• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS

ಶಿರಾದಲ್ಲಿ ಬಿಜೆಪಿ ನಿಗೂಢ ಹೆಜ್ಜೆ; ಯಾರಿಗೂ ಗೊತ್ತಿಲ್ಲದೆ ಗಡಿ ದಾಟಿದ ಉಪ ಮುಖ್ಯಮಂತ್ರಿ!

P K Channakrishna by P K Channakrishna
October 16, 2020
in NEWS & VIEWS, STATE
Reading Time: 2 mins read
0
ಶಿರಾದಲ್ಲಿ ಬಿಜೆಪಿ ನಿಗೂಢ ಹೆಜ್ಜೆ; ಯಾರಿಗೂ ಗೊತ್ತಿಲ್ಲದೆ ಗಡಿ ದಾಟಿದ ಉಪ ಮುಖ್ಯಮಂತ್ರಿ!
914
VIEWS
FacebookTwitterWhatsuplinkedinEmail

news & views

ground report from sira

ಶಿರಾ: ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು, ಆ ನಂತರ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳ ಪೈಕಿ 10ರಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಈಗ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಈ ಉಪ ಚುನಾವಣೆಯನ್ನೂ ಸೀರಿಯಸ್ಸಾಗಿ ತೆಗೆದುಕೊಂಡಿದೆ ಎಂಬುದಕ್ಕೆ ರಿಪೀಟ್-ರಿಪೀಟ್ ಆಗಿ ಅನೇಕ ಕಾರಣಗಳು ಕಾಣಿಸುತ್ತಿವೆ. ಅತ್ತ ಕಾಂಗ್ರೆಸ್, ಇತ್ತ ಜೆಡಿಎಸ್ ನಾಯಕರಿಗೆ ಚೆಳ್ಳೆಹಣ್ಣು ತಿನ್ನಿಸಿ ಗಡಿ ಕ್ಷೇತ್ರದಲ್ಲಿ ಖಾತೆ ತೆರೆಯಲು ಗಟ್ಟಿಯಾಗಿ ಟ್ರೈ ಮಾಡುತ್ತಿದೆ.

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಮೇಲೆ ಕೇಸು ಆಗಿರುವುದರಿಂದ ಹಿಡಿದು, ಶುಕ್ರವಾರದಂದು ಶಿರಾದಲ್ಲಿ ನಡೆದ ಕೆಲ ಘಟನೆಗಳಂತೂ ಬಿಜೆಪಿ ಇಡುತ್ತಿರುವ ನಿಗೂಢ ಹೆಜ್ಜೆಗಳಿಗೆ ಪುಷ್ಠಿ ನೀಡುವಂತಿವೆ. ಬೆಳಗ್ಗೆ ಶಿರಾದಲ್ಲಿ ಕಾಣಿಸಿಕೊಂಡ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಮುಂತಾದವರು ಪಕ್ಷದ ಅಭ್ಯರ್ಥಿ ರಾಜೇಶ್ ಗೌಡ ನಾಮಪತ್ರ ಸಲ್ಲಿಸುವ ತನಕ ಒಟ್ಟಿಗೇ ಇದ್ದರು. ಅದಕ್ಕೂ ಮೊದಲು ಶಿರಾದ ಟೋಲ್ ಗೇಟಿನಿಂದ ಮಿನಿ ವಿಧಾನಸೌಧದ ತನಕ ನಡೆದ 15 ಕಿ.ಮೀ ದೂರದ ಮೆರೆವಣಿಗೆಯಲ್ಲೂ ಜತೆಯಲ್ಲೇ ಬಂದರು.

ಅದಾದ ಮೇಲೆ ನಾಮಪತ್ರ ಸಲ್ಲಿಕೆ ‘ಶಾಸ್ತ್ರ’ ಮುಗಿಯುತ್ತಿದ್ದಂತೆಯೇ ಕಾರಜೋಳ, ವಿಜಯೇಂದ್ರ ತಮ್ಮ ಪಾಡಿಗೆ ತಾವು ಹೊರಟರೆ, ಮತ್ತೊಬ್ಬ ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾತ್ರ ಆಂಧ್ರದ ಗಡಿ ತಾಲ್ಲೂಕು ಮಡಕಶಿರಾ ಕಡೆ ಕಾರನ್ನು ತಿರುಗಿಸಿದ್ದರು. ಅಲ್ಲಿಂದ ನೇರವಾಗಿ ನೀಲಕಂಠಾಪುರ ಎಂಬ ಗ್ರಾಮಕ್ಕೆ ಎಂಟ್ರಿ ಕೊಟ್ಟರಲ್ಲದೆ, ಅದೇ ಊರಿನಲ್ಲಿ ವಾಸಿಸುತ್ತಿರುವ ರಾಯಲಸೀಮೆಯ ಪ್ರಭಾವೀ ರಾಜಕಾರಣಿ, ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಮಂತ್ರಿ ರಘುವೀರಾ ರೆಡ್ಡಿ ನಿವಾಸದ ಮುಂದೆ ಹೋಗಿ ಅವರ ಕಾರು ನಿಂತಾಗ ಅವರನ್ನು ಬೆನ್ಹತ್ತಿ ಬಂದಿದ್ದ ಕೆಲವೇ ಪತ್ರಕರ್ತರು, ಬಿಜೆಪಿ ನಾಯಕರು ಅವಾಕ್ಕಾಗಿದ್ದರು.

ರಘುವೀರಾ ರೆಡ್ಡಿ ನಿವಾಸದಲ್ಲಿ ಡಾ.ಅಶ್ವತ್ಥನಾರಾಯಣ.

ಡಿಸಿಎಂ ಬರುವ ವಿಷಯ ತಮಗೂ ಗೊತ್ತು ಎಂಬುದಕ್ಕೆ ಸಾಕ್ಷಿಯಾಗಿ ರಘುವೀರಾ ರೆಡ್ಡಿ ಅವರು ಮನೆ ಬಾಗಿಲಲ್ಲೇ ಹಾರ, ಶಾಲು ಹಿಡಿದು ನಿಂತಿದ್ದರು. ಡಿಸಿಎಂ ಬರುತ್ತಿದ್ದಂತೆ ಅವರನ್ನು ಮನೆಯೊಳಕ್ಕೆ ಕರೆದುಕೊಂಡ ಹೋದ ಅವರು, ಮನೆಗೆ ಬಂದ ಅತಿಥಿ ಜತೆ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸುತ್ತಾ ಕೂತುಬಿಟ್ಟರು. ಇದೆಲ್ಲ ಗಮನಿಸುತ್ತಿದ್ದ ಕೆಲವರು, ಗಡಿಯಲ್ಲೂ ಬಿಜೆಪಿಯು ಆಪರೇಷನ್ ಕಮಲ ಶುರುವಿಟ್ಟುಕೊಂಡಿತಾ? ಎಂದು ಮುಖ-ಮುಖ ನೋಡಿಕೊಂಡರು. ಶಿರಾ ಉಪ ಚುನಾವಣೆಯನ್ನೇ ನೆಪವಾಗಿಟ್ಟುಕೊಂಡು ನೆರೆಯ ಆಂಧ್ರದಲ್ಲಿ ಬಿಜೆಪಿ ದಾಳ ಉರುಳಿಸುತ್ತಿದೆಯಾ ಎಂಬ ಅನುಮಾನವೂ ಕಾಡತೊಡಗಿತು. ಗಂಟೆ ಕಳೆದ ಮೇಲೆ ಹೊರಬಂದ ನಾಯಕರಿಬ್ಬರೂ ತುಟಿಕ್‌ʼಪಿಟಿಕ್ ಎನ್ನಲಿಲ್ಲ. ಆದರೆ, ಶಿರಾದ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಡಿಸಿಎಂ ಕೇಳಿದ್ದು ಮಾತ್ರ ಗುಟ್ಟಾಗಿ ಉಳಿದಿಲ್ಲ.

ರಘುವೀರಾ ಸಾಮಾನ್ಯರಲ್ಲ

ರಘುವೀರಾ ರೆಡ್ಡಿ ಅವರು ಆಂಧ್ರ ಪ್ರದೇಶದ ವರ್ಚಸ್ವಿ ನಾಯಕರಾಗಿದ್ದು, ಯಾದವ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಅವರನ್ನು ನಮ್ಮ ರಾಜ್ಯದ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು. ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ಅತ್ಯಂತ ಪ್ರಭಾವಿ. ಶಿರಾ, ಮಧುಗಿರಿ ಮತ್ತು ಪಾವಗಡ ಮುಂತಾದ ಪ್ರದೇಶಗಳಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಒಂದೆರಡು ಲೋಕಸಭೆ ಚುನಾವಣೆಗಳಲ್ಲಿ ಯಾದವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿರುವ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಅವರ ಮೇಲೆ ರಾಜ್ಯ ಕಾಂಗ್ರೆಸ್‌ ನಾಯಕರು ಒತ್ತಡ ಹೇರಿದ್ದರು.

ರೆಡ್ಡಿ ಅವರು ಅವಿಭಜಿತ ಆಂಧ್ರ ಪ್ರದೇಶದ ಕೋಟ್ಲ ವಿಜಭಾಸ್ಕರ ರೆಡ್ಡಿ, ವೈ.ಎಸ್.ರಾಜಶೇಖರ ರೆಡ್ಡಿ, ರೋಶಯ್ಯ ಮತ್ತು ಕಿರಣ್‌ಕುಮಾರ್‌ ರೆಡ್ಡಿ ಅವರ ಸಂಪುಟಗಳಲ್ಲಿ ಸಚಿವರೂ ಆಗಿದ್ದರು.

ತಮ್ಮ ಸ್ವಗ್ರಾಮ ನೀಲಕಂಠಾಪುರದಲ್ಲಿ ರೆಡ್ಡಿ ಅವರು ಶ್ರೀ ಅಯ್ಯಪ್ಪ ಸ್ವಾಮಿ, ಪಂಚಮುಖಿ ಗಣಪತಿ, ಆಂಜನೇಯ ಸ್ವಾಮಿ ದೇಗುಲಗಳನ್ನು ನಿರ್ಮಾಣ ಮಾಡಿಸುತ್ತಿದ್ದು, ಆ ದೇವಾಲಯಗಳಿಗೆ ಡಿಸಿಎಂ ಅವರನ್ನು ಕರೆದುಕೊಂಡು ಹೋಗಿ ತೋರಿಸಿದರು. ಆ ಸಂದರ್ಭದಲ್ಲಿಯೂ ಅವರು ಸೈಲಂಟಾಗಿ ಮಾತನಾಡಿಕೊಳ್ಳುತ್ತಲೇ ಇದ್ದರು. ಕರ್ನಾಟಕಕ್ಕೆ ಸೇರಿದ ಬಿಜೆಪಿ ನಾಯಕರೊಬ್ಬರು ಅದರಲ್ಲೂ ಕಟ್ಟರ್ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಗಡಿದಾಟಿ ಬಂದ ಕ್ಷಣಗಳನ್ನು ನೀಲಕಂಠಾಪುರದ ಜನರು ಆಶ್ಚರ್ಯಚಕಿತರಾಗಿ ಗಮನಿಸಿದರು. ಇಡೀ ಊರಿನ ಜನ ಡಿಸಿಎಂ ಬೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಡಾ.ಅಶ್ವತ್ಥನಾರಾಯಣ ಅವರು ಮಧ್ಯಾಹ್ನದ ಭೋಜನವನ್ನು ರೆಡ್ಡಿ ಅವರ ನಿವಾಸದಲ್ಲಿಯೇ ಸೇವಿಸಿದರು.

ಶಿರಾದಲ್ಲಿ ಬಿಜೆಪಿ ಬಲ ಪ್ರದರ್ಶನ

ರಾಜರಾಜೇಶ್ವರಿ ನಗರದಲ್ಲಿ ನಾಮಪತ್ರ ಸಲ್ಲಿಸುವಾಗಲೇ ಸಿಎಂ ಆದಿಯಾಗಿ ಎಲ್ಲ ವಲಸಿಗರು ಬಂದು ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಬಲ ತುಂಬಿದ್ದರು. ಶಿರಾದಲ್ಲೂ ಹಾಗೆಯೇ ಆಯಿತು. ಚುನಾವಣೆಗೆ ಮುನ್ನ ಕಾಂಗ್ರೆಸ್ಸಿನಿಂದ ಬಿಜೆಪಿ ಹಾರಿದ್ದ ಡಾ.ರಾಜೇಶ್ ಗೌಡರಿಗೆ ಶಕ್ತಿ ತುಂಬಲು ಬೆಂಗಳೂರಿನಿಂದ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿಎನ್.ಅಶ್ವತ್ಥನಾರಾಯಣ, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಮುಂತಾದವರು ಧಾವಿಸಿ ಬಂದಿದ್ದರು.

ನಾಮಪತ್ರ ಸಲ್ಲಿಕೆಗೆ ಬಿಜೆಪಿ ನಾಯಕರು ಶಿರಾದ ಕರಜೀವನಹಳ್ಳಿ ಟೋಲ್ʼನಿಂದ ಮೆರವಣಿಗೆಯಲ್ಲಿ ಸಾಗಿದರು. ಕೋವಿಡ್ ಭಯಬಿಟ್ಟು ಪಕ್ಷದ ಕಾರ್ಯಕರ್ತರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಶಿರಾದಲ್ಲಿ ಕಮಲ ಅರಳಲಿದೆ!@BJP4Karnataka ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ @GovindKarjol ಅವರು ಹಾಗೂ @BYVijayendra ಅವರೊಂದಿಗೆ ರ‍್ಯಾಲಿಯಲ್ಲಿ ಪಾಲ್ಗೊಂಡೆ. ಜನತೆಯ ಅಭೂತಪೂರ್ವ ಬೆಂಬಲ ನಮಗಿದೆ.#BJP4Sira pic.twitter.com/EWPBUBO1DR

— Dr. C.N. Ashwath Narayan (ಮೋದಿ ಅವರ ಪರಿವಾರ) (@drashwathcn) October 16, 2020

ಮಾತಿನ ಬುಲೆಟ್ ಸಿಡಿಸಿದ ಡಿಸಿಎಂ

ಬಹಿರಂಗ ಭಾಷಣ ಇರಲಿಲ್ಲವಾದರೂ ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾತ್ರ ಮಾಧ್ಯಮಗಳ ಜತೆ ಮಾತನಾಡಿದರು. ಅಕ್ಕಪಕ್ಕದಲ್ಲಿ ಗೋವಿಂದ ಕಾರಜೋಳ, ವಿಜಯೇಂದ್ರ ಇದ್ದರಲ್ಲದೆ, ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಅವರು ಅಕ್ಷರಶಃ ಮಾತಿನ ಸಿಡಿಗುಂಡುಗಳನ್ನೇ ಸಿಡಿಸಿದರು. ಅವರು ಹೇಳಿದ್ದಿಷ್ಟು;

*ಈ ಉಪ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಕಮಲ ಅರಳುತ್ತದೆ. ಬಿಜೆಪಿ ಜಯಭೇರಿ ಬಾರಿಸಲಿದೆ.

*ಈ ಉಪ ಚುನಾವಣೆಯಲ್ಲಿ ಅಭಿವೃದ್ಧಿಯಷ್ಟೇ ಚರ್ಚೆಯ ವಿಷಯ. ಶಿರಾ ಜನತೆಗೂ ಅಭಿವೃದ್ಧಿಯೇ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆದ್ದೇಗೆಲ್ಲುತ್ತದೆ.

*ಬಿಜೆಪಿ ಸರಕಾರದ ನೇತೃತ್ವದಲ್ಲಿ ರಾಜ್ಯವು ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣಬಹುದು. ಅದೇ ರೀತಿ ಶಿರಾ ಕ್ಷೇತ್ರವು ಪ್ರಗತಿ ಸಾಧಿಸಲಿದೆ. ಈ ವಿಷಯನ್ನು ಮತದಾರರು ಅರ್ಥ ಮಾಡಿಕೊಳ್ಳಲಿದ್ದಾರೆ.

*ಕಾಂಗ್ರೆಸ್ ಅಭ್ಯರ್ಥಿಯ ಸಾಮರ್ಥ್ಯದ ಬಗ್ಗೆ ಆ ಪಕ್ಷದ ರಾಷ್ಟ್ರೀಯ ಉಸ್ತುವಾರಿ ಅವರಿಗೇ (ರಣದೀಪ್ ಸುರ್ಜೀವಾಲ) ಅನುಮಾನವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮೊಬೈಲ್ ಸಂಭಾಷಣೆಯಲ್ಲಿ ಅದನ್ನು ನಾವೆಲ್ಲರೂ ಕೇಳಿದ್ದೇವೆ. ಅನೇಕ ಸಲ ಗೆದ್ದು ತಾವು ಬೆಳೆದು ಜನರನ್ನು ನಿರ್ಲಕ್ಷ್ಯ ಮಾಡಿದ ನಾಯಕರನ್ನು ಗೆಲ್ಲಿಸಬೇಕೆ?

*ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅವರೆಲ್ಲ ಏನೆಲ್ಲ ಮಾಡಿಕೊಂಡರು ಎಂಬುದು ನಿಮಗೆಲ್ಲ ಗೊತ್ತಿದೆ. ಆಗ ಒಟ್ಟಾಗಿ ಅಧಿಕಾರ ಅನುಭವಿಸಿ ಈಗ ಬೇರೆ ಬೇರೆ ಅಭ್ಯರ್ಥಿಗಳನ್ನು ನಿಲ್ಲಿಸಿಕೊಂಡಿದ್ದಾರೆ. ಜೆಡಿಎಸ್ ಜನರ ವಿಶ್ವಾಸ ಕಳೆದುಕೊಂಡಿದೆ.

*ಶಿರಾ ಕ್ಷೇತ್ರವು ಕಳೆದ 75 ವರ್ಷಗಳಿಂದ ಹಿಂದುಳಿದಿದೆ. ಅನೇಕ ನಾಯಕರು ಇಲ್ಲಿಂದ ಗೆದ್ದಿದ್ದಾರೆ. ಅವರನ್ನು ಗೆಲ್ಲಿಸಿದ ಮತದಾರರು ಸೋತಿದ್ದಾರೆ. ಈ ಚುನಾವಣೆಯಲ್ಲಿ ಆ ಚಿತ್ರಣ ಬದಲಾಗಲಿದೆ. ಕಳೆದ ಏಳೂವರೆ ದಶಕದಲ್ಲಿ ಆಗದ ಅಭಿವೃದ್ಧಿಯನ್ನು ಇನ್ನು ಎರಡೂವರೆ ವರ್ಷದಲ್ಲಿ ನಾವು ಮಾಡಿ ತೋರಿಸುತ್ತೇವೆ.

Tags: bjpDr.C.N.AshwathnarayanRaghuveera reddysiraSira by election
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
4 ಶೋಗಳಿಗೆ 154 ಪ್ರೇಕ್ಷಕರು! ಟೋಟಲ್‌ ಕಲೆಕ್ಷನ್‌ 5ರಿಂದ  6 ಸಾವಿರ ಮಾತ್ರ!!

4 ಶೋಗಳಿಗೆ 154 ಪ್ರೇಕ್ಷಕರು! ಟೋಟಲ್‌ ಕಲೆಕ್ಷನ್‌ 5ರಿಂದ 6 ಸಾವಿರ ಮಾತ್ರ!!

Leave a Reply Cancel reply

Your email address will not be published. Required fields are marked *

Recommended

ಸರಕಾರಕ್ಕೆ ಸಂಚಕಾರ; ಹೆಚ್.ಡಿ.ಕುಮಾರಸ್ವಾಮಿ, ಯೋಗಿ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ತಳಮಳ

ಪರಪಕ್ಷಗಳ ಶಾಸಕರ ಮೇಲೆ ಕಣ್ಣು; ಆಪರೇಷನ್ ಕಮಲಕ್ಕೂ ಮುನ್ನವೇ ಆಪರೇಷನ್ ಹಸ್ತ

2 years ago
ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ವಿಲನ್

ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ವಿಲನ್

3 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ