• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

500 ವರ್ಷಗಳ ಹಿಂದೆ ಅಭಿವೃದ್ಧಿಯನ್ನೇ ಉಸಿರಾಡಿದ್ದರು ನಮ್ಮ ಕೆಂಪೇಗೌಡರು

cknewsnow desk by cknewsnow desk
July 28, 2020
in GUEST COLUMN
Reading Time: 1 min read
0
500 ವರ್ಷಗಳ ಹಿಂದೆ ಅಭಿವೃದ್ಧಿಯನ್ನೇ ಉಸಿರಾಡಿದ್ದರು ನಮ್ಮ ಕೆಂಪೇಗೌಡರು
918
VIEWS
FacebookTwitterWhatsuplinkedinEmail

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರನ್ನು ಪ್ರತಿಯೊಬ್ಬರೂ ಸ್ಮರಿಸುವುದು ಸಹಜವೇ. ಅದರೆ ಅವರ ಆಡಳಿತ, ಅಭಿವೃದ್ಧಿಯ ದೃಷ್ಟಿ, ಕೃಷಿಗೆ ನೀಡಿದ ಮಹತ್ವ ಇತ್ಯಾದಿ ಸಂಗತಿಗಳಿಂದ ಬಹಳಷ್ಟು ಪ್ರಭಾವಿತರಾಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ  ಅವರು ಸಿಕೆನ್ಯೂಸ್ ನೌ  ಗೆ ಬರೆದುಕೊಟ್ಟಿರುವ ವಿಶೇಷ ಲೇಖನದಲ್ಲಿ ಆ ಬಗ್ಗೆ  ಅರ್ಥಪೂರ್ಣವಾಗಿ ಚರ್ಚಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿ ಮತ್ತೆ ಬಂದಿದೆ. ಕೇವಲ ಜಯಂತಿಯಂದು ಮಾತ್ರವಲ್ಲದೆ, ನಾಡಿನ ಪ್ರತಿಯೊಬ್ಬರೂ ಅನುದಿನವೂ ಸ್ಮರಿಸಲೇಬೇಕಾದ ಪ್ರಾತಃಸ್ಮರಣೀಯರಲ್ಲಿ ಅಗ್ರಮಾನ್ಯರು ನಮ್ಮ ನಾಡಪ್ರಭುಗಳು. ಅಪ್ರತಿಮ ಆಡಳಿತಗಾರರೂ, ಪ್ರಖರ ದೂರದೃಷ್ಟಿಯುಳ್ಳವರೂ ಆಗಿದ್ದ ಅವರು, ಐದು ಶತಮಾನಗಳ ಹಿಂದೆಯೇ ಕಟ್ಟಿದ ಬೆಂಗಳೂರೆಂಬ ಕನಸಿನ ನಗರಿಯಲ್ಲಿ ನಾವೆಲ್ಲರೂ ಇದ್ದೇವೆ. ನಾನು ಅವರ ಪ್ರಭಾವದಲ್ಲೇ ಇದ್ದೇನೆ ಮಾತ್ರವಲ್ಲದೆ, ಅದೆಷ್ಟೋ ವಿಷಯಗಳ ಬಗ್ಗೆ ಚಕಿತನಾಗಿದ್ದೇನೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ನೀಡಿ ನಾಡಪ್ರಭುಗಳ ವಿಷಯದಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದ್ದನ್ನು ಶಿರಸಾವಹಿಸಿ ಮಾಡುತ್ತಿದ್ದೇನೆ. ಮೂಲತಃ ಪ್ರಭುಗಳ ವೀರಸಮಾಧಿಯುಳ್ಳ ಕೆಂಪಾಪುರಕ್ಕೆ ಅನತಿದೂರದ ಗ್ರಾಮದಲ್ಲಿ ಹುಟ್ಟಿದ ನಾನು ಬಾಲ್ಯದಿಂದಲೇ ಪ್ರಭುಗಳ ಕಥೆಗಳನ್ನು, ಅವರ ಸಾಹಸಗಾಥೆಗಳನ್ನು ಕೇಳುತ್ತಲೇ ಬೆಳೆದವನು. ನಮ್ಮ ತಾಯಿ-ತಂದೆ ಹೇಳುತ್ತಿದ್ದ ಕಥೆಗಳು ನನ್ನ ಸ್ಮೃತಿಪಟಲದಲ್ಲಿ ಪಟ್ಟಾಗಿ ಅಚ್ಚೊತ್ತಿವೆ.

ಜೀವನದಲ್ಲಿ ನನ್ನ ಪಯಣದ ಪಥಗಳೂ ಬದಲಾಗುತ್ತಿದ್ದಂತೆಯೇ ನನಗೆ ಕೆಂಪೇಗೌಡರ ಕುರಿತಾದ ಆಸಕ್ತಿ, ಅವರ ಬಗ್ಗೆ ಅಧ್ಯಯನಶೀಲತೆಯ ಉತ್ಕಟತೆಯೂ ಹೆಚ್ಚಾಯಿತು. ಅದರಲ್ಲೂ ಶಾಸಕನಾದ ಮೇಲೆ, ಮಲ್ಲೇಶ್ವರ ಕ್ಷೇತ್ರದ ಮಹಾಜನತೆಯ ಆಶೋತ್ತರಗಳನ್ನು ಈಡೇರಿಸಲು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಾಗಲೆಲ್ಲ ಕೆಂಪೇಗೌಡರ ದಾರ್ಶನಿಕತೆ, ಅವರ ಅಭಿವೃದ್ಧೀಶೀಲತೆಯೂ ನನ್ನನ್ನು ಬಹುವಾಗಿ ಕಾಡಿದ್ದರಲ್ಲಿ ಅತಿಶಯವಿಲ್ಲ. ಐದು ಶತಮಾನಗಳೇ ಆಗಿಹೋದ ಮೇಲೆಯೂ ಅವರ  ಅಭಿವೃದ್ಧಿಯ ಕುರುಹುಗಳು ಅಚ್ಚಳಿಯದೇ ಉಳಿದಿವೆ ಎಂದರೆ ಅವರಿಂದ ಪ್ರಭಾವಿತಗೊಳ್ಳದೇ ಇರಲು ಹೇಗೆ ಸಾಧ್ಯ?

ವಿಜಯನಗರ, ಅದರಲ್ಲೂ ಶ್ರೀಕೃಷ್ಣದೇವರಾಯರ ಸಮಕಾಲೀನರಾಗಿ ಅವರ ಸಾಮ್ರಾಜ್ಯದ ದಕ್ಷಿಣದಲ್ಲಿ ರಾಮರಾಜ್ಯದಂಥ ಆಡಳಿತ ನಡೆಸಿದ ಕೆಂಪೇಗೌಡರ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನ ಆಗಬೇಕಿದೆ. ಬೆಂಗಳೂರು ಕಟ್ಟಿದರೆಂಬ ವಿಷಯಕ್ಕಿಂತ ನಂಬಿಕೆ, ಆತ್ಮವಿಶ್ವಾಸ, ನಿಷ್ಠೆ ಮತ್ತು ಮೌಲ್ಯ ಎಂಬ ನಾಲ್ಕು ತತ್ತ್ವಗಳ ಮೇಲೆ ಆಡಳಿತವನ್ನು ನಿಲ್ಲಿಸಿದ್ದ ಅವರು, ಜನಪರವಾಗಿ ಕೆಲಸ ಮಾಡಿದ್ದು ಹಾಗೂ ಜೀವಿತದುದ್ದಕ್ಕೂ ಈ ತತ್ತ್ವಗಳನ್ನು ಮೀರಿ ನಡೆಯದಿರುವುದು ನನ್ನ ಯೋಚನೆಗಳಲ್ಲಿ ಬದಲಾವಣೆ ತಂದ ಅಂಶಗಳಲ್ಲಿ ಪ್ರಮುಖವು ಎಂದು ನಿಸ್ಸಂಶವಾಗಿ ಹೇಳಬಲ್ಲೆ.

ಕುಟಿಲತೆ ಇಲ್ಲದ ರಾಜನೀತಿ, ವಿಸ್ತರಣಾವಾದವಿರದ ರಣನೀತಿ ಇವತ್ತಿಗೂ ಕೆಂಪೇಗೌಡರನ್ನು ರಾಜಕೀಯವಾಗಿಯೂ ಅಜರಾಮರರನ್ನಾಗಿ ಮಾಡಿದೆ. ಅಭಿವೃದ್ಧಿಯ ಅಜೆಂಡಾದೊಂದಿಗೆ ಸಾಗಿದ ಅವರು ಓರ್ವ ಸ್ವತಂತ್ರ ದೊರೆ ಅಥವಾ ಚಕ್ರವರ್ತಿಯೂ ಮಾಡಲು ಸಾಧ್ಯವಾಗದ್ದನ್ನು ನಮಗಾಗಿ ಮಾಡಿಟ್ಟುಹೋಗಿದ್ದಾರೆ. ೫೯ ವರ್ಷಗಳ ಅವರ ಅವಿಚ್ಛಿನ್ನ ಆಡಳಿದಲ್ಲಿ ತಲೆತಲೆಮಾರು ಮರೆಯದ ಅದೆಷ್ಟೋ ಮೈಲುಗಲ್ಲುಗಳು ಸ್ಥಾಪನೆಯಾಗಿದ್ದವು. ಇವತ್ತಿನ ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತರುವ ಪ್ರತಿಯೊಬ್ಬ ನಾಯಕನೂ ಕೆಂಪೇಗೌಡರಿಂದ ಕಲಿಯಲೇಬೇಕಾದ್ದು ಬಹಳಷ್ಟಿದೆ. ಜತೆಗೆ, ಬೆಂಗಳೂರನ್ನು ಕಟ್ಟಿದ ಪರಿ, ಕೃಷಿ, ವ್ಯಾಪಾರ, ವಾಣಿಜ್ಯ ಚಟುವಟಿಕೆ, ನೀರಾವರಿ, ಮೂಲಸೌಕರ್ಯ, ಟೌನ್ ಪ್ಲಾನಿಂಗ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರಿಗಿದ್ದ ಅಪಾರ ಜ್ಞಾನ, ಸ್ಪಷ್ಟವಾದ ದೂರದೃಷ್ಟಿ ವರ್ತಮಾನದ ನಮಗೆಲ್ಲರಿಗೂ ದಾರೀದೀಪ. ಪ್ರಸಕ್ತ ತಂತ್ರಜ್ಞಾನದ ಕಾಲವನ್ನೂ ಬೆರಗು ಮಾಡುವಂತೆ ನೂರಾರು ವರ್ಷಗಳ ಹಿಂದೆ ಪ್ರಜೆಗಳೇ ಊಹಿಸಲಾರದಷ್ಟು ಪ್ರಗತಿ ಸಾಧಿಸಿದ್ದರು ಕೆಂಪೇಗೌಡರು. ಇಂಥ ಮಾದರಿಗಳನ್ನು ನಾವು ಹೆಕ್ಕಿ ತೆಗೆದು ಅಳವಡಿಸಿಕೊಳ್ಳಬೇಕಿದೆ.

ಕುಟಿಲತೆ ಇಲ್ಲದ ಮಹಾನಾಯಕ:

ಕೆಂಪೇಗೌಡರು, ವಿಜಯನಗರದ ಅರಸರು ಹಿಂದಿನಿಂದಲೂ ತಮ್ಮ ವಂಶಸ್ಥರ ಮೇಲಿಟ್ಟಿದ್ದ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾರೆ. ಉಳಿದ ಸಾಮಂತರಂತೆ ಸ್ವತಂತ್ರರಾಗಲು ಯತ್ನಿಸಲಿಲ್ಲ, ಕುಟಿಲತೆ ತೋರಲಿಲ್ಲ. ವಿಜಯನಗರದಿಂದ ಕಿರುಕುಳ ಆದರೂ ಅವರು ತಮ್ಮ ನಂಬಿಕೆಗಳಿಂದ ಹಿಂದೆ ಸರಿಯಲಿಲ್ಲ. ಆ ಸಾಮ್ರಾಜ್ಯಕ್ಕೆ ತಮ್ಮ ನಿಷ್ಠೆಯನ್ನು ಮುಂದುವರಿಸುತ್ತಲೇ ಬೆಂಗಳೂರು ಮತ್ತದರ ಸುತ್ತಮುತ್ತಲಿನ ಪ್ರದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದರು. ಅತ್ತ ರಾಜಕೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಲೇ ಮತ್ತೊಂದೆಡೆ ತಮ್ಮ ಪರಿಪಾಲನೆಯ ನೆಲದ ಅಭಿವೃದ್ಧಿಗೆ ಒತ್ತು ನೀಡಿದರು. ಹೀಗಾಗಿ ರಾಜಕೀಯವಾಗಿಯೂ ಕೆಂಪೇಗೌಡರು ವರ್ತಮಾನದ ಪ್ರತಿಯೊಬ್ಬ ನಾಯಕನಿಗೂ ಮಾರ್ಗದರ್ಶಿ ಮತ್ತು ಆದರ್ಶ. ರಾಜಕೀಯ ವಿದ್ಯಾರ್ಥಿಗಳು ಈ ಹಿನ್ನೆಲೆಯಲ್ಲಿ ಗೌಡರನ್ನು ಅಧ್ಯಯನ ಮಾಡಬೇಕಿದೆ.

ಕೆಂಪೇಗೌಡರು ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಇವತ್ತಿನ ರಾಜಕಾರಣದಲ್ಲಿ ಹಿನ್ನಲೆಯಲ್ಲಿ ನನ್ನ ಮೇಲೆ ಆಳವಾಗಿ ಪ್ರಭಾವ ಬೀರಿದ್ದಾರೆ. ಬೆಂಗಳೂರಿನ ಓರ್ವ ಜನಪ್ರತಿನಿಧಿಯಾಗಿ ಮಾತ್ರವಲ್ಲ, ಮಾಗಡಿಯ ಜತೆಗೆ ಕರುಳಬಂಧ ಹೊಂದಿರುವ ನನಗೆ ಅವರು ಆತ್ಮಸ್ಫೂರ್ತಿಯೂ ಹೌದು. ಬೆಂಗಳೂರನ್ನು ಕಟ್ಟಿದ ಪರಿ, ಕೃಷಿ, ವ್ಯಾಪಾರ, ವಾಣಿಜ್ಯ ಚಟುವಟಿಕೆ, ನೀರಾವರಿ, ಮೂಲಸೌಕರ್ಯ, ಟೌನ್ ಪ್ಲಾನಿಂಗ್ ಸೇರಿ ಅನೇಕ ಕ್ಷೇತ್ರಗಳಲ್ಲಿ ಅವರಿಗಿದ್ದ ಅಪಾರ ಜ್ಞಾನ, ಸ್ಪಷ್ಟವಾದ ದೂರದೃಷ್ಟಿ ವರ್ತಮಾನದ ರಾಜಕಾರಣಿಗಳು, ತಜ್ಞರಿಗೆ ದಾರಿದೀಪ. ಪ್ರಸಕ್ತ ತಂತ್ರಜ್ಞಾನದ ಕಾಲವನ್ನೂ ಬೆರಗು ಮಾಡುವಂತೆ ನೂರಾರು ವರ್ಷಗಳ ಹಿಂದೆ ಪ್ರಜೆಗಳೇ ಊಹಿಸಲಾರದಷ್ಟು ಪ್ರಗತಿ ಸಾಧಿಸಿದ್ದರು ಕೆಂಪೇಗೌಡರು.

ಗಡಿ, ಪೇಟೆಯ ಕಲ್ಪನೆ:

ಇವತ್ತು ಬೆಂಗಳೂರು ಅಗಾಧವಾಗಿ ಬೆಳೆದಿದೆ. ನಗರದೊಳಗೆ ಅನೇಕ ನಗರಗಳೂ, ಪಾಳ್ಯಗಳೂ, ಕಾಲೋನಿಗಳೂ ಇವೆ. ಆದರೆ ಕೆಂಪೇಗೌಡರು ಕೆಂಪೇಗೌಡರು ಬೆಂಗಳೂರನ್ನು ಮುಂದಿನ ಶತ-ಶತಮಾನಗಳ ಮುನ್ನೋಟದಿಂದ ನಿರ್ಮಿಸುತ್ತಾರೆ. ಅದರ ಫಲವೇ ಇವತ್ತು ನಾವು-ನೀವುಗಳೆಲ್ಲ ನೋಡುತ್ತಿರುವ ಪೇಟೆಗಳು. ಈ ಪೇಟೆಗಳ ಪರಿಕಲ್ಪನೆಯೇ ವಿಶೇಷ. ಆವತ್ತು ಪ್ರಭುಗಳು ಕಟ್ಟಿದ ಅರಳೆಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ತರಗುಪೇಟೆ, ಸುಣ್ಣಕಲ್ ಪೇಟೆ, ಮೇದಾರ ಪೇಟೆ, ಕುರುಬರ ಪೇಟೆ, ಮುತ್ಯಾಲಪೇಟೆ, ಕುಂಚಿಟಿಗರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಕಲ್ಲಾರಪೇಟೆ, ತಿಗಳರ ಪೇಟೆ, ಮಾಮೂಲ್ ಪೇಟೆ, ನಗರ್ತಪೇಟೆ, ಸುಲ್ತಾನಪೇಟೆ, ಮನವರ್ತಪೇಟೆ, ಕಬ್ಬನ್ ಪೇಟೆ, ಬಿನ್ನಿಪೇಟೆಗಳು.. ಇವುಗಳಲ್ಲಿ ಕೆಲವು ಈಗಲೂ ನಮ್ಮ ಕಣ್ಣಮುಂದಿವೆ. ಅಲ್ಲಿ ನಾವು ಓಡಾಡುತ್ತಿದ್ದೇವೆ, ಅಲ್ಲಿನ ಆ ಕಾಲದ ಸೊಗಡನ್ನೂ ಸವಿಯುತ್ತಿದ್ದೇವೆ. ಹೀಗೆ, ಕೆಂಪೇಗೌಡರು 64 ಪೇಟೆಗಳನ್ನು ನಿರ್ಮಿಸಿದರೆಂದು ದಾಖಲೆಗಳು ಹೇಳುತ್ತವೆ. ಇವುಗಳಲ್ಲಿ 54 ಪೇಟೆಗಳ ಹೆಸರುಗಳು ಮಾತ್ರ ಇತಿಹಾಸಕಾರರಿಗೆ ಲಭ್ಯವಾಗಿವೆ. ಹೀಗಾಗಿ ಅವರ ಟೌನ್ ಪ್ಲಾನಿಂಗ್ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಕಿದೆ. ಆ ನಿಟ್ಟಿನಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಹೆಜ್ಜೆ ಇಡಲಿದೆ. ಹಾಗೆಯೇ ಅವರು ಬೆಂಗಳೂರನ್ನು ಕಟ್ಟಿಮುಗಿಸಿದ ಮೇಲೆ ಗಡಿಗಳನ್ನು ಗುರತಿಸಿದ್ದು ಅವರಲ್ಲಿದ್ದ ನಗರೀಕರಣದ ಕುರಿತ ವೈಜ್ಞಾನಿಕ ಆಲೋಚನೆಯ ಪ್ರತೀಕ. ನಗರದ ನಾಲ್ಕು ದಿಕ್ಕುಗಳಲ್ಲಿ ಗೋಪುರಗಳನ್ನು ಕಟ್ಟಿ ಅಲ್ಲಿ ಗಡಿರೇಖೆ ಎಳೆದಿದ್ದು ನಿಜಕ್ಕೂ ಶ್ರೇಷ್ಟ ಎಂಜನಿಯರಿಂಗ್ ಮತ್ತು ಟೌನ್ ಪ್ಲಾನಿಂಗ್ ಎಂದು ಹೇಳಬೇಕಾಗಿದೆ.

500 ವರ್ಷಗಳಷ್ಟು ಹಿಂದೆಯೇ ವ್ಯಾಪಾರಿಗಳನ್ನು ಇಲ್ಲಿಗೆ ಕರೆತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರವರ ವೃತ್ತಿಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ನಗರವು ಬೆಳೆಯಲು ಅನುವು ಮಾಡಿಕೊಟ್ಟ ಕೀರ್ತಿ ಕೆಂಪೆಗೌಡರಿಗೇ ಸಲ್ಲುತ್ತದೆ. ಅವರು ನಿರ್ಮಿಸಿದ ಈ ಎಲ್ಲಾ ಪೇಟೆಗಳು ಇಂದಿಗೂ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ವಾಣಿಜ್ಯ ವ್ಯವಹಾರದ ದೃಷ್ಠಿಯಿಂದ ಭಾರಿ ಮಹತ್ವವನ್ನು ಹೊಂದಿವೆ.

ಇದಿಷ್ಟೇ ಅಲ್ಲ, ಯಲಹಂಕ ನಾಡಿನ ವ್ಯಾಪ್ತಿಯು ಅವರ ಕಾಲದಲ್ಲಿ ಈಗಿನ ಬೆಂಗಳೂರಿನ ಹೊರವಲಯದಲ್ಲಿರುವ ಆವತಿಯಿಂದ ಹಿಡಿದು ಕೋಲಾರ, ಶಿವಗಂಗೆ, ಹುಲಿಕಲ್, ಕುಣಿಗಲ್, ಹುಲಿಯೂರುದುರ್ಗ, ಹುತ್ರಿದುರ್ಗ, ಮಾಗಡಿ, ರಾಮನಗರ, ಸಾವನದುರ್ಗದವರೆಗೂ ವಿಸ್ತರಿಸಿತ್ತು. ತಮ್ಮ ಕಾಲದಲ್ಲಿ ಕೆಂಪೇಗೌಡರು ನಿರ್ಮಿಸಿದ ಕೆರೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು, ಪೇಟೆಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ಅವೆಲ್ಲವೂ ನಮ್ಮ ಐತಿಹಾಸಿಕ ಶ್ರೀಮಂತಿಕೆಯನ್ನು ನಿರಂತರವಾಗಿ ಸಾರುತ್ತಲೇ ಇವೆ.

ಹೊಸ ತಲೆಮಾರಿಗೆ ಹೇಳಬೇಕು:

ನನ್ನ ಬಹು ಆಸೆ ಎಂದರೆ ಕೆಂಪೇಗೌಡರನ್ನು ಈಗಿನ ಹಾಗೂ ನಂತರದ ತಲೆಮಾರಿನ ಯುವಜನತೆಗೆ ಪರಿಚಯಿಸಬೇಕು. ಅದಕ್ಕಾಗಿ ಪ್ರಾಧಿಕಾರದಿಂದ ಮಹತ್ವದ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದೇವೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟ ಮೇಲೆ ನಮ್ಮ ನಗರದ ಆಸ್ಮಿತೆಯಾದ ಅವರ ವಿರಾಜಮಾನ ಪ್ರತಿಮೆಯನ್ನು ಮಾಡಬೇಕು ಎಂದು ಬೇಡಿಕೆ ಬಂದಾಗ ಸರಕಾರ ಕೂಡಲೇ ಕಾರ್ಯೋನ್ಮುಖವಾಯಿತು. ೨೩ ಎಕರೆ ಪ್ರದೇಶದಲ್ಲಿ ಸುಂದರವಾದ ಸೆಂಟ್ರಲ್ ಪಾರ್ಕ್ ಒಂದನ್ನು ಮಾಡಿ ಅದರಲ್ಲಿ ೧೦೮ ಅಡಿ ಎತ್ತರದ ಪ್ರಭುಗಳ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ, ಜಯಂತಿಯಂದೇ (ಜೂನ್ ೨೭) ಇದಕ್ಕೆ ಭೂಮಿ ಪೂಜೆಯೂ ನೆರವೇರುತ್ತಿದೆ. ಕೇವಲ ಇದು ಸಾಂಕೇತಿಕ ಪ್ರತಿಮೆಯಾಗಿರದೆ, ಅವರ ಇತಿಹಾಸ, ಪರಂಪರೆಯನ್ನು ಸಾರುವ ಪಾರ್ಕಿನಂತೆ ಇದು ಮೂಡಿಬರಲಿದೆ. ಜತೆಗೆ ಕನ್ನಡ, ಇಂಗ್ಲಿಷಿನಲ್ಲಿ ಅವರ ಸಾಹಿತ್ಯ ಅಲ್ಲಿ ಲಭ್ಯವಾಗುವಂತೆ ಮಾಡಲಾಗುವುದು, ದೃಶ್ಯರೂಪದ ಧ್ವನಿಬೆಳಕಿನ ಕಾರ್ಯಕ್ರಗಳನ್ನು ರೂಪಿಸಲಾಗುವುದು. ಒಂದೇ ವರ್ಷದಲ್ಲಿ ಇಡೀ ಯೋಜನೆಯನ್ನು ಮುಗಿಸಿ ೨೦೨೧ರ ಜಯಂತಿ ದಿನ ಲೋಕಾರ್ಪಣೆ ಮಾಡುವುದು ಸರಕಾರದ ಉದ್ದೇಶವಾಗಿದೆ.

ಕೆಂಪಾಪುರ ಅಭಿವೃದ್ಧಿ:

ಕೆಂಪೇಗೌಡರ ವೀರ ಸಮಾಧಿಯುಳ್ಳ ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ಜಾಗತಿಕ ಮಟ್ಟದ ಐತಿಹಾಸಿಕ ಪ್ರವಾಸಿ ತಾಣವಾಗಿ ರೂಪಿಸುವುದು ನನ್ನ ಮತ್ತೊಂದು ಮಹತ್ವಾಕಾಂಕ್ಷೆ. ಇಡೀ ಗ್ರಾಮವನ್ನು ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಮಾಡಲಾಗುವುದು, ಸ್ಥಳೀಯರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಸೂಕ್ತವ್ಯವಸ್ಥೆ, ಕೆಂಪಾಪುರ ಕೆರೆಯ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಈ ತಾಣವನ್ನು ಸರ್ವಋತು ಪ್ರವಾಸಿತಾಣವನ್ನಾಗಿ ರೂಪಿಸಬೇಕೆಂಬ ಕನಸನ್ನು ಸಾಕಾರ ಮಾಡಲು ಪ್ರಯತ್ನಗಳನ್ನು ಆರಂಭಿಸಲಾಗಿದೆ. ಐಡೆಕ್ ತಜ್ಞರು ಈಗಾಗಲೇ ಈ ನಿಟ್ಟಿನಲ್ಲಿ ಅಧ್ಯಯನಶೀಲರಾಗಿದ್ದು,  ಅವರು ವರದಿ ಕೊಟ್ಟ ನಂತರ ಸಮಗ್ರ ಯೋಜನೆಯನ್ನು ರೂಪಿಸಿ ಜಾರಿಗೆ ತರಲಾಗುವುದು. ಹಾಗೆಯೇ ಆವತಿ, ಶಿವಗಂಗೆ ಸೇರಿದಂತೆ ಕೆಂಪೇಗೌಡರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅವೆಲ್ಲ ಜಾಗಗಳನ್ನು ಗುರುತಿಸಿ ಅವರ ಹೆಸರಿನಲ್ಲಿಯೇ ಒಂದು ಸರ್ಕ್ಯೂಟ್ ಮಾಡಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು.

ಅಂತಿಮವಾಗಿ ನನ್ನ ಆಸೆ ಇಷ್ಟೇ. ಮುಂದಿನ ತಲೆಮಾರುಗಳು ಕೆಂಪೇಗೌಡರ ಬಗ್ಗೆ ಹೆಮ್ಮೆಯಿಂದ ಮಾತನಾಡಬೇಕು. ದೇಶ ಅಥವಾ ವಿಧೇಶ ಯಾವುದೇ ನೆಲದಲ್ಲಿ ನಿಂತರು ನಾವು ಕೆಂಪೇಗೌಡರು ಕಟ್ಟಿಡ ನಾಡಿನವರು ಎಂದು ಹೇಳಲು ಹಿಂಜರಿಯಬಾರದು. ಹೊಸ ತಲೆಮಾರಿನ ಯುವಕ ಯುವತಿಯರಿಗೆ, ದೇಶ ವಿದೇಶಗಳ ಜನರು ನಾಡಪ್ರಭುಗಳ ಬಗ್ಗೆ ತಿಳಿಯಬೇಕು. ಅವರ ಅಭಿವೃದ್ಧಿಯ ಮಾದರಿ, ಜನಪರ ಆಡಳಿತ, ರಾಜಕೀಯ ಮೌಲ್ಯಗಳು, ವ್ಯಾಪಾರ-ವಾಣಿಜ್ಯ ಚಟುವಟಿಕೆ, ಪರಿಸರ ಪ್ರೀತಿ ಇತ್ಯಾದಿಗಳು ಚಿರಸ್ಥಾಯಿಯಾಗಿ ಉಳಿಬೇಕು. ಇಷ್ಟು ಸಾಕಾರವಾದರೆ ಅದಕ್ಕಿಂತ ಧನ್ಯತೆ ಬೇರೆನಿದೆ?

Tags: BengalurufeaturedkarnatakaKempegowdakempegowda international airportNadaprabhu Kempegowda
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ಕ್ವಾರಂಟೈನ್’ನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ.

ಉಪ ಮುಖ್ಯಮಂತ್ರಿಗೆ ಕ್ವಾರಂಟೈನ್ ಕಲಿಸಿದ ಪಾಠಗಳು

Leave a Reply Cancel reply

Your email address will not be published. Required fields are marked *

Recommended

ಡಿಕೆಶಿ ಮನೆಯಲ್ಲಿ ಸಿಕ್ಕಿದ್ದೇನು? ಸಿಬಿಐ ಹೇಳಿದ್ದೇನು? ಕೆಪಿಸಿಸಿ ಸಾರಥಿ ದೂರಿದ್ದೇನು? ಬೈ ಎಲೆಕ್ಷನ್ ವೇಳೆ ಇದೆಲ್ಲ ಏನು?

ನಾನು ಹೇಳಿದ್ದೆಲ್ಲವೂ ಸತ್ಯ, ಸತ್ಯ ಯಾವಾಗಲೂ ಕಹಿಯಾಗಿರುತ್ತದೆ; ಡಿಕೆ ಬ್ರದರ್ಸ್‌ ಮೇಲೆ ಮತ್ತೆ ದಾಳಿ ನಡೆಸಿದ ಡೆಪ್ಯೂಟಿ ಸಿಎಂ

5 years ago
ಡಿಸೆಂಬರ್ 14ರಿಂದ ಪಂಚಲಿಂಗ ದರ್ಶನ; ದಸರಾದಂತೆಯೇ ಸರಳ, ಎಲ್ಲವೂ ವರ್ಚುವಲ್

ಡಿಸೆಂಬರ್ 14ರಿಂದ ಪಂಚಲಿಂಗ ದರ್ಶನ; ದಸರಾದಂತೆಯೇ ಸರಳ, ಎಲ್ಲವೂ ವರ್ಚುವಲ್

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ