• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಸರ್ವಾಧಿಕಾರಿಗಳಿಗೇ ಚರಮಗೀತೆ ಹಾಡಿದ ಸೋಶಿಯಲ್ ಮೀಡಿಯಾ

cknewsnow desk by cknewsnow desk
July 28, 2020
in GUEST COLUMN
Reading Time: 1 min read
1
ಸರ್ವಾಧಿಕಾರಿಗಳಿಗೇ ಚರಮಗೀತೆ ಹಾಡಿದ ಸೋಶಿಯಲ್ ಮೀಡಿಯಾ
943
VIEWS
FacebookTwitterWhatsuplinkedinEmail

ಕಲಬುರಗಿಯಲ್ಲಿ ಫೆ. 5, 6 ಮತ್ತು 7, 2020 ರಂದು ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಮಾಧ್ಯಮ: ಸವಾಲುಗಳು’ ಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣಗಳ ಕುರಿತು ಹಿರಿಯ ಪತ್ರಕರ್ತ ಸುಭಾಷ್ ಹುಗಾರ್ ಅವರು ಮಾಡಿರುವ ಪೂರ್ಣ ಭಾಷಣ ಇಲ್ಲಿದೆ…
***
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರೇ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಅವರೇ, ಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ವಿಜಯ ಕರ್ನಾಟಕ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ ಅವರೇ, ಆಶಯ ಭಾಷಣ ಮಾಡಿದ ಪ್ರಜಾವಾಣಿ ಸಂಪಾದಕರಾದ ಶ್ರೀ ರವೀಂದ್ರ ಭಟ್ ಅವರೇ, ವಿವಿಧ ವಿಷಯಗಳ ಮೇಲೆ ತಮ್ಮ ವಿಚಾರಗಳನ್ನು ಮಂಡನೆ ಮಾಡಿದ ವಿಜಯವಾಣಿ ಸಂಪಾದಕರಾದ ಶ್ರೀ ಕೆ.ಎನ್.ಚನ್ನೇಗೌಡ ಅವರೇ, ಸುವರ್ಣ ನ್ಯೂಸ್ ನ ಎ.ಎಸ್.ರಮಾಕಾಂತ್ ಅವರೇ, ಶ್ರೀಮತಿ ಕೋಡಿಬೆಟ್ಟು ರಾಜಲಕ್ಷ್ಮಿ ಅವರೇ ಮತ್ತು ಕಲಬುರಗಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿರುವ ಕನ್ನಡ ಸಾಹಿತ್ಯ ಪ್ರೇಮಿಗಳೇ…

ಈ ಮಾಧ್ಯಮ ಗೋಷ್ಠಿ ವಾಸ್ತವವಾಗಿ 12.30ಕ್ಕೆ ಆರಂಭವಾಗಬೇಕಿತ್ತು. ಆದರೆ, ಎರಡು ಗಂಟೆ ತಡವಾಗಿ ಆರಂಭವಾಗುತ್ತಿದೆ. ಈ ಗೋಷ್ಠಿಯ ನಂತರ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದ ಸೇರಿದಂತೆ ಇನ್ನೂ ಹಲವು ಮಹತ್ವದ ಗೋಷ್ಠಿಗಳು ನಡೆಯಬೇಕಿವೆ. ಜತೆಗೆ, ಬೆಳಿಗ್ಗೆಯಿಂದ ನಡೆಯುತ್ತಿರುವ ಎಲ್ಲಾ ಗೋಷ್ಠಿಗಳಲ್ಲಿ ತಪ್ಪದೇ ಭಾಗವಹಿಸಿರುವ ನೀವು ಈಗಷ್ಟೇ ಊಟ ಮುಗಿಸಿ ಬಂದು ಕುಳಿತಿದ್ದೀರಿ ಎಂಬುದೂ ನನಗೆ ಚೆನ್ನಾಗಿ ಗೊತ್ತಿದೆ. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಾಹಸ ಮಾಡದೇ ನಾನು ಸಾಮಾಜಿಕ ಜಾಲತಾಣಗಳ ಬಗೆಗೆ ನೇರವಾಗಿ ಮತ್ತು ಸಂಕ್ಷಿಪ್ತವಾಗಿ ನನ್ನ ವಿಚಾರ ಮಂಡನೆ ಮಾಡುತ್ತೇನೆ.

ನನಗಿಂತ ಮೊದಲು ಮಾತನಾಡಿರುವವರು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಇಂಟರ್ನೆಟ್ ಮಾಧ್ಯಮ ಹಾಗೂ ಈ ಎಲ್ಲಾ ಮಾಧ್ಯಮಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರವಾಗಿ ಬೆಳಕು ಚೆಲ್ಲಿದ್ದಾರೆ.

ನಾನು ಈಗ ನಮ್ಮ ನಿಮ್ಮೆಲ್ಲರ ಅಂದರೆ, ಜನ ಸಾಮಾನ್ಯರ ಮಾಧ್ಯಮ ಮತ್ತು ಭವಿಷ್ಯದ ಮಾಧ್ಯಮವಾದ ಸೋಷಿಯಲ್‌ ಮೀಡಿಯಾದ ಬಗ್ಗೆ ನನ್ನ ಕೆಲವು ವಿಚಾರಗಳನ್ನು ತಮ್ಮ ಜೊತೆ ಹಂಚಿಕೊಳ್ಳುತ್ತೇನೆ.

ಕಳೆದ 20 ವರ್ಷಗಳಿಂದ ಈಚೆಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರ ಅಪಾರವಾದ ಮತ್ತು ತ್ವರಿತವಾದ ಬೆಳವಣಿಗೆಯನ್ನು ಕಂಡಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಸುಮಾರು ಶೇ.45ರಷ್ಟು ಜನ ಅಂದರೆ, ಸುಮಾರು 350 ಕೋಟಿ ಜನ ಹಾಗೂ ಭಾರತದ ಸುಮಾರು 40 ಕೋಟಿ ಜನ ಸಾಮಾಜಿಕ ಜಾಲತಾಣ ಬಳಸುತ್ತಾರೆ.

ತಮ್ಮ ಸ್ನೇಹಿತರು, ಬಂಧು ಬಾಂಧವರು, ಆತ್ಮೀಯರು ಮತ್ತು ಪರಿಚಿತರೊಂದಿಗೆ ದಿನನಿತ್ಯ ಸಂಪರ್ಕದಲ್ಲಿರಲು, ಜಗತ್ತಿನ ಆಗುಹೋಗುಗಳ ಬಗೆಗಿನ ಸುದ್ದಿ ತಿಳಿಯಲು ಮತ್ತು ಮನರಂಜನೆ ಹೊಂದಲು ಫೇಸ್‌ಬುಕ್‌, ಟ್ವಿಟರ್ ಮತ್ತು ಇನ್ಸಸ್ಟಾಗ್ರಾಂ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳ ವೇದಿಕೆಗಳನ್ನು ಅವಲಂಭಿಸಿದ್ದಾರೆ. ಹೀಗಾಗಿ ಈ ಸಾಮಾಜಿಕ ಜಾಲತಾಣಗಳ ವೇದಿಕೆಗಳು ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗಗಳೇ ಆಗಿವೆ…

’ಹಾಗಾದರೆ, ಸೋಷಿಯಲ್‌ ಮೀಡಿಯಾ ಅಂದರೇನು..?’
ಅತ್ಯಂತ ಸರಳವಾಗಿ ಹೇಳುವುದಾದರೆ ಹಲವಾರು ಜನರು ಅಥವಾ ಬೇರೆ ಬೇರೆ ಸಮುದಾಯಗಳ ನಡುವಿನ ಸಂಪರ್ಕ ಸಾಧನವೇ ಸಾಮಾಜಿಕ ಜಾಲತಾಣ ಅಥವಾ ಸಾಮಾಜಿಕವಾಗಿ ಪರಸ್ಪರರ ಜೊತೆಗೆ ಸಂಪರ್ಕದಲ್ಲಿ ಇರಲು ಬಳಕೆಯಾಗುವ ಆನ್ಲೈನ್ ವೇದಿಕೆಯನ್ನು ಸಾಮಾಜಿಕ ಜಾಲತಾಣ ಎಂದು ಕರೆಯಬಹುದು.

ಸಾಂಪ್ರದಾಯಿಕ ಸಂವಹನ ಸಾಧನಗಳಾದ ದೂರವಾಣಿ, ‌ಪತ್ರ ವ್ಯವಹಾರ ಮತ್ತು ಇ-ಮೇಲ್ ಗಳ ಮೂಲಕ ಇಬ್ಬರು ವ್ಯಕ್ತಿಗಳು ಮಾತ್ರ ಸಂವಹನ ನಡೆಸಬಹುದಾಗಿತ್ತು. ಆದರೆ, ಈ ಸಾಮಾಜಿಕ ಜಾಲತಾಣಗಳ ಮೂಲಕ ಏಕಕಾಲಕ್ಕೆ ಒಬ್ಬರಿಗಿಂತ ಹೆಚ್ಚು ಜನರು ಮತ್ತು ಸಮುದಾಯಗಳೊಂದಿಗೆ ಸಂವಹನ ಮತ್ತು ಸಂವಾದ ಸಾಧ್ಯ. ಇದುವೇ ಸಾಮಾಜಿಕ ಜಾಲತಾಣಗಳ ವಿಶೇಷತೆ.

ಮೊಬೈಲ್ ತಂತ್ರಜ್ಞಾನದಲ್ಲಿ ಆಗಿರುವ ಅಗಾಧ ಬೆಳವಣಿಗೆ ಮತ್ತು ಸುಲಭ ಇಂಟರ್ನೆಟ್ ಲಭ್ಯತೆಯು ಸಾಮಾಜಿಕ ಜಾಲತಾಣಗಳ ಪ್ರಭಾವ, ಮಹತ್ವ ಮತ್ತು ಜನಪ್ರಿಯತೆ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿವೆ.

ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳ ಬಳಕೆಗೆ ಜನರು ಮೊಬೈಲ್ ಮೇಲೆಯೇ ಅತಿ ಹೆಚ್ಚು ಅವಲಂಬಿತರಾಗಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣ ಬಳಸುವವರ ಪೈಕಿ ಶೇ. 91 ರಷ್ಟು ಜನರು ಮೊಬೈಲ್ ನ್ನೇ ನೆಚ್ಚಿಕೊಂಡಿದ್ದಾರೆ.

ಇಂಟರ್ನೆಟ್ ಬಳಕೆದಾರರ ನಡುವೆ ಮೊಬೈಲ್ ಇಷ್ಟೊಂದು ಜನಪ್ರಿಯ ಆಗಿರುವುದಕ್ಕೆ ಪ್ರಮುಖ ಕಾರಣವೆಂದರೆ, ಕೇವಲ ಒಂದು ಬಟನ್ ಒತ್ತುವ ಮೂಲಕ ತಮಗೆ ಬೇಕಾದ ಮಾಹಿತಿಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಪಡೆಯಬಹುದು ಅಥವಾ ತಮಗೆ ಬೇಕಾದವರನ್ನು ಯಾವ ಜಾಗದಿಂದಾದರೂ ಸಂಪರ್ಕಿಸಬಹುದು. ಸೋಷಿಯಲ್‌ ಮೀಡಿಯಾ ಯುಗ ಆರಂಭವಾಗುವ ಮೊದಲು ಇದೆಲ್ಲಾ ಕನಸಿನ ಮಾತಾಗಿತ್ತು.

ಸೋಷಿಯಲ್‌ ಮೀಡಿಯಾ ಆರಂಭವಾಗಿದ್ದು 1997 ರಲ್ಲಿ. ’ಸಿಕ್ಸ್ ಡಿಗ್ರೀಸ್ (ಡಾಟ್) ಕಾಮ್’ ಎಂಬ ವೆಬ್ಸೈಟ್ ಆಗ ಆರಂಭವಾಯಿತು. ಜನರು ಈ ವೆಬ್ಸೈಟ್ ಮೂಲಕ ತಮ್ಮ ಖಾಸಗಿ ಬದುಕಿನ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಆರಂಭಿಸಿದರು. ಈ ಕಾರಣಕ್ಕಾಗಿ ’ಸಿಕ್ಸ್ ಡಿಗ್ರೀಸ್ (ಡಾಟ್) ಕಾಮ್’ನ್ನು ಜಗತ್ತಿನ ಮೊದಲ ಸಾಮಾಜಿಕ ಜಾಲತಾಣ ಎಂದು ಹೇಳಬಹುದು. ನಂತರ ’ಮೈ ಸ್ಪೇಸ್’ ಮತ್ತು ’ಆರ್ಕೂಟ್’ ಎಂಬ ಸಾಮಾಜಿಕ ಜಾಲತಾಣ ವೇದಿಕೆಗಳೂ ಆರಂಭವಾದವು. ಆದರೆ, ಈ ವೇದಿಕೆಗಳು ಬಳಕೆದಾರರ ನಡುವೆ ನಿರೀಕ್ಷಿಸಿದಷ್ಟು ಜನಪ್ರಿಯತೆ ಹೊಂದಲಿಲ್ಲ.

2004ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ 21 ವರ್ಷದ ಮಾರ್ಕ್ ಝುಕರ್ಬರ್ಗ್ ಫೇಸ್‌ಬುಕ್‌ ಹೆಸರಿನ ಸೋಷಿಯಲ್‌ ಮೀಡಿಯಾ ವೇದಿಕೆ ಆರಂಭಿಸಿದರು.

ಆರಂಭದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರಸ್ಪರ ಸಂವಹನ ನಡೆಸುವುದಷ್ಟೇ ಫೇಸ್‌ಬುಕ್‌ ಉದ್ದೇಶವಾಗಿತ್ತು. ಆದರೆ, ಈ ವೇದಿಕೆ ಶೀಘ್ರ ಜನಪ್ರಿಯತೆ ಪಡೆದಿದ್ದರಿಂದ ಮರುವರ್ಷವೇ ಅದನ್ನು ಅಮೆರಿಕದ ಎಲ್ಲಾ ಪ್ರಮುಖ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸಲಾಯಿತು ಹಾಗೂ 2006ರಲ್ಲಿ ಇಡೀ ಜಗತ್ತಿಗೆ ಫೇಸ್‌ಬುಕ್‌ ಪರಿಚಯಿಸಲಾಯಿತು.

ಅಲ್ಲಿಂದ ಇಲ್ಲಿಯವರೆಗೆ ಫೇಸ್‌ಬುಕ್‌ ಸಾಮಾಜಿಕ ಜಾಲತಾಣದ ಅತ್ಯಂತ ಜನಪ್ರಿಯ ವೇದಿಕೆ ಎಂಬ ಗರಿಮೆ ಹೊಂದಿದ್ದು, ಪ್ರತಿ ತಿಂಗಳು ಸರಾಸರಿ 235 ಕೋಟಿಗೂ ಅಧಿಕ ಜನ ಫೇಸ್‌ಬುಕ್‌ ಬಳಕೆ ಮಾಡುತ್ತಾರೆ. ವಿಶ್ವದಲ್ಲಿ ಸಾಮಾಜಿಕ ಜಾಲತಾಣದ ಎರಡನೇ ಅತಿ ದೊಡ್ಡ ವೇದಿಕೆ ಎನಿಸಿರುವ ಟ್ವಿಟರ್ ಕೂಡ 2006ರಲ್ಲೇ ಆರಂಭವಾಯಿತು.

ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಪ್ರತಿಯೊಂದು ಬೆಳವಣಿಗೆಯ ಮೇಲೂ ಸಾಮಾಜಿಕ ಜಾಲತಾಣದ ಪ್ರಭಾವ ಗಾಢವಾಗಿದೆ. ಉದ್ಯಮ, ಶಿಕ್ಷಣ, ಆರೋಗ್ಯ, ರಾಜಕೀಯ, ಕ್ರೀಡೆ, ಪರಿಸರ ಹೀಗೆ ಯಾವುದೇ ಕ್ಷೇತ್ರ ಇಂದು ಸಾಮಾಜಿಕ ಜಾಲತಾಣದ ಪ್ರಭಾವದಿಂದ ಹೊರತಾಗಿಲ್ಲ. ಪ್ರತಿಭಟನೆಗಳು ಮತ್ತು ಸಾಮಾಜಿಕ ಚಳವಳಿಗಳೂ ಡಿಜಿಟಲ್ ಸ್ವರೂಪ ಪಡೆದುಕೊಂಡಿವೆ.

ಸಾಮಾಜಿಕ ಜಾಲತಾಣಗಳಿಂದ ಆಗಿರುವ ಬಹುದೊಡ್ಡ ಲಾಭವೆಂದರೆ, ಬಳಕೆದಾರರು ಇಲ್ಲಿ ತಾವೇ ವಿಷಯ ಪ್ರಸ್ತಾಪಿಸಬಹುದು ಮತ್ತು ಅದರ ಪ್ರಸಾರ, ಪ್ರಚಾರವನ್ನೂ ಮಾಡಬಹುದು. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಸಂದರ್ಭದಲ್ಲಿ ಮಾಹಿತಿಯ ಹರಿವು ಏಕಮುಖವಾಗಿತ್ತು. ಸಾಮಾನ್ಯ ಓದುಗರು ಅಥವಾ ವೀಕ್ಷಕರು ಪತ್ರಿಕೆಗಳು ಮತ್ತು ಟಿವಿಗಳು ಒದಗಿಸುವ ಸುದ್ದಿ, ಮಾಹಿತಿಯನ್ನು ಕೇವಲ ತಿಳಿಯಬಹುದಾಗಿತ್ತು. ಆದರೆ, ತಮ್ಮ ಅಭಿಪ್ರಾಯ, ವಿಚಾರಗಳನ್ನು ಸುದ್ದಿ ಮಾಧ್ಯಮಗಳಿಗಾಗಲೀ ಹೊರ ಜಗತ್ತಿಗಾಗಲೀ ತಿಳಿಸಲು ಸಾಧ್ಯವಿರಲಿಲ್ಲ.

ಆದರೆ, ಫೇಸ್‌ಬುಕ್‌ ಮತ್ತು ಟ್ವಿಟರಿನಂಥ ಸಾಮಾಜಿಕ ಜಾಲತಾಣ ವೇದಿಕೆಗಳು ಅಸ್ತಿತ್ವಕ್ಕೆ ಬಂದ ನಂತರ ಜನ ಸಾಮಾನ್ಯರು ಮತ್ತು ಸಮಾಜದ ಕಟ್ಟ ಕಡೆಗೆ ನಿಂತ ವ್ಯಕ್ತಿಯೂ ಸಹ ತನ್ನ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಹಾಗೂ ಪ್ರಭುತ್ವದ ಮೇಲೆ ಪ್ರಭಾವ ಬೀರುವುದು ಸಾಧ್ಯವಾಗಿದೆ. ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವುದು ಈಗ ಸಾಧ್ಯವಿದೆ. ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಗೊಳ್ಳಲು ಈ ಬೆಳವಣಿಗೆ ಸಹಕಾರಿಯಾಯಿತು.

ಹೀಗೆ, ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಅಭಿಪ್ರಾಯ, ವಿಚಾರ ಮಂಡಿಸುವುದಕ್ಕೆ ಶಕ್ತಿಶಾಲಿ ಸಾಧನವೊಂದು ದೊರೆತ ಪರಿಣಾಮವಾಗಿ ಜಗತ್ತಿನಲ್ಲಿ ಕ್ಷಿಪ್ರ ಬದಲಾವಣೆಗಳಿಗೆ ನಾಂದಿಯಾಯಿತು. ಇದಕ್ಕೆ ಅತ್ಯುತ್ತಮ ಉದಾಹರಣೆ ’ಅರಬ್ ಕ್ರಾಂತಿ’ ಇದನ್ನು ಫೇಸ್‌ಬುಕ್‌ ಕ್ರಾಂತಿ ಎಂದೂ ಕರೆಯಲಾಗುತ್ತದೆ.

ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ದೇಶಗಳ ಸರ್ವಾಧಿಕಾರಿ ಆಡಳಿತಗಾರರ ವಿರುದ್ಧ ಅಲ್ಲಿನ ಜನ ನಡೆಸಿದ ಸರಣಿ ಪ್ರತಿಭಟನೆ, ಹೋರಾಟಗಳನ್ನೇ ’ಅರಬ್ ಕ್ರಾಂತಿ’ ಎಂದು ಕರೆಯಲಾಗಿದೆ. ಸರ್ವಾಧಿಕಾರಿ ಆಡಳಿತಗಳನ್ನು ಕೊನೆಗೊಳಿಸಿ ಈ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಜಾರಿಗೊಳಿಸಲು ಕಾರಣವಾದ ಈ ಹೋರಾಟಗಳು ಜಗತ್ತಿನ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಗಳು. ಇದಕ್ಕೆ ಕಾರಣವಾಗಿದ್ದು, ಫೇಸ್‌ಬುಕ್‌ ನಂತಹ ಸಾಮಾಜಿಕ ಜಾಲತಾಣ.

2010 ಡಿಸೆಂಬರ್ 17ರಂದು ಉತ್ತರ ಆಫ್ರಿಕಾದ ದೇಶವಾದ ಟ್ಯೂನಿಷಿಯಾದಲ್ಲಿ ತರಕಾರಿ ವ್ಯಾಪಾರಿಯೊಬ್ಬ ಆ ದೇಶದ ರಾಷ್ಟ್ರಾಧ್ಯಕ್ಷ, ಸರ್ವಾಧಿಕಾರಿ ಬೆನ್ ಆಲಿಯ ದೌರ್ಜನ್ಯ, ಶೋಷಣೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಜನನಿಬಿಡ ಮಾರ್ಕೆಟ್ ನಡುವೆಯೇ ಆತ್ಮಾಹುತಿಗೆ ಪ್ರಯತ್ನಿಸಿದ. ಹಲವಾರು ವರ್ಷಗಳಿಂದ ಬೆನ್ ಆಲಿಯ ಆಡಳಿತದ ಜನವಿರೋಧಿ ನೀತಿಗಳಿಂದ ರೋಸಿ ಹೋಗಿ ತರಕಾರಿ ವ್ಯಾಪಾರಿ ಈ ಉಗ್ರ ಪ್ರತಿಭಟೆನೆಗೆ ಮುಂದಾಗಿದ್ದ. ತರಕಾರಿ ವ್ಯಾಪಾರಿಯ ಈ ಆತ್ಮಾಹುತಿ ಪ್ರಯತ್ನದ ವೀಡಿಯೋ ಇಡೀ ದೇಶದಲ್ಲಿ ವೈರಲ್ ಆಯಿತು. ಈ ಘಟನೆ ಟ್ಯೂನಿಷಿಯಾದಲ್ಲಿ ಜನರ ನಡುವೆ ಚರ್ಚೆಯ ದೊಡ್ಡ ವಿಷಯವಾಯಿತು. ಕ್ರೂರಿ ಬೆನ್ ಆಲಿಯ ದೌರ್ಜನ್ಯ, ಶೋಷಣೆ, ಜನವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಜನರ ದನಿ ಗಟ್ಟಿಯಾಗತೊಡಗಿತು. ಆ ಜನದನಿ ದೇಶದ ಹೊರಗೂ ಕೇಳಲಾರಂಭಸಿತು. ಇಡೀ ಜಗತ್ತು ಸಹ ಟ್ಯೂನಿಷಿಯಾದ ಬೆಳವಣಿಗೆಗಳನ್ನು ಗಮನಿಸತೊಡಗಿತು.

ಟ್ಯೂನಿಷಿಯಾದ ಸಾಂಪ್ರದಾಯಿಕ ಮಾಧ್ಯಮಗಳು ಸಂಪೂರ್ಣವಾಗಿ ಬೆನ್ ಆಲಿಯ ಹಿಡಿತದಲ್ಲಿದ್ದವು. ಪ್ರಭುತ್ವದ ವಿರುದ್ಧ ವರದಿ ಮಾಡುವುದು ಅಲ್ಲಿ ಅಸಾಧ್ಯವೇ ಆಗಿತ್ತು.

ಆದರೆ, ಸೋಷಿಯಲ್ ಮೀಡಿಯಾದ ಮೇಲೆ ಯಾರ ನಿಯಂತ್ರಣವೂ ಇರಲಿಲ್ಲ. ಬೆನ್ ಆಲಿ ದುರಾಡಳಿತದ ವಿರುದ್ಧದ ಪ್ರತಿಭಟನೆಯ ಸುದ್ದಿಗಳನ್ನು ಜನರಿಗೆ ತಲುಪಿಸಲು ಫೇಸ್‌ಬುಕ್‌, ಟ್ವಿಟರ್ ಬಳಸಿಕೊಳ್ಳಲಾಯಿತು. ದಿನೇ ದಿನೇ ಪ್ರತಿಭಟನೆಗಳ ಸಂಖ್ಯೆ ಮತ್ತು ತೀವ್ರತೆ ಹೆಚ್ಚುತ್ತಲೇ ಹೋಯಿತು.

ಹಲವು ತಿಂಗಳುಗಳ ನಿರಂತರ ಹೋರಾಟದ ಪರಿಣಾಮವಾಗಿ 24 ವರ್ಷಗಳ ಕಾಲ ನಿರಂಕುಶ ಪ್ರಭುವಾಗಿ ಮೆರೆದಿದ್ದ ಬೆನ್ ಆಲಿಯ ಆಡಳಿತ ಕೊನೆಗೊಂಡು ಟ್ಯೂನಿಷಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಸಾಧ್ಯವಾಯಿತು.

ಫೇಸ್‌ಬುಕ್‌, ಟ್ವಿಟರ್ ನೆರವಿನಿಂದ ಟ್ಯೂನಿಷಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ನಂತರ ಈ ಕ್ರಾಂತಿಯ ಕಿಡಿ ಇತರ ದೇಶಗಳಿಗೂ ಹಬ್ಬಿತು. ಹಲವು ರಾಷ್ಟ್ರಗಳಲ್ಲಿ ಸರ್ವಾಧಿಕಾರ ಅಂತ್ಯವಾಗಿ ಪ್ರಜೆಗಳ ಪ್ರಭುತ್ವ ಸ್ಥಾಪನೆಗೆ ಕಾರಣವಾಯಿತು. ಈ ಅರಬ್ ಕ್ರಾಂತಿ ಇಷ್ಟಕ್ಕೇ ನಿಲ್ಲಲಿಲ್ಲ.

ಜೋರ್ಡಾನ್ ದೇಶದ ಅರಸ ಎರಡನೇಯ ಅಬ್ದುಲ್ಲಾ, ಈಜಿಪ್ಟಿನ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ಮತ್ತು ಲಿಬಿಯಾದ ನಿರಂಕುಶ ಅಧ್ಯಕ್ಷ ಮುಅಮ್ಮರ್ ಗಡಾಫಿ ಆಡಳಿತಗಳೂ ಸಹ ಜನಾಕ್ರೋಶಕ್ಕೆ ಬಲಿಯಾದವು. ಈ ದೇಶಗಳಲ್ಲೂ ಸರ್ವಾಧಿಕಾರ ಕೊನೆಗೊಂಡು ಪ್ರಜೆಗಳೇ ಆಯ್ಕೆ ಮಾಡಿದ ಸರಕಾರಗಳು ಅಸ್ತಿತ್ವಕ್ಕೆ ಬಂದವು. ಸಾಮಾಜಿಕ ಜಾಲತಾಣಗಳು ಹೊತ್ತಿಸಿದ ಹೋರಾಟದ ಈ ಕಿಡಿ ಹಲವು ರಾಷ್ಟ್ರಗಳಲ್ಲಿ ಈಗಲೂ ಮುಂದುವರಿದಿದೆ.

ಪ್ರಭುತ್ವದ ನಿಯಂತ್ರಣದಲ್ಲಿರುವ ಸಾಂಪ್ರದಾಯಿಕ ಮಾಧ್ಯಮಗಳಿಂದ ಇಂಥದೊಂದು ಕ್ರಾಂತಿ ಸಾಧ್ಯವೇ ಇರಲಿಲ್ಲ. ಇದೆಲ್ಲವೂ ಸಾಧ್ಯವಾಗಿದ್ದು ಜನರ ಕೈಗೆ ಸಿಕ್ಕಿರುವ ಸೋಷಿಯಲ್‌ ಮೀಡಿಯಾ ಎಂಬ ಪ್ರಬಲ ಅಸ್ತ್ರದಿಂದಾಗಿಯೇ ಎಂಬುದು ನೂರಕ್ಕೆ ನೂರರಷ್ಟು ದಿಟ. ಅದೇ ಕಾರಣಕ್ಕೆ ಸೋಷಿಯಲ್‌ ಮೀಡಿಯಾ ಅನ್ನು ಜನರ ಮಾಧ್ಯಮ ಎಂದೂ ಕರೆಯಲಾಗುತ್ತಿದೆ.

ಆದರೆ, ಇತರ ಎಲ್ಲಾ ಮಾಧ್ಯಮಗಳಿಗೆ ಇರುವಂತೆ ಸೋಷಿಯಲ್‌ ಮೀಡಿಯಾಕ್ಕೂ ತನ್ನದೇ ಆದ ಕೆಲ ಅನಾನುಕೂಲಗಳೂ ಇವೆ.

ಮಾಹಿತಿಯನ್ನು ಸೃಜಿಸುವ ಅಧಿಕಾರ ಜನರ ಕೈಗೆ ಸಿಕ್ಕಾಗ ಅದರಿಂದ ಕೆಲವು ಅನಾನುಕೂಲ ಹಾಗೂ ಅನಾಹುತಗಳೂ ಸಹಜವೇ ಆಗಿದ್ದವು. ಫೇಕ್ ನ್ಯೂಸ್ ಅಥವಾ ಸುಳ್ಳುಸುದ್ದಿ ಸೋಷಿಯಲ್‌ ಮೀಡಿಯಾದಿಂದ ಆಗುವ ಅನಾಹುತಕ್ಕೆ ಅತ್ಯುತ್ತಮ ಉದಾಹರಣೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಕ್ಷಣಕ್ಕೂ ನಾವು ನೋಡುವ ಸುದ್ದಿ ಅಥವಾ ಪಡೆಯುವ ಮಾಹಿತಿಯ ಸಿಂಹಪಾಲು ಫೇಕ್ ನ್ಯೂಸ್ ಆಗಿರುತ್ತದೆ ಇದು ಎಂಬುದು ಖಂಡಿತ ಸುಳ್ಳಲ್ಲ.

ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ತಪ್ಪು ಮಾಹಿತಿ ನೀಡಲು, ಅವರಿಗೆ ಮೋಸ ವಂಚನೆ ಮಾಡಲು ಅಥವಾ ಕೆಲವು ನಿರ್ದಿಷ್ಟ ಗುಂಪು, ಸಮುದಾಯ, ರಾಜಕೀಯ ಪಕ್ಷಗಳು, ಸೈದ್ಧಾಂತಿಕ ಸಂಘಟನೆಗಳು ತಮ್ಮ ರಾಜಕೀಯ, ಸಾಮಾಜಿಕ ಮತ್ತು ವ್ಯಾಪಾರಿ ಅಜೆಂಡಾಗಳನ್ನು ಜಾರಿಗೊಳಿಸಲು ಇಂತಹ ಫೇಕ್ ನ್ಯೂಸ್ ಗಳನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಿ ಅವುಗಳು ವೈರಲ್ ಆಗುವಂತೆ ನೋಡಿಕೊಳ್ಳುತ್ತವೆ.

ಇಂಥ ಫೇಕ್ ನ್ಯೂಸ್ ಜನರ ಅಭಿಪ್ರಾಯ ರೂಪಿಸಲು ಮತ್ತು ನೀತಿ,‌ ನಿಲುವು, ಒಲವುಗಳನ್ನು ಪ್ರಭಾವಿಸಲು ಕಾರಣವಾಗುತ್ತವೆ. ಇಂಥ ಫೇಕ್ ನ್ಯೂಸ್ ವ್ಯವಹಾರದಲ್ಲಿ ತೊಡಗಿರುವವರು ತಮ್ಮ ರಾಜಕೀಯ ಅಥವಾ ರಾಜಕೀಯೇತರ ಅಜೆಂಡಾ ಜಾರಿಗೊಳಿಸುವುದಲ್ಲದೇ ಆರ್ಥಿಕ ಲಾಭವನ್ನೂ ಪಡೆಯುತ್ತಾರೆ.

ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ವಿಶ್ವಾಸಾರ್ಹ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೋಷಿಯಲ್‌ ಮೀಡಿಯಾ ಖಾತೆಗಳನ್ನೇ ಹೋಲುವಂತಹ ನಕಲಿ ಖಾತೆಗಳನ್ನು ತೆರೆದು ತಪ್ಪು ಮತ್ತು ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುವುದು ಚಾಲ್ತಿಯಲ್ಲಿರುವ ಕೆಟ್ಟ ಪದ್ಧತಿ. ಪ್ರಸ್ತುತ ಸಂದರ್ಭದಲ್ಲಿ ನಮ್ಮ ದೇಶದ ಹಾಗೂ ಜಾಗತಿಕ ರಾಜಕೀಯ ವ್ಯವಸ್ಥೆ ಮೇಲೆ ಈ ಫೇಕ್ ನ್ಯೂಸ್ ಬೀರುತ್ತಿರುವ ಪ್ರಭಾವದ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿವೆ.

ಫೇಕ್ ನ್ಯೂಸ್ ಪದ ಬಳಕೆ ಇತ್ತೀಚಿನ ವರ್ಷಗಳಲ್ಲಿ ಎಷ್ಟೊಂದು ಹೆಚ್ಚಾಗಿದೆಯೆಂದರೆ 2017ರಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಈ ಪದದ ಬಳಕೆ ಶೇ.375ರಷ್ಟು ಹೆಚ್ಚಾಗಿತ್ತು. ಕಾಲಿನ್ ಡಿಕ್ಷನರಿ ಈ ಪದವನ್ನು 2017ರ ವರ್ಷದ ಪದ ಎಂದೂ ಘೋಷಣೆ ಮಾಡಿತ್ತು.

ಈ ಫೇಕ್ ನ್ಯೂಸ್ ಎಂಬ ಹೆಮ್ಮಾರಿಯನ್ನು ಸೆದೆಬಡಿಯುವುದು ಅಸಾಧ್ಯವೇನಲ್ಲ. ಸೋಷಿಯಲ್‌ ಮೀಡಿಯಾ ಬಳಕೆದಾರರು ಜವಾಬ್ದಾರಿಯಿಂದ ವರ್ತಿಸಿದರೆ ಅದು ಖಂಡಿತ ಸಾಧ್ಯ. ಫೇಕ್ ನ್ಯೂಸ್ ಪತ್ತೆ ಹಚ್ಚುವ ಪ್ರಪ್ರಥಮ ಹೆಜ್ಜೆಯೆಂದರೆ, ಸೋಷಿಯಲ್‌ ಮೀಡಿಯಾದಲ್ಲಿ ಬರುವ ಪ್ರತಿಯೊಂದು ವಿಷಯ ನಂಬುವುದನ್ನು ಬಳಕೆದಾರರು ಮೊದಲು ನಿಲ್ಲಿಸಬೇಕು. ಪ್ರತಿಯೊಬ್ಬರಿಗೂ ಮಾಹಿತಿ ಸೃಜಿಸುವ ಅವಕಾಶ ಹಾಗೂ ಅಧಿಕಾರ ಇರುವುದರಿಂದ ಈ ಮಾಧ್ಯಮದಲ್ಲಿ ಬರುವ ಮಾಹಿತಿ ಸಹಜವಾಗಿಯೇ ಪ್ರಶ್ನಾರ್ಹವಾಗಿರುತ್ತದೆ ಎಂಬುದನ್ನು ಮನಗಾಣಬೇಕು.

ಸೋಷಿಯಲ್‌ ಮೀಡಿಯಾದಲ್ಲಿ ಬರುವ ಸುದ್ದಿ ಮತ್ತು ಮಾಹಿತಿಗಳು ಸರಿಯೋ ತಪ್ಪೋ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಫೇಕ್ ನ್ಯೂಸ್ ತಡೆಗಟ್ಟಬಹುದು. ಸಾಮಾನ್ಯವಾಗಿ ಜನರು ಸಾಮಾಜಿಕವಾಗಿ, ರಾಜಕೀಯವಾಗಿ ತಮಗೆ ಇಷ್ಟವಾಗುವ, ಅನುಕೂಲವಾಗುವ ಅಥವಾ ಲಾಭವಾಗುವ ಸಂಗತಿಗಳ ಸತ್ಯಾಸತ್ಯತೆ ಪರೀಕ್ಷಿಸದೇ ಅದನ್ನು ಒಪ್ಪಿಕೊಳ್ಳುತ್ತಾರೆ. ಹಿಂದೆ ಮುಂದೆ ಯೋಚಿಸದೇ ಅಂಥದನ್ನು ಫಾರ್ವರ್ಡ್ ಮಾಡುವ ಮೂಲಕ ಫೇಕ್ ನ್ಯೂಸ್ ಹರಡುವುದರಲ್ಲಿ ತಮಗೆ ಅರಿವಿಲ್ಲದಂತೆಯೇ ಭಾಗಿಯಾಗುತ್ತಾರೆ. ನಮ್ಮ ಅಭಿಪ್ರಾಯ ಮತ್ತು ನಂಬಿಕೆಗಳು ತೀರ್ಪು ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯದ ಮೇಲೆ ಪ್ರಭಾವ ಬೀರದಂತೆ ನಾವು ಎಚ್ಚರಿಕೆ ವಹಿಸಬೇಕು.

ಈ ಸುದ್ದಿ ಅಥವಾ ಮಾಹಿತಿಯನ್ನು ಪ್ರಕಟಿಸಿರುವ ವೆಬ್ಸೈಟ್ ನಮಗೆ ಪರಿಚಿತವೇ?, ಮಾಹಿತಿಯ ಮೂಲ ನಂಬಲರ್ಹವೇ ಎಂಬುದನ್ನು ತಿಳಿದುಕೊಳ್ಳಬೇಕು. ತಮಗೆ ಪರಿಚಿತವಲ್ಲದ ವೆಬ್ಸೈಟ್ ಆಗಿದ್ದರೆ ಅದರ ಅಬೌಟ್ ಸೆಕ್ಷನ್ ಗೆ ಹೋಗಿ ಇನ್ನಷ್ಟು ವಿವರ ತಿಳಿಯಬೇಕು. ಇಲ್ಲವೇ ಆ ಬರಹಗಾರರ ಬಗೆಗೆ ಹೆಚ್ಚಿನ ಮಾಹಿತಿ ಕಲೆ ಹಾಕಬೇಕು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸೋಷಿಯಲ್‌ ಮೀಡಿಯಾದಲ್ಲಿ ಬರುವುದೆಲ್ಲವನ್ನೂ ನಂಬದೇ ಆ ಮಾಹಿತಿಯ ಸಾಚಾತನ ಖಚಿತಪಡಿಸಿಕೊಳ್ಳಬೇಕು. ಅದು ನಂಬಿಕೆಗೆ ಯೋಗ್ಯವಲ್ಲದ ಸುದ್ದಿ, ಮಾಹಿತಿ ಆಗಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಬೇರೆಯವರಿಗೆ ಫಾರ್ವರ್ಡ್ ಮಾಡಬಾರದು ಮತ್ತು ‘ಇದು ಸುಳ್ಳು ಸುದ್ದಿ’ ಎಂದು ತಪ್ಪದೇ ಕಾಮೆಂಟ್ ಮಾಡಬೇಕು.

ಕೊನೆಯದಾಗಿ, ಇತರ ಎಲ್ಲಾ ಸಂಶೋಧನೆಗಳಂತೆ ಸೋಷಿಯಲ್‌ ಮೀಡಿಯಾ  ಕೂಡ ಎಂಬುದನ್ನು ಮರೆಯಬಾರದು. ಇದು ನೈತಿಕವಾಗಿ ಸರಿಯಾದದ್ದು ಎಂದು ಹೇಳಲಾಗದು. ಈ ಮಾಧ್ಯಮವನ್ನೂ ಸಹ ಒಳ್ಳೆಯ ಅಥವಾ ಕೆಟ್ಟ ಉದ್ದೇಶಗಳೆರಡಕ್ಕೂ ಬಳಸಬಹುದು. ಸಮಾಜದ ಜವಾಬ್ದಾರಿಯುತ ಪ್ರಜೆಯಾಗಿ ಮತ್ತು ಸೋಷಿಯಲ್‌ ಮೀಡಿಯಾದ ಜವಾಬ್ದಾರಿಯುತ ಬಳಕೆದಾರರಾಗಿ ಒಳ್ಳೆಯ ಉದ್ದೇಶಕ್ಕೆ ಮಾತ್ರ ಇದನ್ನು ಬಳಸುವುದು ಮತ್ತು ಸುಳ್ಳು ಹಾಗೂ ತಪ್ಪು ಮಾಹಿತಿ ಹರಡದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯ…

ನಮಸ್ಕಾರ…
ಈ ಗೋಷ್ಠಿಯಲ್ಲಿ ನನ್ನ ವಿಚಾರ ಮಂಡಿಸಲು ಅವಕಾಶ ನೀಡಿದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಮತ್ತು ಸಮ್ಮೇಳನದ ಸಂಘಟಕರಿಗೆ ಧನ್ಯವಾದ.

ಸುಭಾಶ್ ಹುಗಾರ್ ಅವರು ಕನ್ನಡದ ಪತ್ರಿಕೋದ್ಯಮದಲ್ಲಿ ಪ್ರಮುಖ ಹೆಸರು. ಹಲವಾರು, ಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದಾರೆ. ’ದ್ವಿಗ್ವಿಜಯ’ ಸುದ್ದಿವಾಹಿನಿಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Tags: kannadakarnatakakasapasahitya sammelanasocial media
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
500 ವರ್ಷಗಳ ಹಿಂದೆ ಅಭಿವೃದ್ಧಿಯನ್ನೇ ಉಸಿರಾಡಿದ್ದರು ನಮ್ಮ ಕೆಂಪೇಗೌಡರು

500 ವರ್ಷಗಳ ಹಿಂದೆ ಅಭಿವೃದ್ಧಿಯನ್ನೇ ಉಸಿರಾಡಿದ್ದರು ನಮ್ಮ ಕೆಂಪೇಗೌಡರು

Comments 1

  1. ಪಿ ಕೆ ಚನ್ನಕೃಷ್ಣ says:
    5 years ago

    good story

    Reply

Leave a Reply Cancel reply

Your email address will not be published. Required fields are marked *

Recommended

ಕೋಲಾರದಲ್ಲಿ ನಿಂತು ಕೋಡಿಹಳ್ಳಿ ಚಳಿಬಿಡಿಸಿದ ಕುಮಾರಸ್ವಾಮಿ; ಡೋಂಗಿಗಳಿಂದ ಪಾಠ ಕಲಿಯಬೇಕಿಲ್ಲ ಎಂದ ದಳಪತಿ

ಎತ್ತಿನಹೊಳೆ: ಬೊಮ್ಮಾಯಿಗೆ ಎಚ್‌ಡಿಕೆ ಪತ್ರ ಬರೆದರೆ ಸಾಕೆ?

4 years ago
ಕೋವಿಡ್‌ ಮಹಾಮಾರಿಯ ಜತೆಯಲ್ಲೇ ಇನ್ನೊಂದು ಮಹಾಶತ್ರು!!, ಗುಣಮುಖರಾದ ಕೋವಿಡ್‌ ಸೋಂಕಿತರನ್ನು ತೀವ್ರವಾಗಿ ಕಂಗೆಡಿಸುತ್ತಿರುವ ಬ್ಲ್ಯಾಕ್‌ ಫಂಗಸ್‌

ಕೋವಿಡ್‌ ಮಹಾಮಾರಿಯ ಜತೆಯಲ್ಲೇ ಇನ್ನೊಂದು ಮಹಾಶತ್ರು!!, ಗುಣಮುಖರಾದ ಕೋವಿಡ್‌ ಸೋಂಕಿತರನ್ನು ತೀವ್ರವಾಗಿ ಕಂಗೆಡಿಸುತ್ತಿರುವ ಬ್ಲ್ಯಾಕ್‌ ಫಂಗಸ್‌

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ