• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಚಿಕ್ಕಬಳ್ಳಾಪುರ, ಕೋಲಾರ ಸೇರಿ 15 ಜಿಲ್ಲೆಗಳಿಗೆ ಬೋರ್‌ವೆಲ್‌ ಶಾಕ್‌ ಕೊಟ್ಟ ಸರಕಾರ !

cknewsnow desk by cknewsnow desk
November 25, 2020
in CHIKKABALLAPUR, KOLAR, STATE
Reading Time: 2 mins read
0
ಚಿಕ್ಕಬಳ್ಳಾಪುರ, ಕೋಲಾರ ಸೇರಿ 15 ಜಿಲ್ಲೆಗಳಿಗೆ ಬೋರ್‌ವೆಲ್‌ ಶಾಕ್‌ ಕೊಟ್ಟ ಸರಕಾರ !
934
VIEWS
FacebookTwitterWhatsuplinkedinEmail
lead photo: bnmk photographs

ಅಂತರ್ಜಲ ಅಭಿವೃದ್ಧಿಗೆ ಮಾಡಿದ ಖರ್ಚಿನ ಲೆಕ್ಕ ಕೇಳಿದ ರೈತರು

ಬೆಂಗಳೂರು: ಸಾವಿರ ಅಡಿಗೂ ಹೆಚ್ಚು ಆಳಕ್ಕೆ ಹೋಗಿ ರೈತನ ಬಾಳಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಪಾತಾಳ ಗಂಗೆ ಒಂದೆಡೆಯಾದರೆ, ಸರಕಾರ ಇನ್ನೊಂದು ರೀತಿಯಲ್ಲಿ ಜಲ ದಿಗ್ಬಂಧನಗಳನ್ನು ಹೇರಿ ಅದೇ ರೈತರನ್ನು ಕಂಗಾಲು ಮಾಡುತ್ತಿದೆ.

ಚಿಕ್ಕಬಳ್ಳಾಪುರ, ಕೋಲಾರ ಸೇರಿ 15 ಜಿಲ್ಲೆಗಳಲ್ಲಿ (ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೋಲಾರ, ರಾಮನಗರ, ತುಮಕೂರು) ರೈತರು ಕೊಳವೆ ಬಾವಿ ಇರಲಿ, ತೆರೆದ ಬಾವಿ ಕೊರೆಸಲಿಕ್ಕೂ ಅಂತರ್ಜಲ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಹಾಗೆಂದು ರಾಜ್ಯ ಅಂತರ್ಜಲ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದ್ದು, ಇದೀಗ ಹೊಸ ಬೋರ್‌ವೆಲ್‌ ಕೊರೆಸಿ ಒಂದಿಷ್ಟು ಬೇಸಾಯ ಮಾಡಿಕೊಂಡು ಬದುಕಬೇಕೆಂಬ ಆಸೆ ಇಟ್ಟುಕೊಂಡಿದ್ದ ರೈತರು ಈಗ ಯೋಚಿಸುವಂತಾಗಿದೆ.

ಅಂತರ್ಜಲವನ್ನು ಬಳಕೆ ಮಾಡುವ ಉದ್ದೇಶದಿಂದ ತೆರೆದ ಬಾವಿ ಅಥವಾ ಕೊಳವೆ ಬಾವಿ ತೋಡಬೇಕಾದರೆ ಸಮಿತಿ ಅನುಮತಿ ಪಡೆಯುವುದು ಒಂದೆಡೆಯಾದರೆ, ಈಗಾಗಲೇ ತೆರೆದ ಬಾವಿಗಳು ಮತ್ತು ಕೊಳವೆ ಬಾವಿಗಳ ಮೂಲಕ ಅಂತರ್ಜಲವನ್ನು ಬಳಕೆ ಮಾಡಿಕೊಳ್ಳುತ್ತಿದ್ದರೆ, ಅಂಥ ರೈತರು ಕೂಡ ಅಂತರ್ಜಲ ಪ್ರಾಧಿಕಾರದಲ್ಲಿ ತಮ್ಮ ಹೆಸರು, ಮತ್ತಿತರೆ ವಿವರಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.

ಒಂದು ವೇಳೆ ಯಾವೊಬ್ಬ ರೈತ; ಪ್ರಾಧಿಕಾರದ ಅನುಮತಿ ಪಡೆಯದೇ ಬೋರ್‌ವೆಲ್‌ ಕೊರೆಸಿದರೆ ಸರಕಾರದ ಬ್ಯಾಂಕುಗಳು, ಸಹಕಾರ ಸಂಘಗಳು ಸೇರಿ ಯಾವುದೇ ಸಂಸ್ಥೆಯಿಂದ ಹಣಕಾಸು ನೆರವು ಸಿಗುವುದಿಲ್ಲ. ಅಷ್ಟೇ ಅಲ್ಲ; ವಿದ್ಯುತ್‌ ಸಂಪರ್ಕವೂ ಸಿಗದು. ಒಟ್ಟಾರೆಯಾಗಿ ಸರಕಾರದಿಂದ ಯಾವುದೇ ಸೌಲಭ್ಯ ಸಿಗಬೇಕಾದರೆ ಕೊಳೆವೆ ಬಾವಿ ಕೊರೆಸಬೇಕೆಂದಿರುವ ರೈತರು ತಪ್ಪದೇ ಅಂತರ್ಜಲ ಪ್ರಾಧಿಕಾರ ನೀಡುವ ಅನುಮತಿ ಪತ್ರವನ್ನು ಜೇಬಿನಲ್ಲೇ ಇಟ್ಟುಕೊಂಡಿರಬೇಕು.

ಶಿಕ್ಷೆಗೂ ಅವಕಾಶವಿದೆ!

ಒಂದು ವೇಳೆ ರೈತರು ಪ್ರಾಧಿಕಾರದ ಅನುಮತಿ ಪಡೆಯದೇ ಈ ಹದಿನೈದೂ ಜಿಲ್ಲೆಗಳಲ್ಲಿ ತೆರೆದ ಬಾವಿ ಅಥವಾ ಕೊಳವೆ ಬಾವಿ ಕೊರೆಸಿದ್ದೇ ಆದರೆ, ಅಂಥ ರೈತರಿಗೆ ಸೆಕ್ಷನ್‌ 32ರ ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಇದು ಬೋರ್‌ವೆಲ್‌ ಯಂತ್ರದ ಮಾಲೀಕರಿಗೂ ಅನ್ವಯವಾಗುತ್ತದೆ. ಹೆಚ್ಚಿನ ವಿವರಗಳು ಬೇಕಾಗಿದ್ದರೆ ಆಯಾ ಜಿಲ್ಲೆಯ ಹಿರಿಯ ಭೂ ವಿಜ್ಞಾನಿಗಳು, ಪ್ರಾಧಿಕಾರದ ನಿರ್ದೇಶಕರ ಕಚೇರಿ, ಜಿಲ್ಲಾ ಅಂತರ್ಜಲ ಕಚೇರಿ ಅಥವಾ https://antharjala.kar.nic.nic ವೆಬ್‌ತಾಣಕ್ಕೆ ಭೇಟಿ ನೀಡಿ ಎಂದು ಹೇಳಿದೆ. ಜತೆಗೆ, ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಯೂ ಈ ವೆಬ್‌ಸೈಟ್ನಲ್ಲಿ ಈಗಾಗಲೇ ಲಭ್ಯವಿದೆ. ಅಷ್ಟೇ ಅಲ್ಲ, ಬೋರ್‌ವೆಲ್‌ ಕೊರೆಯುವ ಏಜೆನ್ಸಿಗೂ ಪ್ರತ್ಯೇಕ ಅರ್ಜಿ ಇದೆ.

ಅಂತರ್ಜಲ ರಕ್ಷಣೆ ಉದ್ದೇಶ

ಚಿಕ್ಕಬಳ್ಳಾಪುರ-ಕೋಲಾರ ಸೇರಿ ಅಧಿಸೂಚಿತ ಎಲ್ಲ ಜಿಲ್ಲೆಗಳಲ್ಲಿ ಅಂತರ್ಜಲದ ಬಳಕೆ ಮಿತಿಮೀರಿದೆ ಎಂಬುದು ಪ್ರಾಧಿಕಾರ ನೀಡುವ ಕಾರಣ. ಅದರಲ್ಲೂ ಶಾಶ್ವತ ನೀರಾವರಿ ಸೌಲಭ್ಯ ಇಲ್ಲದ ಬರಪೀಡಿತ ಬಯಲುಸೀಮೆಯಲ್ಲಿ ಬೋರ್‌ವೆಲ್‌ ಕೊರೆಯುವುದು ಹೆಚ್ಚು. 90ರ ದಶಕದಲ್ಲಿ 100ರಿಂದ 150 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು, ಇದೀಗ 1000ದಿಂದ 1500 ಅಡಿ ಆಳಕ್ಕೆ ಹೋದರೂ ಸಿಗುತ್ತಿಲ್ಲ. ಕೊಳವೆಬಾವಿಗಳು ಹೆಚ್ಚಿದಂತೆಲ್ಲ ಭೂಮೇಲ್ಮೈ ಮಟ್ಟದಲ್ಲಿ ನೀರು ಕಡಿಮೆಯಾಗುತ್ತಿದೆ ಎಂದು ಭೂ ವಿಜ್ಞಾನಿಯೊಬ್ಬರು ಹೇಳುವ ಮಾತು. ಆದರೆ, ಚಿಕ್ಕಮಗಳೂರಿನಂಥ ಮಲೆನಾಡು-ಅರೆ ಮಲೆನಾಡು ಜಿಲ್ಲೆ, ಸದಾ ನೆರೆಯಿಂದ ಕಷ್ಟಕ್ಕೆ ಸಿಲುಕುವ ಬೆಳಗಾವಿ ರೈತರಿಗೂ ಪ್ರಾಧಿಕಾರ ಬೋರ್‌ವೆಲ್‌ ಅನುಮತಿ ಕಡ್ಡಾಯ ಎಂದಿದೆ!

ರೈತರು ಏನಂತಾರೆ?

ಅಂತರ್ಜಲ ಪ್ರಾಧಿಕಾರ ಹೊರಡಿಸಿರುವ ಈ ಅಧಿಸೂಚನೆ ಬಗ್ಗೆ ನೀರಾವರಿ ಹೋರಾಟಗಾರ ಮತ್ತು ಪ್ರಗತಿಪರ ಕೃಷಿಕ ಆರ್.ಆಂಜನೇಯ ರೆಡ್ಡಿ ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿದೆ..

“ಪ್ರಾಧಿಕಾರವೇನೋ ಹೊಸದಾಗಿ ಕೊಳವೆ ಬಾವಿ ಕೊರೆಸುವವರೇನೋ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದೆ. ಅದು ಸರಿ. ಆದರೆ, ಮುಂದೆ ಕೊಳವೆ ಬಾವಿ ಕೊರೆಸಲು ಯಾರು-ಯಾರಿಗೆ ಅನುಮತಿ ಕೊಡಲಾಗುವುದು? ಎಂಬ ಬಗ್ಗೆ ಯಾವ ಮಾಹಿತಿಯನ್ನೂ ಪ್ರಾಧಿಕಾರ ನೀಡಿಲ್ಲ. 2011-12ರಲ್ಲಿ ಕೂಡ ಇದೇ ರೀತಿಯ ಅಧಿನಿಯಮ ಬಂದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆ ನಿಯಮದ ವ್ಯಾಪ್ತಿಗೆ ಐದು ತಾಲ್ಲೂಕುಗಳನ್ನು ಸೇರಿಸಲಾಗಿತ್ತು. ಈಗ ಆರೂ ತಾಲ್ಲೂಕುಗಳನ್ನು ಸೇರಿಸಲಾಗಿದೆ. ಇದರ ಜತೆಗೆ ಕೋಲಾರದಲ್ಲೂ ಎಲ್ಲ ತಾಲ್ಲೂಕುಗಳನ್ನು ಸೇರಿಸಲಾಗಿದೆ. ಈ ಎಲ್ಲ ತಾಲ್ಲೂಕುಗಳನ್ನು ಅಂತರ್ಜಲದ ʼಅತಿಬಳಕೆ ವಲಯʼ ಎಂದು ಗುರುತಿಸಲಾಗಿದೆ.

15-20 ವರ್ಷಗಳ ಜಲಾನಯನ ಪ್ರದೇಶ ಅಭಿವೃದ್ಧಿ ಹೆಸರಿನಲ್ಲಿ, ಅಂತರ್ಜಲ ಅಭಿವೃದ್ಧಿ ಹೆಸರಿನಲ್ಲಿ, ಸುಜಲ-1,2,3.. ಈ ರೀತಿಯ ವಿಶೇಷ ಕಾರ್ಯಕ್ರಮಗಳ ಹೆಸರಿನಲ್ಲಿ, ಇದರ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ , ಕೃಷಿ, ಅರಣ್ಯ, ಬೃಹತ್‌ ನೀರಾವರಿ, ಸಣ್ಣ ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳು ಅಂತರ್ಜಲ ಅಭಿವೃದ್ಧಿ ಅಂತ ಹೇಳಿಕೊಂಡು 10ರಿಂದ 20 ಸಾವಿರ ಕೋಟಿ ರೂ. ಖರ್ಚು  ಮಾಡಿರುವ ಅಂದಾಜಿದೆ. ಅಂತರ್ಜಲ ಅಭಿವೃದ್ಧಿ, ಚೆಕ್‌ಡ್ಯಾಂ ನಿರ್ಮಾಣ, ಕೆರೆ ಹೂಳೆತ್ತುವುದು, ಕೆರೆ ಮತ್ತು ಹಳ್ಳ-ಕೊಳ್ಳ ಮತ್ತು ನದಿಗಳ ಪುನಶ್ಚೇತನ.. ಹೀಗೆ ಅನೇಕ ಉದ್ದೇಶಗಳಿಗಾಗಿ ಸಾವಿರಾರು ಕೋಟಿ ರೂ. ಖರ್ಚಾಗಿದೆ. ಹಾಗಾದರೆ ಈ 15 ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಇಷ್ಟು ದುಃಸ್ಥಿತಿಗೆ ಹೋಗಿದೆ ಎಂದರೆ, ಇಷ್ಟು ದಿನ ಮಾಡಿದ ಹಣದ ವ್ಯಯ ಏನಾದರೂ ಫಲ ಕೊಟ್ಟಿದೆಯಾ? ಅಥವಾ ಅಷ್ಟೂ ಹಣವನ್ನು ಖರ್ಚು ಮಾಡಿಸಿದ ಅಷ್ಟೆಲ್ಲ ಯೋಜನೆಗಳು ಅವೈಜ್ಞಾನಿಕವಾಗಿದ್ದವಾ? ಪ್ರತಿ ವರ್ಷವೂ ಸರಕಾರ ಈ ಯೋಜನೆಗಳ ಪ್ರಯೋಜನದ ಬಗ್ಗೆ ಏನಾದರೂ ಮೌಲ್ಯಮಾಪನ ಮಾಡಿದೆಯಾ? ಒಂದು ವೇಳೆ ಆ ಯೋಜನೆಗಳನ್ನು ಮೌಲ್ಯಮಾಪನ ಮಾಡಿದ್ದರೆ ಉಪಯುಕ್ತವಲ್ಲದ ಅದೇ ಯೋಜನೆಗಳನ್ನು ಇವತ್ತಿಗೂ ಮುಂದುವರಿಸಿಕೊಂಡು ಹೋಗಲೇಬೇಕಾದ ಅಗತ್ಯವೇನಿತ್ತು? ಅಂತರ್ಜಲ ಅಭಿವೃದ್ಧಿ ಅಂದರೆ, ಹೂಳೆತ್ತುವುದು, ಚೆಕ್‌ ಡ್ಯಾಂ ಕಟ್ಟುವುದು, ಕಾಲುವೆ ತೋಡಿಸುವುದಷ್ಟೇನಾ? ಇದರಿಂದ ಯಾವುದೇ ಪ್ರಯೋಜನ ಆಗಿದೆಯಾ? ಈಗಲಾದರೂ ಗಂಭೀರವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಾಡಿರುವ ಹಣದ ಖರ್ಚಿನ ಬಗ್ಗೆ ನಿಯತ್ತಾಗಿ ಲೆಕ್ಕ ಹಾಕಬೇಕಿದೆ. ಮುಂದಿನ ಯೋಜನೆಗಳ ಬಗ್ಗೆ ಪ್ರಾಮಾಣಿಕತೆ-ದೂರದೃಷ್ಟಿಯಿಂದ ಆಲೋಚಿಸಬೇಕಿದೆ. ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಎಗ್ಗಿಲ್ಲದೆ ಖರ್ಚು ಮಾಡುವ ಸರಕಾರಕ್ಕೆ ಪ್ರಾಮಾಣಿಕ ಮೌಲ್ಯಮಾಪನ ಮಾಡಲು ಸಮಸ್ಯೆ ಏನು? ಇಲ್ಲಿ ರಾಜಕಾರಣಿಗಳ ಜತೆಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇಷ್ಟಬಂದ ಹಾಗೆ ಹಣವನ್ನು ಬಳಸಿದ್ದಾರೆ. ಹಾಗಾದರೆ ರೈತರು ಬದುಕೋದು ಹೇಗೆ? ನಮ್ಮ ಮುಂದಿನ ದಿನಗಳ ಬಗ್ಗೆ ಈಗಲಾದರೂ ಎಚ್ಚೆತ್ತು ಆಲೋಚನೆ ಮಾಡಬೇಕಿದೆ. ಇಲ್ಲದಿದ್ದರೆ ಕಳೆದ ಮೂರು ದಶಕಗಳಿಂದ ಬಂದ ಕೆಟ್ಟ ಫಲಿತಾಂಶವೇ ಮುಂದೆಯೂ ಬರುವುದರಲ್ಲಿ ಅನುಮಾನವಿಲ್ಲ. ಜತೆಗೆ, ಇನ್ನೂ ಘೋರವಾದ ದಿನಗಳನ್ನೂ ನೋಡಬೇಕಾಗುತ್ತದೆ. ಬರಪೀಡಿತ ಜಿಲ್ಲೆಗಳು,ಶಾಶ್ವತ ನೀರಾವರಿ ಇಲ್ಲದ ಜಿಲ್ಲೆಗಳು ಎಚ್ಚೆತ್ತುಕೊಳ್ಳಬೇಕಿದೆ. ಅದೇ ಹಣ, ಅದೇ ಹಣ ಎಂದುಕೊಂಡರೆ ಜನರ ತೆರಿಗೆ ಹಣಕ್ಕೆ ನ್ಯಾಯ ಸಿಗುವುದಿಲ್ಲ.

ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಕಾಲುವೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಚೆಕ್‌ಡ್ಯಾಂ ಕಿತ್ತು ಹೋಗಿರುವುದು. ಕಳಪೆ ಕಾಮಗಾರಿ ಅದು ಹಾಳಾಗಲು ಮುಖ್ಯ ಕಾರಣ.

CKPhotography ಸಿಕೆಪಿ@ckphotography9

Tags: Borewellchikkaballapurkarnataka ground water authoritykolar
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಚಿಕ್ಕಬಳ್ಳಾಪುರದಲ್ಲಿ ಚಿದಾನಂದಗೌಡ ಪರ ಡಾ.ಸುಧಾಕರ್‌ ಮತಬೇಟೆ

ಚಿಕ್ಕಬಳ್ಳಾಪುರದಲ್ಲಿ ಚಿದಾನಂದಗೌಡ ಪರ ಡಾ.ಸುಧಾಕರ್‌ ಮತಬೇಟೆ

Leave a Reply Cancel reply

Your email address will not be published. Required fields are marked *

Recommended

ಯುನಿವರ್ಸಿಟಿಗಳಿಗೆ ಸರ್ಜರಿ; ಉಪನ್ಯಾಸಕರ ವರ್ಗಾವಣೆಗೆ ಹೊಸ ಕಾಯ್ದೆ, ಇನ್ಮುಂದೆ ಎಲ್ಲವೂ ಸರಳ

ಯುನಿವರ್ಸಿಟಿಗಳಿಗೆ ಸರ್ಜರಿ; ಉಪನ್ಯಾಸಕರ ವರ್ಗಾವಣೆಗೆ ಹೊಸ ಕಾಯ್ದೆ, ಇನ್ಮುಂದೆ ಎಲ್ಲವೂ ಸರಳ

6 years ago
ಕನ್ನಡಿಗರ ಕಣ್ಣೀರು ಹರಿದರೂ ಚಿಂತೆ ಇಲ್ಲ, ತಮಿಳುನಾಡಿಗೆ ಕಾವೇರಿ ಹರಿಯಲಿ ಎನ್ನುತ್ತಿದೆ ಕಾಂಗ್ರೆಸ್

17 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿದ್ದ ತಮಿಳುನಾಡು; ಬಾಕಿ ನೀರು ಚುಕ್ತಾ ಮಾಡುವಂತೆ ಪಟ್ಟು ಹಿಡಿದಿದ್ದ ನೆರೆರಾಜ್ಯ

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ