• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಸಾವಿಗೆ ಧಾವಂತ ಹೆಚ್ಚಾಗಿದೆ, ಅಂಗಡಿ ಎಂಬ ಹಸನ್ಮುಖಿಯೂ ಅಗಲಿದ್ದಾರೆ…

P K Channakrishna by P K Channakrishna
September 23, 2020
in CKPLUS, STATE
Reading Time: 1 min read
1
ಸಾವಿಗೆ ಧಾವಂತ ಹೆಚ್ಚಾಗಿದೆ, ಅಂಗಡಿ ಎಂಬ ಹಸನ್ಮುಖಿಯೂ ಅಗಲಿದ್ದಾರೆ…
914
VIEWS
FacebookTwitterWhatsuplinkedinEmail

Obituary

ಮಾರ್ಚ್‌ನಲ್ಲಿ ರಾಜ್ಯಕ್ಕೆ ಕೋವಿಡ್‌ ಕಾಲಿಟ್ಟು ಕಲ್ಬುರ್ಗಿಯಲ್ಲಿ ಒಂದು ಸಾವಾಗುತ್ತಿದ್ದಂತೆಯೇ ಮರಣ ಮೃದಂಗ ಶುರುವಾಯಿತಾ? ದೇಶದ ಉದ್ದಗಲಕ್ಕೂ ವೈರಸ್‌ ಸದ್ದು ಮಾಡಿದಷ್ಟು ತೀವ್ರವಾಗಿ ಆಗುತ್ತಿದ್ದ ಸಾವುಗಳೂ ಸದ್ದು ಮಾಡಿದವು. ಮೀಡಿಯಾದಲ್ಲಿ ಸೋಂಕಿತರ ಸಂಖ್ಯಾಬಲದ ಮುಂದೆ ಸೂತಕದ ಸುದ್ದಿಗಳು ಜೋರೇ ಇದ್ದವಾದರೂ ಸಾವಿನ ಭಯ ಆಗಿಗಿಂತಲೂ ಈಗ ಹೆಚ್ಚೇ ಆಗಿಬಿಟ್ಟಿದೆ.

ಕಾರಣವಿಷ್ಟೇ, ಈಗ ಸಾವಿಗೂ ಧಾವಂತವೂ ಹೆಚ್ಚಾಗಿದೆ. ಹಿಂದೆಂದಿಗಿಂತ ಆತುರ ಜಾಸ್ತಿಯಾಗಿದೆ. ಮೊನ್ನೆ ಅಶೋಕ್‌ ಗಸ್ತಿ, ಇವತ್ತು ಸುರೇಶ್‌ ಅಂಗಡಿ. ನಡುವೆ ಎಷ್ಟೋ ಜನರು, ನಾಯಕರು ಆಗಿಹೋದರು. ಗಣ್ಯರ ಯಾದಿ ನೆನಪಿನಲ್ಲಿದ್ದರೆ, ಸಾವಿನ ಸೆಳೆತಕ್ಕೆ ಸಿಲುಕಿ ಹೊರಟುಹೋದ ಅಜ್ಞಾತಿಗಳ ಸಂಖ್ಯೆ ಅದೆಷ್ಟೋ.. ಸದಾ ಹಸನ್ಮುಖದ ಸುರೇಶ್‌ ಅಂಗಡಿಯವರ ಅಗಲಿಕೆಯೊಂದಿಗೆ ಅದು ತಾರಕಸ್ಥಾಯಿಗೆ ಬಂದು ನಿಂತಿದೆ. ಇದೆಂಥಾ ಸಾವು ಎಂದು ಎಲ್ಲರೂ ದಿಗ್ಭ್ರಮೆಯಿಂದ ನೋಡುವಂತಾಗಿದೆ.

ಪಕ್ಷದ‌ ನಿಷ್ಠಾವಂತ ಕಾರ್ಯಕರ್ತ, ಶ್ರಮಜೀವಿ ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ಆಘಾತವಾಯಿತು.

ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ದಯಪಾಲಿಸಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬ ಸದಸ್ಯರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿ. pic.twitter.com/88WB8PcC3X

— Mangal Suresh Angadi (Modi Ka Parivar) (@MangalSAngadi) September 18, 2020
ಗಸ್ತಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದ ಅಂಗಡಿ.

ಇನ್ನು, ಬಿಜೆಪಿಗೇ ಏಕೆ ಹೀಗೆ ಆಗುತ್ತಿದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಸಾವುಗಳ ಪೆಟ್ಟು ಅದಕ್ಕೆ ಇನ್ನಿಲ್ಲದ ಆಘಾತವನ್ನೇ ನೀಡುತ್ತಿದೆ. ಕೋವಿಡ್‌ ಬರುವ ಮುನ್ನವೇ ಅನಂತ ಕುಮಾರ್‌ ಹೋಗಿಬಿಟ್ಟರು. ಮೊನ್ನೆ, ಅಂದರೆ ಸೆಪ್ಟೆಂಬರ್‌ 17ಕ್ಕೆ ಅಶೋಕ್‌ ಗಸ್ತಿ ತೀರಿಕೊಂಡಾಗಲೇ ಆತುರಗೆಟ್ಟ ಸಾವಿನ ಬಗ್ಗೆ ಎಲ್ಲರೂ ಮಾತನಾಡಿದ್ದುಂಟು. ಜೂನ್‌ 26ರಂದು ಹೊಸ ಕನಸುಗಳೊಂದಿಗೆ ತಮ್ಮ ರಾಜಕೀಯ ಬದುಕಿನ ಸವೆತದಲ್ಲಿ ಕಾರ್ಯಕರ್ತನ ಮಟ್ಟದಿಂದ ಲೀಡರ್‌ ಲೆವೆಲ್‌ಗೆ ಬಡ್ತಿ ಪಡೆದಿದ್ದ ಗಸ್ತಿ ಅವರ ಸಾವು ಅನಿರೀಕ್ಷಿತ ಹಾಗೂ ಅನಪೇಕ್ಷಿತ. ಈಗ ಸುರೇಶ್‌ ಅಂಗಡಿ ನಿಧನವು ಹೀಗೆಯೇ ಎಲ್ಲರನ್ನೂ ಅತೀವವಾಗಿ ಕಾಡುತ್ತಿದೆ. ಕೊವಿಡ್‌ ವೈರಸ್‌ಗೆ ಸಿಕ್ಕಿ ದಿಲ್ಲಿಯ ಏಮ್ಸ್‌ ಸೇರಿಕೊಂಡ ಅವರು ಗುಣವಾಗಿ ಮನೆಗೆ ಬರುತ್ತಾರೆಂದೇ ನಂಬಿಕೊಂಡಿದ್ದ ಎಲ್ಲರಿಗೂ ನಿರಾಶೆ ಮೂಡಿಸಿ ತಮ್ಮ ಬದುಕಿನ ಅಂಗಡಿಗೆ ಶಾಶ್ವತ ಕದ ಎಳೆದುಬಿಟ್ಟಿದ್ದಾರೆ ಅಂಗಡಿ. ಗಸ್ತಿ ನಿಧನಕ್ಕೆ ಆಘಾತೊಂಡಿದ್ದ ಅಂಗಡಿ ತಾವೇ ದೊಡ್ಡ ಆಘಾತ ಕೊಟ್ಟುಹೋಗಿದ್ದಾರೆ.

2019, ಮೇ ತಿಂಗಳಲ್ಲಿ ನರೇಂದ್ರ ಮೋದಿ ಅವರ ಸಂಪುಟದ ಪ್ರಮಾಣ ಸ್ವೀಕಾರ ಕಾರ್ಯಕ್ರಮ ಕರ್ನಾಟಕದ ಪಾಲಿಗೆ ಖುಷಿ ಕೊಟ್ಟಿತ್ತು. ಕ್ಯಾಬಿನೆಟ್‌ನಲ್ಲಿ ಪರವಾಗಿಲ್ಲ ಎನ್ನುವಷ್ಟು ಪಾಲೂ ಸಿಕ್ಕಿತ್ತು. ಪ್ರಹ್ಲಾದ ಜೋಶಿ ಮತ್ತು ಸದಾನಂದ ಗೌಡರ ಜತೆಯಲ್ಲೇ ಅಂಗಡಿಯವರು ಪ್ರಮಾಣ ಸ್ವೀಕಾರ ಮಾಡಿದಾಗ ಕರ್ನಾಟಕಕ್ಕೆ ಆಗಿದ್ದ ಸಂತೋಷ ಕಮ್ಮಿಯೇನಲ್ಲ. ಅದರಲ್ಲೂ ಹುಬ್ಬಳ್ಳಿಗೊಂದು, ಬೆಳಗಾವಿಗೊಂದು ಮಂತ್ರಿಗಿರಿ ಸಿಕ್ಕಿದಾಗ ನಮ್ಮ ಭರವಸೆಗಳೂ ಗರಿಗೆದರಿದ್ದವು. ಅಂಗಡಿಯವರಿಗೆ ರೈಲ್ವೆ ರಾಜ್ಯ ಖಾತೆ ಸಿಕ್ಕಿದಾಗ ಉತ್ತರ ಕರ್ನಾಟಕದ ನಿರೀಕ್ಷೆಗಳಿಗೆ ರೆಕ್ಕೆ ಬಂದಿತ್ತಲ್ಲದೆ, ಆ ನಿರೀಕ್ಷೆಯನ್ನು ಸುರೇಶ್‌ ಹುಸಿ ಮಾಡಲಿಲ್ಲ. ಅನುಭವದಲ್ಲಿ ಪ್ರಹ್ಲಾದ ಜೋಶಿ ಅವರಿಗೆ ಸಮಾನರಾದರೂ ಕ್ಯಾಬಿನೆಟ್‌ ದರ್ಜೆ ಸಿಗದ್ದಕ್ಕೆ ಚಕಾರ ಎತ್ತಿದವರಲ್ಲ. ಬದಲಿಗೆ ಕೆಲಸಕ್ಕೆ ಒತ್ತು ನೀಡಿ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಮರುಜೀವ ನೀಡಿದರು. ಹೀಗಾಗಿ ಬೆಂಗಳೂರು-ಬೆಳಗಾವಿ ನಡುವೆ ಸೂಪರ್‌ಫಾಸ್ಟ್‌ ರೈಲು ಬಂತು. ಕಿಸಾನ್‌ ರೈಲು ಹಳಿಗೆ ಹತ್ತಿತು. ಐತಿಹಾಸಿಕ ನಗರ ವಿಜಯಪುರ ಮತ್ತು ಕರಾವಳಿ ನಗರ ಮಂಗಳೂರಿಗೆ ನೇರ ರೇಲೂ ಬಂತು. ಜತೆಗೆ ಉತ್ತರ ಕರ್ನಾಟಕದಲ್ಲಿ ಮಕಾಡೆಬಿದ್ದು ಧೂಳು ತಿನ್ನುತ್ತಿದ್ದ ಅಷ್ಟೂ ರೈಲ್ವೆ ಯೋಜನೆಗಳ ಫೈಲುಗಳ ಜಡತ್ವ ಬಿಡಿಸಿ ಅವೆಲ್ಲಕ್ಕೂ ಜೀವ ತುಂಬಿದ್ದರು ಅಂಗಡಿ.

ನಾಲ್ಕು ಸಲ ಗೆದ್ದಿತ್ತು ಸಂಸ್ಕಾರ

ನಿಜ. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಗಟ್ಟಿ ತಳಪಾಯವಿದೆ. ಅದಕ್ಕೆ ಅನೇಕರು ಕಾರಣ, ಸುರೇಶ್‌ ಅಂಗಡಿಯೂ ಸೇರಿ. ಒಂದು ಕಾಲದಲ್ಲಿ ಕಾಂಗ್ರೆಸ್‌ ಮತ್ತು ಜನತಾದಳದ ಅಬೇಧ್ಯ ಕೋಟೆಯಾಗಿದ್ದ ಗಡಿ ಜಿಲ್ಲೆಯಲ್ಲಿ ಇತ್ತ ಸಾಹುಕಾರ ಮನೆತನದ ಆಕ್ರಮಣಕಾರಿ ಪಾಲಿಟಿಕ್ಸ್‌, ಸಕ್ಕರೆ ಕಾರ್ಖಾನೆಗಳ ಮಾಲೀಕರ ಒಳಪ್ರಭಾವ, ಸಹಕಾರಿಗಳ ಅಸಹಕಾರ, ಇದರ ಜತೆಗೆ ಮರಾಠಿಗಳ ಕಿರಿಕಿರಿ ರಾಜಕೀಯದ ನಡುವೆ ಅಂಗಡಿ ನಾಲ್ಕು ಅವಧಿಗೆ ಲೋಕಸಭೆಗೆ ಗೆದ್ದುಹೋಗಿದ್ದರು. ಅವರ ಪಕ್ಷ ಗೆದ್ದು ಬೀಗಿತು ಎನ್ನುವುದಕ್ಕಿಂತ ಅಂಗಡಿ ಸಂಸ್ಕಾರಕ್ಕೇ ಗೆಲುವಾಗಿತ್ತು ಎನ್ನುವುದೇ ಸರಿ. ಅವರ ಒಳ್ಳೆಯತನಕ್ಕೆ ಬೆಳಗಾವಿಯಲ್ಲಿ ಪಕ್ಷಗಳಿಗೆ ಮೀರಿದ ಸೆಳೆತವಿತ್ತು. ಇಷ್ಟೇ ಸಾಕಿತ್ತು ಅವರ ಏಳಿಗೆಗೆ. ರಾಜಕೀಯದ ಗಂಧವೂ ಇಲ್ಲದೆ ತಮ್ಮ ಪಾಡಿಗೆ ವ್ಯಾಪಾರ ಮಾಡಿಕೊಂಡಿದ್ದ ಅವರ ಸತತ ಗೆಲುವನ ರಹಸ್ಯ ಅಂತ ಏನೂ ಇರಲಿಲ್ಲ. ಯಾವುದೇ ವ್ಯಸನವಿಲ್ಲದ ಬಿಳಿಹಾಳೆಯಂಥ ಜೀವನ, ರಾಜಕೀಯದಲ್ಲೂ ಸಣ್ಣ ಕಪ್ಪುಚುಕ್ಕೆ ಇಲ್ಲದ ಕರಿಯರ್‌ ಅವರದ್ದು ಮಾತ್ರವಾಗಿತ್ತು.

Shri Suresh Angadi was an exceptional Karyakarta, who worked hard to make the Party strong in Karnataka. He was a dedicated MP and effective Minister, admired across the spectrum. His demise is saddening. My thoughts are with his family and friends in this sad hour. Om Shanti. pic.twitter.com/2QDHQe0Pmj

— Narendra Modi (@narendramodi) September 23, 2020

ಈ ಕಾರಣಕ್ಕೆ ಅಂಗಡಿಯರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಗರಿಗೆದರಿ ಕೂತಿದ್ದವು. ಕೇಂದ್ರದಲ್ಲಿ ಅವರು ಕ್ಯಾಬಿನೆಟ್‌ ದರ್ಜೆಗೇರುವ ದಿನವೂ ದೂರವಿರಲಿಲ್ಲ ಎನಿಸುತ್ತದೆ. ಅಂಗಡಿಯವರ ಕೆಲಸಗಾರಿಕೆ ಮೋದಿ ಅವರಿಗೂ ಹಿಡಿಸಿತ್ತು ಎಂಬುದು ಬಿಜೆಪಿಯಲ್ಲಿ ಎಲ್ಲರೂ ಮಾತನಾಡುವ ಸಂಗತಿಯೇ ಆಗಿತ್ತು. ಯಡಿಯೂರಪ್ಪ ಅವರ ನಂತರ ಯಾರು ಎನ್ನುವ ಯಾದಿಯಲ್ಲೂ ಅವರ ಹೆಸರಿತ್ತು. ಅಗಲಿದ ನಾಯಕನನ್ನು ನೆನಪು ಮಾಡಿಕೊಂಡು ರಾಜ್ಯ ರಾಜಕಾರಣ ಭಾರದ ಹೆಜ್ಜೆಗಳನ್ನಿಡುತ್ತಿದೆ, ಅಂಗಡಿಯವರು ಇಟ್ಟುಹೋದ ಅಚ್ಚಳಿಯದ ಹೆಜ್ಜೆಗಳನ್ನು ನೋಡುತ್ತಿದೆ. ಈಗ ಆ ಹೆಜ್ಜೆಗಳಷ್ಟೇ ಮಾತನಾಡುತ್ತಿವೆ.

ಬೆಳಗಾವಿ – ಧಾರವಾಡ ಹೊಸ ರೈಲು ಮಾರ್ಗ ಯೋಜನೆಗೆ ಮಂಜೂರಾತಿ!

ಬೆಳಗಾವಿ, ಹುಬ್ಬಳ್ಳಿ ಧಾರವಾಡ ಜನರ ಬಹು ವರ್ಷಗಳ ಬೇಡಿಕೆಯಾದ, ಕಿತ್ತೂರು ಮಾರ್ಗವಾಗಿ ಬೆಳಗಾವಿ – ಧಾರವಾಡ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಅಂದಾಜು 927.40 ಕೋಟಿ ವೆಚ್ಚದಲ್ಲಿ ಅತೀ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು.
1/3 pic.twitter.com/XgFgqxAYIA

— Mangal Suresh Angadi (Modi Ka Parivar) (@MangalSAngadi) September 7, 2020

ದಿಲ್ಲಿಯಲ್ಲಿ ಕೆಲವರಷ್ಟೇ ಇದ್ದರು. ನಿಮಗೆ ಕೆಲಸ ಆಗೇಕಿದ್ದರೆ ದಿಲ್ಲಿಗೇ ಬನ್ನಿ ಎಂದು ಟಾಕುಠೀಕಾಗಿ ಹೇಳುವ ನಾಯಕರು, ಮತ್ತೂ ನೀವು ಇಲ್ಲಿವರೆಗೂ ಬರುವುದೇ ಬೇಡ. ನಿಮ್ಮ ಕೆಲಸ ಆಗುತ್ತದೆ. ನೆಮ್ಮದಿಯಾಗಿದ್ದುಬಿಡಿ ಎನ್ನುವವರು… ಅಂಗಡಿ ಎರಡನೇ ವರ್ಗಕ್ಕೆ ಸೇರಿದವರು. ರಾಜ್ಯದ ಕೆಲಸ, ಜನರ ಕೆಲಸ ಎಂದಾಗ ಕಂಕುಳಲ್ಲಿ ಫೈಲು ಸಿಕ್ಕಿಸಿಕೊಂಡು ದಿಲ್ಲಿ ಮಂತ್ರಿಗಳ ಅಂಗಳದಲ್ಲಿ ಅಲೆದಾಡಿದ್ದ ಅಂಗಡಿಯವರನ್ನು ಅನೇಕರು ನೋಡಿದ್ದಾರೆ. ಬೆಂಗಳೂರಿಗೆ ಬಂದಾಗಲೂ ರಾಜಕೀಯದಲ್ಲಿ ತಮಗಿಂತ ಅತಿ ಕಿರಿಯರಲ್ಲೂ ಬದ್ಧತೆ ತೋರಿ ಅವರಲ್ಲೂ ಕಾಯಕದ ದೀವಿಗೆ ಹಚ್ಚುತ್ತಿದ್ದರು ಅವರು.

ಅಂಗಡಿಯವರು ನಿಧನರಾದ ನಂತರ ಸಚಿವ ಸಿ.ಟಿ. ರವಿ ಹೀಗೆ ಟ್ವೀಟ್‌ ಮಾಡಿದ್ದರು.
“‘ಹಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ.”
ಸರಿ. ಹಾಗೆಂದು ಯಾರಲ್ಲಿ ದೂರುವುದು?

ಅಗಲಿದ ಅಂಗಡಿಯವರಿಗೆ ಪ್ರಣಾಮಗಳು.

Tags: belagavibjpcovid 19karnatakaSuresh Angadi
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಇತಿ ನಮಸ್ಕಾರ.. ಎನ್ನುತ್ತಲೇ ಕರ್ಮಭೂಮಿ ಬೆಳಗಾವಿಗೆ ಬದಲು ದಿಲ್ಲಿಯಲ್ಲೇ ಚಿರನಿದ್ರೆಗೆ ಜಾರಿದರು ಸುರೇಶ್‌ ಅಂಗಡಿ

ಇತಿ ನಮಸ್ಕಾರ.. ಎನ್ನುತ್ತಲೇ ಕರ್ಮಭೂಮಿ ಬೆಳಗಾವಿಗೆ ಬದಲು ದಿಲ್ಲಿಯಲ್ಲೇ ಚಿರನಿದ್ರೆಗೆ ಜಾರಿದರು ಸುರೇಶ್‌ ಅಂಗಡಿ

Comments 1

  1. Pingback: ಇತಿ ನಮಸ್ಕಾರ.. ಎನ್ನುತ್ತಲೇ ಕರ್ಮಭೂಮಿ ಬೆಳಗಾವಿಗೆ ಬಾರದೇ ದಿಲ್ಲಿಯಲ್ಲೇ ಚಿರನಿದ್ರೆಗೆ ಜಾರಿದ ಅಂಗಡಿ - cknewsnow

Leave a Reply Cancel reply

Your email address will not be published. Required fields are marked *

Recommended

ಅನ್ನದಾತರನ್ನು ಭಯೋತ್ಪಾದಕರೆಂದ ಬಾಲಿವುಡ್‌ ನಟಿ ಕಂಗನಾ ರಣಾವತ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಿದ ತುಮಕೂರು ಕೋರ್ಟ್‌

ಆಚಾರವಿಲ್ಲದ ನಾಲಗೆ; ಬೈಡನ್‌ ಬಗ್ಗೆ ಲಘುವಾಗಿ ಮಾತನಾಡಿ ಟ್ವಿಟ್ಟಿಗರಿಂದ ಕುಟುಕಿಸಿಕೊಂಡ ಕಂಗನಾ

5 years ago
ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ