ನಿಮಗೆ ಬಿದ್ದ ಪೆಟ್ಟುಗಳೆಷ್ಟೋ, ಆದ ಅಪಮಾನಗಳೆಷ್ಟೋ, ಅಮ್ಮನಿಗಾಗಿ ಹಳಸಿದ ಅನ್ನವನ್ನೂ ತಿನ್ನಬೇಕಾದ ಸ್ಥಿತಿಯಲ್ಲೂ ಅದೇ ಸ್ಥಿಪ್ರಜ್ಞೆ ಮತ್ತು ಮಾತೃಪ್ರೇಮದಿಂದ ಅದು ನಟನೆಯೋ ಅಥವಾ ಚಿರಂಜೀವಿಯೋ ಹೆತ್ತ ಅಮ್ಮನಿಗಾಗಿ ಹೀಗೆ ಮಾಡುತ್ತಿದ್ದಾರೋ ಎನ್ನವಷ್ಟು ಆರ್ದ್ರವಾಗಿ, ಸಹಜವಾಗಿ ನಟಿಸಿದ ನೀವು, ’ನಾನಿನ್ನೂ ಇರಬೇಕು, ಮದುವೆಯಾಗಿ ಎರಡು ವರ್ಷ ದಾಟಿಲ್ಲ. ಅಪ್ಪನಾಗಬೇಕು, ನನ್ನ ಹೆತ್ತಪ್ಪನನ್ನು ತಾತನನ್ನಾಗಿಸಬೇಕು, ನೆಚ್ಚಿನ ಮಡದಿಯ ಮೊಗದಲ್ಲಿ ಆನಂದ ಕಾಣಬೇಕು, ಪ್ರೀತಿಸಿ ಹಾರೈಸುವ ಅಭಿಮಾನಿಗಳನ್ನು ಚಿರಕಾಲ ಮನರಂಜಿಸಬೇಕು’ ಎಂದು ಆ ದೇವರನ್ನು ಕೇಳಿಕೊಳ್ಳಬಾರದಾಗಿತ್ತೆ ಚಿರಂಜೀವಿ? ಯಾಕಿಷ್ಟು ಆತುರ? ನಿಮ್ಮನ್ನು ಕರೆದೊಯ್ದ ಜವರಾಯನಿಗೆ ಧಿಕ್ಕಾರ.

ಅಮ್ಮ.. ಚಿತ್ರದಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ತೊಯ್ದು ನಡುಗುತ್ತಿದ್ದ ನಿಮ್ಮನ್ನು ಹುಡುಕಿಕೊಂಡು ಬಂದ ನಿಮ್ಮ ಪ್ರೇಯಸಿ, ಕೈಗೊಂದು ರೇನ್‌ಕೋಟು, ಒಂದಿಷ್ಟು ಕಾಸು ಕೊಡಲು ಬಂದಾಗ ನಿರಾಕರಿಸುವ ನೀವು, ಮೌನವಾಗಿ ನಿಂತುಬಿಟ್ಟಾಗ ಆ ಹುಡುಗಿ ಕೇಳುತ್ತಾಳೆ. ‘ಭಿಕ್ಷೆಯಾಗಿ ಇದನ್ನು ಹಾಕಿದರೆ ತೆಗೆದುಕೊಳ್ಳುತ್ತೀಯಾ?’.. ಮರುಕ್ಷಣವೇ ನಡುರಸ್ತೆಯಲ್ಲಿ ಮೊಣಕಾಲೂರಿ ಭಿಕ್ಷೆಗೆ ಕೈಚಾಚುವ ನೀವು ನನ್ನ ಕಣ್ಣುಗಳನ್ನು ತುಂಬಿಸಿದ್ದು ಸುಳ್ಳಲ್ಲ. ಆ ಕ್ಷಣ ನನ್ನ ಕಂಗಳಿಂದ ಜಾರಿಬಿದ್ದ ಹನಿಯಲ್ಲಿ ನೀವಿದ್ದಿರಿ. ಅಷ್ಟು ಸಹಜ ಅಭಿನಯದ ನೀವು ಆ ಸಾವಿನ ರಾಜನನ್ನು ನಿಜವಾಗಿ ಹಿಮ್ಮೆಟ್ಟಿಸಲಾಗಲಿಲ್ಲವಲ್ಲ. ಅಟ್‌ಲೀಸ್ಟ್, ಮಡದಿಗಾಗಿ, ಮನೆಯವರಿಗಾಗಿಯಾದರೂ ಇನ್ನಷ್ಟು ದಿನ ಟೈಂ ಕೊಡು ಎಂದು ಅವನನ್ನು ಕೇಳಬಹುದಿತ್ತಲ್ಲವೇ? ಯಾಕೆ ಹೀಗೆ ಮಾಡಿಬಿಟ್ಟಿರಿ ಚಿರಂಜೀವಿ?

ಭಿಕ್ಷಾಟನೆ ವ್ರತವನ್ನು ಪೂರೈಸಿ ಮನೆಗೋಡಿ ಬರುವ ನೀವು ಸಾವಿನ ಹಾಸಿಗೆಯಲ್ಲಿ ಇನ್ನು ನಿಶ್ಚಲವಾಗಿ ಮಲಗಿದ್ದ ಅಮ್ಮನನ್ನು ನೋಡಿ ಚಲಿಸಿಹೋಗುತ್ತೀರಿ. ಅತ್ತ ಒಳಗಿದ್ದ ದುಃಖ ಕಟ್ಟೆಯೊಡೆಯದ, ಉಕ್ಕಿಬರುತ್ತಿದ್ದ ನೋವನ್ನು ಅದುಮಿಟ್ಟುಕೊಳ್ಳಲಾಗದ ಅಸಹಾಯಕ ಮಗನಾಗಿ ಅದ್ಹೇಗೆ ನಟಿಸಿದಿರಿ ಚಿರಂಜೀವಿ? ಆ ಪಾತ್ರಕ್ಕೆ ಅಷ್ಟು ನಿರಾಯಾಸವಾಗಿ ಹೇಗೆ ಜೀವ ತುಂಬಿದಿರಿ? ‘ಅಮ್ಮ, ಮೊದಲಿನ ಥರಾ ಮಾತಾಡೋದು ಬೇಡ. ಓಡಾಡೋದು ಬೇಡ, ನನ್ನ ಜತೆಯಲ್ಲಿ ಇದ್ದರೆ ಸಾಕು. ನನ್ನೆಲ್ಲ ನಂಬಿಕೆ ಬಿಟ್ಟುಹೋದ್ರೂನು ನಿನ್ನ ಮೇಲಿನ ನಂಬಿಕೆಯನ್ನು ಮಾತ್ರ ನಾನು ಬಿಟ್ಟಿಲ್ಲಮ್ಮ. ನನ್ನನ್ನು ಬಿಟ್ಟುಹೋಗಿ ಮೋಸ ಮಾಡಬೇಡಮ್ಮ.’

ಏನಿದು ಚಿರಂಜೀವಿ? ಮಾತಿನಲ್ಲೇ ಮನಸ್ಸಿಗೆ ನಾಟಿಬಿಟ್ಟ ನಿಮ್ಮ ಅಭಿನಯವನ್ನು ಆರಾಧಿಸದಿರಲು ಹೇಗೆ ಸಾಧ್ಯ?

’ನೋಡಮ್ಮ, ನಿನ್ನ ಮುಂದೆ ಒಬ್ಬ ಭಿಕ್ಷುಕನಾಗಿ ನಿಂತಿದ್ದೀನಮ್ಮ.. ನಿನ್ನ ಮಗ ನಿನ್ನ ಕೈಜೋಡಿಸಿ ಬೇಡ್ತಾ ಇದಾನೆ. ಸ್ವಲ್ಪ ದಿನವಾದ್ರೂನು ನಿನ್ನ ಉಸಿರನ್ನ ಭಿಕ್ಷೆಯಾಗಿ ನೀಡಮ್ಮ.. ಅಮ್ಮ ಈ ಭಿಕ್ಷುಕನಿಗೆ ಭಿಕ್ಷೆ ಹಾಕಮ್ಮ..’ ಎಂದು ತೆರೆಯ ಮೇಲೆ ಬಿಕ್ಕಳಿಸಿದ ನೀವು ನಮ್ಮನ್ನು ಆವರಿಸಿಕೊಂಡುಬಿಟ್ಟಿದ್ದು ಹುರುಳಲ್ಲ. ಆಗ ಅತ್ತಿದ್ದು ನೀವಲ್ಲ, ನಾವು…

ಕೊನೆಪಕ್ಷ ನೀವು ಆ ದೇವರಲ್ಲಿ ಪ್ರಾಣಭಿಕ್ಷೆ ಕೇಳಬೇಕಿತ್ತು. ನಾನು ಇನ್ನೊಂದಿಷ್ಟು ಕಾಲ ಇರಲೇಬೇಕು ಎಂದು ರಚ್ಚೆ ಹಿಡಿಯಬೇಕಿತ್ತು. ನಮ್ಮೆಲ್ಲರ ಜತೆ ನೂರುಕಾಲ ಇರಬೇಕಿತ್ತು. ಬಟ್, ಹೊರಟುಹೋದಿರಿ ಚಿರಂಜೀವಿ..

ಚಿರು ಮಿಸ್ ಯು, ಚಿರು ಲವ್ ಯು…

Tags: chiranjeevi sarjakannada cinemameghana rajsandalwoodSarja
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

by cknewsnow desk
April 16, 2024
0

ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ

ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್‌ಗೆ ನೋಟಿಸ್

ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್‌ಗೆ ನೋಟಿಸ್

by cknewsnow desk
December 10, 2023
0

ಗುಟ್ಕಾ ಜಾಹೀರಾತು ತಂದಿಟ್ಟ ಸಂಕಷ್ಟ

ಧೂಳ್ ಎಬ್ಬಿಸುತ್ತಿದೆ ಸಲಾರ್ ಟ್ರೇಲರ್

ಧೂಳ್ ಎಬ್ಬಿಸುತ್ತಿದೆ ಸಲಾರ್ ಟ್ರೇಲರ್

by cknewsnow desk
December 5, 2023
0

ಜಾಲತಾಣ ಜಗತ್ತಿನಲ್ಲಿ ಪ್ರಭಾಸ್ ಅಭಿಮಾನಿಗಳ ಹಬ್ಬವೋ ಹಬ್ಬ

ಕಾಂತಾರ-2 FIRST LOOK

ಕಾಂತಾರ-2 FIRST LOOK

by cknewsnow desk
November 27, 2023
0

ಬೆಚ್ಚಿಬೀಳೀಸಿದ ರಿಷಬ್‌ ಶೆಟ್ಟಿ ಅವತಾರ

ಕಾಂತಾರ 2 ಫಸ್ಟ್ ಲುಕ್: ರಿಷಬ್ ಶೆಟ್ಟಿ ಭಯಂಕರ

ಕಾಂತಾರ 2 ಫಸ್ಟ್ ಲುಕ್: ರಿಷಬ್ ಶೆಟ್ಟಿ ಭಯಂಕರ

by P K Channakrishna
November 27, 2023
0

ಏಳು ಭಾಷೆಗಳಲ್ಲಿ ನಿರ್ಮಾಣ; ಕನ್ನಡ ಚಿತ್ರರಂಗದ ದಾಖಲೆ

ಪೈರಸಿ ಹಾವಳಿಯಿಂದ ವರ್ಷಕ್ಕೆ 20,000 ಕೋಟಿ ರೂ. ನಷ್ಟ

ಪೈರಸಿ ಹಾವಳಿಯಿಂದ ವರ್ಷಕ್ಕೆ 20,000 ಕೋಟಿ ರೂ. ನಷ್ಟ

by P K Channakrishna
November 5, 2023
0

ಸಿನಿಮಾ ಪೈರಸಿ ತಡೆಗೆ ಕೇಂದ್ರದಿಂದ ಕಠಿಣ ಕ್ರಮ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್

Next Post
ಬಾಲುಗಾರು… ಅದ್ಭುತಃ!!

ಬಾಲುಗಾರು... ಅದ್ಭುತಃ!!

Leave a Reply Cancel reply

Your email address will not be published. Required fields are marked *

Recommended

ನಂದಿ ಗಿರಿಧಾಮ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ, 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ, ರೋಪ್ ವೇ ಕನಸು ನನಸಾಗಲಿದೆ ಎಂದ ಸಚಿವ ಡಾ.ಕೆ.ಸುಧಾಕರ್

ನಂದಿ ಗಿರಿಧಾಮ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ, 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ, ರೋಪ್ ವೇ ಕನಸು ನನಸಾಗಲಿದೆ ಎಂದ ಸಚಿವ ಡಾ.ಕೆ.ಸುಧಾಕರ್

5 years ago
ಮೋದಿ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ

ಪರೀಕ್ಷಾ ಪೇ ಚರ್ಚಾದ 5ನೇ ಆವೃತ್ತಿಯಲ್ಲಿ ಮೋದಿ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ