• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

12,000 ವರ್ಷಗಳ ಭಾರತೀಯ ಇತಿಹಾಸದ ಅಧ್ಯಯನದಲ್ಲಿ ಮಿಸ್‌ ಆಗಲೇಬಾರದ ನಾಗಾ-ಆಂಗ್ಲರ ಸಂಗ್ರಾಮ

cknewsnow desk by cknewsnow desk
September 27, 2020
in CKPLUS, GUEST COLUMN, STATE
Reading Time: 2 mins read
0
12,000 ವರ್ಷಗಳ ಭಾರತೀಯ ಇತಿಹಾಸದ ಅಧ್ಯಯನದಲ್ಲಿ ಮಿಸ್‌ ಆಗಲೇಬಾರದ ನಾಗಾ-ಆಂಗ್ಲರ ಸಂಗ್ರಾಮ
918
VIEWS
FacebookTwitterWhatsuplinkedinEmail
ಮೇಲಿನ ಚಿತ್ರ: ನಾಗಾಲ್ಯಾಂಡ್‌ನ ವಿಶ್ವೇಮಾ ಗ್ರಾಮದ ನೋಟ..

ಇಡೀ ಈಶಾನ್ಯ ಭಾರತದಲ್ಲಿ ನಾಗಾಬುಡಕಟ್ಟು ಜನಾಂಗಗಳು ಚತುರ, ಶಕ್ತಿಶಾಲಿ ಮತ್ತು ಸಿಂಹ ಹೃದಯ ಉಳ್ಳವರು. ಅಂತಹ ನಾಗಾಗಳು ಇಂದಿಗೆ ಸರಿಯಾಗಿ 130 ವರ್ಷಗಳ ಹಿಂದೆ ಪೂರ್ವ ಹಿಮಾಲಯ ಪರ್ವತಗಳಲ್ಲಿ ಬ್ರಿಟಿಷ್ ಸೈನ್ಯದ ಬ್ಯಾರಕ್’ಗಳಿಗೆ ನುಗ್ಗಿ ರುಂಡಗಳನ್ನು ಚೆಂಡಾಡಿದ ಒಂದು ಭೀಕರ ಯುದ್ಧವನ್ನು ಇಲ್ಲಿ ವಿವರಿಸಲಾಗಿದೆ. ಇಡೀ ಭಾರತದಲ್ಲಿ ಬ್ರಿಟಿಷರು ಬಾರತೀಯರಿಗೆ ಸಿಂಹಸ್ವಪ್ನರಾಗಿದ್ದರೆ, ಇಲ್ಲಿ ನಾಗಾಗಳು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಇಡೀ ಯುದ್ಧ ಕಥನವನ್ನು ಮೇಜರ್ ಜನರಲ್ ಸರ್ ಜೇಮ್ಸ್ ಜಾನ್‌ಸ್ಟೋನ್ ಮಾತುಗಳಲ್ಲೇ ಓದೋಣ…

ಈ ಬರಹವನ್ನು ಈಶಾನ್ಯ ಭಾರತದಲ್ಲಿ ಅನೇಕ ವರ್ಷ ಕೆಲಸ ಮಾಡಿದ್ದ ಹಿರಿಯ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ. 12,000 ವರ್ಷಗಳ ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡಲು ಕೇಂದ್ರ ಸರಕಾರ ಉನ್ನತ ಸಮಿತಿ ನೇಮಿಸಿರುವ ಈ ಹೊತ್ತಿನಲ್ಲಿ ಇತಿಹಾಸಕಾರರ ಅವಕೃಪೆಗೆ ಈಡಾಗಿರುವ ಈ ಯುದ್ಧಕ್ಕೆ ಮತ್ತೆ ಮಹತ್ವ ಬಂದಿದೆ. ಬ್ರಿಟಿಷರ ವಿರುದ್ಧ ಇಂಥ ಹಲವು ಯುದ್ಧಗಳನ್ನು ಕಂಡಿದ್ದ ನಮ್ಮ ರಾಜ್ಯಕ್ಕೂ, ನಮ್ಮ ಇತಿಹಾಸಕ್ತರಿಗೂ ಮೈಜುಂ ಎನಿಸುವ ಕಥನವಿದು.

courtesy: Graham Photo, Leamington Spa

*ಭಾಗ 2*

ನವ್ ಓವರ್ ಟು ಮೇಜರ್ ಜನರಲ್ ಸರ್ ಜೇಮ್ಸ್ ಜಾನ್‌ಸ್ಟೋನ್… 

ನವೆಂಬರ್ 1878ರ ಚಳಿಗಾಲದಲ್ಲಿ ಮಿ.ಡಾಮೆಂಟ್ ನಾಗಾ ಪರ್ವತಗಳ ಕೇಂದ್ರವನ್ನು ಸಮಗುಡ್ಟಿಂಗ್‌ನಿಂದ ಕೊಹಿಮಾಗೆ ಬದಲಿಸಿ ತನ್ನ ಸಿಬ್ಬಂದಿಯ ಜೊತೆಗೆ ಎರಡು ಬಿಡಾರಗಳನ್ನು ಹೂಡಿ ನೆಲೆ ನಿಂತರು. ಡಾಮೆಂಟ್ ಹತ್ತಿರ ಕಡಿಮೆ ಸಿಬ್ಬಂದಿ ಇದ್ದ ಕಾರಣ ಸುತ್ತಮುತ್ತಲಿನ ಹಳ್ಳಿಗಳ ಉಗ್ರ ನಾಗಾಗಳನ್ನು ಹತೋಟಿಯಲ್ಲಿಡುವಷ್ಟು ಶಕ್ತಿಯುತವಾಗಿರಲಿಲ್ಲ. ಇಲ್ಲಿಗೆ ಬರುವುದಕ್ಕಿಂತ ಮುಂಚೆ ಡಾಮೆಂಟ್ ಒಳ್ಳೆಯ ಬಲಶಾಲಿ ವ್ಯಕ್ತಿಯಾಗಿದ್ದು ಮಣಿಪುರದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಡಾ.ಬ್ರೌನ್ ಸತ್ತ ನಂತರ ಕೆಲ ತಿಂಗಳ ಕಾಲ ಅಲ್ಲಿಯೇ ರಾಜಕೀಯ ಏಜಂಟ್ ಆಗಿ ಕೆಲಸ ನಿರ್ವಹಿಸಿದ್ದರು. ಬ್ರೌನ್ ದೂಡ್ಡ ಮೇಧಾವಿಯಾಗಿದ್ದು ಅಸ್ಸಾಂನ ಪೂರ್ವ ಸರಿಹದ್ದಿನ ಬುಡಕಟ್ಟು ಭಾಷೆಗಳ ಬಗ್ಗೆ ಅಧ್ಯಯನ ನಡೆಸುಬಲ್ಲ ಏಕೈಕ ಪಂಡಿತರಾಗಿದ್ದರು. ಅದಕ್ಕಾಗಿ ಸಾಕಷ್ಟು ಅಧ್ಯಯನವನ್ನೂ ನಡೆಸಿದ್ದರು. ಆದರೆ ಅವರ ಆಕಾಲ ಮೃತ್ಯುವಿನಿಂದ ಭಾಷಾ ಅಧ್ಯಯನಕ್ಕೆ ದೂಡ್ಡ ನಷ್ಟ ಉಂಟಾಗಿತ್ತು.

ಆದರೆ, ಬ್ರೌನ್ ಬುಡಕಟ್ಟು ನಾಗಾಗಳ ತೊಂದರೆಗಳನ್ನು ನಿವಾರಿಸುವಲ್ಲಿ ಅಸಫಲರಾಗಿ ತೊಂದರೆಗಳನ್ನು ಅನುಭವಿಸುತ್ತಲೇ ಬಂದಿದ್ದರು. ಬ್ರೌನ್ ಸಿಬ್ಬಂದಿಗೆ ಸರಾಬರಾಜಾಗುತ್ತಿದ್ದ ಆಹಾರ ಧಾನ್ಯಗಳನ್ನು ನಾಗಾಗಳು ದಾರಿಯ ಮಧ್ಯದಲ್ಲಿಯೇ ದೋಚುತ್ತಿದ್ದರು. ಸಮಗುಡ್ಟಿಂಗ್‌ನಿಂದ ನಾಗಾ ಪರ್ವತಗಳ ಕೇಂದ್ರವನ್ನು ಸ್ಥಾಪಿಸುವಾಗಲೇ ನಾಗಾಗಳ ಜೊತೆಗೆ ಒಳ್ಳೆಯ ಸಂಬಂಧ ಬೆಳೆಸಿಕೊಂಡಿರಬೇಕಿತ್ತು. ಪಲಿತಾಂಶ, ನಾಗಾ ಜನರ ಕಾಡು ಕಾನೂನುಗಳ ನಡುವೆ ಬ್ರೌನ್ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿದ್ದರು. ಡಾಮೆಂಟ್ ಮೊದಲಿಗೆ ಆಹಾರ ಧಾನ್ಯಗಳ ಸರಬರಾಜಿನ ಬಗ್ಗೆ ಚಿಂತೆಗೊಳಗಾದರು. ಮಣಿಪುರದ ಜನರು ಅಕ್ಕಿ ಹೊರಹೋಗುವುದನ್ನು ಮಣಿಪುರ ರಾಜರ ಎದುರಿಗೆ ವಿರೋಧಿಸಿದ್ದರು. ಕಾರಣ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕ್ಷಾಮ ಬಂದರೆ ಏನು ಮಾಡುವುದು ಎನ್ನುವ ಭೀತಿ ಅವರದ್ದಾಗಿತ್ತು. ಅದು ಸಹಜವಾಗಿಯೇ ಅವರ ಪದ್ಧತಿಯೂ ಆಗಿತ್ತು. ಇದರ ಬಗ್ಗೆ ಹೆಚ್ಚಾಗಿ ಒತ್ತಡ ಹೇರಲು ನಾನು ಇಷ್ಟಪಡಲಿಲ್ಲ. ಮಣಿಪುರ ರಾಜರು ನಮ್ಮ ಮೂಲಕ ಜನರ ವಿರೋಧವನ್ನು ಕಟ್ಟಿಕೊಳ್ಳುವುದು ಸರಿ ಇಲ್ಲ ಎನಿಸಿ ಸುಮ್ಮನಾಗಿದ್ದೆ. 1879 ಸೆಪ್ಟೆಂಬರ್‌ನಲ್ಲಿ ಡಾಮೆಂಟ್ ಸಿಬ್ಬಂದಿಗೆ ಆಹಾರವಸ್ತುಗಳ ಪೂರ್ಣ ಕೊರತೆ ಉಂಟಾಗಿರುವುದಾಗಿ ಊಹೆಗಳು ಹುಟ್ಟಿಕೊಂಡವು.

ಡಾಮೆಂಟ್ ಅವರಿಗೆ ಒಂದು ಪತ್ರ ಬರೆದು ಆಹಾರವಸ್ತುಗಳ ಕೊರೆತ ಇದ್ದರೆ ತಿಳಿಸಿ, ಸಾಧ್ಯವಾದಷ್ಟು ಕಳುಹಿಸುತ್ತೇನೆ ಎಂದು ಪತ್ರ ಬರೆದೆ. ಆದರೆ ಅದಕ್ಕೆ ಯಾವುದೇ ಉತ್ತರ ಬರಲಿಲ್ಲ. ಆ ಪತ್ರ ಅವರಿಗೆ ತಲುಪಲೇ ಇಲ್ಲ ಎಂದು ಆ ನಂತರ ತಿಳಿಯಿತು. ನಾಗಾಗಳ ಒಂದು ಬಲಶಾಲಿ ಬುಡಕಟ್ಟಾದ ಅಂಗಾಮಿಗಳು ಭಾರಿ ಚಾಕಚಕ್ಯತೆ ಉಳ್ಳವರಾಗಿದ್ದು ಅವರು ಏನಾದರೂ ತೊಂದರೆ ಮಾಡುವರು ಎನ್ನುವ ಸಂದೇಹ ನನ್ನನ್ನು ಕಾಡುತ್ತಲೇ ಇತ್ತು. ನಾಗಾಗಳಲ್ಲಿ ಹಲವು ಉಪ ಬುಡಕಟ್ಟುಗಳಿವೆ. ಇದೆ ಸಮಯದಲ್ಲಿ ದೂರದಲ್ಲಿದ್ದ ನನ್ನ ಪತ್ನಿಯ ಆರೋಗ್ಯ ತೀರ ಹದಗೆಟ್ಟಿತ್ತು. ಎರಡು ಮೂರು ಸಲ ಜ್ವರದಿಂದ ಬಹಳವಾಗಿ ಬಳಲಿ ಶಕ್ತಿಗುಂದಿದ್ದಳು. ಯಾವುದೇ ವೈದ್ಯಕೀಯ ಸವಲತ್ತುಗಳು ಇಲ್ಲದ ದೂರದ ಪರ್ವತ ಪ್ರದೇಶಗಳಲ್ಲಿ ಇದ್ದುಕೊಂಡು ಇನ್ನಾವುದೋ ಪ್ರದೇಶದಲ್ಲಿ ಪತ್ನಿ ಮಕ್ಕಳು ಆರೋಗ್ಯವಿಲ್ಲದೆ ನರಳುವುದು ಎಂತಹವರನ್ನು ಧೃತಿಗೆಡಸಿಬಿಡುತ್ತದೆ. 

ಅಕ್ಟೋಬರ್ 21ರಂದು ಬೆಳಗ್ಗೆ ಮಣಿಪುರದ ಗಡಿಕಾವಲು ಮಾವೋತನ್ಹಾದಿಂದ ಒಂದು ಗಾಳಿ ಸುದ್ದಿ ಬಂದಿತ್ತು. ನಾಗಾ ಪರ್ವತಗಳ ಗಡಿಯಲ್ಲಿನ ಮೆಜುಮಾ ನಾಗಾಗಳು, ಕೊಹಿಮಾದಲ್ಲಿರುವ ಬ್ರಿಟಿಷರು ಅಥವಾ ಇನ್ನೆಲ್ಲೊ ಇರುವ 100 ಜನರನ್ನು ಕೊಂದಿರುವುದಾಗಿ ಮಾವೋತನ್ಹಾದಲ್ಲಿದ್ದ ಅಧಿಕಾರಿಗೆ ಸುದ್ದಿ ತಲುಪಿತ್ತು. ಕೊಹಿಮಾದಲ್ಲಿರುವ ಡಾಮೆಂಟರ ಪರಿಸ್ಥಿತಿ ಏನಾಗಿದೆಯೋ ಎನ್ನುವ ಕುತೂಹಲ ನನ್ನನ್ನು ಕಾಡತೊಡಗಿತ್ತು. ಒಟ್ಟಿನಲ್ಲಿ ಏನೋ ಅನಾಹುತ ನಡೆದಿರುವುದಾಗಿ ನನ್ನ ಮನಸ್ಸು ಹೇಳುತ್ತಿತ್ತು. ಮಣಿಪುರ ರಾಜರ ಸೈನ್ಯದ ಮೇಜರ್ ತಂಕಲ್ ಜೊತೆಗೆ ‘ಶೇಕಡ 50ರಷ್ಟು ಗಾಳಿ ಸುದ್ದಿಯನ್ನು ತೆಗೆದು ಹಾಕಿದರೂ ಕೊಹಿಮಾದಲ್ಲಿರುವ ಬಲಹೀನ ಗ್ಯಾರಿಸನ್ ಮೇಲೆ ನಾಗಾಗಳು ನಿಜವಾಗಿಯೆ ದಾಳಿ ಮಾಡಿರಬಹುದು ಎಂದುಕೊಂಡೆ.

  • ಖೋನೊಮಾ ಗ್ರಾಮದ ಪ್ರವೇಶ ದ್ವಾರ.

ಸಂಖ್ಯೆ 34 ಬಿ.ಐ.ಬಟಾಲಿಯನ್ ಸೈನಿಕರ ಜೊತೆಗೆ ಕಛಾರ್ (ಅಸ್ಸಾಂ ರಾಜ್ಯದ ಒಂದು ಪಟ್ಟಣ) ಕಡೆಗೆ ಹೋಗುತ್ತಿದ್ದ ಫ್ರಾಂಟಿಯರ್ ಪೊಲೀಸ್‌ರ ಒಂದು ತುಕಡಿಯನ್ನು ನನ್ನ ಜೊತೆಗೆ ಸೇರಿಸಿಕೊಂಡೆ. ಮಣಿಪುರದ ಮಹಾರಾಜರಿಗೆ 900 ಮಣಿಪುರಿಗಳನ್ನು ಮತ್ತು ನಮ್ಮ ಸಾಮಾನುಗಳನ್ನು ಒಯ್ಯಲು ಕೂಲಿಯಾಳುಗಳನ್ನು ಕಳುಹಿಸಿಕೊಡುವಂತೆ ಹೇಳಿ, ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಅವರು ಬರುವುದನ್ನೇ ಕಾಯುತ್ತಿದ್ದೆ. ಅವರು ದೂರ ದೂರದ ಹಳ್ಳಿಗಳಿಂದ ಇಂಫಾಲ್’ಗೆ ಬಂದು ಅಲ್ಲಿಂದ ಬರಬೇಕಾಗಿದ್ದರಿಂದ ಬೇಗನೆ ಬರಲಿಲ್ಲ. ಮರುದಿನ ಬೆಳಗ್ಗೆ ತಂಕಲ್ ಮೇಜರ್ ಬಂದು ಎರಡು ಪತ್ರಗಳನ್ನು ನೀಡಿದರು. ಒಂದು ಪತ್ರ ಕವ್ವಲೆ, ನಾಗಾ ಪರ್ವತಗಳ ರಾಜಕೀಯ ಏಜಂಟ್‌ರದ್ದು, ಮತ್ತೊಂದು ಜಿಲ್ಲಾ ಸೂಪರಿಂಡೆಂಟ್ ಅವರದ್ದಾಗಿತ್ತು. ಎರಡೂ ಪತ್ರಗಳಲ್ಲಿ ಖೋನೊಮಾ (ಹಳ್ಳಿಯ ಹೆಸರೂ ಕೂಡ) ನಾಗಾಗಳು ಡಾಮೆಂಟರನ್ನು ಹತ್ಯೆ ಮಾಡಿದ ವಿಷಯವಿತ್ತು. ಡಾಮೆಂಟ್ ಮತ್ತು ಅವರ ಬ್ರಿಟಿಷ್ ಸೈನ್ಯವನ್ನು ಹಲವು ನಾಗಾ ಹಳ್ಳಿಗಳ ಉಗ್ರರು ಒಟ್ಟುಗೂಡಿ ಮುತ್ತಿಗೆ ಹಾಕಿ ಭಯಂಕರವಾಗಿ ರುಂಡಗಳನ್ನು ಚೆಂಡಾಡಿದ್ದರು.

ಈ ಘಟನೆ ನಡೆದ ಕೂಡಲೆ ಮಣಿಪುರದ ಮಹಾರಾಜರು ಬಂದು ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ತಿಳಿಸಿ ’ನಿಮ್ಮಲ್ಲಿ ಏನೇನಿದೆ?’ ಎಂದರು. ನನ್ನ ಹತ್ತಿರ 2000 ಸೈನಿಕರು ಇರುವುದಾಗಿ ತಿಳಿಸಿದೆ. ’ಅಷ್ಟು ಜನ ಬೇಕಾಗಿದೆ’ ಎಂದ ಅವರು ಮಾಮೂಲಿಯಂತೆ ಬಂದೂಕುಗಳಲ್ಲಿ 5 ಸುತ್ತು ಗುಂಡು ಸಿಡಿಸುವಂತೆ ಸೈನಿಕರಿಗೆ ಹೇಳಿದರು. ಅದು ಸುತ್ತಮುತ್ತಲಿನ ಹಳ್ಳಿಗಳ ಮುಖ್ಯಸ್ಥರು ರಾಜರ ಅರಮನೆ ಕಡೆಗೆ ತುರ್ತಾಗಿ ಬರುವ ಸಂದೇಶವಾಗಿತ್ತು. ಎಲ್ಲವನ್ನು ನಿರ್ಣಯಿಸಿದ ಮೇಲೆ ಕೊಹಿಮಾ ಕಡೆಗೆ ಹೊರಡಲು ತೀರ್ಮಾನ ತೆಗೆದುಕೊಳ್ಳಲಾಯಿತು. ಸಾಮಾನುಗಳನ್ನು ಹೊತ್ತುಕೊಂಡು ಹೋಗಲು ಕೂಲಿ ಆಳುಗಳು ದೊರಕುವುದೇ ದೊಡ್ಡ ಕೆಲಸವಾಗಿದ್ದು ಅಂತಹವರನ್ನು ಹುಡುಕಿ ಪರ್ವತ ಪ್ರದೇಶಗಳಿಂದ ಕರೆಸಿಕೊಳ್ಳಬೇಕಾಗಿತ್ತು. ಒಬ್ಬ ವಿಶೇಷ ದೂತನನ್ನು ಕಛಾರ್‌ಗೆ ಕಳುಹಿಸಿ ಅಲ್ಲಿಂದ ಹೆಚ್ಚು ಸೈನಿಕರು ಮತ್ತು ವೈದ್ಯರನ್ನು ಕಳುಹಿಸುವಂತೆ ವಿನಂತಿಸಿಕೊಂಡೆ. ರಸ್ತೆಯ ಉದ್ದಕ್ಕೂ ಬೇಕಾದ ಅನುಕೂಲಗಳನ್ನು ಮಾಡುವಂತೆ ಮತ್ತು 200 ಮಣಿಪುರಿಗಳನ್ನು ಕಳುಹಿಸಿ ಕೊಹಿಮಾಗೆ ಹೋಗುವ ಅರಣ್ಯ ದಾರಿಯಯಲ್ಲಿನ ಗಿಡಮರಗಳನ್ನು ಕಡಿದು ದಾರಿಯನ್ನು ಮಾಡುವಂತೆ ಕಳುಹಿಸಿದೆ. ಮೆಜುಮಾ ಹಳ್ಳಿಯ ಜನರು ಡಾಮೆಂಟರ ಹತ್ಯೆಯಲ್ಲಿ ಪಾಲ್ಗೊಳ್ಳಲಿಲ್ಲವೆಂದು ತಿಳಿದಿದ್ದರೂ ಹಳ್ಳಿಗೆ ದೂರದಿಂದಲೇ ಹೋಗಲು ಯೋಚಿಸಿದ್ದೆ.

ಒಳಗೊಳಗೆ ಮನಸ್ತಾಪ ಸೃಷ್ಟಿ

ನಂಬಿಕೆಯ ಒಬ್ಬ ದೂತನನ್ನು ಕಳುಹಿಸಿ ಮೊಜುಮಾ ಹಳ್ಳಿಗರನ್ನು ಯಾವುದರಲ್ಲೂ ತಲೆಯಾಕದೆ ತಟಸ್ಥರಾಗಿ ಇರುವಂತೆ ತಿಳಿಸಿದೆ. ನಾಗಾ ದ್ವಿಭಾಷಿ ದೂತ ಪಠಾಕಿಯನ್ನು ಕೊಹಿಮಾಗೆ ಕಳುಹಿಸಿ ಅಲ್ಲಿನ ಏಳು ನಾಗಾ ಬುಡಕಟ್ಟು ಜನಾಂಗಗಳ ನಡುವೆ ಒಳಗೊಳಗೆ ಮನಸ್ತಾಪಗಳನ್ನು ಸೃಷ್ಟಿಸಿ ನಮ್ಮ ಮೇಲೆ ಒಟ್ಟಾಗಿ ತಿರುಗಿಬೀಳದಂತೆ ಏರ್ಪಾಟು ಮಾಡಿದೆ. ಈ ವಿಷಯವನ್ನು ಬಹಳ ಗುಪ್ತವಾಗಿ ನಡೆಸಿದ್ದೆ. ಪಠಾಕಿ ಕೊಹಿಮಾಗೆ ಹೋಗಲು ಒಂದು ಸಣ್ಣ ಕುದುರೆ (ಪೋನಿ)ಯನ್ನು ಕೊಟ್ಟು ಕೈಯಲ್ಲಿ ಕವ್ವಲೆಗೆ ಒಂದು ಪತ್ರವನ್ನು ಕೊಟ್ಟೆ. ಕುದುರೆ ಹೋಗುವವರೆಗೆ ಅದರ ಮೇಲೆ ಸವಾರಿ ಮಾಡಿ ಆ ನಂತರ ಕಾಲು ನಡುಗೆಯಲ್ಲಿ ಜಾಗರೂಕತೆಯಿಂದ ಹೋಗುವಂತೆ ಹೇಳಿದೆ.

ಪಠಾಕಿಗೆ ಎರಡು ಕಾರ್ಯಗಳನ್ನು ಗುಪ್ತವಾಗಿ ನಡೆಸಿದರೆ 200 ರೂ. ಬಹುಮಾನ ನೀಡುವುದಾಗಿ ಪ್ರಮಾಣ ಮಾಡಿದೆ. ಪತ್ರದಲ್ಲಿ ಕವ್ವಲೆಗೆ ನಾನು ಸೈನ್ಯದೊಂದಿಗೆ ಬರುವುವರೆಗೂ ಹೇಗಾದರು ಮಾಡಿ ತಡೆದುಕೊಳ್ಳುವಂತೆ ವಿನಂತಿಸಿಕೊಂಡಿದ್ದೆ. ಒಂದು ವರ್ಷದ ಹಿಂದೆ 1000 ಮನೆಗಳಿರುವ ವಿಶ್ವೇಮಾ ಹಳ್ಳಿಯಂದ ಒಬ್ಬ ದೃಢಕಾಯ ಯುವಕ ಕೆಲಸ ಕೇಳಿಕೊಂಡು ನನ್ನಲ್ಲಿಗೆ ಬಂದಿದ್ದ. ಈ ಯುವಕ ಯಾವತ್ತಾದರೂ ಒಂದು ದಿನ ಕೆಲಸಕ್ಕೆ ಬರುವನೆಂದು ನನ್ನ ಹತ್ತಿರ ಸೇರಿಸಿಕೊಂಡಿದ್ದೆ. ಕೊಹಿಮಾಗೆ ಹೋಗುವ ದಾರಿಯಲ್ಲಿದ್ದ ವಿಶ್ವೇಮಾ ಹಳ್ಳಿಗೆ ಆತನನ್ನು ಕಳುಹಿಸಿ ಅವರನ್ನು ತಟಸ್ಥರಾಗಿರುವಂತೆ ಮತ್ತು ತಲೆಯಾಕಿದರೆ ತೊಂದರೆ ಅನುಭವಿಸುವುದಾಗಿ ಎಚ್ಚರಿಕೆ ನೀಡಿದೆ.

ಒತ್ತಡ ಮತ್ತು ಸವಾಲುಗಳು

ನಮ್ಮ ಸೈನ್ಯಕ್ಕೆ ನಾಯಕ್ ಶ್ರೇಣಿಯ ಬಲ್‌ದೇವ್ ಆಸ್ಪತ್ರೆಯಿಂದ ಆಗ ತಾನೇ ಬಂದಿದ್ದರೆ, ನಾರಾಯಣ್‌ ಸಿಂಗ್ ಎಂಬ ಜಾಟ್ ಯೋಧನೂ ಇದ್ದ. ಆತ 35ನೇ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸಿದ್ದು, ಮಿಲಿಟರಿ ಕಾನೂನು ಉಲ್ಲಂಘಿಸಿದ ಕಾರಣದಿಂದ ಅವನನ್ನು ತೆಗೆದು ಹಾಕಲಾಗಿತ್ತು. ನಾರಾಯಣ್‌ ಸಿಂಗ್ 120 ಸುತ್ತಿನ ಸಿಡಿಮದ್ದನ್ನು ಒಬ್ಬನೇ ಹೊರುತ್ತಿದ್ದು ಅದು ಅವನ ಸಹಸೈನಿಕರು ಹೊರುತ್ತಿದ್ದ ತೂಕಕ್ಕಿಂತ ಮೂರು ಪಟ್ಟು ಹೆಚ್ಚಾಗಿರುತ್ತಿತ್ತು. ನನ್ನ ಅಂಗರಕ್ಷರ ಪಡೆಯ ಜೊತೆಗೆ ಮಣಿಪುರದ ಜನರನ್ನು ತಂಕಲ್ ಮೇಜರ್ ಅವರೊಂದಿಗೆ ಕಳುಹಿಸಿ ಉಳಿದ ಎಲ್ಲಾ ಸೌಕರ್ಯಗಳ ಜೊತೆಗೆ ಆಹಾರ ಧಾನ್ಯಗಳನ್ನು ಅವಣಿಸತೊಡಗಿದೆ. ನನ್ನ ಜೊತೆಗೆ ಬರಲು ಇಚ್ಚಿಸುವ ಯಾರನ್ನೂ ಬಿಡದೆ ಎಲ್ಲರನ್ನೂ ಜೊತೆಗೆ ಕರೆದುಕೊಂಡೆ.

ನನ್ನ ಜೊತೆಗೆ ಬರಬೇಕಾಗಿರುವ ಇನ್ನೂ 40 ಜನರು ಮೈಯಾಂಗ್ ಖಾಂಗ್ ತಲುಪಿದ ವಿಷಯ ನನಗೆ ತಲುಪಲಿಲ್ಲ. ಜನರಲ್ ಸ್ಟೂವಟ್’ಬೈಲಿಗೆ ಟೆಲಿಗ್ರಾಮ್ ಕಳುಹಿಸಿ ಅವರು ಬಂದರೆ ಆಹಾರ ಮತ್ತು ತಂಗಲು ವ್ಯವಸ್ಥೆ ಮಾಡುವಂತೆ ತಿಳಿಸಿದ್ದೆ. ರಾತ್ರಿ 11 ಗಂಟೆಗೆ ನಾನು ಹಾಸಿಗೆಗೆ ಹೋಗುವವರೆಗೂ 34ನೇ ಪಡೆ ಬಂದಿರಲಿಲ್ಲ. ನನ್ನ ಪತ್ನಿ ಇನ್ನಷ್ಟು ನಿಶ್ಯಕ್ತಳಾಗಿದ್ದಳು. ಒಂದು ಸಮಾಧಾನದ ವಿಷಯವೆಂದರೆ ಆಕೆಯ ಸಹೋದರಿ ಇಂಗ್ಲೆಂಡಿನಿಂದ ಬಂದಿದ್ದಳು. ನಾನು ಮನೆ ಬಿಡುವಾಗ ನನ್ನ ಕೊನೆ ಮಗ ಆರ್ಥರ್ ನನ್ನ ಕಡೆಗೆ ಎರಡು ಕೈಗಳನ್ನು ಚಾಚಿದ್ದ. ನನ್ನ ಆಲೋಚನೆಗಳನ್ನೆಲ್ಲ ಕ್ಷಣ ಕಾಲ ಮರೆತು ಅವನನ್ನು ನನ್ನ ಎದೆಗೆ ಅವಿಚಿಕೊಂಡಿದ್ದೆ. ಅದೇ ಕೊನೆ ಅವನನ್ನು ನೋಡಿದ್ದು. ದುಃಖದಿಂದ ಅವನಿಂದ ಬೇರ್ಪಟ್ಟಿದ್ದೆ. ಆದರೆ ಮರುಕ್ಷಣದಲ್ಲಿಯೇ ಎಲ್ಲವನ್ನೂ ಮರೆತು ಮತ್ತಷ್ಟು ಧೈರ್ಯದಿಂದ ದೇಶಕ್ಕಾಗಿ ತ್ಯಾಗ ಮಾಡಲು ಹೊರಟಿದ್ದೆ. ಮತ್ತೆ ತಿರುಗಿಬರುವಾಗ ಎಲ್ಲವೂ ಸರಿ ಇರುತ್ತದೆ ಎನ್ನುವ ಆಶಾಭಾವನೆ ಕ್ಷಣಕಾಲ ನನ್ನ ಮನಸ್ಸಿನಲ್ಲಿ ಮೂಡಿ ಮಾಯವಾಗಿತ್ತು.

photos COURTESY: Wikipedia

**

ಭಾಗ 3: ನಿರೀಕ್ಷಿಸಿ

***

ಡಾ.ಎಂ.ವೆಂಕಟಸ್ವಾಮಿ

ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್’ನವರೇ. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ’ಸುವರ್ಣ ಕಥನ’ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. “ಏಳು ಪರ್ವತಗಳು ಒಂದು ನದಿ”, “ಈಶಾನ್ಯ ಭಾರತದ ಆಧುನಿಕ‌ ಕಥೆಗಳು” ಮತ್ತು “ಈಶಾನ್ಯ ಭಾರತದ ಕವಿತೆಗಳು” ನವಕರ್ನಾಟಕದಲ್ಲಿ ಪ್ರಕಟವಾಗಿವೆ.

Tags: British Naga Warkohimamajor general sir james johnstoneManipurmy experiences in manipur and the naga hillsnaga warnagaland
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಸಾವಿಗೆ ಧಾವಂತ ಹೆಚ್ಚಾಗಿದೆ, ಅಂಗಡಿ ಎಂಬ ಹಸನ್ಮುಖಿಯೂ ಅಗಲಿದ್ದಾರೆ…

ಸಾವಿಗೆ ಧಾವಂತ ಹೆಚ್ಚಾಗಿದೆ, ಅಂಗಡಿ ಎಂಬ ಹಸನ್ಮುಖಿಯೂ ಅಗಲಿದ್ದಾರೆ...

Leave a Reply Cancel reply

Your email address will not be published. Required fields are marked *

Recommended

ಜಸ್ಟೀಸ್ ರಾಮಾಜೋಯಿಸ್‌: ವಕೀಲ, ನ್ಯಾಯಮೂರ್ತಿ, ರಾಜ್ಯಸಭೆ ಸದಸ್ಯ, ರಾಜ್ಯಪಾಲರು‌ ಮತ್ತೂ ಮಾನವೀಯತೆಯುಳ್ಳ  ಸಹೃದಯತೆಯ ಪರಿಪೂರ್ಣ ಜೀವಿ

ಜಸ್ಟೀಸ್ ರಾಮಾಜೋಯಿಸ್‌: ವಕೀಲ, ನ್ಯಾಯಮೂರ್ತಿ, ರಾಜ್ಯಸಭೆ ಸದಸ್ಯ, ರಾಜ್ಯಪಾಲರು‌ ಮತ್ತೂ ಮಾನವೀಯತೆಯುಳ್ಳ ಸಹೃದಯತೆಯ ಪರಿಪೂರ್ಣ ಜೀವಿ

4 years ago
ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಇರುಮುಡಿ ಸಮರ್ಪಿಸಿದ ಡಿಸಿಎಂ; ಮಣಿಕಂಠ ಸ್ವಾಮಿ ಆಡಿ ಬೆಳೆದ ಪಂದಳಂ ಅರಮನೆಗೂ ಭೇಟಿ, ತಿರುವಾಭರಣಗಳ ಸಂದರ್ಶನ

ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಇರುಮುಡಿ ಸಮರ್ಪಿಸಿದ ಡಿಸಿಎಂ; ಮಣಿಕಂಠ ಸ್ವಾಮಿ ಆಡಿ ಬೆಳೆದ ಪಂದಳಂ ಅರಮನೆಗೂ ಭೇಟಿ, ತಿರುವಾಭರಣಗಳ ಸಂದರ್ಶನ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ