• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ರಾತ್ರಿ ಪುನರ್ಜನ್ಮದ ಬಗ್ಗೆ ಅಂಗೇನು ಎಂದಿದ್ದ ಅಪ್ಪ, ಬೆಳಗ್ಗೆ ಹೊತ್ತಿಗೆ ಹೊರಟುಬಿಟ್ಟಿದ್ದರು!!

cknewsnow desk by cknewsnow desk
August 17, 2020
in GUEST COLUMN, STATE
Reading Time: 2 mins read
0
ರಾತ್ರಿ ಪುನರ್ಜನ್ಮದ ಬಗ್ಗೆ ಅಂಗೇನು ಎಂದಿದ್ದ ಅಪ್ಪ, ಬೆಳಗ್ಗೆ ಹೊತ್ತಿಗೆ ಹೊರಟುಬಿಟ್ಟಿದ್ದರು!!
1k
VIEWS
FacebookTwitterWhatsuplinkedinEmail

ಕೆ. ಕರಿಸ್ವಾಮಿ

ಅದು, ಮೇ 15, 2020ರ ಶುಕ್ರವಾರ ರಾತ್ರಿ. ಅಪ್ಪ ಆಸ್ಪತ್ರೆಯಿಂದ ಬಿಡುಗಡೆಯಾಗಿ ಎರಡು ದಿನಗಳಾಗಿದ್ದವು. ಊಟ ಮುಗಿಸಿ ನಾನೂ ಮತ್ತು ಅಪ್ಪ ಅದೂ ಇದೂ ಮಾತನಾಡುತ್ತಾ ಕುಳಿತಿದ್ದೆವು.
ಅಪ್ಪ: ಮರುಜನ್ಮ ಅಂತ ಇರುತ್ತಾ?
ನಾನು: ಆ ಬಗ್ಗೆ ಖಚಿತವಾಗಿ ಹೇಳುವವರು ಯಾರು?
ಅಪ್ಪ: ಇಲ್ಲ ಅಂತೀಯಾ?
ನಾನು: ಮುಕ್ತಿ ಬೇಕು ಅಂತ ಎಲ್ಲರೂ ಬೇಡಿಕೊಳ್ಳುವುದು ಪುನರ್ಜನ್ಮ ಬೇಡ ಅಂತ ತಾನೆ?
ಅಪ್ಪ: ಅಂಗೇನು?
ನಾನು: ಪುನರ್ಜನ್ಮದ ನಂಬಿಕೆ ಇರುವುದರಿಂದಲೇ, ಮತ್ತೆ ಮತ್ತೆ ಜನ್ಮವೆತ್ತುವ ಸರಪಳಿಯಿಂದ ಮುಕ್ತಿ ಬೇಕು ಅಂತ ಕೇಳಿಕೊಳ್ಳುತ್ತಾರೆ ಅನಿಸುತ್ತದೆ.
ಅಪ್ಪ: ಹೂಂ.

ಅಪ್ಪ

ಈ ಮಾತುಗಳ ನಡುವೆ ನನಗೆ ಗೊತ್ತಿದ್ದ ಕೆಲ ವಿಷಯಗಳನ್ನು ಹಂಚಿಕೊಂಡೆ. ಮಗುವಿನಂತೆ ಹೂಗುಟ್ಟುತ್ತಿದ್ದರು. ಅಪ್ಪ ಮಾತನಾಡುತ್ತಿದ್ದ ಗಡುಸು, ದೃಢತೆ ಎಂದಿನಂತೆಯೇ ಇದ್ದವು. ಮಾತಿನ ನಡುವೆ, ‘ನಾಲಿಗೆ ದಪ್ಪವಾಗಿದೆ’ ಅಂತ ಮತ್ತೆ ಮತ್ತೆ ಹೇಳುತ್ತಲೇ ಇದ್ದರು. ಕರಾರುವಾಕ್ಕಾಗಿ ಮಾತ್ರೆ, ಇನ್ಸುಲಿನ್ ತೆಗೆದುಕೊಂಡರು. ನಡುರಾತ್ರಿ ಸುಮಾರು ಹನ್ನೆಡರ ವರೆಗೂ ಮಾತನಾಡಿ ವಿದಾಯ ಹೇಳಿ ಮಲಗಿ ಕೊಂಡೆ. ರಾತ್ರಿ ಸುಮಾರು ಎರಡು-ಎರಡೂವರೆ ಗಂಟೆ ಇರಬಹುದು, ಅಪ್ಪ ಟಾಯ್ಲೆಟ್ಗೆ ಹೋಗಲು ಎದ್ದಿದ್ದಾರೆ. ಅವರು ಲೈಟ್ ಹಾಕಿದಾಗ ನಿದ್ದೆ ಗಣ್ಣಿನಲ್ಲಿದ್ದ ನಾನು, ಸಹಾಯಕ್ಕೆ ಬರಬೇಕಾ?' ಅಂತ ಕೇಳಿದೆ ನೆಂದೂ,ಅದಕ್ಕೆ ಅಪ್ಪಏನೂ ಬೇಡ’ ಅಂತ ಹೇಳಿದರೆಂದೂ ನನ್ನ ಹೆಂಡತಿ ಹೇಳಿದಳು. ನನಗೆ ನೆನಪೇ ಇಲ್ಲ. ಸಕ್ಕರೆ ಕಾಯಿಲೆ ಇರುವವರು ಕನಿಷ್ಠ ಎರಡು, ಮೂರು ಬಾರಿ ಟಾಯ್ಲೆಟ್ಗೆ ಹೋಗುವುದು ಮಾಮೂಲಿಯಲ್ಲವೆ?

ಮತ್ತೆ, ಸುಮಾರು ನಾಲ್ಕು ಗಂಟೆಯಾಗಿರಬಹುದು, ನನ್ನ ಹೆಂಡತಿ, ‘ಲೈಟು ಇನ್ನೂ ಉರೀತಿದೆ, ತಾತ ಟಾಯ್ಲೆಟ್ನಿಂದ ವಾಪಸ್ ಬಂದಿದೆಯಾ ಅಥವಾ ಲೈಟ್ ಆರಿಸಲು ಮರೆತಿದೆಯಾ ನೋಡಿ’ ಅಂತ ಏಳಿಸಿದಳು. ಅಪ್ಪ ಮಲಗಿದ್ದ ಪಡಸಾಲೆಯಲ್ಲಿನ ಲೈಟ್ ಹಾಕಿ ನೋಡಿದರೆ ದಿವಾನದ ಮೇಲೆ ಮಲಗಿರಬೇಕಾಗಿದ್ದ ಅವರಿಲ್ಲ. ಟಾಯ್ಲೆಟ್ ಬಾಗಿಲು ತೆರೆಯಲು ಯತ್ನಿಸಿದೆ. ಬಾಗಿಲು ಸಲೀಸಾಗಿ ಹಿಂದಕ್ಕೆ ಹೋಯಿತು. ಬೋಲ್ಟ್ ಹಾಕಿಲ್ಲ, ಹಾಗಾದರೆ ಅಪ್ಪ ಒಳಗಿಲ್ಲ ಅಂದುಕೊಂಡೆ. ಗಾಬರಿಯಲ್ಲಿ ಪಕ್ಕದಲ್ಲೇ ಇರುವ ತೆರದೇ ಇದ್ದ ಸ್ನಾನದ ಮನೆಯಲ್ಲಿ ನೋಡಿದರೆ ಅಲ್ಲೂ ಇಲ್ಲ. ಅಪ್ಪಾ, ಅಪ್ಪಾ ಅಂತ ಮಕ್ಕಳ ರೂಮಿಗೆ ಧಾವಿಸಿ ಹೋಗಿ ನೋಡಿದೆ. ಮಕ್ಕಳು ಮಲಗಿದ್ದಾರೆ. ಬಾಗಿಲು ತೆಗೆದುಕೊಂಡು ಹೊರಗೆ ಹೋಗಿರಬಹುದೇ? ಸಾಧ್ಯವಿಲ್ಲ, ಬಾಗಿಲ ಬೋಲ್ಟ್ ಭದ್ರವಾಗಿದೆ. ನನ್ನ ಗಾಬರಿ ಕಂಡು ಮಗಳು ಎದ್ದು ಬಂದಳು. ಅವಳು ಭಯಗೊಳ್ಳಬಹುದು ಅಂತ ನಾನು ಹೆದರಿ, ಏಕೆ ಎದ್ದು ಬಂದೆ? ಅಂತ ಕೇಳಿದೆ, ‘ಅಪ್ಪಾ, ಅಪ್ಪಾ ಅನ್ನೋ ನಿಮ್ಮ ಧ್ವನಿ ಒಂಥಾರಾ ಡಿಫರೆಂಟಾಗಿ ಕೇಳಿಸಿತು ಅದಕ್ಕೆ ಎದ್ದು ಬಂದೆ’ ಅಂದಳು. ನನ್ನ ಭಯಮಿಶ್ರಿತ ಧ್ವನಿಯನ್ನು ಅವಳು ಗುರುತಿಸಿದ್ದಳು ಅನಿಸುತ್ತದೆ. ‘ಹೋಗಿ ಮಲಗಿಕೋ’ ಅಂತ ಅವಳನ್ನು ಕಳಿಸಿದೆ. ಕೈಕಾಲುಗಳಲ್ಲಿ ನಡುಕ, ಏನು ಮಾಡಬೇಕು, ಎಲ್ಲಿ ಹುಡುಕಬೇಕೋ ಗೊತ್ತಾಗುತ್ತಿಲ್ಲ. ಗಾಬರಿ, ಆತಂಕಗಳ ಸುನಾಮಿ. ಅದೇ ಗೊಂದಲದಲ್ಲಿ ಮತ್ತೆ ಟಾಯ್ಲೆಟ್ ಕಡೆ ನೋಡಲು ಹೋದೆ. ಬಾಗಿಲನ್ನು ಹಿಂದಕ್ಕೆ ತಳ್ಳುತ್ತಿದ್ದಂತೆ ಹೋದಂತೆ ಬಾಗಿಲು ಪೂರ್ತಿ ತೆರೆಯಿತು. ಅಪ್ಪ ಮೂಲೆಯಲ್ಲಿ ಒರಗಿ ಕುಳಿತಿದ್ದಾರೆ. ಟಾಯ್ಲೆಟ್ಗೆ ಕೂತಿದ್ದವರು ಹಾಗೆಯೇ ಪ್ಲಷ್ ಪಕ್ಕದ ಮೂಲೆಯಲ್ಲಿ ಹಿಂದಕ್ಕೊರಗಿದ್ದಾರೆ. ತಮ್ಮ ನಿಕ್ಕರ್ ಅನ್ನು ಮೇಲೆಳೆದುಕೊಳ್ಳಲು ಯತ್ನಿಸಿ ಸ್ವಲ್ಪ ಮಟ್ಟಿಗೆ ಸಫಲರೂ ಆದಂತೆ ಅವರ ಒಂದು ಕೈ ತೊಡೆಯ ಮೇಲಿತ್ತು. ಇನ್ನೊಂದು ಕೈಯನ್ನು ಹಿಂದಕ್ಕೆ ಊರಿಕೊಳ್ಳಲು ಯತ್ನಿಸಿದಂತೆ ಕಂಡಿತು. ಗಾಬರಿಯಲ್ಲಿಯೇ ಕೆನ್ನೆ ತಟ್ಟಿ ಮಾತನಾಡಿಸಿದೆ. ಮಾತಿಲ್ಲ, ಮೂಗು ಮುಟ್ಟಿದರೆ ಉಸಿರಿಲ್ಲ. ತೊಡೆಯ ಮೇಲಿನ ಕೈ ಹಿಡಿದೆ. ತೀರಾ ತಣ್ಣಗೇನೂ ಇಲ್ಲ ಅನಿಸಿತು. ಅದು ನನ್ನ ಭ್ರಮೆಯೋ ಅಥವಾ ನನ್ನ ದೇಹ ಸ್ಥಿತಿಯಿಂದ ಹಾಗನ್ನಿಸಿತೋ ಗೊತ್ತಿಲ್ಲ. ನನ್ನ ನಡುಗುವ ಕೈಗಳಿಂದ ಜಾರಿದ ಅಪ್ಪನ ಕೈ ಅವರ ಸ್ವಾಧೀನಲ್ಲಿ ಇಲ್ಲವೆಂಬಂತೆ ಪಕ್ಕಕ್ಕೆ ಸರಿಯಿತು. ಕಣ್ಣ ಮುಂದೆ ಕತ್ತಲು. ಆಗ ಅನಿಸಿದ್ದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಥಂಡಾ ಹೊಡೆದು ಹೋದೆ. ನನ್ನ ಹಿಂದೆ ಹೆಂಡತಿ ಭಯದಲ್ಲಿ ನಡುಗುತ್ತಾ ನಿಂತಿದ್ದಾಳೆ. ಭಯವಾಗುತ್ತಿದೆ ಅಂತ ಬಡಬಡಿಸುತ್ತಿದ್ದಾಳೆ. ಅವಳನ್ನು ಸಮಾಧಾನಿಸುವುದೋ ಅಪ್ಪನನ್ನು ಹೊರಗೆ ತರುವುದೋ, ಜಗತ್ತೇ ತಲೆಯ ಮೇಲೆ ಕುಸಿದುಬಿದ್ದಂತ ಅನುಭವ. ಅಪ್ಪ ಇನ್ನಿಲ್ಲ ಎಂಬ ದುಃಖ, ಕಣ್ಣಲ್ಲಿ ನೀರು ಒಸರುತ್ತಿದೆ. ಆ ಕ್ಷಣದಲ್ಲಿ, ಜಗತ್ತಿನಲ್ಲಿ ಯಾರಿಗೂ ಬರದ ಕಷ್ಟ ನನಗೆ ಮಾತ್ರ ಬಂದಿದೆ ಅಂತ ಅನಿಸಿಬಿಟ್ಟಿತು. ಒತ್ತರಿಸುತ್ತಿದ್ದ ದುಃಖದಲ್ಲಿ ಜೋರಾಗಿ ಅತ್ತುಬಿಡಲೂ ಸಮಯ, ಸಂದರ್ಭ ಬಿಡುತ್ತಿಲ್ಲ. ಹೆಂಡತಿ ಮತ್ತೂ ಹೆದರಬಹುದು ಎಂಬ ಭಯ. ಮುಂದಿನದು ಚಿಕ್ಕ ಟಾಯ್ಲೆಟ್ನೊಳಗಿನಿಂದ ಅಜಾನುಬಾಹು ಅಪ್ಪನನ್ನು ಹೊರತರಬೇಕಾದ ಸವಾಲು. ಈ ಕೆಲಸಕ್ಕೆ ಕನಿಷ್ಠ ಇಬ್ಬರು, ಮೂವರಾದರೂ ಬೇಕು. ಒಮ್ಮೆಲೆ ಇಬ್ಬರೂ ಒಳಗೋದರೂ ಕಷ್ಟ. ಅಂಥದ್ದರಲ್ಲಿ ಬಾಗಿಲ ಕಡೆ ಮುಖ ಮಾಡಿರುವ ಅಪ್ಪನನ್ನು ತಿರುಗಿಸಿಕೊಂಡೇ ಈಚೆ ತರಬೇಕು. ಸಮಾನಾಂತರವಾಗಿ ತಿರುಗಿಸಲು ಸಾಧ್ಯವೇ ಇಲ್ಲ. ಲಂಬವಾಗಿಯೇ ಎತ್ತಿ ತಿರುಗಿಸಬೇಕು. ಇಂತಹ ಸಂದರ್ಭದಲ್ಲಿ ನಮ್ಮ ದೇಹ ದುರ್ಬಲವಾಗುತ್ತದೋ, ಮನಸು ದುರ್ಬಲವೋ ಗೊತ್ತಾಗುವುದಿಲ್ಲ. ಅಪ್ಪನ ಎದೆಗೆ ಎದೆ ಕೊಟ್ಟು ಬೆನ್ನಿಗೆ ನನ್ನ ಕೈಗಳನ್ನು ಬಿಗಿದು ಬಾಚಿ ಎತ್ತಲು ಯತ್ನಿಸಿದೆ. ಎಷ್ಟು ಎತ್ತಿದರೂ ಕಾಲು ನೆಲದ ಮೇಲೆಯೇ. ಎಲ್ಲ ಶಕ್ತಿಯನ್ನೂ ಹುರಿಗಟ್ಟಿ ಕೊಂಡು ಎತ್ತಿ ತಿರುಗಿಸಿಕೊಂಡು ಬಾಗಿಲ ಕಡೆ ಎಳೆದುಕೊಂಡೆ. ಟಾಯ್ಲೆಟ್ ಎದುರಿಗೆ ಗೋಡೆ. ಕಾಲು ಮಡಚದೆ ಅಥವಾ ಎತ್ತಿ ಹಿಡಿದುಕೊಳ್ಳದೆ ಪಡಸಾಲೆಗೆ ತಿರುಗಿಸಿಕೊಳ್ಳುವುದು ಇನ್ನೊಂದು ಸವಾಲು. ಕಾಲು ಹಿಡಿದುಕೊಳ್ಳುವ ಧೈರ್ಯ ತೋರಿಸಿ ಹೆಂಡತಿ ಸಹಾಯ ಮಾಡಿದಳು. ಅಂತೂ ಇಂತೂ ಪಡಸಾಲೆಗೆ ತಂದು ಮಲಗಿಸಿದ್ದಾಯಿತು. ಅಪ್ಪನಿಗೆ ಏನೂ ಆಗಿರಲಿಕ್ಕಿಲ್ಲ, ಇನ್ನೂ ಬದುಕಿರಬಹುದು ಎನ್ನೋ ಹುಚ್ಚು ಆಸೆ. ಮತ್ತೊಮ್ಮೆ ಚೆಕ್ ಮಾಡಿದೆ ಖಚಿತವಾಯಿತು, ಅಪ್ಪ ನಮ್ಮೊಂದಿಗಿಲ್ಲ. ಮಕ್ಕಳನ್ನು ಏಳಿಸಿದೆವೂ ಅಥವಾ ಅವರೇ ಎದ್ದು ಬಂದರೋ ನೆನಪಿಲ್ಲ. ಆಗ ವೇಳೆ ಸುಮಾರು ಐದು ಗಂಟೆಯಾಗಿರಬಹುದು. ಮುಂದೇನು?

ಕೊರೊನದಿಂದ ಮಾಡಲಾಗಿದ್ದ ಲಾಕ್ಡೌನ್ ಅನ್ನು ಮೊದಲ ಬಾರಿಗೆ ಸಡಿಲಿಕೆ ಮಾಡಿ ಎರಡು ಅಥವಾ ಮೂರು ದಿನಗಳಾಗಿರಬಹುದಷ್ಟೆ. ಅಪ್ಪನ ದೇಹವನ್ನು ಊರಿಗೆ ಹೇಗೆ ಸಾಗಿಸಬೇಕು? ಯಾರಿಗೆಲ್ಲ ಹೇಳಬೇಕು, ಹೇಳಬಾರದು ಎಂಬ ಹತ್ತಾರು ಪ್ರಶ್ನೆಗಳು. ಆದಷ್ಟೂ ಬೇಗ ಊರು ಸೇರಬೇಕೆಂಬ ಧಾವಂತದಲ್ಲಿ ಕಾಲದ ಎದುರಿನ ಹೋರಾಟ ಎಂದರೇನು ಎಂಬುದು ಗೊತ್ತಾಗತೊಡಗಿತು. ಸೆಕೆಂಡು, ನಿಮಿಷಗಳ ಬೆಲೆ ಕ್ಷಣಕ್ಷಣಕ್ಕೂ ಗೊತ್ತಾಗುತ್ತಿತ್ತು. ದೇಹವನ್ನು ಸಾಗಿಸಲು ಸರ್ಕಾರಿ ಆಂಬುಲೆನ್ಸ್ ಸೌಲಭ್ಯ ಸಿಗುವುದಿಲ್ಲ. ಅವೇನಿದ್ದರೂ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಮಾತ್ರ. ಪ್ರೈವೇಟ್ ಆಂಬುಲೆನ್ಸ್ ಹುಡುಕಬೇಕು. ಅಷ್ಟೊತ್ತಿನಲ್ಲಿ ಯಾರನ್ನು ಕೇಳುವುದು? ಯಾರ ಬಳಿ ಪ್ರೈವೇಟ್ ನವರ ಆಂಬುಲೆನ್ಸ್ ನಂಬರ್ ಇರುತ್ತೆ? ಗೂಗಲ್ ಮಾಡಬಹುದಿತ್ತು ಎಂಬುದೂ ಕಲ್ಪನೆಗೂ ಬರಲಿಲ್ಲ.

ಅತ್ತ ಊರಲ್ಲಿ ಸಿದ್ಧತೆ ಆಗಲೇಬೇಕಾದರೆ ಅವರಿಗೆ ಮೊದಲು ತಿಳಿಸಲೇಬೇಕು. ಬೆಂಗೂರಿನಲ್ಲೇ ಇದ್ದ ತಂಗಿಯ ಮಗ, ಇನ್ನಿಬ್ಬರು ಅಕ್ಕನ ಮಕ್ಕಳು ಮತ್ತು ಚಿಕ್ಕಪ್ಪನ ಮಗ ಹಾಗೂ ನನ್ನ ಭಾವಮೈದುನನಿಗೆ ವಿಷಯ ತಿಳಿಸಿದೆ. ಅವರೆಲ್ಲ ಆಂಬುಲೆನ್ಸ್ ಗಾಗಿ ಜಾಲಾತೊಡಗಿದರು. ಸಂಪರ್ಕಕ್ಕೆ ಬಂದವರ ಮೊದಲ ಪ್ರಶ್ನೆ ಕೋವಿಡ್ ಪೇಷಂಟಾ? ಎನ್ನುವುದೇ ಆಗಿತ್ತು. ಇಲ್ಲ, ಅವರಿಗೆ ಹೃದಯಾಘಾತ ಆಗಿ ಆಸ್ಪತ್ರೆಗೆ ಸೇರಿಸಿದ್ದೆವು. ಎರಡು ದಿನದ ಹಿಂದೆ ಡಿಸ್ಚಾರ್ಜ್ ಆಗಿದ್ದರು… ಎನ್ನುತ್ತಿದ್ದಂತೆ ಫೋನ್ ಕಟ್. ನಾಲ್ಕೈದು ಕಡೆ ಇದೇ ಕಥೆ ರಿಪೀಟು. ಯಾರೂ ಸಿಗದಿದ್ದರೆ ತನ್ನ ಕಾರು ತರುವುದಾಗಿ ಚಿಕ್ಕಬಳ್ಳಾಪುರದಿಂದ ತಮ್ಮ ಫೋನು ಮಾಡಿದ. ನೋಡೋಣ ಅಂದುಕೊಳ್ಳುವ ಹೊತ್ತಿಗೆ ನಮ್ಮ ಹುಡುಗರಿಂದ ಫೋನು, ಒಬ್ಬ ಸಿಕ್ಕಿದ್ದಾನೆ ಸಿಕ್ಕಾಪಟ್ಟೆ ದುಡ್ಡು ಕೇಳುತ್ತಿದ್ದಾನೆ. ದುಡ್ಡು ಎಷ್ಟಾದರೂ ಪರವಾಗಿಲ್ಲ ಚೌಕಾಸಿ ಬೇಡ, ಕೇಳಿದಷ್ಟು ಕೊಡೋಣ ಅಂದೆ. ಅವನು ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಬರುವುದಿಲ್ಲ ಅನ್ನುವುದಕ್ಕಾಗಿ ದುಡ್ಡು ಜಾಸ್ತಿ ಕೇಳಿದನಾ? ಗೊತ್ತಿಲ್ಲ. ಹತಾಶೆ, ತಳಮಳ ಹೆಚ್ಚಾಗುತ್ತಿವೆ. ಕೊರೋನಾ ಸಂದರ್ಭವಾದುದರಿಂದ ಯಾವ ಸ್ನೇಹಿತರಿಗೂ ಹೇಳಬಾರದೆಂದು ತೀರ್ಮಾನಿಸಿಬಿಟ್ಟಿದ್ದೆ. ಬರಲಾಗುವುದಲ್ಲವೆಂಬ ಅವರ ಸಂಕಟ ಹಾಗೂ ಬರುತ್ತಾರೆಂಬ ನನ್ನ ನಿರೀಕ್ಷೆ ಹುಸಿಯಾಗುವುದು ನನಗೆ ಬೇಕಿರಲಿಲ್ಲ. ಯಾಕೋ ಗೊತ್ತಿಲ್ಲ, ಇಂತಹ ಸಂಕಟದ ಸಮಯಗಳನ್ನೆಲ್ಲ ಕೌಟುಂಬಿಕವಾಗಿಯೇ ನಿಭಾಯಿಸಿಕೊಳ್ಳಬೇಕು ಅಂತ ನನ್ನ ಮನಸ್ಸು ಮತ್ತೆ ಮತ್ತೆ ಹೇಳುತ್ತಿತ್ತು. ಕಾಲ ಓಡುತ್ತಿದೆ. ನಮ್ಮ ಊರಿನ ಸಮೀಪದಲ್ಲೇ ಇದ್ದ ಅಕ್ಕತಂಗಿಯರಿಗೆ ವಿಷಯ ತಿಳಿಸಿದೆ. ಊರಲ್ಲಿ ಒಬ್ಬರೇ ಇದ್ದ ವಿಶೇಷಚೇತನರಾದ
ಅಕ್ಕನಿಗೆ ಫೋನಿನಲ್ಲಿ ವಿಷಯ ತಿಳಿಸದೆ ಸ್ವತಃ ಹೋಗಿ ತಿಳಿಸಲು ಅವರನ್ನು ಕೋರಿಕೊಂಡೆ.

ಇತ್ತ, ಬೆಳಗಾದರೆ ಅಕ್ಕಪಕ್ಕದವರು ಅನುಮಾನಿಸಿ ನೂರೆಂಟು ಪ್ರಶ್ನೆ ಕೇಳಿದರೆ? ಪೊಲೀಸರು ತಡೆದರೆ ಏನು ಮಾಡಬೇಕು? ಕೋವಿಡ್ ಪರೀಕ್ಷೆ ಮಾಡಬೇಕು ಎಂದರೆ ಏನು ಗತಿ? ಒಂದು ವೇಳೆ ಪಾಸಿಟಿವ್ ಆಗಿಬಿಟ್ಟರೆ, ಅವರ ಜತೆ ಒಂದು ವಾರದಿಂದ ಇದ್ದ ನಮ್ಮೆಲ್ಲರ ಪರಿಸ್ಥಿತಿ ಏನು? ಅತ್ತ ಅಪ್ಪನ ಶರೀರವೂ ಇಲ್ಲ, ಇತ್ತ ನಾವೆಲ್ಲ ಕ್ವಾರಂಟೈನ್ ಆಗಬೇಕು. ಜಗತ್ತಿನಲ್ಲಿ ಯಾರಿಗೂ ಈ ಕಷ್ಟ ಬೇಡ ಅನ್ನೊವಷ್ಟು ಸಂಕಟದಲ್ಲಿ ಬೇಯುತ್ತಿರುವಾಗ ಆಂಬುಲೆನ್ಸ್ ಸಿಕ್ಕಿತು. ಬಾಡಿಗೆ ಆರು ಸಾವಿರ ಅಂದ. ಹದಿನೈದು ಸಾವಿರ ಕೇಳಿದ್ದರೂ ಕೊಡಲು ತಯಾರಿದ್ದವನಿಗೆ ಮತ್ತೆ ಮಾತೆಲ್ಲಿಂದ ಬರಬೇಕು. ಹುಡುಗರೆಲ್ಲರೂ ಮನೆಗೆ ಬಂದು ಸೇರಿದರು. ಆಂಬುಲೆನ್ಸ್ ಡ್ರೈವರ್ ಸ್ಟ್ರೆಚ್ಚರ್ ಕೊಟ್ಟ. ಅದರಲ್ಲಿ ಹಾಕಿಕೊಂಡು ಮೊದಲ ಮಹಡಿಯ ನಮ್ಮ ಮನೆಯಿಂದ ಕೆಳಗಿಳಿಸತೊಡಗಿದೆವು. ಎಲ್ಲರೂ ಮಾಸ್ಕ್ ಹಾಕಿಕೊಂಡಿದ್ದೆವು. ಕೈಗಳಿಗೆ ಸ್ಯಾನಿಟೈಸರ್ ಬಳಿದುಕೊಂಡಿದ್ದೆವು.

ನಮ್ಮ ಮನೆಯ ಎದುರಿನ ಮಹಡಿ ಮನೆ ಮೇಲೆ ನಿಂತಿದ್ದ ಎಪ್ಪತ್ತೈದು ವರ್ಷದ ಪರಿಚಿತ ತಾತ, ಏಕೆ ಏನಾಯ್ತು? ಹುಷಾರಿಲ್ಲವಾ? ಅಂತ ಕೇಳಿದರು? ಇಲ್ಲ, ತೀರಿಕೊಂಡಿದ್ದಾರೆ ಅಂತ ಹೇಳುತ್ತಿದ್ದಂತೆ ಅವರು ಏದುಸಿರು ಬಿಡತೊಡಗಿದರು. ಅವರು ಸಂಜೆ ಅಪ್ಪನನ್ನು ಮಾತನಾಡಿಸಿದ್ದರು. ಅಪ್ಪ ತೀರಿಕೊಂಡಿದ್ದಾರೆಂಬ ವಿಷಯದಲ್ಲಿ ಅವರಿಗೆ ನಂಬಿಕೆ ಬಂದಂತಿರಲಿಲ್ಲ. ಅವರೂ ಕೂಡ ಏಕಾಂಗಿ. ಸಂಬಂಧಿಗಳೆಲ್ಲ ದೂರದ ದೇಶಗಳಲ್ಲಿದ್ದಾರೆ. ಅವರನ್ನು ಸಮಾಧಾನಿಸುವುದೋ ಬೇಗ ದೇಹವನ್ನು ಸಾಗಿಸುವುದೋ ಎಂಬ ಗಲಿಬಿಲಿಯಾಯಿತು. ನಮ್ಮ ಮನೆ ಒಳಭಾಗದ ಓಣಿಯಲ್ಲಿದೆ. ಅಂಬುಲೆನ್ಸ್’ಗೆ ದೇಹವನ್ನು ತೆಗೆದುಕೊಂಡು ಹೋಗಲು ಕನಿಷ್ಠ 50 ಮೀಟರ್ ದೂರ ಹೋಗಬೇಕು. ಅಕ್ಕಪಕ್ಕ ಹತ್ತಾರು ಮನೆಗಳಿವೆ. ಕರೊನಾ ಸಂದರ್ಭವಾದುದರಿಂದ ನೆರೆಹೊರೆಯವರ ಮನಸ್ಥಿತಿ ಅಥವಾ ಕಣ್ಣುಗಳನ್ನು ಎದುರಿಸುವ ಧೈರ್ಯ ನನಗಿರಲಿಲ್ಲ. ‘ಕಾಲವೇ ಚಲಿಸದೆ ನಿಂತುಬಿಡು. ಬೇಗ ಬೆಳಗಾಗಿ ನನ್ನನ್ನು ಸಂಕಷ್ಟಕ್ಕೆ ಸಿಕ್ಕಿಸಬೇಡ’ ಎಂಬಂಥ ಮನಸ್ಥಿತಿ ನನ್ನದಾಗಿತ್ತು. ಅಂಬುಲೆನ್ಸ್ ಹತ್ತಿರ ಹೋಗುತ್ತಿದ್ದಂತೆ ಡ್ರೈವರ್ ಬಂದು ದೇಹಕ್ಕೆ ಕೈ ಹಾಕಿದ. ಯಾರು ಹೆತ್ತ ಮಗನೋ, ಜಗತ್ತಿನ ಎಲ್ಲ ಮಾನವೀಯತೆಯನ್ನೂ ತನ್ನೊಬ್ಬನ ಬಳಿಯೇ ಇಟ್ಟುಕೊಂಡವನಂತೆ ಕಂಡ. ಅವನ ಈ ನಡೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಸಮಯ ಸುಮಾರು ಆರು ಗಂಟೆ. ಇಷ್ಟೆಲ್ಲಾ ಆದರೂ ನಮ್ಮ ಕೆಳಗಿನ ಮನೆಯವರಿಗೆ ವಿಷಯ ಗೊತ್ತೇ ಆಗಿರಲಿಲ್ಲ. ದೇಹವನ್ನು ಕೆಳಗೆ ಇಳಿಸಿದ ಮೇಲೆ ಅವರದೂ ಅದೇ ಪ್ರಶ್ನೆ, ಹುಷಾರಿಲ್ಲವಾ? ಇದೆಲ್ಲದರ ನಡುವೆಯೇ ಪೊಲೀಸರು ಆಂಬುಲೆನ್ಸ್ ತಡೆದರೆ ಇರಲಿ ಅಂತ, ಅಪ್ಪನ ದಶಕದ ವೈದ್ಯಕಿಯ ದಾಖಲೆಗಳನ್ನು ಕೂಡಿಟ್ಟುಕೊಂಡೆ. ಸುಮಾರು ಆರು ಗಂಟೆ ಹದಿನೈದು ನಿಮಿಷಕ್ಕೆ ಬೆಂಗಳೂರು ಬಿಟ್ಟೆವು. ದೇಹದ ಜತೆ ಅಕ್ಕನ ಮಗಳು, ನಾನು ಮತ್ತು ನನ್ನ ಕುಟುಂಬ. ಹುಡುಗರಿಗೆ ಬೈಕುಗಳಲ್ಲಿ ಬರಲು ಹೇಳಿದೆ. ದಾಬಸ್ಪೇಟೆ ದಾಟುವವರೆಗೂ ಚಡಪಡಿಕೆ ನಿಲ್ಲಲಿಲ್ಲ. ಮುಂದೆ ನಿರಾಳ ಅನ್ನಿಸಿದರೂ ಉರ್ಡಿಗೆರೆ, ಕೊರಟಗೆರೆ, ಮಧುಗಿರಿಗಳ ಹೊರವಲಯಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದಾರೆ ಎಂಬ ಮಾಹಿತಿಗಳು ಬರತೊಡಗಿದವು. ಗಾಡಿ ಸೀಜ್ ಮಾಡಬಹುದೇ? ದೇಹವನ್ನು ವಶಕ್ಕೆ ತೆಗೆದುಕೊಳ್ಳಬಹುದೆ? ಏನು ಹೇಳಬೇಕು ಅವರಿಗೆ? ಇಷ್ಟಾಗಿಯೂ ಅಪ್ಪನಿಗೆ ಕೋವಿಡ್ ಬಂದಿದ್ದರೆ ನಾನು ಮಾಡುತ್ತಿರುವುದು ತಪ್ಪಲ್ಲವೇ? ನನ್ನ ಮುಂದೆ ಆಯ್ಕೆಗಳು ಕಡಿಮೆ ಇದ್ದವು. ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿದ್ದರಾ? ಗೊತ್ತಿಲ್ಲ, ನಾನು ಕೇಳಿಲ್ಲ, ಅವರು ಹೇಳಿಲ್ಲ. ತುರ್ತು ಸ್ಥಿತಿಯಲ್ಲಿ ಅವರನ್ನು ಅಡ್ಮಿಟ್ ಮಾಡಿದ ಮೇಲೆ ನಾಲ್ಕಾರು ಟೆಸ್ಟ್ ಮಾಡಿದ್ದ ವೈದ್ಯರು, ಹೃದಯಕ್ಕೆ ತುಂಬಾ ಹೊಡೆತ ಬಿದ್ದಿದೆ, ವಯಸ್ಸಿನ ಕಾರಣಕ್ಕೆ ಅಪರೇಟ್ ಮಾಡಲು ಸಾಧ್ಯವಾಗುವುದಿಲ್ಲ. ಕಿಡ್ನಿ ಸೋಂಕು ಕೂಡ ಸೇರಿಕೊಂಡು ನಾಲ್ಕಾರು ಸಮಸ್ಯೆಗಳಿವೆ ಎಂದು ಹೇಳಿದ್ದರು. ಮೂರು ದಿನ ಐಸಿಯು ಮತ್ತು ಒಂದು ದಿನ ಜನರಲ್ ವಾರ್ಡಿನಲ್ಲಿ ಇರಿಸಿದ್ದರು. ನಂತರ, ಪರವಾಗಿಲ್ಲ ನಾರ್ಮಲ್ ಇದ್ದಾರೆ ಒಂದು ವಾರದ ನಂತರ ಕರೆದುಕೊಂಡು ಬನ್ನಿ ಎಂದು ಮೆಡಿಸಿನ್ ಬರೆದುಕೊಟ್ಟು ಡಿಸ್ಚಾರ್ಜ್ ಮಾಡಿದ್ದರು. ಆ ಡಿಸ್ಚಾರ್ಜ್ ಸಮ್ಮರಿಯನ್ನೂ ಇಟ್ಟುಕೊಂಡಿದ್ದೆ. ಕೋವಿಡ್ ಸೋಂಕಿನ ಗಂಭೀರತೆ ಆಸ್ಪತ್ರೆಯವರಿಗೆ ಗೊತ್ತಿರುವುದೇ ಆಗಿರುವುದರಿಂದ ಪರೀಕ್ಷೆ ಮಾಡಿಯೇ ಇರುತ್ತಾರೆ, ಸೋಂಕು ಇದ್ದರೆ ಡಿಸ್ಚಾರ್ಜ್ ಮಾಡುತ್ತಿರಲಿಲ್ಲ ಎಂಬುದು ನನ್ನ ಭಂಡ ಧೈರ್ಯಕ್ಕೆ ಕಾರಣವಾಗಿತ್ತು.

ಬ್ಯಾರಿಕೇಡ್’ಗಳ ಬಳಿ ಹೆಚ್ಚು ಪೊಲೀಸರು ಬರುವ ಮುನ್ನ ಅಡೆತಡೆಗಳನ್ನು ದಾಟಿಬಿಡಬೇಕೆಂಬುದು ನನ್ನ ಧಾವಂತವಾಗಿತ್ತು. ಬಹುಶಃ ಊರ್ಡಿಗೆರೆ ನಂತರ ಎಲ್ಲೋ ಒಂದು ಕಡೆ ಪೊಲೀಸ್ ಕಾನ್ಸ್ ಟೇಬಲ್ ಕೈ ಹಾಕಿದರು. ಎದೆ ಧಸಕ್ಕೆಂದಿತು. ಡ್ರೈವರ್, ’ಬಾಡಿ’ ಇದೆ ಎಂದ. ಎಷ್ಟು ಜನ ಇದ್ದಾರೆ ಅಂತ ಮತ್ತೆ ಪೊಲೀಸ್ ಕೇಳಿದರು. ಐದು ಜನ ಅಂದ ಡ್ರೈವರ್. ಗುರುತು ಹಾಕಿಕೊಂಡ ಪೊಲೀಸ್ ಬ್ಯಾರಿಕೇಡ್ ತೆಗೆದು ದಾರಿ ಮಾಡಿಕೊಟ್ಟರು. ನಿಟ್ಟುಸಿರುಬಿಟ್ಟೆ. ಮುಂದಿನ ಸವಾಲು, ಮಧುಗಿರಿ-ಸಿರಾ ರಸ್ತೆಯಲ್ಲಿ ಬಡವನಹಳ್ಳಿ ಮುಖಾಂತರ ನಮ್ಮ ಊರಿಗೆ ತಲುಪುವುದು. ಈ ನಡುವೆ ಅಪ್ಪನಿಗೆ ಹೀಗಾಗಿದೆ, ಎಲ್ಲ ರೆಕಾರ್ಡ್ ಇದೆ ಅಂತ ನಮ್ಮೂರಿನ ಪಂಚಾಯಿತಿ ಸದಸ್ಯನಿಗೆ ತಿಳಿಸಿದೆ. ಆತ ಆಶಾ ಕಾರ್ಯಕರ್ತೆಗೆ ತಿಳಿಸಿ, ಸಮಸ್ಯೆ ಇಲ್ಲ ಬನ್ನಿ ಅಂದ. ಏಕೆಂದರೆ, ಅಪ್ಪನಿಗೆ ವಾರದ ಹಿಂದೆ ಎದೆ ನೋವು ಕಾಣಿಸಿಕೊಂಡಾಗ, ನನ್ನ ಚಿಕ್ಕಪ್ಪನ ಮಗ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ಆತನಿಗೆ ಗೊತ್ತಿತ್ತು. ಮೊದಲೇ ಯೋಜಿಸಿದ್ದಂತೆ ಎಂಟೂವರೆ ಹೊತ್ತಿಗೆ ನಮ್ಮ ಜಮೀನಿನನ್ನು ತಲುಪಿದೆವು. ಯಥಾಪ್ರಕಾರ ದೇಹವನ್ನು ಇಳಿಸುವಾಗ ಡ್ರೈವರ್ ಬಂದು ಕೈ ಹಾಕಿದ. ನನ್ನ ಕಣ್ತುಂಬಿಕೊಂಡವು. ಹಣ ಕೊಟ್ಟೆ. ಗಾಡಿ ತೊಳೆಯಲು… ಅಂತ ಬಾಯಿ ಬಿಡುವ ಹೊತ್ತಿಗೆ ಇನ್ನೊಂದಿಷ್ಟು ಕೊಟ್ಟೆ. ಸಂತಸಪಟ್ಟ. ಅವನ್ನು ತಬ್ಬಿಕೊಂಡು ಅಭಿನಂದಿಸಿ ಬೀಳ್ಕೊಟ್ಟೆ. ಕಣ್ಣಲ್ಲಿನ ನೀರು ನಿಲ್ಲಲೊಲ್ಲದು.

ಹೇಳಲೇಬೇಕಾದ ತೀರಾ ಹತ್ತಿರದ ನಾಲ್ಕೈದು ಸಂಬಂಧಿಕರಿಗೆ ಮಾತ್ರ ಹೇಳಿದ್ದೆವು. ಈ ಹೊತ್ತಿಗೆ ನನ್ನ ದೊಡ್ಡಪ್ಪನ ಮಗನಾದ ನನ್ನ ತಮ್ಮ ಹಾಗೂ ಚಿಕ್ಕಪ್ಪಂದಿರು ಗುಂಡಿ ಅಗೆವ ಕೆಲಸದಲ್ಲಿ ತೊಡಗಿದ್ದರು. ಅಪ್ಪ ದೀಕ್ಷೆ ತೆಗೆದುಕೊಂಡಿದ್ದರಿಂದ ವಿಧಿ ವಿಧಾನವನ್ನೆಲ್ಲ ಶರಣರೇ ಬಂದು ಮಾಡಬೇಕಾಗಿತ್ತು. ಆ ವೇಳೆಗಾಗಲೇ ಅವರೆಲ್ಲ ಬಂದು ಸಿದ್ಧತೆ ಆರಂಭಿಸಿದ್ದರು. ಅವರಿಗೆ ಬೇಕಾದ ನೆರವು ಒದಗಿಸುವ ಕೆಲಸವನ್ನು ಇತರರೆಲ್ಲ ಸೇರಿ ಮಾಡುತ್ತಿದ್ದರು. ಅಂದುಕೊಂಡದ್ದಕ್ಕಿಂತ ಎಲ್ಲ ಸರಾಗವಾಗಿ ನಡೆದು ಸುಮಾರು ಒಂದೂವರೆ ಗಂಟೆ ಹೊತ್ತಿಗೆ ಮುಣ್ಣು ಮಾಡುವ ಕಾರ್ಯ ಮುಗಿಸಿದಿದೆವು.

ಅನೀರೀಕ್ಷಿತವಾಗಿ ಎದುರಾಗುವ ಸವಾಲುಗಳು ಕಲಿಸುವ ಪಾಠಗಳಿಗೆ ಬಹಳ ಬೆಲೆ ಇರುತ್ತದೆ. ಇದು ನನ್ನ ಖಾಸಗಿ ಗೋಳು. ಇದನ್ನು ಬರೆಯಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲೇ ಇದ್ದೆ. ಈ ಬರಹದಿಂದ ಯಾರಿಗಾದರೂ ಪ್ರಯೋಜನವಿದೆಯೋ ಇಲ್ಲವೋ ಗೊತ್ತಿಲ್ಲ. ಕಳೆದ ಎರಡೂವರೆ ತಿಂಗಳಿನಿಂದ ಒಂದು ವಿಧದ ಮಂಕು ಕವಿದಂತಾಗಿದೆ. ನಾನು ಹೊಸ ಕೆಲಸಕ್ಕೆ ಸೇರಿ ಕೇವಲ ಆರು ತಿಂಗಳಾಗಿದ್ದರೂ ಸಂಪೂರ್ಣ ಸಹಕಾರ ಕೊಟ್ಟ ಕಂಪನಿಯ ಬಾಸ್ ಗಳು, ಸಹೋದ್ಯೋಗಿಗಳು ಹಾಗೂ ಸ್ನೇಹಿತರಿಗೆಲ್ಲ ಋಣಿ. ದೀರ್ಘವಾಗಿ ಬರೆದಿದ್ದಕ್ಕೆ ಕ್ಷಮೆ ಇರಲಿ.

Lead Photo by Maria Lindsey Multimedia Creator from Pexels


ಹೆಸರು, ಕೆ.ಕರಿಸ್ವಾಮಿ. ಹೃದಯ, ಅಪ್ಪಟ ವೈಟ್. ಇದ್ದಿದ್ದನ್ನು ಇದ್ದ ಹಾಗೆ ಮುಖಕ್ಕೆ ರಾಚುವಂತೆ ಹೇಳುವ ಗಟ್ಟಿಗ. ವೃತ್ತಿಯಲ್ಲಿ ಹಿರಿಯ ಪತ್ರಕರ್ತ. ಕವಿ ಮತ್ತು ನಾಟಕಕಾರ. ಇ. ರಾಘವನ್ ಕುರಿತ ‘ಸಂಪಾದಕರ ಸಂಪಾದಕ’ ಕೃತಿಯ ಸಂಪಾದನೆ, ‘ಸಿಂಗಾರಿತ್ಲು’ ನಾಟಕ, ‘ಉಕ್ಕೆಕಾಯಿ’ ಕಾವ್ಯ, ‘ಹುರಿದುಂಬಿ’ ಅಂಕಣ ಬರಹ.. ಇವು ಅವರ ಕೃತಿಗಳು.


ಲೀಡ್ ಚಿತ್ರ ಬಿಡಿಸಿರುವ ನಾಗಲಿಂಗಪ್ಪ ಬಡಿಗೇರ್ ಕನ್ನಡದ ಹೆಸರಾಂತ ಕಲಾವಿದ. ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ದುಡಿದಿದ್ದ ಅವರು, ಹೊಸ ಫಾಂಟ್ ಸೃಷ್ಟಿಯಲ್ಲೂ ಎತ್ತಿದ ಕೈ. ‘ಅಪ್ಪ ಆರ್ಟ್ಸ್’ ಬಡಿಗೇರ್ ಅವರ ನಡೆಸುತ್ತಿರುವ ಕಲಾಶಾಲೆ.

Tags: Covid-19covid-19 karnatakafather and sonfathers day
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಹೈ ಕ್ವಾಲಿಟಿ ಶಿಕ್ಷಣ; ಟಾರ್ಗೆಟ್ 2030

ಹೈ ಕ್ವಾಲಿಟಿ ಶಿಕ್ಷಣ; ಟಾರ್ಗೆಟ್ 2030

Leave a Reply Cancel reply

Your email address will not be published. Required fields are marked *

Recommended

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಛೀಮಾರಿ

5, 8, 9 ಹಾಗೂ 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಇಲ್ಲ

1 year ago
ಹೊಸ ಸಂಸತ್‌ ಭವನ; ವಿಶೇಷಗಳ ನಂದನವನ

ಮಾರ್ಚ್ʼನಲ್ಲಿ ಲೋಕಸಭೆ ಚುನಾವಣೆ ವೇಳಾಪಟ್ಟಿ; ರಾಜ್ಯದಲ್ಲಿ ಎರಡು ಹಂತದ ಮತದಾನ?

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ