• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಕೊರೋನಾವನ್ನು ಒದ್ದೋಡಿಸೋಣ

cknewsnow desk by cknewsnow desk
July 28, 2020
in COVID-19, GUEST COLUMN, NEWS & VIEWS
Reading Time: 1 min read
0
ಕೊರೋನಾವನ್ನು ಒದ್ದೋಡಿಸೋಣ
931
VIEWS
FacebookTwitterWhatsuplinkedinEmail
  • ದು.ಗು.ಲಕ್ಷ್ಮಣ

ಲೇಖನದ ಶೀರ್ಷಿಕೆ ನೋಡಿದ ಹಲವರಿಗೆ ನಗು ಬರಬಹುದು. ಇವರೆಂತಹ ಲೇಖಕರೆಂದು ಮರುಕ ಉಂಟಾಗಬಹುದು. ಕಣ್ಣಿಗೆ ಕಾಣುವ ವೈರಾಣುಗಳನ್ನೇ ಒದ್ದೋಡಿಸಲಾಗದ ನಾವು, ಇನ್ನು ಕಣ್ಣಿಗೆ ಕಾಣದ ಕೊರೋನಾ ಎಂಬ ವೈರಾಣುವನ್ನು ಒದ್ದೋಡಿಸಲು ಸಾಧ್ಯವೇ? ಎಂಬ ಪ್ರಶ್ನೆ ಕಾಡಬಹುದು. ಹೀಗೆ ಅನಿಸುವುದೆಲ್ಲವೂ ಸಹಜ. ಆದರೆ ಕೊರೋನಾವನ್ನು ಒದ್ದೋಡಿಸಲು ಸಾಧ್ಯ ಎಂಬುದೂ ಅಷ್ಟೇ ನಿಜ.

ಕಣ್ಣಿಗೆ ಕಾಣದ ಕೊರೋನಾ ಭಾರತವನ್ನಷ್ಟೇ ಅಲ್ಲ, ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವುದು ಸರ್ವವೇದ್ಯ. ಇದರಿಂದಾಗಿ ಬದುಕಿನ ಚಹರೆಯೇ ಬದಲಾಗಿದೆ. ಜೀವನಶೈಲಿಯನ್ನು ಎಲ್ಲರೂ ಅನಿವಾರ್ಯವಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಕಣ್ಣಿಗೆ ಕಾಣದ ವೈರಾಣು ಸೃಷ್ಟಿಸಿರುವ ಭಯ, ಗಾಬರಿಗಿಂತಲೂ ಕಣ್ಣಿಗೆ ಕಾಣುವ ವಸ್ತು ಸೃಷ್ಟಿಸಿರುವ ತಲ್ಲಣ ಭಯಾನಕವಾದುದು. ಆ ವಸ್ತು ನಿಮ್ಮ ನಮ್ಮ ಮನೆಯಲ್ಲಿರುವ ಟಿವಿ ಎಂಬುದು ಈಗಾಗಲೇ ನಿಮ್ಮ ಗಮನಕ್ಕೂ ಬಂದಿರಲಿಕ್ಕೆ ಸಾಕು.

ಕೊರೋನಾದ ರಣಕೇಕೆ, ಬೆಂಗಳೂರಿನಲ್ಲಿ ಕೋವಿಡ್ ರುದ್ರತಾಂಡವ, ರಾಜ್ಯದಾದ್ಯಂತ ಮರಣಮೃದಂಗ, ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲದೆ ರೋಗಿಗಳ ಪರದಾಟ...' ಟಿವಿ ಆ್ಯಂಕರ್‌ಗಳು ತಾರಕ ಸ್ವರದಲ್ಲಿ ಇಂತಹ ಪದಪುಂಜಗಳನ್ನು ಉದುರಿಸುತ್ತಿದ್ದರೆ ಕೇಳುಗರ ಮನದಲ್ಲಿ ಮರಣ ಮೃದಂಗ ಬಾರಿಸದೆ ಇರಲು ಸಾಧ್ಯವೆ? ಅಳ್ಳೆದೆಯ, ಹೃದಯ ದೌರ್ಬಲ್ಯವಿರುವವರಂತೂ ಇಂತಹ ಸುದ್ದಿ ಕೇಳಿಯೇ ಅರ್ಧ ಕುಸಿದುಹೋಗಿ ಸಾವಿನ ಮನೆಯ ಸನಿಹಕ್ಕೆ ಸರಿಯುತ್ತಾರೆ. ಕೋವಿಡ್ ಬಂದರೆ ಸಾವು ಖಚಿತ’ ಎಂಬಂತಹ ತಲೆಬುಡವಿಲ್ಲದ ಸುದ್ದಿಯ ತುಣುಕು ಎಂಥವರನ್ನಾದರೂ ಗಾಬರಿಗೊಳಿಸದೆ ಇರದು. 24/7 ಚಾನಲ್‌ಗಳು ಕೋವಿಡ್ ಕುರಿತು ಬಿತ್ತರಿಸುವ ಸುದ್ದಿಗಳನ್ನು ದಿನವಿಡೀ ಕೇಳುತ್ತಿದ್ದರೆ – ಇಡೀ ದೇಶದಲ್ಲಿ ರಸ್ತೆ ರಸ್ತೆಗಳಲ್ಲಿ ಜನರು ಎಲ್ಲೆಂದರಲ್ಲಿ ಬಿದ್ದು ಸಾಯುತ್ತಿದ್ದಾರೆ, ಇನ್ನು ಯಾರಿಗೂ ಉಳಿಗಾಲವೇ ಇಲ್ಲ ಎಂದು ಮನಸ್ಸಿಗೆ ವಿಪರೀತ ಆತಂಕ ಉಂಟಾಗದೆ ಇರದು. ಆದರೆ ವಾಸ್ತವ ಮಾತ್ರ ಹಾಗಿಲ್ಲ.

ಈ ದೇಶ ಹಲವಾರು ಖಾಯಿಲೆಗಳನ್ನು ಕಂಡಿದೆ. ಪ್ಲೇಗ್, ಮಲೇರಿಯಾ, ಸಿಡುಬು, ಡೆಂಗ್ಯು ಜ್ವರ, ಹೆಚ್1 ಎನ್1, ಫ್ಲೂ, ಹಕ್ಕಿಜ್ವರ, ಹಂದಿಜ್ವರ, ಮಂಗನ ಕಾಯಿಲೆ ಇತ್ಯಾದಿ ವರ್ಷದುದ್ದಕ್ಕೂ ಜನರನ್ನು ಕಾಡಿವೆ. ಆದರೆ ಸಕಾಲದಲ್ಲಿ ಮುನ್ನೆಚ್ಚರಿಕೆ ವಹಿಸಿ, ಸೂಕ್ತ ಚಿಕಿತ್ಸೆ ಪಡೆದರೆ ಆ ಕಾಯಿಲೆಗಳಿಂದ ಮುಕ್ತವಾಗಬಹುದು ಎಂಬುದೂ ಸಾಬೀತಾಗಿದೆ.

ಈಗ ಬಂದಿರುವ ಕೊರೋನಾ ವಿಷಯದಲ್ಲೂ ಮುನ್ನೆಚ್ಚರಿಕೆ ಕ್ರಮ, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಈ ಕಾಯಿಲೆ ನಮ್ಮನ್ನೇನೂ ಮಾಡದು ಎಂಬುದಕ್ಕೆ ಇದುವರೆಗೆ ಚಿಕಿತ್ಸೆ ಪಡೆದು ಗುಣಮುಖರಾದ ದೇಶದ ಶೇ.62.42 ಜನರೇ ಸಾಕ್ಷಿ. ಕರ್ನಾಟಕದಲ್ಲೂ ಸೋಂಕು ತಗಲಿದವರಲ್ಲಿ ಶೇ.41.12 ಮಂದಿ ಗುಣಮುಖರಾಗಿದ್ದಾರೆ. 93, 97ರ ಇಳಿ ವಯಸ್ಸಿನ ಮೂವರು ಸೋಂಕಿತರು ಗುಣಮುಖರಾದ ನಿದರ್ಶನವೂ ಕಣ್ಮುಂದೆಯೇ ಇದೆ. ಆದರೆ ಸುದ್ದಿ ವಾಹಿನಿಗಳು ಗುಣಮುಖರಾದವರ ಕುರಿತು ಪ್ರಚಾರ ನೀಡುವುದೇ ಇಲ್ಲ. ಅವರನ್ನು ಸಂದರ್ಶಿಸಿ, ಅವರ ಅನುಭವಗಳನ್ನು ದಾಖಲಿಸಿ, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುವುದೇ ಇಲ್ಲ. ಟಿಆರ್‌ಪಿ ಎಂಬ ಮಾಯಾಂಗನೆಯ ಬೆನ್ನುಹತ್ತಿ ಹೊರಟಿರುವ ಸುದ್ದಿವಾಹಿನಿಗಳಿಗೆ ಧನಾತ್ಮಕ, ಸಕಾರಾತ್ಮಕ ಸುದ್ದಿಗಳು ಖಂಡಿತ ಬೇಕಿಲ್ಲ.

ಡೆಂಗ್ಯೂ, ಪ್ಲೇಗ್ ಇತ್ಯಾದಿ ಮಾರಕ ರೋಗಗಳಿಗೆ ಹೋಲಿಸಿದರೆ ಕೊರೋನಾ ಅಂತಹ ಹೆಮ್ಮಾರಿ ಕಾಯಿಲೆಯಂತೂ ಅಲ್ಲ. ಹಾಗಂತ ನಿರ್ಲಕ್ಷಿಸಿದರೆ ಅಪಾಯವೂ ತಪ್ಪಿದ್ದಲ್ಲ. ಯಾವುದೇ ಕಾಯಿಲೆಯನ್ನು ಯಶಸ್ವಿಯಾಗಿ ಎದುರಿಸಬೇಕಾದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಪ್ರಬಲವಾಗಿರಬೇಕು. ಯಾವುದೇ ಸೋಂಕು ಉಂಟಾದಾಗ ಅದನ್ನು ಹೊಡೆದೋಡಿಸಲು ದೇಹದಲ್ಲಿ ಸೈನಿಕರಂತೆ ಕಾರ್ಯ ನಿರ್ವಹಿಸುವುದು ರಕ್ತದಲ್ಲಿರುವ ಬಿಳಿ ರಕ್ತ ಕಣಗಳು ಮತ್ತು ಟಿ.ಲಿಂಫೋಸೈಟ್ ಎಂಬ ಜೀವಕೋಶಗಳು. ದೇಶವನ್ನು ಕಾಯಲು ಗಡಿಗಳಲ್ಲಿ ಸೈನಿಕರಿದ್ದಂತೆ ದೇಹವನ್ನು ರಕ್ಷಿಸಲು ಈ ಸೈನಿಕರು ನಿರಂತರ ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಾರೆ. ಆದರೆ ಈ ರೋಗನಿರೋಧಕ ಸೈನಿಕರ ಕಾರ್ಯಕ್ಷಮತೆಯು ಭಯ, ಕೋಪ, ಹತಾಶೆ, ಗಾಬರಿ, ಅನಾಥ, ಪ್ರಜ್ಞೆಯಂತಹ ನಕಾರಾತ್ಮಕ ಭಾವನೆಗಳಿಂದ ಕುಂಠಿತವಾಗುತ್ತದೆ. ಸೋಂಕು ಉಂಟುಮಾಡುವ ವೈರಾಣುಗಳ ವಿನಾಶಕಾರಿ ವರ್ತನೆಯನ್ನು ಉತ್ತೇಜಿಸುತ್ತವೆ. ನಮ್ಮ ರೋಗನಿರೋಧಕ ಸೈನ್ಯಕ್ಕೂ ನಮ್ಮ ಮನಃಸ್ಥಿತಿಗೂ ನಿಕಟ ಸಂಬಂಧವಿದೆ ಎಂಬುದನ್ನು ಮನೋವಿಜ್ಞಾನಿಗಳೇ ಖಚಿತಪಡಿಸಿದ್ದಾರೆ. ಹಾಗಾಗಿ ನಕಾರಾತ್ಮಕ ವಿಷಯಗಳನ್ನು ತಲೆಯಲ್ಲಿ ತುಂಬಿಕೊಂಡಷ್ಟೂ ಭಯ, ಉದ್ವೇಗ, ಗಾಬರಿ, ಹತಾಶೆ, ಅನಾಥ ಪ್ರಜ್ಞೆ ಹೆಚ್ಚಾಗಿ ಇನ್ನು ತಮಗೆ ಉಳಿಗಾಲವೇ ಇಲ್ಲ ಎಂಬ ನಿರಾಶಾಭಾವವೇ ನಮ್ಮ ಮೇಲೆ ಸವಾರಿ ಮಾಡತೊಡಗುತ್ತದೆ. ಕೋವಿಡ್ ಕಾಟ ಆರಂಭವಾದಾಗಿನಿಂದ ಇಡೀ ದೇಶದಲ್ಲಿ ಆಗಿರುವುದೂ ಹೀಗೆಯೇ.

ಜನಜೀವನದಲ್ಲಿ ಕೋವಿಡ್ ಸೋಂಕಿಗಿಂತಲೂ ತಲ್ಲಣದ ಸೋಂಕು ಬಹು ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ. ಊಟ, ವಸತಿಯಂತಹ ಮೂಲಭೂತ ಅಗತ್ಯಗಳಿಗೆ ಕೊರತೆಯಿಲ್ಲದವರೂ ಗಲಿಬಿಲಿಗೊಳ್ಳುತ್ತಿದ್ದಾರೆ. ಕಂಪನಿಯಲ್ಲಿ ವೇತನ ಅರ್ಧಕ್ಕೆ ಕುಸಿಯಿತೆಂದು ಚಿಂತಿತರಾಗಿ ಮಾನಸಿಕ ಕ್ಲೇಶಕ್ಕೆ ಒಳಗಾದವರು ಸಾಕಷ್ಟು. ಹೊಟ್ಟೆ-ಬಟ್ಟೆಗೆ ಕೊರತೆ ಇಲ್ಲದಿದ್ದರೂ ವಿದ್ಯಾವಂತರು ನಕಾರಾತ್ಮಕ ಚಿಂತನೆಗಳಿಗೆ ಶರಣಾಗುವುದೇಕೆ? ಇತರರಿಗೂ ಅದೇ ಚಿಂತೆಯ, ಚಿಂತನೆಯ ವೈರಾಣು ಸೋಂಕು ಅಂಟಿಸುವುದೇಕೆ?

ಮಾರ್ಚ್ 24ರಂದು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ `ಗಾಬರಿ ಬೇಡ. ಆದರೆ ಎಚ್ಚರಿಕೆ ಅಗತ್ಯ’ ಎಂಬ ಸಂದೇಶ ನೀಡಿದ್ದರು. ಮುಖಗವಸು ಧಾರಣೆ, ಅಂತರ ಕಾಯ್ದುಕೊಳ್ಳುವಿಕೆ, ಸರಳಜೀವನ, ಆರೋಗ್ಯ ಪಾಲನೆ ಮುಂತಾದ ಕ್ರಮಗಳನ್ನು ಜನರು ಅನುಸರಿಸಬೇಕಾಗಿತ್ತು. ಆದರೆ ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವವರ ಪ್ರಮಾಣ ಈಗಲೂ ಕಡಿಮೆ ಇದೆ. ಜೊತೆಗೆ ನಕಾರಾತ್ಮಕ ಚಿಂತನೆಗಳನ್ನು ಮೈತುಂಬ ಮನದ ತುಂಬಾ ತುಂಬಿಕೊಂಡಿರುವುದರ ಪರಿಣಾಮವೇ ಎಲ್ಲೆಡೆ ಕೋವಿಡ್ ತಲ್ಲಣ.

ಆಯುರ್ವೇದ ಔಷಧಿಗೇಕೆ ಮನ್ನಣೆ ಇಲ್ಲ?

ಕೊರೋನಾಗೆ ಇದುವರೆಗೆ ಯಾರೂ ಸೂಕ್ತ ಸಮರ್ಪಕ ಲಸಿಕೆ ಕಂಡುಹಿಡಿದಿಲ್ಲ. ಜಗತ್ತಿನಾದ್ಯಂತ ನೂರೈವತ್ತು ಔಷಧ ಸಂಸ್ಥೆಗಳೇನೋ ಪ್ರಯೋಗ ನಿರತವಾಗಿವೆ. ಆದರೆ ಅದು ಅಷ್ಟು ಅವಸರದಿಂದ ಆಗುವ ಕಾರ್ಯವಲ್ಲ. ದೀರ್ಘಕಾಲವೇ ಬೇಕಾಗುತ್ತದೆ. ಇಷ್ಟರೊಳಗೇ ಲಸಿಕೆ ತಯಾರಾಗಬೇಕು ಎಂದು ಕಾಲಮಿತಿ ಹಾಕಲು ಬರುವುದಿಲ್ಲ. ಹಾಗೆ ಮಾಡುವುದಕ್ಕೆ ಅದೇನೂ ಉಪ್ಪಿಟ್ಟು, ಕೇಸರಿಬಾತ್ ತಯಾರಿಸಿದಷ್ಟು ಸುಲಭವಲ್ಲ. ಹಲವು ಬಗೆಯ ಪ್ರಯೋಗ, ಪರೀಕ್ಷೆಗಳು ನಡೆದು ಅವೆಲ್ಲ ಫಲಪ್ರದವಾಗಬೇಕು.

ಆದರೆ ವೈರಾಣುಗಳಿಂದುಂಟಾಗುವ ಹಲವು ಬಗೆಯ ರೋಗಗಳಿಗೆ ನಮ್ಮ ಪ್ರಾಚೀನ ಆಯುರ್ವೇದ ಔಷಧ ಪದ್ಧತಿ ಯಶಸ್ವಿ ಚಿಕಿತ್ಸೆ ನೀಡುತ್ತಾ ಬಂದಿದೆ. ಕೊರೋನಾ ಸೋಂಕು ತಗಲಿದ ಶಿವಮೊಗ್ಗೆಯ ರಾಮಕೃಷ್ಣಾಶ್ರಮದ ಸ್ವಾಮೀಜಿ ಆಸ್ಪತ್ರೆಗೆ ದಾಖಲಾದರೂ, ಅಲ್ಲಿ ಅವರು ಆಯುರ್ವೇದ ಚಿಕಿತ್ಸೆಯಿಂದಲೇ ಗುಣಮುಖರಾಗಿ ಬಂದ ನಿದರ್ಶನ ಕಣ್ಣೆದುರೇ ಇದೆ.

ಬೆಂಗಳೂರಿನ ಡಾ.ಗಿರಿಧರ ಕಜೆಯವರಂತೂ ಎರಡು ಆಯುರ್ವೇದಿಕ್ ಮಾತ್ರೆಗಳನ್ನು ಅಭಿವೃದ್ಧಿಪಡಿಸಿ, ಕ್ಲಿನಿಕಲ್ ಟ್ರಯಲ್‌ನಲ್ಲೂ ಯಶಸ್ವಿಯಾಗಿದ್ದಾರೆ. ಅದರ ಮಾರಾಟಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಅಹವಾಲನ್ನೂ ಸಲ್ಲಿಸಿದ್ದಾರೆ. ಕೇವಲ 250 ರೂ. ಖರ್ಚಿನಲ್ಲಿ ಆ ಮಾತ್ರೆಗಳನ್ನು ಉಪಯೋಗಿಸಿ, ನಾಲ್ಕೈದು ದಿನದೊಳಗೆ ಕೋವಿಡ್‌ನಿಂದ ಗುಣಮುಖರಾಗಬಹುದೆಂದು ಸಾಬೀತುಪಡಿಸಿದ್ದಾರೆ. ಆದರೆ ಸರ್ಕಾರ ಅವರ ಅಹವಾಲು ಸ್ವೀಕರಿಸಿದೆಯೇ ಹೊರತು, ಔಷಧ ಮಾರಾಟಕ್ಕೆ ಅನುಮತಿ ನೀಡಿಲ್ಲ. ಗಾಗಲ್ ಮಾಡಿ' ಎನ್ನುವ ಬದಲುಗಾರ್ಲಿಕ್ ಮಾಡಿ’ ಎನ್ನುವ, ಗಾಗಲ್‌ಗೂ ಗಾರ್ಲಿಕ್‌ಗೂ ವ್ಯತ್ಯಾಸವನ್ನೇ ಅರಿಯದ, ಆರೋಗ್ಯ ಕುರಿತು ಕಿಂಚಿತ್ತೂ ತಿಳಿವಳಿಕೆ ಇರದ ಶ್ರೀರಾಮುಲು ಆರೋಗ್ಯ ಸಚಿವರಾಗಿರುವ ಈ ಸರ್ಕಾರಕ್ಕೆ ಇಂತಹುದೊಂದು ಕಡಿಮೆ ಖರ್ಚಿನ, ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಔಷಧಿಯನ್ನು ಬಳಸಿ ಜನರನ್ನೇಕೆ ಕಾಪಾಡಬಾರದು ಎನ್ನುವ ಆಲೋಚನೆಯೇ ಬಂದಿಲ್ಲ. ಅಲೋಪತಿ ಮಾಫಿಯಾದ ಕಬಂಧ ಹಿಡಿತ ಆಯುಷ್ ಇಲಾಖೆಯ ಮೇಲೂ ಇರುವುದರಿಂದ ಸರ್ಕಾರವನ್ನು ಇಂತಹ ಸ್ಥಿತಿಗೆ ದೂಡಿರುವುದು ಗುಟ್ಟಾಗಿಲ್ಲ. ಒಂದೇ ಕೋವಿಡ್ ಟೆಸ್ಟಿಗೆ 4,500 ರೂ. ತೆರಬೇಕಾಗಿರುವ ಜನಸಾಮಾನ್ಯರಿಗೆ 250 ರೂ. ಖರ್ಚಿನಲ್ಲಿ ಕೊರೋನಾದಿಂದ ಗುಣಮುಖರಾಗುವ ಆಯುರ್ವೇದ ಔಷಧಿಯನ್ನೇಕೆ ಒದಗಿಸಬಾರದು? ಹಾಗೆ ಮಾಡಿದರೆ ಕೋಟಿಗಟ್ಟಲೆ ಆದಾಯ ತರುವ ಪಿಪಿಇ ಕಿಟ್, ಐಸೋಲೇಶನ್ ವಾರ್ಡ್, ಐಸಿಯು ವಾರ್ಡ್, ಇತ್ಯಾದಿಗಳ ಗತಿಯೇನು ಎಂಬ ಚಿಂತೆ ಅಲೋಪತಿ ಮಾಫಿಯಾ ಹಾಗೂ ಸರ್ಕಾರವನ್ನು ಕಾಡಿರಬಹುದು!

ಆಯುರ್ವೇದ ಔಷಧಿಗಳಿಗೆ ಉತ್ತೇಜನ ನೀಡದ ಸರ್ಕಾರದ ಈಗಿನ ಕ್ರಮಗಳಿಂದಾಗಿ ಜನರಿಗಂತೂ ಸರ್ಕಾರದ ಮೇಲೆ ಗುಮಾನಿ ಶುರುವಾಗಿದೆ. ಸರ್ಕಾರದ ಉದ್ದಿಶ್ಯ-ಕೋವಿಡ್ ನೆಪದಲ್ಲಿ ದುಡ್ಡು ಮಾಡುವುದೋ ಅಥವಾ ಸೋಂಕಿತರನ್ನು ಗುಣಪಡಿಸುವುದೋ ಎಂಬ ಜಿಜ್ಞಾಸೆಗೆ ಈ ವಿದ್ಯಮಾನ ಗ್ರಾಸವೊದಗಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈ ವಿಚಾರದಲ್ಲಿ ಜನರ ನಿಂದನೆಗೆ ಗುರಿಯಾಗಬೇಕಾಗಿದೆ.

ಅದೇನೇ ಇರಲಿ, ಲೇಖನದ ಆರಂಭದಲ್ಲೇ ಹೇಳಿರುವಂತೆ ಕೊರೋನಾ ಹೆಮ್ಮಾರಿಯನ್ನು ಒದ್ದೋಡಿಸುವುದು ಬಹುತೇಕರು ತಿಳಿದಿರುವಂತೆ ಕಷ್ಟಕರವೇನೂ ಅಲ್ಲ. ಆದರೆ ಅದಕ್ಕೆ ಬೇಕಾಗಿರುವುದು ನಕಾರಾತ್ಮಕ ಚಿಂತನೆಗಳಲ್ಲ, ದುಬಾರಿ ಪಿಪಿಇ ಕಿಟ್‌ಗಳಲ್ಲ, ದುಬಾರಿ ಚಿಕಿತ್ಸೆಯೂ ಅಲ್ಲ. ಪ್ರಬಲ ಇಚ್ಛಾಶಕ್ತಿ, ಸಕಾರಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ಜನಸಮೂಹ ರೂಢಿಸಿಕೊಂಡರೆ ಖಂಡಿತ ಕೊರೋನಾ ತೊಲಗಬೇಕಾಗುತ್ತದೆ.

ನಾವೆಲ್ಲರೂ ಸೇರಿ ಕೊರೋನಾವನ್ನು ಒದ್ದೋಡಿಸೋಣ. ಇನ್ನೂ ಎಷ್ಟು ದಿನಾಂತ ಕೊರೋನಾ ಚಿಂತನೆಯಲ್ಲೇ ಭಯಭೀತರಾಗಿ ಇರೋದು!


ದು.ಗು. ಲಕ್ಷ್ಮಣ: ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ’ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ’ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

Tags: Bengalurubjpcovid-19 karnatakarss
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಆತ್ಮರತಿಯ ಪರಾಕಾಷ್ಠೆಗೆ ಮದ್ದಿದೆಯೆ?

ಆತ್ಮರತಿಯ ಪರಾಕಾಷ್ಠೆಗೆ ಮದ್ದಿದೆಯೆ?

Leave a Reply Cancel reply

Your email address will not be published. Required fields are marked *

Recommended

ಶಿಕ್ಷಣದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಡಾ.ಕಸ್ತೂರಿ ರಂಗನ್‌ ಅವರು ಹೇಳಿದ್ದೇನು?

ಶಿಕ್ಷಣದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಡಾ.ಕಸ್ತೂರಿ ರಂಗನ್‌ ಅವರು ಹೇಳಿದ್ದೇನು?

5 years ago
ಉಳುವವನಿಂದ ಉಳ್ಳವನಿಗೆ ಭೂಮಿ! ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಲ್ಲಿ ಏನಿದೆ ಸ್ವಾಮಿ?

ಉಳುವವನಿಂದ ಉಳ್ಳವನಿಗೆ ಭೂಮಿ! ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಲ್ಲಿ ಏನಿದೆ ಸ್ವಾಮಿ?

6 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ