• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ವಾಯುಪಡೆಗೆ ರಫೆಲ್; ಭಾರತಕ್ಕೆ ಭೀಮಬಲ

P K Channakrishna by P K Channakrishna
July 29, 2020
in NATION, WORLD
Reading Time: 2 mins read
0
ವಾಯುಪಡೆಗೆ ರಫೆಲ್; ಭಾರತಕ್ಕೆ ಭೀಮಬಲ

ಭಾರತಕ್ಕೆ ಬಂದ ರಫೆಲ್ ಫೈಟರ್ ಜೆಟ್..

913
VIEWS
FacebookTwitterWhatsuplinkedinEmail

ನವದೆಹಲಿ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಅತಿದೊಡ್ಡ ಕೋಲಾಹಲಕ್ಕೆ ಕಾರಣವಾಗಿದ್ದ ರಫೆಲ್‌ ಯುದ್ಧ ವಿಮಾನಗಳ ಗಲಾಟೆಯ ಸದ್ದಡಗಿ ಬಹಳ ದಿನಗಳೇ ಆಗಿದ್ದು, ಸಂಸತ್ತಿನ ಹೊರಗೆ ಮತ್ತು ಒಳಗೆ ಭಾರೀ ತಿಕ್ಕಾಟಕ್ಕೆ ಈಗ ಎಂಡ್‌ ಕರ‍್ಡು ಬಿದ್ದಿದೆ. ಏಕೆಂದರೆ, ಮೊದಲ ಕಂತನ ಭಾಗವಾಗಿ ಫ್ರಾನ್ಸ್‌ʼನಿಂದ ಐದು ರಫೆಲ್‌ ವಿಮಾನಗಳು ಭಾರತವನ್ನು ಸೇರಿಕೊಂಡಿವೆ. ಅವು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ನಿಂತಿವೆ.
‌
ಜುಲೈ 29ರ ಬುಧವಾರ ಭಾರತದ ಮಟ್ಟಿಗೆ ಬಹುದೊಡ್ಡ ಸುದ್ದಿಯಾಗಿದ್ದ ರಫೆಲ್‌ ವಿಮಾನಗಳ ಆಗಮನ, ಸಂಜೆಯಾದರೂ ಅದರ ಅಬ್ಬರ ತಗ್ಗಿರಲಿಲ್ಲ. ಎಲ್ಲ ನ್ಯೂಸ್‌ ಚಾನೆಲ್‌ʼಗಳಲ್ಲಿ ಅವುಗಳ ಬಗ್ಗೆಯೇ ರ‍್ಚೆ ಹಾಗೂ ಚೀನಾ ಆಕ್ರಮಣಕಾರಿತನಕ್ಕೆ ಇದೊಂದು ದಿಟ್ಟ ಉತ್ತರ ಎಂದು ಅನೇಕರು ತಮ್ಮತಮ್ಮ ಅಭಿಪ್ರಾಯಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಿದ್ದರು, ಇನ್ನು ಕೆಲವರು ವಾದಿಸುತ್ತಿದ್ದರು. ಇದೆಲ್ಲದರ ನಡುವೆ ರಫೆಲ್‌ ಬಗ್ಗೆ ದೇಶಾದ್ಯಂತ ರಾಡಿ ಎಬ್ಬಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತ್ರ ದನಿ ಎತ್ತಲಿಲ್ಲ. ಅವರ ಪಕ್ಷದ ನಾಯಕರಾರೂ ದೂಸರಾ ಮಾತಾಡಲೇ ಇಲ್ಲ. ಬಹುತೇಕ ಟೀವಿ ನಿರೂಪಕರ ವಾಗ್ಬಾಣಗಳು ಹಾಗೂ ಬಿಜೆಪಿ ಕಡೆಯಿಂದ ಬಂದ ಸರಣಿ ಟ್ವೀಟುಗಳು ಅವರನ್ನು ಸೈಲಂಟ್‌ ಮಾಡಿಬಿಟ್ಟಿದ್ದವು. ರಫೆಲ್‌ ವಿಮಾನಗಳ ರೋಚಕ ಆಗಮನ, ಅದಕ್ಕಿಂತ ಮೊದಲು ಲಡಾಕಿನಲ್ಲಿ ಚೀನಾದೊಂದಿಗೆ ನಡೆದಿದ್ದ ಲಡಾಯಿ ಕಾಂಗ್ರೆಸ್ಸಿನ ದನಿಯನ್ನು ಮತ್ತಷ್ಟು ಅಡಗಿಸಿಬಿಟ್ಟಿತ್ತು.

ಫ್ರಾನ್ಸ್ ಮೂಲದ ಡಸಾಲ್ಟ್ ಕಂಪನಿ ಪೂರೈಕೆ ಮಾಡಿರುವ ಈ ವಿಮಾನಗಳ ಬಗ್ಗೆ, ಅವುಗಳ ಸಾರ‍್ಥ್ಯದ ಬಗ್ಗೆ ಇಡೀ ಜಗತ್ತಿನಲ್ಲಿ ಯಾರೂ ಚಕಾರ ಎತ್ತುತ್ತಿಲ್ಲ. ರಷ್ಯದ ಸುಖೋಯ್‌ ಮತ್ತು ಅಮೆರಿಕದ ಮಿಗ್ ಸರಣಿ ವಿಮಾನಗಳಿಗಿಂತ ರಫೆಲ್‌ ಫೈಟರ್‌ ವಿಮಾನಗಳು ಬಲಶಾಲಿ ಎಂದು ಹೇಳಲಾಗುತ್ತಿದೆ. ಬೆಳಗ್ಗೆಯಿಂದ ಸುದ್ದಿವಾಹಿನಿಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದ ತಜ್ಞರೆಲ್ಲರೂ ಮಿಗ್‌ ಮತ್ತು ಸುಖೋಯ್‌ʼಗಿಂತಲೂ ರಫೆಲ್‌ ಹೆಚ್ಚು ಬಲಿಷ್ಠ ಎಂದು ಹೇಳುತ್ತಲೇ ಇದ್ದರು. ಇದರ ಮಧ್ಯೆ ವಾಯುಪಡೆಯ ನಿವೃತ್ತ ಸೇನಾಧಿಕಾರಿಯೊಬ್ಬರು, ರಫೆಲ್‌ ಬಲದ ಬಗ್ಗೆ ಶಂಕೆ ಇಲ್ಲ ಎನಿಸುತ್ತಿದೆ. ಅದು ಇದುವೆರೆಗೂ ಯಾವ ಯುದ್ಧದಲ್ಲಿ ತನ್ನ ತಾಕತ್ತು ತೋರಿದ ಬಗ್ಗೆ ಮಾಹತಿ ಇಲ್ಲ. ಹಾಗಂತ ಮಿಗ್‌ ಮತ್ತು ಸುಕೋಯ್‌ ವಿಮಾನಗಳ ಶಕ್ತಿಯನ್ನು ಅಲ್ಲಗಳೆಯುವಂತಿಲ್ಲ ಎಂದು ತಮ್ಮ ವಾದ ಮಂಡಿಸಿದ್ದರು. ಯಾವುದೇ ತಾಂತ್ರಿಕ ಮಾಹಿತಿ ಇಲ್ಲದೇ ಸಿಕ್ಕಿದ ಹಳೆಯ ರಫೆಲ್‌ ಫೂಟೇಜುಗಳನ್ನೇ ತಿರುಗಿಸಿ ತಿರುಗಿಸಿ ತೆರೆಯ ಮೇಲೆ ಹಾಕುತ್ತಿದ್ದ ಆ ಸುದ್ದಿ ನಿರೂಪಕ ತದ ನಂತರ ಸುಮ್ಮನಾಗಿದ್ದರು.

ಲ್ಯಾಂಡಿಂಗ್ ಆಗುವುದರ ಮೇಲೆ ನಿಗಾ:

ರಫೆಲ್‌ ಫೈಟರ್ ಜೆಟ್‌ಗಳು ಅದೆಷ್ಟು ಬಲಶಾಲಿ ಹಾಗೂ ಅವುಗಳನ್ನು ಅದೆಷ್ಟು ಸೂಕ್ಷ್ಮವಾಗಿ ತನ್ನ ವಾಯುನೆಲೆಗೆ ಬರಮಾಡಿಕೊಳ್ಳಬೇಕು ಎಂಬ ಬಗ್ಗೆ ವಾಯುಪಡೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿತ್ತು. ಅದರ ಭಾಗವಾಗಿ ಅಂಬಾಲ ವಾಯುನೆಲೆಯ ಸುತ್ತಮುತ್ತಲ ಪ್ರದೇಶವನ್ನು ತೀವ್ರ ನಿಗಾದಲ್ಲಿಟ್ಟಿತ್ತು. ವಿದೇಶಿ ಬೇಹುಗಾರಿಕೆ ಬಗ್ಗೆ ಎಚ್ಚರ ವಹಿಸಿತ್ತು. ಭದ್ರತೆಯನ್ನು ಕೂಡ ಬಿಗಿ ಮಾಡಿತ್ತು. ಹೆಚ್ಚೂಕಮ್ಮಿ ವಾಯುನೆಲೆ ಸುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋಣ್‌ʼಗಳನ್ನು ಹಾರಿಸುವುದನ್ನು ನರ‍್ಬಂಧಿಸಿತ್ತು. ಅಕ್ಕಪಕ್ಕದ 4 ಗ್ರಾಮಗಳಲ್ಲಿ 144 ಪ್ರಕಾರ ನಿಷೇಧಾಜ್ಞೆ ವಿಧಿಸಲಾಗಿತ್ತು. ಅಷ್ಟೇ ಅಲ್ಲದೆ, ರಫೆಲ್‌ʼಗಳು ಲ್ಯಾಂಡ್‌ ಆಗುವ ವೇಳೆ ಮನೆಯ ಮೇಲೆ ಅಥವಾ ಮರಗಳ ಮೇಲೆ ಹತ್ತಿ ವಿಡಿಯೋ ಮಾಡಿ ಜಾಲತಾಣಗಳಿಗೆ ಹರಿಯಬಿಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿತ್ತು.

ಹೊರಟಿದ್ದು, ಬಂದು ಸೇರಿದ್ದು:

ಸೋಮವಾರ (ಜುಲೈ 28) ಫ್ರಾನ್ಸ್‌ನಿಂದ ಸುಖೋಯ್‌ ವಿಮಾನಗಳೆರಡರ ಎಸ್ಕರ‍್ಟಿನಲ್ಲಿ ಹೊರಟ ರಫೆಲ್‌ ವಿಮಾನಗಳು ದಾರಿಯ ನಡುವೆಯೇ ಯುಎಇ ವಾಯುನೆಲೆಯಲ್ಲಿ ಮಂಗಳವಾರ ಇಳಿಸಲಾಗಿತ್ತು. ಬುಧವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಅಲ್ಲಿಂದ ಹೊರಟು ೩,೩೦ರ ಸುಮಾರಿಗೆ ಅಂಬಾಲ ವಾಯುನೆಲೆಯಲ್ಲಿ ಭೂಸ್ರ‍್ಶ ಮಾಡಿದವು. ವಿಮಾನಗಳ ಇಡೀ ಪ್ರಯಾಣದ ಮೇಲೆ ಫ್ರಾನ್ಸ್‌ ಮತ್ತು ಭಾರತೀಯ ವಾಯುಪಡೆಗಳು ತೀವ್ರ ನಿಗಾ ಇರಿದ್ದವು ಎಂದು ಅಧಿಕಾರಿಳು ಹೇಳಿದ್ದಾರೆ. ಇದೆಲ್ಲ ಹಿನ್ನೆಲೆಯನ್ನು ಗಮನಿಸಿದರೆ, ರಫೆಲ್‌ ಫೈಟರುಗಳು ಎಷ್ಟು ಮಹತ್ವದವು ಎಂಬುದು ಗೊತ್ತಾಗುತ್ತದೆ. ಇನ್ನು ಅಂಬಾಲಾ ವಾಯುನೆಲೆಯಲ್ಲಿ ಈ ವಿಮಾನಗಳಿಗೆ ವಾಯುಪಡೆ ಮುಖ್ಯಸ್ಥ ಏರ್ʼಚೀಫ್ ಮಾರ‍್ಷಲ್‌ ಆರ್‌.ಕೆ.ಎಸ್‌ ಭದೌರಿಯಾ ಸ್ವಾಗತ ಕೋರಿದ್ದಾರೆ.

ಈ ವಿಮಾನಗಳ ತಾಕತ್ತಿಗೆ ಇಲ್ಲೊಂದು ಉದಾಹರಣೆ ಇದೆ. ಸೋಮವಾರ ಫ್ರಾನ್ಸ್‌ನಿಂದ ಹೊರಟ ವಿಮಾನಗಳು ಬರೋಬ್ಬರಿ 7,000 ಕಿ.ಮೀ ದೂರವನ್ನು ಒಂದೇ ದಿನದಲ್ಲಿ ಕ್ರಮಿಸಿ ಮಂಗಳವಾರ ಯುಎಇ ವಾಯುನೆಲೆಯಲ್ಲಿ ಕೆಳಗಿಳಿದವು. ರಫೆಲ್‌ ಫೈಟರ್‌ ವಿಮಾನದಲ್ಲಿ 3 ಸಿಂಗಲ್-ಸೀಟರ್, ಎರಡು ಅವಳಿ ಆಸನಗಳ ವ್ಯವಸ್ಥೆ ಇದೆಯಂತೆ.

ಈಗ ಬಂದಿರುವ ರಫೆಲ್‌ʼಗಳು ಅಂಬಾಲದಲ್ಲಿಯೇ ಬೀಡುಬಿಡಲಿವೆ. ಮತ್ತೆ ಬರುವ ಉಳಿದ ವಿಮಾನಗಳಿಗೂ ಇಲ್ಲಿಯೇ ಜಾಗ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ರಕ್ಷಣಾ ವ್ಯೂಹದ ಕಾರಣಕ್ಕೆ ಅಷ್ಟೂ ವಿಮಾನಗಳನ್ನು ಒಂದೆಡೆ ಇರಿಸುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಲಾಗುತ್ತಿದೆ.

ರಾಜನಾಥ್‌ ಸಂಭ್ರಮ:

ರಫೆಲ್‌ ವಿಮಾನಗಳು ಫ್ರಾನ್ಸ್‌ʼನಿಂದ ಹೊರಟಾಗಿನಿಂದ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಫೆಲ್‌ ಫೈಟರುಗಳು ಭಾರತಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಸಂತೋಷದೊಂದ ಸರಣಿ ಟ್ವೀಟುಗಳನ್ನು ಮಾಡಿದ್ದಾರೆ.

ರಫೇಲ್ ವಿಮಾನಗಳು ನಮ್ಮ ನೆಲಕ್ಕೆ ಬಂದಿಳಿದಿವೆ. ಇನ್ನು ರಫೇಲ್ ಕುರಿತಂತೆ ಸುಳ್ಳು ಆರೋಪಗಳಿಗೆ ಅವಕಾಶವಿಲ್ಲ. ಅವಕ್ಕೆಲ್ಲ ಈಗಾಗಲೇ ಉತ್ತರ ನೀಡಿದ್ದೇವೆ. ಮುಂದೆಯೂ ಯಾರಿಗಾದರೂ ಈ ಬಗ್ಗೆ ಅನುಮಾನ, ವಿರೋಧ, ಅಸಮಾಧಾನ ಇದ್ದರೆ ನಾವು ಅವರಿಗೆ ಸೂಕ್ತ ಉತ್ತರ ನೀಡಲು ತಯಾರಿದ್ದೇವೆ. ಈ ಸಂದರ್ಭದಲ್ಲಿ ನಾನು ನಮ್ಮ ಹೆಮ್ಮಯ ವಾಯುಪಡೆಯನ್ನು ಹೃತ್ಪರ‍್ವಕವಾಗಿ ಅಭಿನಂದಿಸುತ್ತೇನೆ. ರಫೇಲ್ ಸೇರ‍್ಪಡೆ ಮೂಲಕ ವಾಯುಪಡೆಯ ಶಕ್ತಿ ಹೆಚ್ಚಾಗಿದೆ. ನನಗೆ ಬಹಳ ಸಂತೋಷವಾಗಿದೆ ಎಂದು ರಾಜನಾಥ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಈಗ ನಿರ್ಣಾಯಕ:

ಯಾರೂ ಏನೇ ತೆಗೆದರೂ ರಫೆಲ್‌ ವಿಮಾನಗಳು ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎನ್ನಲಾಗಿದೆ. ಮುಖ್ಯವಾಗಿ ಭಾರತ-ಚೀನಾ ಬಿಕ್ಕಟ್ಟಿ ಹೊತ್ತಿನಲ್ಲಿ ಅವುಗಳನ್ನು ಚೀನಾ ಗಡಿ ಸಮೀಪ ನಿಯೋಜಿಸಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೆ, ಹಿಂದೂ ಮಹಾಸಾಗರವೂ ಸೇರಿ ಕೆಲ ಆಯಕಟ್ಟಿನ ಪ್ರದೇಶಗಳಲ್ಲಿ ಇವುಗನ್ನು ನಿಲ್ಲಿಸಬಹುದು. ಬಹುತೇಕ ರಕ್ಷಣಾ ಪಂಡಿತರು ಹೇಳುವ ಪ್ರಕಾರ ಯುದ್ಧ ಸನ್ನಿವೇಶದಲ್ಲಿ ರಫೆಲ್‌ ಗೇಮ್‌ ಚೇಂಜರ್‌ ಆಗಲಿದೆ. ಅತ್ಯಂತ ಬಲಶಾಲಿಯಾದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಲಿರುವ ಈ ಫೈಟರ್‌, ಇಡೀ ಜಗತ್ತಿನಲ್ಲಿಯೇ ಅತೈಾಧುನಿಕ ಯುದ್ಧ ವಿಮಾನವೆಂಬ ಹೆಗ್ಗಳಿಕೆ ಹೊಂದಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ದು ಏಕಕಾಲದಲ್ಲಿಯೇ ಹಲವು ಗುರಿಗಳನ್ನು ಉಡಾಯಿಸಲಿದೆ. ರಫೆಲ್‌ʼಗೆ ಸಮನಾದ ಮತ್ತೊಂದು ಯದ್ಧ ವಿಮಾನ ಮತ್ತೊಂದಿಲ್ಲ.

ಒಟ್ಟಾರೆಯಾಗಿ ರಫೆಲ್‌ʼಗಳನ್ನು ತಡೆಯಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ. ಮೋದಿ ಯಾರ ಮಾತೂ ಕೇಳಲಿಲ್ಲ. ಚೀನಾ ಸಮಸ್ಯೆಯೂ ಧುತ್ತೆಂದು ಬಂದು ಕೂತಿರುವ ಕಾರಣ, ಈಗ ಬಂದಿರುವ 5 ರಫೆಲ್‌ʼಗಳ ಜತೆಗೆ, ಈಗಾಗಲೇ ಒಪ್ಪಂದವಾಗಿ ಬುಕ್‌ ಆಗಿರುವ ಇನ್ನೂ 31 ವಿಮಾನಗಳು ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿವೆ. ಅದಾದ ಮೇಲೆ ಮತ್ತಷ್ಟು ರಫೆಲ್‌ ಫೈಟರುಗಳಿಗೆ ಬೇಡಿಕೆ ಹೋದರೂ ಅಚ್ಚರಿ ಇಲ್ಲ.

ಕಾಂಗ್ರೆಸ್’ಗೆ ಖುಷಿಯಾಗಿಲ್ಲ:

ರಫೆಲ್ ರಫೆಲ್‌ʼಗಳು ದೇಶಕ್ಕೆ ಬರುತ್ತಿದ್ದಂತೆಯೇ ಮೂವತ್ತೂ ರಾಜ್ಯದಲ್ಲಿ ಅದರ ಬಗ್ಗೆಯೇ ಮಾತಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ರಫೆಲ್ ಎಂಬ ಶಬ್ದ ಟ್ರೆಂಡಿಂಗ್’ನಲ್ಲಿತ್ತು. ಹೀಗಿದ್ದರೂ ಟ್ವೀಟ್ ಮಾಡಿದ ರಾಹುಲ್ ಗಾಂಧಿ ಅವರು, ಹಿಂದೆ ಎತ್ತಿದ್ದ ಪ್ರಶ್ನೆಗಳನ್ನೇ ಮತ್ತೆ ಎತ್ತಿದರು.

ವಾಯುಪಡೆಗೆ ರಫೆಲ್ ಸೇರಿದ್ದಕ್ಕೆ ಶುಭಾಶಯಗಳು. 526 ಕೋಟಿ ರೂ. ಬೆಲೆ ಒಂದು ರಫೆಲ್ ಒಂದರ ಬೆಲೆ 1670 ಕೋಟಿ ರೂ. ಆಗಿದ್ದೇಕೆ? 1670 ವಿಮಾನಗಳ ಪೈಕಿ ಕೇವಲ 36 ಬರುತ್ತಿವೆ ಏಕೆ? ಎಚ್’ಎಎಲ್ ಅನ್ನು ಬಿಟ್ಟು ದಿವಾಳಿಯಾಗಿರುವ ಅನಿಲ್ ಅಂಬಾನಿಗೆ 30,000 ಕೋಟಿ ರೂ. ಕಾಂಟ್ಯ್ರಾಕ್ಟ್ ಕೊಟ್ಟಿದ್ದೇಕೆ?

ರಾಹುಲ್ ಎತ್ತಿರುವ ಪ್ರಶ್ನೆಗಳು ಹಳೆಯವಾದರೂ, ಅವುಗಳಿಗೆ ಸರಕಾರದಿಂದ ಯಾರೂ ಉತ್ತರ ಕೊಡಲು ಹೋಗಿಲ್ಲ. ಆದರೆ, ರಾಜನಾಥ್ ಸಿಂಗ್ ಮಾತ್ರ ಅನುಮಾನ ಇದ್ದವರಿಗೆ ಉತ್ತರ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಹಾಗಾದರೆ, ರಫೆಲ್ ರಗಳೆಯನ್ನು ಕೈಬಿಡಲು ರಾಹುಲ್ ತಯಾರಿಲ್ಲ ಎಂದಾಯಿತು.


Rafael photos courtesy: twitter/Indian Air Force

Tags: Indian Air Forcerajnath singh
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಎದ್ದಿದೆ ಎಂದ ಸಿದ್ದು

ರಾಜ್ಯದಲ್ಲಿ HMPV ವೈರಸ್ಸಿನ ಎರಡು ಪ್ರಕರಣ ಪತ್ತೆ

by cknewsnow desk
January 6, 2025
0

ಸೋಂಕು ಹರಡದಂತೆ ಸರ್ಕಾರದಿಂದ ಸೂಕ್ತ ಮುಂಜಾಗ್ರತಾ ಕ್ರಮ; ಮುಖ್ಯಮಂತ್ರಿ ಸಿದ್ದರಾಮಯ್ಯ

Next Post
ಸಿಇಟಿ ಪರೀಕ್ಷೆ ನಿರಾತಂಕ; ವಿದ್ಯಾರ್ಥಿಗಳಲ್ಲಿ ಹೈ ಜೋಶ್

ಸಿಇಟಿ ಪರೀಕ್ಷೆ ನಿರಾತಂಕ; ವಿದ್ಯಾರ್ಥಿಗಳಲ್ಲಿ ಹೈ ಜೋಶ್

Leave a Reply Cancel reply

Your email address will not be published. Required fields are marked *

Recommended

ಬಲವಿದ್ದರೂ ಸೋತ ಕಾಂಗ್ರೆಸ್; ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷಗಿರಿ ಬಿಜೆಪಿ ಪಾಲು

ಕೋರ್ಟ್‌ಗೆ ಹೋಗುವುದೇ ಮಹಾ ಅಪರಾಧವಾದರೆ ಯಾರಿಗೂ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೇ?: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರಶ್ನೆ

4 years ago
ರಿಯಲಿ ಗ್ರೇಟ್‌ ಬ್ರಿಟನ್!‌ ಮುಂದಿನ ವಾರವೇ ಜನರಿಗೆ ಕೋವಿಡ್‌ ಲಸಿಕೆ ನೀಡಲು ಒಪ್ಪಿಗೆ  ಕೊಟ್ಟ ಪ್ರಧಾನಿ ಬೊರೀಸ್‌ ಜಾನ್ಸನ್

ರಿಯಲಿ ಗ್ರೇಟ್‌ ಬ್ರಿಟನ್!‌ ಮುಂದಿನ ವಾರವೇ ಜನರಿಗೆ ಕೋವಿಡ್‌ ಲಸಿಕೆ ನೀಡಲು ಒಪ್ಪಿಗೆ ಕೊಟ್ಟ ಪ್ರಧಾನಿ ಬೊರೀಸ್‌ ಜಾನ್ಸನ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ