• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಓಲೈಕೆ ಪಾಲಿಟಿಕ್ಸ್;‌ ಭಾರತೀಯ ಜನತಾ ಪಕ್ಷಕ್ಕೂ ಅಂಟಿಕೊಂಡ ಕಾಂಗ್ರೆಸ್‌ ಚಾಳಿ !!

cknewsnow desk by cknewsnow desk
October 15, 2020
in CKPLUS, POLITICS, STATE
Reading Time: 1 min read
0
ಓಲೈಕೆ ಪಾಲಿಟಿಕ್ಸ್;‌ ಭಾರತೀಯ ಜನತಾ ಪಕ್ಷಕ್ಕೂ ಅಂಟಿಕೊಂಡ ಕಾಂಗ್ರೆಸ್‌ ಚಾಳಿ !!
917
VIEWS
FacebookTwitterWhatsuplinkedinEmail

ಓಲೈಕೆ ಅಥವಾ ತುಷ್ಠೀಕರಣ ರಾಜಕೀಯದ ವಿಷಯವನ್ನೇ ಇಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಕೂಗಾಡಿ ಬೇಳೆ ಬೇಯಿಸಿಕೊಂಡ ಬಿಜೆಪಿ; ಇದೀಗ ಕಾಂಗ್ರೆಸ್‌ ಇಟ್ಟ ಹಜ್ಜೆಗಳಲ್ಲೇ ನಡೆಯುತ್ತಿದೆ. ಅಧಿಕಾರ ಇಲ್ಲದಿದ್ದಾಗ ಒಂದು ಮಾತು, ಇದ್ದಾಗ ಒಂದು ಮಾತು ಎಂಬ ನೀತಿಯನ್ನು ಕಮಲ ಪಕ್ಷ ವೈನಾಗಿ ಅಳವಡಿಸಿಕೊಂಡಿದೆ ಎಂದು ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಬರೆದಿದ್ದಾರೆ.

***

ಕೇರಳ ರಾಜ್ಯದ ಒಂದು ಊರಿನಲ್ಲಿ ಖಾಲಿ ಮನೆಯ ಮೇಲೊಂದು ಬೋರ್ಡ್ House for sale only for muslim. Contac: 90xxxxxx28 ಖಾಲಿ ಇರುವ ಮನೆ ಮಾರಾಟಕ್ಕಿದೆ. ಆದರೆ ಮುಸ್ಲಿಮರಿಗೆ ಮಾತ್ರ ಖರೀದಿಗೆ ಅವಕಾಶ ಎನ್ನುವುದು ಈ ಬೋರ್ಡಿನ ಸಾರಾಂಶ. ನಾವು ಮಾರಾಟ ಮಾಡುವ ಮನೆಯನ್ನು ಇಂಥ ಸಮುದಾಯದವರಿಗೇ ಮಾರಬೇಕೆಂಬ ಕಾನೂನಿಲ್ಲ. ನಮಗೆ ಇಷ್ಟಬಂದವರಿಗೆ ಮಾರಾಟ ಮಾಡಲು ಅವಕಾಶವಿದೆ. ಆದರೆ ಮೇಲ್ನೋಟಕ್ಕೆ ಈ ಬೋರ್ಡ್ ರವಾನಿಸುವ ಸಂದೇಶವೇನು? ಕೇರಳದಲ್ಲಿ ಮುಸ್ಲಿಮರಿಗೆ ಸೇರಿದ ಆಸ್ತಿಯನ್ನು ಬೇರೆ ಧರ್ಮದವರಿಗೆ ಎಂದಿಗೂ ಮಾರಾಟ ಮಾಡುವುದಿಲ್ಲ. ಮುಸ್ಲಿಮರಿಗೆ ಮಾತ್ರ ಆ ಆಸ್ತಿಯನ್ನು ಖರೀದಿಸುವ ಹಕ್ಕಿದೆ ಎಂದಲ್ಲವೆ?

ಒಂದು ವೇಳೆ ಹಿಂದುಗಳೇನಾದರೂ ತಾವು ಮಾಡಬೇಕೆಂದಿರುವ ಖಾಲಿ ಮನೆಯ ಮೇಲೆ Only for Hindus ಎಂಬ ಬೋರ್ಡ್ ಲಗತ್ತಿಸಿದ್ದರೆ ಮನೆಯ ಮಾಲೀಕನ ಮೇಲೆ ಎಫ್‌ಐಆರ್ ದಾಖಲಾಗುತ್ತಿದ್ದುದರಲ್ಲಿ ಸಂಶಯವೇ ಇಲ್ಲ. ಕೋಮು ಸಾಮರಸ್ಯ ಹದಗೆಡಿಸುವ, ಕೋಮು ಭಾವನೆಗೆ ಪ್ರಚೋದನೆ ನೀಡುವ ಫಲಕ ಹಾಕಿದ್ದು, ಜಾತ್ಯತೀತ ನೀತಿಗೇ ಎಸಗಿದ ದ್ರೋಹವೆಂದು ಎಡಪಂಥೀಯ ಬುದ್ಧಿಜೀವಿಗಳು, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಪ್ರತಿಭಟನೆ ಮಾಡಿ, ಬೋರ್ಡ್ ಹಾಕಿದವನ ಗ್ರಹಚಾರ ಬಿಡಿಸುತ್ತಿದ್ದರು. ಆದರೆ ಮುಸ್ಲಿಮರು ಹಾಕಿರುವ ಬೋರ್ಡ್ ಇದು. ಹಾಗಾಗಿ ಅದು ಜಾತ್ಯತೀತ ನೀತಿಗೆ ಧಕ್ಕೆಯಾಗುವುದಿಲ್ಲ! ಆ ಬಗ್ಗೆ ಗಟ್ಟಿಯಾಗಿ ಯಾರೂ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ.

ತಮ್ಮ ಸಂಖ್ಯೆಯನ್ನು, ತಮ್ಮ ಮತಾವಲಂಬಿಗಳನ್ನು ಕ್ರಮೇಣ ಹೆಚ್ಚಿಸಿಕೊಳ್ಳಲು ಮುಸ್ಲಿಮರು ಏನೇನೆಲ್ಲ ಷಡ್ಯಂತ್ರಗಳನ್ನು ಹೊಸೆಯುತ್ತಿದ್ದಾರೆಂಬುದು ರಹಸ್ಯವಾಗಿರಲು ಸಾಧ್ಯವಿಲ್ಲ. ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಶ್ರೀಮಂತ ಕುಟುಂಬದ, ಅದರಲ್ಲೂ ಮೇಲ್ವರ್ಗದ ಕುಟುಂಬದ ಮುಗ್ಧ ಹೆಣ್ಣುಮಕ್ಕಳಿಗೆ ಲವ್ ಜಿಹಾದ್ ಹೆಸರಿನಲ್ಲಿ ಗಾಳ ಹಾಕಿ, ಪ್ರೇಮದಾಟದ ನಾಟಕವಾಡಿ, ಅನಂತರ ಬಲಾತ್ಕಾರವಾಗಿ ಮತಾಂತರಿಸಿ ಮುಸ್ಲಿಂ ಧರ್ಮಕ್ಕೆ ಸೇರಿಸಿಕೊಳ್ಳುವ ವಿದ್ಯಮಾನ ಈಗಲೂ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಹಲವು ಹೆಣ್ಣುಮಕ್ಕಳು ಮುಸ್ಲಿಂ ಹುಡುಗರು ಬೀಸುವ ಈ ಮೋಸದ ಬಲೆಗೆ ಬಿದ್ದು ತಮ್ಮ ಸುಂದರ ಭವಿಷ್ಯವನ್ನು ನರಕಸದೃಶರಾಗಿ ಮಾಡಿಕೊಂಡಿದ್ದೂ ಆಗಿದೆ. ಆದರೂ ನಮ್ಮ ಹಿಂದು ಹೆಣ್ಣುಮಕ್ಕಳಿಗೆ ಬುದ್ಧಿ ಬಂದಿಲ್ಲ. ಮುಸ್ಲಿಂ ಹುಡುಗರದ್ದು ಬರಿದೇ ಪ್ರೇಮದ ಆಟ. ಮದುವೆಯಾದ ಬಳಿಕ ತಮ್ಮ ಕಾಮದ ಚಟ ತೀರಿಸಿಕೊಂಡು ಒಂದೆರಡು ಮಕ್ಕಳನ್ನು ಹುಟ್ಟಿಸಿ, ಅನಂತರ ಆ ಹೆಣ್ಣು ಮಕ್ಕಳನ್ನು ನೀಡಿ ಬೀದಿಪಾಲು ಮಾಡುತ್ತಾರೆ ಎಂಬ ಕಟು ಸತ್ಯ ಎದುರಿಗಿದ್ದರೂ ಅದನ್ನೊಪ್ಪಲು ತಯಾರಿಲ್ಲ.

ಲ್ಯಾಂಡ್ ಜಿಹಾದ್

ಕೇರಳದಲ್ಲಿ ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶದಲ್ಲಿ ಹಿಂದುಗಳ ಒಂದೆರಡು ಮನೆಗಳು ಅಥವಾ ಆಸ್ತಿ ಇದ್ದರಂತೂ ಕೇಳುವುದೇ ಬೇಡ. ಅದನ್ನು ಒತ್ತಾಯಪೂರ್ವಕವಾಗಿ ಮುಸ್ಲಿಮರಿಗೇ ಮಾರಾಟ ಮಾಡಿಸಲಾಗುತ್ತದೆ. ಮಾರಾಟ ಮಾಡಲು ಆ ಕುಟುಂಬಗಳು ಒಂದು ವೇಳೆ ಒಪ್ಪದಿದ್ದರೆ ಬೆದರಿಕೆ ಹಾಕಲಾಗುತ್ತದೆ. ಮನೆಯ ದನಕರುಗಳನ್ನು ಅಪಹರಿಸಲಾಗುತ್ತದೆ. ಮನೆಯ ಹೆಣ್ಣುಮಕ್ಕಳ ಅಪಹರಣವೂ ನಡೆದರೆ ಆಶ್ಚರ್ಯವಿಲ್ಲ. ಇಂಥವರ ಸಹವಾಸವಾದರೂ ಯಾಕೆಂದು ಆ ಹಿಂದು ಕುಟುಂಬಗಳೇ ಸಿಕ್ಕಿದ ರೇಟಿಗೆ ಜಮೀನು ಮಾರಿ ಅಲ್ಲಿಂದ ಕಾಲ್ಕೀಳುವ ಪರಿಸ್ಥಿತಿ ಎಂದೋ ಬಂದೊದಗಿದೆ. ಇದು ಒಂದು ರೀತಿಯ ಲ್ಯಾಂಡ್ ಜಿಹಾದ್. ಹಿಂದುಗಳ ಆಸ್ತಿ, ಜಮೀನನ್ನು ಒತ್ತಡ ಹೇರಿ ವಶಪಡಿಸಿಕೊಳ್ಳುವ ತಂತ್ರಗಾರಿಕೆ.

ಇದೀಗ ಕೇರಳದಲ್ಲಿ ಶುರುವಾಗಿರುವುದು ಬಿಲ್ಡಿಂಗ್ ಜಿಹಾದ್. ಮುಸ್ಲಿಮರಿಗೆ ಸೇರಿದ ಬಿಲ್ಡಿಂಗ್‌ಗಳನ್ನು ಹಿಂದುಗಳು ಖರೀದಿಸುವಂತೆಯೇ ಇಲ್ಲ. ಹೀಗಾದರೆ ಪಾಕಿಸ್ತಾನದಲ್ಲಿರುವ ಹಿಂದುಗಳಿಗೂ ಇಲ್ಲಿರುವ ಹಿಂದುಗಳಿಗೂ ಇರುವ ವ್ಯತ್ಯಾಸವಾದರೂ ಏನು? ಅಲ್ಲೂ ಬಲಾತ್ಕಾರದ ಮತಾಂತರ, ಜಮೀನು, ಆಸ್ತಿ, ಬಿಲ್ಡಿಂಗ್ ವಶ. ಇಲ್ಲೂ ಅದೇ ಕಥೆ. ಹಿಂದುಗಳಿಗೆ ರಕ್ಷಣೆ ಕೊಡಬೇಕಾದ ಸರ್ಕಾರಗಳು ಇವನ್ನೆಲ್ಲ ನೋಡಿಯೂ ನೋಡದಂತೆ ಮೌನಕ್ಕೆ ಶರಣಾಗಿವೆ. ಅಂತಹ ಮೌನಕ್ಕೆ ʼಜಾತ್ಯತೀತತೆʼ ಎಂದು ಬೇರೆ ವ್ಯಾಖ್ಯಾನಿಸಲಾಗುತ್ತದೆ!

ಕಾಂಗ್ರೆಸ್‌ ಹಾದಿಯಲ್ಲೇ ಬಿಜೆಪಿ

ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಯಾವುದೇ ಸರ್ಕಾರವಿರಲಿ ಅಲ್ಪಸಂಖ್ಯಾತರಿಗೇ ಆದ್ಯತೆ. ಅಲ್ಪಸಂಖ್ಯಾತರಿಗಾಗಿ ಜಿಲ್ಲೆಗೊಂದು ಐಟಿಐ ಹಾಗೂ ಕಂದಾಯ ವಿಭಾಗಕ್ಕೊಂದು ಪಾಲಿಟೆಕ್ನಿಕ್ ಕಾಲೇಜು ತೆರೆಯಲು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ಧರಿಸುವುದು ಇದಕ್ಕೆ ನಿದರ್ಶನ. ಅಂದ ಹಾಗೆ ಇಂತಹ ನಿರ್ಧಾರ ಕೈಗೊಂಡಿರುವುದು ಕೇರಳದ ಕಮ್ಯುನಿಸ್ಟ್ ಸರ್ಕಾರವಲ್ಲ. ಆದರೆ ಕರ್ನಾಟಕದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ! ರಾಜ್ಯದ 30 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರಿಗಾಗಿಯೇ ಐಟಿಐ ಕಾಲೇಜುಗಳನ್ನು ತೆರೆಯಲು ಪ್ರಸ್ತಾಪವನ್ನು ಸಿದ್ಧಪಡಿಸಿ, ಈಗಾಗಲೇ ಕೇಂದ್ರದಿಂದ ಶೇ.60 ಹಾಗೂ ರಾಜ್ಯದಿಂದ ಶೇ.40 ಅನುದಾನ ಸಿಗಲಿದೆಯಂತೆ. ಇಂತಹ ಐಟಿಐ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶೇ.75 ಸೀಟುಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿಯೇ ಮೀಸಲಿರಿಸಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ದೃಷ್ಟಿಯಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆರ್ಥಿಕ ಸಬಲೀಕರಣ ಮಾಡುವುದು ತಪ್ಪಲ್ಲ. ಆದರೆ ಅವರಿಗಾಗಿಯೇ ಪ್ರತ್ಯೇಕ ಐಟಿಐ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆಯುವುದು ಎಷ್ಟರಮಟ್ಟಿಗೆ ಸಮಂಜಸ? ಈಗಿರುವ ಸಾಮಾಜಿಕ ಕೋಮು ಸಾಮರಸ್ಯ ಕೆಡುವುದಕ್ಕೆ ಈ ಯೋಜನೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೆ? ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಎಲ್ಲ ವಿದ್ಯಾರ್ಥಿಗಳ ಜೊತೆ ಸರ್ಕಾರ ಸಾರ್ವಜನಿಕ ಐಟಿಐ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಓದಿದರೆ ಆಗುವ ತೊಂದರೆಯಾದರೂ ಏನು? ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಮುಸ್ಲಿಂ ವಿದ್ಯಾರ್ಥಿ ಭಯೋತ್ಪಾದಕನಾಗಿ, ಅನಂತರ ಸಿರಿಯಾಕ್ಕೆ ತೆರಳಿ ಐಸಿಸ್ ಉಗ್ರರಿಗೆ ವೈದ್ಯಕೀಯ ನೆರವು ನೀಡಿ ಈಗ ಬಂಧಿತನಾಗಿರುವ ವಿಷಯ ನಮ್ಮ ಕಣ್ಣಮುಂದೆ ಹಸಿರಾಗಿಯೇ ಇದೆ. ಹೀಗಿರುವಾಗ, ಇನ್ನು ಮುಸ್ಲಿಮರಿಗಾಗಿ ಪ್ರತ್ಯೇಕ ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆದರೆ ಅಲ್ಲಿಗೆ ಬರುವ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಕೋಮುದ್ವೇಷ ಬೆಳೆಯದೆ ಇರುತ್ತದೆಯೆ? ಉಗ್ರರನ್ನು ತಯಾರಿಸುವ ಕಾರ್ಖಾನೆಗಳು ಆ ಕಾಲೇಜುಗಳು ಆಗದೆ ಇರಲು ಸಾಧ್ಯವೆ?

ಸ್ವಾತಂತ್ರ್ಯ ಬಂದಾಗಿನಿಂದ ಅಲ್ಪಸಂಖ್ಯಾತರನ್ನು ಎಲ್ಲ ಸರ್ಕಾರಗಳೂ ತಲೆಯ ಮೇಲೆ ಹೊತ್ತು ಮೆರೆದಿವೆ. ಈಗ ಬಿಜೆಪಿ ಕೂಡ ಅದೇ ಹಾದಿ ತುಳಿದಿರುವುದು ವಿಷಾದನೀಯ. ರಾಷ್ಟ್ರೀಯ ಪ್ರವಾಹದಿಂದ ಮುಸ್ಲಿಮರನ್ನು ಪ್ರತ್ಯೇಕಿಸಿ ಬೆಳೆಸಿದಷ್ಟೂ ಆ ಜನಾಂಗ ಅಪಾಯಕಾರಿಯೇ. ರಾಷ್ಟ್ರೀಯ ಪ್ರವಾಹದಲ್ಲಿ ಒಂದುಗೂಡಿಸಿದಾಗಲೇ ಪ್ರತ್ಯೇಕತೆಯ ವಿಷ ಭಾವನೆಯಿಂದ ಆ ಜನಾಂಗವನ್ನು ಮುಕ್ತಗೊಳಿಸಲು ಸಾಧ್ಯ.

ಮುಸ್ಲಿಮರು ಈ ದೇಶದಲ್ಲಿ ಇರಬಾರದೆಂದು ಇದರರ್ಥವಲ್ಲ. ಆದರೆ ಇಲ್ಲಿರುವ ಮುಸ್ಲಿಮರು ಈ ದೇಶಕ್ಕೆ, ಇಲ್ಲಿನ ಸಂವಿಧಾನಕ್ಕೆ, ಇಲ್ಲಿನ ಸಂಸ್ಕೃತಿ ಪರಂಪರೆಗೆ ಬದ್ಧತೆ ಪ್ರದರ್ಶಿಸುವ ಕರ್ತವ್ಯ ಅವರೆಲ್ಲರದು. ಆ ಕರ್ತವ್ಯಪ್ರಜ್ಞೆಯನ್ನು ಬೆಳೆಸುವುದು ಹೇಗೆಂದು ಅಧಿಕಾರಸೂತ್ರ ಹಿಡಿದ ಪ್ರಭುಗಳು ಯೋಚಿಸಬೇಕು. ಹಾಗೆ ಯೋಚಿಸದೆ ಅಲ್ಪಸಂಖ್ಯಾತರನ್ನು ಕೇಲವ ಓಟ್‌ಬ್ಯಾಂಕ್ ರಾಜಕಾರಣದ ದಾಳಗಳನ್ನಾಗಿ ಬಳಸುವುದು, ಬೆಳೆಸುವುದು ಅತ್ಯಂತ ಅಪಾಯಕಾರಿ. ಈಗಾಗಲೇ ಅಂತಹ ದುಷ್ಪರಿಣಾಮಗಳಿಗೆ ದೇಶ ಮೂಕ ಸಾಕ್ಷಿಯಾಗಿದೆ.

***

ದು.ಗು. ಲಕ್ಷ್ಮಣ

ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

Tags: bjpbjp minority politicskarnataka
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ನೀತಿ ಆಯೋಗದ ಸಮೀಕ್ಷೆಯಲ್ಲಿ ಸೂಪರ್‌ ರೇಟಿಂಗ್; ಕಣ್ಣರಳಿಸಿ ಖುಷಿಪಟ್ಟ ಡಿವಿಎಸ್‌

ನೀತಿ ಆಯೋಗದ ಸಮೀಕ್ಷೆಯಲ್ಲಿ ಸೂಪರ್‌ ರೇಟಿಂಗ್; ಕಣ್ಣರಳಿಸಿ ಖುಷಿಪಟ್ಟ ಡಿವಿಎಸ್‌

Leave a Reply Cancel reply

Your email address will not be published. Required fields are marked *

Recommended

ಬೆಂಗಳೂರು ಕಂಬಳಕ್ಕೆ ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ

ಬೆಂಗಳೂರು ಕಂಬಳಕ್ಕೆ ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ

2 years ago
ಬಾಗೇಪಲ್ಲಿಯಲ್ಲಿ ಬಡವರ ಬಾದಾಮಿ ಶೇಂಗಾ ಬೆಳೆದು ಭರ್ಜರಿ ಇಳುವರಿಯ ಚಮತ್ಕಾರ ಮಾಡಿದ ಪ್ರಗತಿಪರ ರೈತ

ಬಾಗೇಪಲ್ಲಿಯಲ್ಲಿ ಬಡವರ ಬಾದಾಮಿ ಶೇಂಗಾ ಬೆಳೆದು ಭರ್ಜರಿ ಇಳುವರಿಯ ಚಮತ್ಕಾರ ಮಾಡಿದ ಪ್ರಗತಿಪರ ರೈತ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ